For Quick Alerts
ALLOW NOTIFICATIONS  
For Daily Alerts

ಹಲ್ಲು ನೋವನ್ನು ಶಮನಗೊಳಿಸಲು ಸೂಕ್ತ ಪರಿಹಾರ

|

ಹಲ್ಲಿನ ಬೇರು ಮತ್ತು ದವಡೆಗಳ ನಡುವಿನ ಸೋಂಕುನಿಂದಾಗಿ (ಇನ್‍ಫೆಕ್ಷನ್) ಕಾರಣವಾಗಿ ಹಲ್ಲು ನೋವು ಕಾಣಿಸಿಕೊಳ್ಳುತ್ತದೆ. ಇವುಗಳಿಂದ ನಮಗೆ ಲಭಿಸುವ ನೋವು ನರಕಯಾತನೆಯಾಗಿರುತ್ತದೆ. ಇದರಿಂದ ಹಲ್ಲು ನೋವು ಬರುವುದರ ಜೊತೆಗೆ ದವಡೆಗಳ ಊತ ಮತ್ತು ಕೀವು ಸಹ ಕಂಡು ಬರುತ್ತದೆ.

ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಅಬ್‍ಸೆಸ್ಸ್‌ಡ್ ಹಲ್ಲು ಎಂದು ಕರೆಯುತ್ತಾರೆ. ಇದು ಸರಿಯಾಗಿ ಚಿಕಿತ್ಸೆ ದೊರಕದಿದ್ದಲ್ಲಿ ಮೂಳೆಗಳಿಗೂ ಸಹ ವ್ಯಾಪಿಸುತ್ತದೆ. ಇದು ಮುಂದೆ ಜೀವಕ್ಕೆ ಅಪಾಯವನ್ನು ಸಹ ಉಂಟು ಮಾಡಬಹುದು. ಈ ಬಾವು ಬಂದ ಹಲ್ಲುಗಳು ನೀಡುವ ನೋವನ್ನು ಸಹಿಸಲು ಸಹ ಸಾಧ್ಯವಾಗುವುದಿಲ್ಲ.

ಇದರಿಂದಾಗಿ ಜನರು ಅವುಗಳನ್ನು ಪರಿಹರಿಸಿಕೊಳ್ಳಲು ಹಲವಾರು ಮಾರ್ಗಗಳನ್ನು ಹುಡುಕುತ್ತಾರೆ. ಇದರಿಂದ ಅವರ ನೋವು ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಗುತ್ತದೆ. ಹಲ್ಲುಗಳ ನೋವು ನಿವಾರಣೆಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಹಲವಾರು ಮದ್ದುಗಳಿವೆ. ಈ ಕೆಳಕಂಡ ಮನೆಮದ್ದುಗಳು ನಿಮ್ಮ ಹಲ್ಲು ನೋವಿಗೆ ಅಗತ್ಯವಾದ ಪರಿಹಾರವನ್ನು ನೀಡುತ್ತವೆ.

ಮುತ್ತಿನಂತಹ ಹಲ್ಲು ಹೆಚ್ಚಿಸುವುದು ಮುಖದ ಆಕರ್ಷಣೆ

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಒಂದು ಪ್ರಾಕೃತಿಕವಾದ ಬ್ಯಾಕ್ಟೀರಿಯಾ ನಿರೋಧಕವಾಗಿದೆ. ಬೆಳ್ಳುಳ್ಳಿಯ ರಸವು ಇನ್‍ಫೆಕ್ಷನ್ ಅನ್ನು ಹೋಗಲಾಡಿಸುತ್ತದೆ. ಒಂದು ವೇಳೆ ನಿಮಗೆ ವಿಪರೀತವಾದ ಹಲ್ಲು ನೋವು ಕಂಡು ಬಂದಲ್ಲಿ ಹೀಗೆ ಮಾಡಿ. ಇದಕ್ಕಾಗಿ ಬೆಳ್ಳುಳ್ಳಿಯನ್ನು ತೆಗೆದು ಕೊಂಡು ಅದನ್ನು ಜಜ್ಜಿ ರಸವನ್ನು ತೆಗೆಯಿರಿ. ಈಗ ಈ ರಸವನ್ನು ಸೋಂಕು (ಇನ್‍ಫೆಕ್ಷನ್) ಆಗಿರುವ ಭಾಗಕ್ಕೆ ಲೇಪಿಸಿ. ಈ ಮನೆ ಮದ್ದು ನಿಮ್ಮ ಹಲ್ಲು ನೋವನ್ನು ನಿವಾರಿಸಲು ಪರಿಣಾಮಕಾರಿಯಾಗಿ ನೆರವಾಗುತ್ತದೆ.

ಲವಂಗದ ಎಣ್ಣೆ

ಲವಂಗದ ಎಣ್ಣೆ

ಲವಂಗದ ಎಣ್ಣೆಯು ಇನ್‍ಫೆಕ್ಷನ್ ನಿವಾರಿಸಲು ಹೇಳಿ ಮಾಡಿಸಿದ ಔಷಧಿಯಾಗಿದೆ. ಇದು ದವಡೆಗಳ ನೋವು ಮತ್ತು ಹಲ್ಲು ನೋವುಗಳಿಗೆ ರಾಮ ಬಾಣದಂತೆ ಕೆಲಸ ಮಾಡುತ್ತದೆ. ಸ್ವಲ್ಪ ಪ್ರಮಾಣದ ಲವಂಗದ ಎಣ್ಣೆಯನ್ನು ತೆಗೆದುಕೊಳ್ಳಿ. ಅದರಿಂದ ಮೃದುವಾಗಿ ಬ್ರಷ್ ಮಾಡಿ. ಇದನ್ನು ನೋವಿರುವ ಭಾಗಕ್ಕೆ ಬಳಸುವಾಗ ಸ್ವಲ್ಪ ಜಾಗರೂಕರಾಗಿರಿ. ಹೆಚ್ಚು ಒತ್ತಡವನ್ನು ನೀಡದೆ ಬ್ರಷ್ ಮಾಡಿ, ಇಲ್ಲವಾದಲ್ಲಿ ನಿಮ್ಮ ನೋವು ಮತ್ತಷ್ಟು ಹೆಚ್ಚಾಗಬಹುದು. ಲವಂಗದ ಎಣ್ಣೆಯನ್ನು ದವಡೆಗಳ ಮೇಲೆ ಹಾಕಿ ಮೃದುವಾಗಿ ಮಸಾಜ್ ಮಾಡಿ.

ತೆಂಗಿನೆಣ್ಣೆ

ತೆಂಗಿನೆಣ್ಣೆ

ವಿಪರೀತವಾದ ಹಲ್ಲು ನೋವಿಗೆ ಇದು ಸಹ ಒಂದು ಪ್ರಯೋಜನಕಾರಿ ಮನೆ ಪರಿಹಾರವಾಗಿದೆ. ಇದಕ್ಕೆ ನಿಮಗೆ ಅಗತ್ಯವಾಗಿರುವುದು ಕೇವಲ ತೆಂಗಿನೆಣ್ಣೆ. ಒಂದು ಚಮಚ ತೆಂಗಿನೆಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಳ್ಳಿ. 30 ನಿಮಿಷಗಳ ಕಾಲ ಬಾಯಿಯಲ್ಲಿ ಇದನ್ನು ಹಾಕಿಕೊಂಡು ಆಗಾಗ ಮುಕ್ಕುಳಿಸುತ್ತ ಇರಿ. ನಂತರ ಇದನ್ನು ಉಗಿದು ಬಾಯಿಯನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ಖಂಡಿತ ನಿಮ್ಮ ಸಮಸ್ಯೆಯಿಂದ ಸ್ವಲ್ಪ ನಿರಾಳತೆಯನ್ನು ಅನುಭವಿಸುವಿರಿ.

ಪೆಪ್ಪರ್‌ಮಿಂಟ್ ಎಣ್ಣೆ

ಪೆಪ್ಪರ್‌ಮಿಂಟ್ ಎಣ್ಣೆ

ಪೆಪ್ಪರ್‌ಮಿಂಟ್ ಆಯಿಲ್ ಹಲ್ಲು ನೋವಿನ ಮೇಲೆ ಪವಾಡ ಸದೃಶ್ಯವಾಗಿ ಕೆಲಸ ಮಾಡುತ್ತದೆ. ಈ ಎಣ್ಣೆಯನ್ನು ನಿಮ್ಮ ಬೆರಳುಗಳಲ್ಲಿ ತೆಗೆದುಕೊಂಡು ಅದನ್ನು ಮೃದುವಾಗಿ ನೋವಿರುವ ಭಾಗದಲ್ಲಿ ಮಸಾಜ್ ಮಾಡಿ. ಇದರಿಂದಾಗಿ ಬಾವು ಬಂದ ಹಲ್ಲುಗಳ ನೋವಿನಿಂದ ನಿಮಗೆ ತಕ್ಷಣ ಉಪಶಮನ ದೊರೆಯುತ್ತದೆ.

ಉಪ್ಪು

ಉಪ್ಪು

ಹಲ್ಲು ನೋವಿಗೆ ಉಪ್ಪು ತತ್‍ಕ್ಷಣದ ನೋವು ನಿವಾರಕವಾಗಿ ಕೆಲಸಕ್ಕೆ ಬರುವ ಅಂಶವಾಗಿದೆ. ಇದಕ್ಕೆಲ್ಲ ಬೇಕಾಗಿರುವುದು ಕೇವಲ ಎರಡು ವಸ್ತುಗಳು ಒಂದು ಬೆಚ್ಚನೆಯ ನೀರು ಮತ್ತು ಎರಡು ಸ್ವಲ್ಪ ಉಪ್ಪು. ಇವೆರಡನ್ನು ಬೆರೆಸಿ ಅದರಿಂದ ಬಾಯಿಯನ್ನು ಮುಕ್ಕುಳಿಸಿ. ಮೊದಲೆರಡು ಬಾರಿ ಬಾಯಿಯನ್ನು ಮುಕ್ಕುಳಿಸುವಾಗ ನಿಮಗೆ ನೋವಿನ ಅನುಭವವಾಗಬಹುದು. ಆದರೆ ನಂತರ ನಿಮಗೆ ನೋವಿನಿಂದ ಉಪಶಮನ ದೊರೆಯುವುದು ಸುಳ್ಳಲ್ಲ. ಇದನ್ನು ಕೆಲವು ಬಾರಿ ಪುನರಾವರ್ತಿಸಿ ಮತ್ತು ಶೇ.90ರಷ್ಟು ನೋವನ್ನು ಕಡಿಮೆ ಮಾಡಿಕೊಳ್ಳಿ.

ಒರೆಗಾನೊ ಎಣ್ಣೆ

ಒರೆಗಾನೊ ಎಣ್ಣೆ

ಒರೆಗಾನೊ ಎಣ್ಣೆಯು ಅತ್ಯುತ್ತಮವಾದ ಬ್ಯಾಕ್ಟೀರಿಯಾ ನಿರೋಧಕ, ಫಂಗಸ್ ನಿರೋಧಕ, ಆಂಟಿ-ಆಕ್ಸಿಡೆಂಟ್ ಮತ್ತು ವೈರಸ್ ನಿರೋಧಕ ಅಂಶಗಳನ್ನು ಒಳಗೊಂಡಿದೆ. ಒರೆಗಾನೊ ಎಣ್ಣೆಯು ಹಲ್ಲು ಮತ್ತು ದವಡೆಗಳ ಸಮಸ್ಯೆಗೆ ಹೇಳಿ ಮಾಡಿಸಿದ ಔಷಧಿಯಾಗಿದೆ.

ಸೇಬು ಹಣ್ಣಿನ ವಿನೇಗರ್

ಸೇಬು ಹಣ್ಣಿನ ವಿನೇಗರ್

ಸೇಬು ಹಣ್ಣಿನ ವಿನೇಗರ್ ಹಲ್ಲುಗಳ ನೋವಿಗೆ ಉತ್ತಮ ಪರಿಹಾರವಾಗಿದೆ. ಪ್ರಾಕೃತಿಕ ಅಥವಾ ಆರ್ಗ್ಯಾನಿಕ್ ಎಸಿವಿ ಈ ನಿಟ್ಟಿನಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಇದಕ್ಕಾಗಿ ಒಂದು ಚಮಚ ಸೇಬು ಹಣ್ಣಿನ ವಿನೇಗರ್ ತೆಗೆದುಕೊಳ್ಳಿ. ಇದನ್ನು ಬಾಯಿಯಲ್ಲಿ ಕೆಲವು ನಿಮಿಷಗಳ ಕಾಲ ಹಾಗೆಯೇ ಇಟ್ಟುಕೊಳ್ಳಿ ನಂತರ ಅದನ್ನು ಉಗಿಯಿರಿ. ಯಾವುದೇ ಕಾರಣಕ್ಕು ಇದನ್ನು ನುಂಗಬೇಡಿ. ಇದು ಹಲ್ಲು ನೋವಿನ ಪ್ರದೇಶವನ್ನು ಇನ್‍ಫೆಕ್ಷನ್‍ನಿಂದ ದೂರ ಮಾಡುತ್ತದೆ. ಇದರ ಜೊತೆಗೆ ಇದು ಹಲ್ಲುಗಳ ಸುತ್ತ ಬಂದಿರುವ ಊತವನ್ನು ಸಹ ಕಡಿಮೆ ಮಾಡುತ್ತದೆ.

ಗೋಧಿ ತೆನೆಯ ರಸ

ಗೋಧಿ ತೆನೆಯ ರಸ

ಹಲ್ಲು ಹಾಗೂ ಒಸಡಿನ ನೋವಿನ ನಿವಾರಣೆಗೆ ಗೋಧಿ ತೆನೆಯ ರಸ ಬಹಳ ಒಳ್ಳೆಯ ಔಷಧಿ.ಇದು ಹಲ್ಲಿನ ನೋವನ್ನು ತೆಗೆದು ಹಾಕುತ್ತದೆ ಹಾಗೂ ಬ್ಯಾಕ್ಟೀರಿಯಾಗಳನ್ನು ತೊಲಗಿಸುತ್ತದೆ.

English summary

Top Home Remedies for Toothache

Mainly caused by gingivitis and a chipped tooth, an abscessed tooth is an infection between the gums or in tooth’s root, which is very painful we will tell you the dos and don’ts. Firstly, you’ll need to recognize the symptoms and causes.
Story first published: Saturday, August 2, 2014, 16:58 [IST]
X
Desktop Bottom Promotion