Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಅಜೀರ್ಣ ನಿವಾರಣೆಗೆ ಹಿತ್ತಲ ಗಿಡವೇ ರಾಮಬಾಣ
ಈಗತಾನೇ ಊಟ ಮಾಡಿದ ಬಳಿಕ ಹೊಟ್ಟೆ ಉಬ್ಬಿರುವಂತಾಗಿದೆಯೇ? ಸದ್ಯಕ್ಕೆ ಯಾವುದೇ ಔಷಧಿ ಮನೆಯಲಿಲ್ಲವೇ? ಔಷಧಿ ತರುವವರೆಗೂ ತಾಳಲು ಸಾಧ್ಯವಿಲ್ಲವೇ? ಆತಂಕ ಬೇಡ, ನಿಮ್ಮ ಮನೆಯ ಅಕ್ಕಪಕ್ಕದಲ್ಲಿಯೇ ಇರುವ ಈ ಸಾಮಾನ್ಯ ಗಿಡಗಳ ಎಲೆಗಳಲ್ಲಿ ಒಂದು ಬಗೆಯ ಎಲೆಗಳಲ್ಲಿ ಕೆಲವನ್ನು ಹಸಿಯಾಗಿಯೇ ಅಗಿದು ನುಂಗಿ ನೀರು ಕುಡಿಯಿರಿ.
ಏನಾಶ್ಚರ್ಯ! ಔಷಧಿ ತೆಗೆದುಕೊಳ್ಳುವ ಪ್ರಮೇಯವೇ ಇಲ್ಲದೇ ಅಜೀರ್ಣದ ತೊಂದರೆ ಇಲ್ಲವಾಗುತ್ತದೆ. ಈ ಐದು ಎಲೆಗಳು ಯಾವುವು ಎಂಬ ಕುತೂಹಲ ಮೂಡಿತೇ? ಮುಂದೆ ಓದಿ....

ತುಳಸಿ ಎಲೆಗಳು
ಸುಮಾರು ಐದು ಆರು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಹಸಿಯಾಗಿದ್ದಂತೆಯೇ ಅಗಿತು ನುಂಗಿಬಿಡಿ. ಇದರಿಂದ ಆಮ್ಲೀಯತೆ, ಅಜೀರ್ಣ, ಹುಳಿತೇಗು ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ. ಈ ಎಲೆಗಳ ರಸ ಜಠರರಸದ ಆಮ್ಲೀಯತೆಯನ್ನು ಕಡಿಮೆಗೊಳಿಸಿ ಜಠರ ಮತ್ತು ಕರುಳುಗಳ ಒಳಗೆ ಹುಣ್ಣಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಇದು ಜಠರರಸದ ಪ್ರಾಬಲ್ಯವನ್ನು ಕಡಿಮೆಗೊಳಿಸುತ್ತದೆ. ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?

ಪುದೀನಾ ಎಲೆಗಳು
ಹೊಟ್ಟೆಯಲ್ಲಿ ಉರಿಯನ್ನು ತಣಿಸಲು ಪುದಿನಾ ಎಲೆಗಳು ಅತ್ಯುತ್ತಮವಾಗಿವೆ. ಈ ರಸ ಹೊಟ್ಟೆಯ ರಸದ ಪ್ರಾಬಲ್ಯವನ್ನು ಕಡಿಮೆ ಮಾಡುವುದರ ಜೊತೆಗೇ ಜಠರದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಅಜೀರ್ಣ ಅಥವಾ ಹೊಟ್ಟೆಯುರಿ ಉಂಟಾದರೆ ಕೆಲವು ಪುದೀನಾ ಎಲೆಗಳನ್ನು ಹಸಿಯಾಗಿಯೇ ಅಗಿದು ನುಂಗಿಬಿಡಿ. ಇದರಿಂದ ಹೊಟ್ಟೆನೋವು ತಕ್ಷಣ ಕಡಿಮೆಯಾಗುತ್ತದೆ. ಬಹುಪಯೋಗಿ ಪುದೀನಾ ಸೊಪ್ಪಿನ ಔಷಧೀಯ ಗುಣಗಳೇನು?

ಪುದೀನಾ ಎಲೆಗಳು
ಇದಕ್ಕೂ ಉತ್ತಮ ವಿಧಾನವೆಂದರೆ ಕೆಲವು ಪುದೀನಾ ಎಲೆಗಳನ್ನು ಒಂದು ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಿ ನೀರು ಅರ್ಧವಾದ ಬಳಿಕ ಸೋಸಿ ತಣಿಸಿ ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು. ಹೊಟ್ಟೆನೋವು ಎದುರಾದಾಗ ಈ ನೀರನ್ನು ತಕ್ಷಣ ಕುಡಿಯುವುದು ಶೀಘ್ರವಾದ ಉಪಶಮನ ನೀಡುತ್ತದೆ.

ಕರಿಬೇವಿನ ಎಲೆಗಳು
ಹೊಟ್ಟೆನೋವಿಗೆ ಅಡುಗೆಮನೆಯ ಪ್ರಮುಖ ಸಾಂಬಾರಪದಾರ್ಥವಾದ ಕರಿಬೇವಿನ ಎಲೆಯೂ ಉತ್ತಮ ಪರಿಹಾರ ನೀಡುತ್ತದೆ. ಇದರ ಉರಿಶಾಮಕ ಮತ್ತು ಉರಿಯೂತ ನಿವಾರಕ ಗುಣ ಹೊಟ್ಟೆಯಲ್ಲಿ ಎದುರಾದ ಅಜೀರ್ಣವನ್ನೂ ನಿವಾರಿಸಲು ಸಮರ್ಥವಾಗಿದೆ. ಅಲ್ಲದೇ ಕೆಲವು ಕರಿಬೇವಿನ ಎಲೆಗಳನ್ನು ಊಟದೊಂದಿಗೆ ಸೇವಿಸಿದಾಗ ಮಲಬದ್ಧತೆಯಾಗದೇ ಇರಲು ನೆರವಾಗುತ್ತದೆ. ಆರೋಗ್ಯ ವೃದ್ಧಿಗೆ ಬೇಕು, ಕರಿಬೇವು ಎಂಬ ಸಂಜೀವಿನಿ

ವೀಳ್ಯದ ಎಲೆ
ಒಂದು ವೇಳೆ ಊಟ ಹೆಚ್ಚಾಗಿ ಅಜೀರ್ಣವಾಗುವ ಸಾಧ್ಯತೆ ಕಂಡುಬಂದರೆ ತಕ್ಷಣ ಎಳೆಯ ವೀಳ್ಯದೆಲೆಯನ್ನು ಅಗಿದು ನುಂಗಿಬಿಡಿ. ಬಾಯಿಯಲ್ಲಿದ್ದಷ್ಟೂ ಹೊತ್ತು ಹೆಚ್ಚು ಜೊಲ್ಲನ್ನು ಸುರಿಸುವ ಮೂಲಕ ಇದು ಜೀರ್ಣರಸದ ಪ್ರಭಾವವನ್ನು ಉತ್ತಮಗೊಳಿಸುತ್ತದೆ. ಅಲ್ಲದೇ ಜೀರ್ಣರಸದ ಕ್ಷಮತೆಯನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಪರಿಣಾಮವಾಗಿ ಹೊಟ್ಟೆಯುಬ್ಬರ, ಹೊಟ್ಟೆಯುರಿ ಮೊದಲಾದವುಗಳನ್ನು ಶಮನಗೊಳಿಸುತ್ತದೆ. ವೀಳ್ಯದ ಎಲೆ ತಿಂದರೆ ಆರೋಗ್ಯಕ್ಕಾಗುವ ಲಾಭ

ಮೆಂತೆಯ ಎಲೆ
ಮೆಂತೆಯ ಸೊಪ್ಪು ಅಥವಾ ಎಲೆಗಳಲ್ಲಿ ಥೈಮಾಲ್ ಎಂಬ ಪೋಷಕಾಂಶವಿದೆ. ಇದು ಜೀರ್ಣರಸದಲ್ಲಿ ಮಿಳಿತಗೊಂಡ ಬಳಿಕ ಇನ್ನಷ್ಟು ಜೀರ್ಣರಸ ಒಸರುವಂತೆ ಮಾಡಿ ಜೀರ್ಣಕ್ರಿಯೆಯನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಪರಿಣಾಮವಾಗಿ ವಾಕರಿಕೆ, ಹೊಟ್ಟೆಯುರಿ, ಅಪಾನವಾಯು, ಅಜೀರ್ಣ, ಹೊಟ್ಟೆನೋವು ಮೊದಲಾದ ತೊಂದರೆಗಳಿಗೆ ಶೀಘ್ರ ಶಮನ ನೀಡುತ್ತದೆ.



Click it and Unblock the Notifications