ಮುಖದ ಸೌಂದರ್ಯಕ್ಕೆ ಚಿಟಿಕೆಯಷ್ಟು ಅಡುಗೆ ಸೋಡಾ!

By Jaya subramanya
Subscribe to Boldsky

ಸೌಂದರ್ಯ ದೋಷಗಳ ನಿವಾರಣೆಗಾಗಿ ನಾವು ದುಬಾರಿ ಪ್ರಸಾಧನಗಳನ್ನು ಬಳಸುತ್ತೇವೆ, ಸೌಂದರಯ ತಜ್ಞರನ್ನು ಭೇಟಿಯಾಗುತ್ತೇವೆ ಅಂತೆಯೇ ವೃಥಾ ದುಬಾರಿ ಹಣವನ್ನು ವ್ಯಯಿಸುತ್ತೇವೆ. ಅದಾಗ್ಯೂ ನಾವು ಪ್ರಯೋಜನವನ್ನು ಪಡೆದುಕೊಂಡಿಲ್ಲ ಎಂದಾಗ ಉಂಟಾಗುವ ವ್ಯಥೆಯನ್ನು ವಿವರಿಸಲಾಗುವುದಿಲ್ಲ. ಈ ಉತ್ಪನ್ನಗಳು ನಿಮಗೆ ಲಾಭವನ್ನು ನೀಡದೇ ಇದ್ದರೂ ನಿಮ್ಮ ತ್ವಚೆಗೆ ಹಾನಿಯನ್ನುಂಟು ಮಾಡುವುದು ಖಂಡಿತ    ಅಡುಗೆ ಸೋಡಾ ನೀಡುತ್ತೆ ಅಂದದ ತ್ವಚೆ

ನೈರ್ಗಿಕ ಉತ್ಪನ್ನಗಳು ನೀಡುವ ಪ್ರಯೋಜವನ್ನು ರಾಸಾಯನಿಕ ಉತ್ಪನ್ನಗಳು ಎಂದಿಗೂ ನೀಡಲು ಸಾಧ್ಯವಿಲ್ಲ. ನಿಮ್ಮ ಸಮಯ ಮತ್ತು ದುಡ್ಡು ಮಾತ್ರ ಇಲ್ಲಿ ವೆಚ್ಚವಾಗುತ್ತದೆ. ಇಂದಿನ ಲೇಖನದಲ್ಲಿ ಕೂಡ ನೈಸರ್ಗಿಕ ಉತ್ಪನ್ನದಂತೆ ಕಾರ್ಯನಿರ್ವಹಿಸುವ ಮತ್ತು ಸುಲಭವಾಗಿ ಕೈಗೆಟಕುವ ಒಂದು ಉತ್ಪನ್ನದ ಕುರಿತು ನಾವು ಮಾಹಿತಿ ತಿಳಿಸುತ್ತಿದ್ದು ಇದರ ಅಸಾಧಾರಣ ಪ್ರಯೋಜನಗಳಿಂದ ನೀವು ಸ್ತಂಭೀಭೂತರಾಗುವುದು ನಿಜ. ನಿಮಗೆ ನೈಸರ್ಗಿಕ ಹೊಳಪನ್ನು ನೀಡುವುದರ ಜೊತೆಗೆ ನಿಮ್ಮ ಸಾಕಷ್ಟು ತ್ವಚೆಯ ಸಮಸ್ಯೆಗಳನ್ನು ಇದು ನಿವಾರಣೆ ಮಾಡುವುದು ಖಂಡಿತ.

ಮುಖದ ಸೌಂದರ್ಯದಲ್ಲಿ ಬೇಕಿಂಗ್ ಸೋಡಾ ಅಸಾಧಾರಣವಾಗಿ ಕಾರ್ಯನಿರ್ವಹಿಸುತ್ತಿದ್ದು ನಿಮ್ಮ ಕೂದಲು ಮತ್ತು ತಲೆಬುರುಡೆಯ ಸ್ವಾಸ್ಥ್ಯಕ್ಕೂ ಇದು ಹೇಳಿಮಾಡಿಸಿರುವಂಥದ್ದಾಗಿದೆ. ಇನ್ನು ಸಂಪೂರ್ಣ ದೇಹ ಚಿಕಿತ್ಸೆಯನ್ನು ಇದನ್ನು ಬಳಸಿ ಮಾಡಬಹುದಾಗಿದ್ದು, ಅದಕ್ಕೂ ಮುನ್ನ ಪ್ಯಾಚ್ ಟೆಸ್ಟ್ ಅನ್ನು ನೀವು ಮಾಡಿಸಿಕೊಳ್ಳಬೇಕಾಗುತ್ತದೆ.  ಅಡುಗೆ ಸೋಡಾದಲ್ಲಿದೆ ಮೊಡವೆ ಸಮಸ್ಯೆಗೆ ಪರಿಹಾರ

ನಿಮ್ಮ ಕೂದಲು ಮತ್ತು ತ್ವಚೆಗೆ ಇದು ಯಾವುದೇ ರೀತಿಯ ಸಮಸ್ಯೆಯನ್ನುಂಟು ಮಾಡುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ನಂತರವೇ ಮುಂದುವರಿಯಿರಿ. ಅದರಲ್ಲೂ ನಿಮ್ಮದು ಸೂಕ್ಷ್ಮ ತ್ವಚೆಯಾಗಿದ್ದರೆ ಕಾಳಜಿ ಬೇಕೇ ಬೇಕು. ಇಂದಿನ ಲೇಖನದಲ್ಲಿ ಬೇಕಿಂಗ್ ಸೋಡಾದ ಇನ್ನಷ್ಟು ಮಹತ್ವ ಅಂಶಗಳನ್ನು ತಿಳಿದುಕೊಳ್ಳೋಣ....

ಮೊಡವೆ ಮತ್ತು ಪಿಂಪಲ್ ನಿವಾರಣೆ

ಮೊಡವೆ ಮತ್ತು ಪಿಂಪಲ್ ನಿವಾರಣೆ

ಮುಖದಲ್ಲಿ ಮೂಡುವ ಕಲೆ ಅಥವಾ ಪಿಂಪಲ್ ಹೆಚ್ಚು ಹೆಚ್ಚು ಕಿರಿಕಿರಿಯನ್ನುಂಟು ಮಾಡುತ್ತಿರುತ್ತದೆ. ಯಾವುದೇ ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಮುನ್ನ, ಬೇಕಿಂಗ್ ಸೋಡಾದ ಅಥವಾ ಅಡುಗೆ ಸೋಡಾದ ಪ್ರಯೋಜನ ಪಡೆಯಿರಿ. ಉರಿಯೂತ ಮತ್ತು ನಂಜು ನಿವಾರಕ ಎಂದೆನಿಸಿರುವ ಬೇಕಿಂಗ್ ಸೋಡಾ 2 ವಾರದಲ್ಲಿ ಹೊಳೆಯುವ ಮೈಕಾಂತಿಯನ್ನು ನಿಮಗೆ ನೀಡುತ್ತದೆ.

ಬ್ಲ್ಯಾಕ್ ಹೆಡ್ಸ್ ನಿವಾರಣೆ

ಬ್ಲ್ಯಾಕ್ ಹೆಡ್ಸ್ ನಿವಾರಣೆ

ಬೇಕಿಂಗ್ ಸೋಡಾ ನಿಮ್ಮ ತ್ವಚೆಗೆ ಏನೆಲ್ಲಾ ಮಾಡಬಹುದು ಎಂಬುದನ್ನು ನಿಮಗೆ ಊಹಿಸಲು ಸಾಧ್ಯವಿಲ್ಲ. ಮೇದಸ್ಸಿನ ಗ್ರಂಥಿಗಳಲ್ಲಿ ಹೆಚ್ಚುವರಿ ತೈಲ ಸ್ರವಿಸುವಿಕೆಯನ್ನು ಕಡಿಮೆ ಮಾಡಿ ಕಲೆಗಳನ್ನು ನಿವಾರಿಸುತ್ತದೆ. ಇದು ಬ್ಲ್ಯಾಕ್ ಹೆಡ್ಸ್‎ಗಳನ್ನು ಮೃದುಗೊಳಿಸಿದಾಗ ಇದನ್ನು ತೊಳೆಯುವುದು ಸುಲಭವಾಗುತ್ತದೆ.

ಸನ್ ಟ್ಯಾನ್ ಮತ್ತು ಸನ್ ಬರ್ನ್ ನಿವಾರಣೆ

ಸನ್ ಟ್ಯಾನ್ ಮತ್ತು ಸನ್ ಬರ್ನ್ ನಿವಾರಣೆ

ನೀವು ಎಷ್ಟೇ ಉತ್ತಮವಾಗಿರುವ ಸನ್ ಸ್ಕ್ರೀನ್ ಅನ್ನು ಬಳಸಿ ಆದರೆ ಸನ್ ಟ್ಯಾನ್ ಅನ್ನು ಸಂಪೂರ್ಣವಾಗಿ ಹೋಗಲಾಡಿಸಲು ನಿಮ್ಮಿಂದ ಸಾಧ್ಯವಿಲ್ಲ. ಹೆಚ್ಚು ಸನ್ ಟ್ಯಾನ್ ಸನ್ ಬರ್ನ್ ಅನ್ನು ಉಂಟುಮಾಡುತ್ತದೆ. ನಿಮ್ಮೊಂದಿಗೆ ಸಣ್ಣ ಡಬ್ಬಿಯಲ್ಲಿ ಸೋಡಾವನ್ನು ಇರಿಸಿಕೊಳ್ಳಿ. ಸನ್ ಬರ್ನ್‎ನಿಂದ ಉರಿತ ಮತ್ತು ತುರಿಕೆ ಉಂಟಾದಾದಲ್ಲಿ ಬೇಕಿಂಗ್ ಸೋಡಾ ಹಚ್ಚಿ. ನಿಮ್ಮ ತ್ವಚೆಯನ್ನು ಇದು ಮೃದುವಾಗಿಸುತ್ತದೆ.

ಮೈ ಬಣ್ಣ ಸುಧಾರಿಸುತ್ತದೆ

ಮೈ ಬಣ್ಣ ಸುಧಾರಿಸುತ್ತದೆ

ನಿಮ್ಮ ಬಣ್ಣವನ್ನು ಬಿಳಿಯಾಗಿಸುವ ಸಾಮರ್ಥ್ಯವನ್ನು ಬೇಕಿಂಗ್ ಸೋಡಾ ಹೊಂದಿಲ್ಲ ಆದರೆ ಇದೊಂದು ಎಕ್ಸ್‎ಫೋಲಿಯೇಟಿಂಗ್ ಏಜೆಂಟ್ ಎಂದೆನಿಸಿದ್ದು, ಸ್ಕಿನ್ ಟೋನ್ ಅನ್ನು ನಿವಾರಿಸಿ ನಿಮ್ಮನ್ನು ಹೊಳಪುಳ್ಳವರು ಮತ್ತು ತಾಜಾವಾಗಿ ಮಾಡುತ್ತದೆ. ಬೇಕಿಂಗ್ ಸೋಡಾ ನಿಮ್ಮ ತ್ವಚೆಯನ್ನು ಡ್ರೈ ಮಾಡುತ್ತದೆ ಅದಕ್ಕಾಗಿ ಇದನ್ನು ಬಳಸುವಾಗ ಆಲೀವ್ ಆಯಿಲ್ ಮತ್ತು ಲಿಂಬೆ ರಸವನ್ನು ಸೇರಿಸಿ.

 ತ್ವಚೆಯ ತೊಂದರೆಗಳ ನಿವಾರಣೆ

ತ್ವಚೆಯ ತೊಂದರೆಗಳ ನಿವಾರಣೆ

ಬೇಕಿಂಗ್ ಸೋಡಾ ನಂಜುನಿವಾರಕ ಅಂಶಗಳನ್ನು ಒಳಗೊಂಡಿದ್ದು ಉರಿಯೂತ ನಿವಾರಕ ಎಂದೆನಿಸಿದೆ. ನಿಮ್ಮ ತ್ವಚೆಯ ಯಾವುದೇ ತೊಂದರೆಯಲ್ಲೂ ಇದು ಉತ್ತಮ ಔಷಧವಾಗಿದೆ. ನಿಮಗೆ ತ್ವರಿತ ಪರಿಹಾರ ಬೇಕೆಂದಲ್ಲಿ, ಹಾನಿಯಾಗಿರುವ ಭಾಗಕ್ಕೆ ನೀರನ್ನು ಸೇರಿಸಿಕೊಂಡು ಬೇಕಿಂಗ್ ಸೋಡಾವನ್ನು ಹಚ್ಚಿ. ಬೇಕಿಂಗ್ ಸೋಡಾದ ಅತ್ಯುತ್ತಮ ಫೇಶಿಯಲ್ ಪ್ರಯೋಜನಗಳಲ್ಲಿ ಇದೂ ಕೂಡ ಒಂದು.

ಫೇಶಿಯಲ್ ಸ್ಕ್ರಬ್

ಫೇಶಿಯಲ್ ಸ್ಕ್ರಬ್

ಮನೆಯಲ್ಲೇ ತಯಾರಾದ ಫೇಶಿಯಲ್ ಸ್ಕ್ರಬ್ ಅನ್ನು ತಯಾರಿಸುವಾಗ, ಇದಕ್ಕೆ ಸ್ವಲ್ಪ ಬೇಕಿಂಗ್ ಸೋಡಾವನ್ನು ಹಾಕಿ. ನಿಮ್ಮ ತ್ವಚೆಯನ್ನು ಮಸಾಜ್ ಮಾಡಿ ಸ್ವಲ್ಪ ನಿಮಿಷ ಹಾಗೆಯೇ ಬಿಡಿ. ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಮುಖದಲ್ಲಿ ಪುನರ್ಯವ್ವೌನ ನಳ ನಳಿಸುತ್ತಿರುವುದನ್ನು ನಿಮಗೆ ಕಾಣಬಹುದು.

 
For Quick Alerts
ALLOW NOTIFICATIONS
For Daily Alerts

    English summary

    Facial Benefits Of Baking Soda

    Baking soda is one of those products that can give your skin a natural glow and solve a lot of skin issues. Facial benefits of baking soda are numerous. Not only for the skin, but baking soda also treats your hair and scalp. What can baking soda do for your skin? have a look...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more