Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಡುಗೆ ಸೋಡಾದಿಂದ ಬರೋಬ್ಬರಿ ಏಳು ಪ್ರಯೋಜನಗಳಿವೆ!
ಅಡುಗೆ ಸೋಡಾ ದೋಸೆ ಇಡ್ಲಿಗಳ ಹಿಟ್ಟನ್ನು ಉಬ್ಬಿಸುವ ಜೊತೆಗೇ ದೇಹದ ಹಲವು ತೊಂದರೆಗಳಿಗೆ ಔಷಧಿಯ ರೂಪದಲ್ಲಿಯೂ ಬಳಕೆಯಾಗುತ್ತದೆ. ಕೆಲವು ಪ್ರಮುಖ ಕಾಯಿಲೆಗಳಿಗೆ ಬೇರೆ ಔಷಧಿಗಳಿಗಿಂತಲೂ ವೇಗವಾಗಿ ಮತ್ತು ಸಕ್ಷಮವಾಗಿ ಇದು ಆರೈಕೆ ನೀಡುತ್ತದೆ.....
ಅಡುಗೆ ಸೋಡಾ ಕ್ಷಾರೀಯ ಗುಣ ಹೊಂದಿದ್ದು ದೇಹದ ಆಮ್ಲೀಯತೆಯನ್ನು ಕಡಿಮೆಗೊಳಿಸುವ ಗುಣ ಹೊಂದಿದೆ. ಇದೇ ಕಾರಣಕ್ಕೆ ಇದನ್ನು ಹಲವಾರು ಖಾದ್ಯಗಳಲ್ಲಿ ಬಳಸಲಾಗುತ್ತದೆ. ವಿಶೇಷವಾಗಿ ದೋಸೆ ಇಡ್ಲಿಗಳ ಹಿಟ್ಟನ್ನು ಉಬ್ಬಿಸಲು ಇದರ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ. ಮುಖದ ಸೌಂದರ್ಯಕ್ಕೆ ಚಿಟಿಕೆಯಷ್ಟು ಅಡುಗೆ ಸೋಡಾ!
ದೋಸೆಯನ್ನು ಉಬ್ಬಿಸುವ ಜೊತೆಗೇ ಅಡುಗೆ ಸೋಡಾ ದೇಹದ ಹಲವು ತೊಂದರೆಗಳಿಗೆ ಔಷಧಿಯ ರೂಪದಲ್ಲಿಯೂ ಬಳಕೆಯಾಗುತ್ತದೆ. ಕೆಲವು ಪ್ರಮುಖ ಕಾಯಿಲೆಗಳಿಗೆ ಬೇರೆ ಔಷಧಿಗಳಿಗಿಂತಲೂ ವೇಗವಾಗಿ ಮತ್ತು ಸಕ್ಷಮವಾಗಿ ಇದು ಆರೈಕೆ ನೀಡುತ್ತದೆ. ಗೌರವರ್ಣದ ತ್ವಚೆಗಾಗಿ ಚಿಟಿಕೆಯಷ್ಟು ಅಡುಗೆ ಸೋಡಾ ಸಾಕು
ಬನ್ನಿ, ಅಡುಗೆ ಸೋಡಾವನ್ನು ಇನ್ನೂ ಯಾವ ಪ್ರಯೋಜನಗಳಿಗಾಗಿ ಬಳಸಬಹುದು ಎಂಬುದನ್ನು ಮುಂದೆ ಓದಿ.....

ಪರಿಹಾರ #1
ಒಂದು ವೇಳೆ ನಿಮಗೆ ಎದೆಯುರಿ, ವಾಕರಿಕೆ ಅಥವಾ ಹೊಟ್ಟೆಯುಬ್ಬರಿಕೆಯ ತೊಂದರೆ ಕಂಡುಬಂದರೆ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಟಿಕೆಯಷ್ಟು ಅಡುಗೆ ಸೋಡಾ ಬೆರೆಸಿ ಗಟಗಟನೇ ಕುಡಿದು ಬಿಡಿ. ಇದರಿಂದ ಹೊಟ್ಟೆಯಲ್ಲಿ ಆಮ್ಲೀಯತೆಯ ಕಾರಣ ಎದುರಾಗಿದ್ದ ಈ ತೊಂದರೆಗಳು ತಕ್ಷಣವೇ ಇಲ್ಲವಾಗುತ್ತದೆ. ನರಕಯಾತನೆ ನೀಡುವ ಎದೆಯುರಿ ಸಮಸ್ಯೆಗೆ ಫಲಪ್ರದ ಮನೆಮದ್ದು

ಪರಿಹಾರ #2
ಹಲ್ಲುನೋವು ಅಥವಾ ಒಸಡುಗಳಲ್ಲಿ ಸೋಂಕು ಉಂಟಾಗಿದ್ದರೆ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಒಂದು ಚಿಕ್ಕಚಮಚ ಅಡುಗೆ ಸೋಡಾ ಬೆರೆಸಿ ಬಾಯಿಯನ್ನು ದಿನದದಲ್ಲಿ ಒಂದು ಅಥವಾ ಎರಡು ಬಾರಿ ಚೆನ್ನಾಗಿ ಮುಕ್ಕಳಿಸಿ. ಇದರಿಂದ ಸೋಂಕು ಕಡಿಮೆಯಾಗುವುದು ಮಾತ್ರವಲ್ಲ, ಬಾಯಿಯ ದುರ್ವಾಸನೆಯೂ ಇಲ್ಲವಾಗುತ್ತದೆ. ಹಲ್ಲು ನೋವನ್ನು ಶಮನಗೊಳಿಸಲು ಸೂಕ್ತ ಪರಿಹಾರ

ಪರಿಹಾರ #3
ಒಂದು ದೊಡ್ಡ ಲೋಟ ನೀರಿನಲ್ಲಿ ಚಿಟಿಕೆಯಷ್ಟು ಅಡುಗೆ ಸೋಡಾ ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಪರಿಹಾರ #4
ರಾತ್ರಿ ಊಟದ ಬಳಿಕ ಒಂದು ಲೋಟ ನೀರಿನಲ್ಲಿ ಚಿಟಿಕೆ ಅಡುಗೆ ಸೋಡಾ ಬೆರೆಸಿ ಕುಡಿಯುವ ಮೂಲಕ ಅಜೀರ್ಣ ಮತ್ತು ಇತರ ಕರುಳು ಸಂಬಂಧಿತ ತೊಂದರೆಗಳಿಗೆ ಒಳಗಾಗದಂತೆ ನೋಡಿಕೊಳ್ಳಬಹುದು. ಅಜೀರ್ಣ ನಿವಾರಣೆಗೆ ಹಿತ್ತಲ ಗಿಡವೇ ರಾಮಬಾಣ

ಪರಿಹಾರ #5
ಒಂದು ಚಮಚ ಅಡುಗೆ ಸೋಡಾವನ್ನು ನಾಲ್ಕು ಲೋಟ ನೀರಿನಲ್ಲಿ ಬೆರೆಸಿ. ಈ ನೀರನ್ನು ನಿಧಾನವಾಗಿ ಕುಡಿಯುತ್ತಾ ಒಂದು ವಾರದಲ್ಲಿ ಖಾಲಿ ಮಾಡಿ. ಇದರಿಂದ ಉರಿಮೂತ್ರ, ಮೂತ್ರನಾಳದ ಸೋಂಕು ಇಲ್ಲವಾಗುತ್ತದೆ ಹಾಗೂ ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

ಪರಿಹಾರ #6
ಅಡುಗೆ ಸೋಡಾ ಬೆರೆಸಿದ ನೀರನ್ನು ಆಗಾಗ ಕುಡಿಯುತ್ತಿರುವ ಮೂಲಕ ದೇಹದಲ್ಲಿ ಉರಿಯೂತವಾಗುವುದನ್ನು ತಡೆಯಬಹುದು. ವಿಶೇಷವಾಗಿ ಕ್ರೀಡಾಪಟುಗಳು ಮತ್ತು ದೇಹದಾರ್ಢ್ಯ ಸ್ಪರ್ಧಿಗಳು ಈ ವಿಧಾನವನ್ನು ಅನುಸರಿಸುವ ಮೂಲಕ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

ಪರಿಹಾರ #7
ಒಂದು ವೇಳೆ ಶೀತ ಬಾಧಿಸಿದ್ದರೆ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಅರ್ಧ ಚಿಕ್ಕಚಮದ ಅಡುಗೆ ಸೋಡಾ, ಅರ್ಧ ಚಮಚ ಲಿಂಬೆರಸ ಬೆರೆಸಿ ಮಿಶ್ರಣ ಮಾಡಿ ಕುಡಿಯಿರಿ. ಶೀತ ನೆಗಡಿಯ ಪ್ರಭಾವದಿಂದ ಬೇಗನೇ ಹೊರಬರಲು ಇದು ನೆರವಾಗುತ್ತದೆ.



Click it and Unblock the Notifications
