For Quick Alerts
ALLOW NOTIFICATIONS  
For Daily Alerts

ನೆಮ್ಮದಿ ಕೆಡಿಸುವ ಮಾನಸಿಕ ಒತ್ತಡಕ್ಕೆ ಕಾರಣವೇನು?

By Super
|

ಇಂದು ಆಧುನಿಕ ಜೀವನ ಶೈಲಿಯು ವೇಗವಾಗಿ ಸಾಗುತ್ತಿದ್ದು ಹಾಗೂ ಅಷ್ಟೇ ತಲೆ ನೋವಿಂದ ಕೂಡಿದೆ. ಹೆಚ್ಚಿನವರು ಇದರ ಪರಿಣಾಮದ ಕುರಿತು ಆಲೋಚನೆ ಮಾಡಿರುವುದಿಲ್ಲ. ಆರೋಗ್ಯದಲ್ಲಿ ಉಂಟಾಗುವ ಅನೇಕ ರೀತಿಯ ಸಮಸ್ಯೆಗೆ ಕೂಡ ಇದು ಪ್ರಮುಖ ಪಾತ್ರ ವಹಿಸುತ್ತದೆ, ಎಂಬುದು ಇನ್ನೊಂದು ಆತಂಕಕಾರಿ ವಿಷಯವಾಗಿದೆ.

ಅದು ಯಾವುದೇ ರೀತಿಯಲ್ಲಿ ಇರಬಹುದು, ಕೆಲಸದ ಒತ್ತಡ, ಓದುವುದು, ಯಾವುದೇ ಇರಲಿ, ಹಲವಾರು ರೀತಿಯ ಒತ್ತಡದಿಂದ ನಾವು ಪ್ರತಿ ದಿನ ಬಳಲುತ್ತೇವೆ. ಒತ್ತಡವು ಮಾನಸಿಕವಾಗಿ ಮತ್ತು ದೈಹಿಕವಾಗಿ ನಮ್ಮನ್ನು ಹಿಂಡಿ ಹಿಪ್ಪೆ ಮಾಡುವಂತಹ ಒಂದು ಪ್ರಕ್ರಿಯೆಯಾಗಿರುತ್ತದೆ. ಆದರೂ ಮನುಷ್ಯರಿಗೆ ಒತ್ತಡ ಬಂದೇ ಬರುತ್ತದೆ ಮತ್ತು ಅದರ ಕುರಿತು ನಾವು ತಲೆ ಕೆಡಿಸಿಕೊಳ್ಳಬಾರದು ಅಷ್ಟೇ. ದಿನಕ್ಕೆ ಎಷ್ಟು ಹೊತ್ತಿನ ವ್ಯಾಯಾಮ ಒತ್ತಡ ನಿವಾರಿಸುತ್ತೆ?

ಈ ಒತ್ತಡವನ್ನು ನಿವಾರಿಸಿಕೊಳ್ಳಲು ಹಲವಾರು ಹಲವಾರು ರೀತಿಯ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಕೆಲವರು ಶಾಪಿಂಗ್‌ಗೆ ಹೋಗುತ್ತಾರೆ ಮತ್ತು ಇನ್ನೂ ಕೆಲವರು ಧ್ಯಾನಕ್ಕೆ ಶರಣಾಗುತ್ತಾರೆ. ಇವುಗಳಲ್ಲಿ ಒತ್ತಡವನ್ನು ನಿವಾರಿಸಿಕೊಳ್ಳಲು ಧ್ಯಾನವು ಒಳ್ಳೆಯ ಮಾರ್ಗವಾಗಿರುತ್ತದೆ. ಇದರ ಜೊತೆಗೆ ನೀವು ನಿಮ್ಮ ಸ್ನೇಹಿತರ ಜೊತೆಗೆ ಕಾಲ ಕಳೆಯುವ ಕೆಲಸವನ್ನು ಸಹ ಮಾಡಬಹುದು.ಇದಕ್ಕೆ ಮೊದಲು ನೀವು ನಿಮ್ಮ ಒತ್ತಡವನ್ನು ಮರೆಯಬೇಕು ಅಥವಾ ನಿವಾರಿಸಿಕೊಳ್ಳಬೇಕು,ನಂತರ ನಿಮ್ಮ ಮನಸ್ಸನ್ನು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಬನ್ನಿ ಒತ್ತಡಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳೋಣ..

ಒತ್ತಡಕ್ಕೆ ಮೂಲ ಕಾರಣ ಹಣ

ಒತ್ತಡಕ್ಕೆ ಮೂಲ ಕಾರಣ ಹಣ

ಅಧ್ಯಯನಗಳ ಪ್ರಕಾರ ಮತ್ತು ನಮಗೆ ತಿಳಿದಿರುವಂತೆ ಒತ್ತಡಕ್ಕೆ ಹಣಕಾಸಿನ ಸಮಸ್ಯೆಯೇ ಮೂಲ ಕಾರಣ. ಹಲವಾರು ದೇಶಗಳಲ್ಲಿ ಇದೇ ಸಮಸ್ಯೆಯು ಒತ್ತಡವನ್ನುಂಟು ಮಾಡುತ್ತದೆ ಎಂದು ಹೇಳುತ್ತದೆ ಅಧ್ಯಯನದ ಫಲಿತಾಂಶವೊಂದು. ಆದರೂ ರಷ್ಯಾ ಮತ್ತು ಫ್ರಾನ್ಸ್‌ನಂತಹ ರಾಷ್ಟ್ರಗಳು ಈ ಕುರಿತು ಕಡಿಮೆ ಚಿಂತೆ ಮಾಡುತ್ತವೆಯಂತೆ.

ಒತ್ತಡಕ್ಕೆ ಒಳಗಾಗುವರಲ್ಲಿ ಗಂಡಸರೆ ಹೆಚ್ಚು

ಒತ್ತಡಕ್ಕೆ ಒಳಗಾಗುವರಲ್ಲಿ ಗಂಡಸರೆ ಹೆಚ್ಚು

ಒಂದು ಅಧ್ಯಯನದ ಪ್ರಕಾರ ಗಂಡಸರಿಗಿಂತ ಒತ್ತಡವನ್ನು ನಿಭಾಯಿಸುವಲ್ಲಿ ಮಹಿಳೆಯರದೆ ಮೇಲುಗೈ ಇದೆಯಂತೆ. ಗಂಡಸರು ಒತ್ತಡಕ್ಕೆ ಒಳಗಾಗಿ ಸುಸ್ತು, ತಲೆ ಸುತ್ತು, ನಿದ್ರಾಹೀನತೆ ಮತ್ತು ಕೋಪ ಹಾಗು ಹಿಂಸಾತ್ಮಕ ಪ್ರವೃತ್ತಿಯನ್ನು ತೋರುತ್ತಾರಂತೆ. ಜೊತೆಗೆ ಡ್ರಗ್ ಮತ್ತು ಆಲ್ಕೋಹಾಲ್ ಸಹ ಸೇವಿಸಲು ಆರಂಭಿಸುತ್ತಾರಂತೆ.

ನಿಮ್ಮ ವೃತ್ತಿಯು ಸಹ ಇದಕ್ಕೆ ಕಾರಣವಾಗಿರುತ್ತದೆ

ನಿಮ್ಮ ವೃತ್ತಿಯು ಸಹ ಇದಕ್ಕೆ ಕಾರಣವಾಗಿರುತ್ತದೆ

ಆಭರಣ ತಯಾರಿಸುವವರು, ಉಪನ್ಯಾಸಕರು, ಕ್ಷೌರಿಕರಿಗಿಂತ ಪೈಲಟ್‌ಗಳು, ಅಗ್ನಿಶಾಮಕ ದಳದವರು, ಸೈನಿಕರಿಗೆ ಅಧಿಕ ಒತ್ತಡ ಇರುತ್ತದೆಯಂತೆ. ಇವೆಲ್ಲವು ಗೊತ್ತಿಲ್ಲದ ಒತ್ತಡಗಳಾಗಿರುತ್ತವೆ.

ಒತ್ತಡವು ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ

ಒತ್ತಡವು ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ

ಒತ್ತಡವು ಗರ್ಭಿಣಿ ಹೆಂಗಸರ ಹೊಟ್ಟೆಯ ಒಳಗಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಒತ್ತಡವು ಗರ್ಭದ ಒಳಗಿರುವ ಮಗುವಿನ ಮೇಲೆ ಮತ್ತು ಗರ್ಭದ ಮೇಲೆ ಇನ್‍ಫೆಕ್ಷನ್ ಉಂಟು ಮಾಡುತ್ತದೆ. ಇದರಿಂದ ಮಗುವು ಸಹ ದುರ್ಬಲವಾಗುತ್ತದೆ. ತಾಯಿಯ ಒತ್ತಡವು ಮಗುವಿನ ವ್ಯಕ್ತಿತ್ವದ ಮೇಲೆ ಸಹ ಪರಿಣಾಮವನ್ನು ಬೀರುತ್ತದೆ.

ಒತ್ತಡವು ಸಂತಾನ ಹೀನತೆಯನ್ನು ತರುತ್ತದೆ

ಒತ್ತಡವು ಸಂತಾನ ಹೀನತೆಯನ್ನು ತರುತ್ತದೆ

ಹೆಂಗಸರಲ್ಲಿ ಒತ್ತಡವು ಸಂತಾನ ಹೀನತೆಯನ್ನು ತರುತ್ತದೆ. ಇದು ಗರ್ಭಾಶಯದಿಂದ ಅಂಡಾಣುಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಅಂಡಾಣುಗಳು ಸಹ ಇದರಿಂದ ಹಾನಿಗೊಳಗಾಗುತ್ತವೆ. ಗಂಡಸರಲ್ಲಿ ಒತ್ತಡವು ವೀರ್ಯಾಣುಗಳನ್ನು ಕಡಿಮೆ ಮಾಡುತ್ತದೆ. ಇದು ಒತ್ತಡದಿಂದ ಉಂಟಾಗುವ ಅತಿ ಕೆಟ್ಟ ಪರಿಣಾಮವಾಗಿರುತ್ತದೆ.

English summary

Must To Know Things About Stress

Stress in no way is doing good as we all know that how much damage it does both mentally and physically. However, it a human nature to take stress and think over the things that bother you. Take a look at some of the important things that you have never heard about stress.
X
Desktop Bottom Promotion