For Quick Alerts
ALLOW NOTIFICATIONS  
For Daily Alerts

ಮೈಗ್ರೇನ್ ನಿಂದ ದೂರವುಳಿಯುವುದು ಹೇಗೆ?

|
Exercise for Migraine
ಮೈಗ್ರೇನ್ ಎಂಬ ಕಠಿಣ ಸಮಸ್ಯೆಯನ್ನು ತಡೆಯಲು ಈ ಮೊದಲು ರಿಲ್ಯಾಕ್ಸೇಶನ್ ಥೆರಪಿ ಮತ್ತು ಕೆಲವು ಔಷಧಿಗಳನ್ನು ಸೂಚಿಸಲಾಗಿತ್ತು. ಆದರೆ ಇದರೊಂದಿಗೆ ಸಣ್ಣ ಪುಟ್ಟ ವ್ಯಾಯಮ ಮಾಡಿದರೆ ಅದೂ ಕೂಡ ಮೈಗ್ರೇನ್ ಪ್ರಮಾಣ ಕುಗ್ಗಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಸ್ವಿಡನ್ ನ ಗೋಥೆನ್ ಬರ್ಗ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ಈ ಅಂಶ ತಿಳಿದುಬಂದಿದೆ. ವಾರಕ್ಕೆ 3 ದಿನವಾದರೂ ವ್ಯಾಯಾಮ ಮಾಡುವ ಅಭ್ಯಾಸವಿಟ್ಟುಕೊಂಡರೆ ಮೈಗ್ರೇನ್ ಪ್ರಮಾಣವನ್ನು ಕಡಿಮೆಮಾಡಬಹುದು ಎನ್ನುವುದನ್ನು ತಿಳಿಸಿದ್ದಾರೆ.

ತಿಂಗಳಿನಲ್ಲಿ 2-8 ಬಾರಿ ಮೈಗ್ರೇನ್ ಕಾಣಿಸಿಕೊಳ್ಳುವ ಸುಮಾರು 18-65ರ ವಯೋಮಿತಿಯ 91 ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಿದ್ದರು. ಅವರೆಲ್ಲರಿಗೂ ರಿಲ್ಯಾಕ್ಸೇಶನ್ ಥೆರಪಿ, ಮೆಡಿಸಿನ್ ಜೊತೆಗೆ ವ್ಯಾಯಾಮವನ್ನೂ ಮಾಡಿಸಿದಾಗ ಇವರಲ್ಲಿ ಮೈಗ್ರೇನ್ ಕಾಣಿಸಿಕೊಳ್ಳವ ಸಂಖ್ಯೆ ಕಡಿಮೆಯಾಗಿದ್ದು ಕಂಡುಬಂದಿದೆ.

ಮಾತ್ರೆಗಳು ಕೆಲವೊಮ್ಮೆ ಅಡ್ಡ ಪರಿಣಾಮ ಉಂಟುಮಾಡಬಹುದು, ಆದರೆ ರಿಲ್ಯಾಕ್ಸೇಶನ್ ಥೆರಪಿ ಮತ್ತು ವ್ಯಾಯಾಮ ಮಾಡುವವರಲ್ಲಿ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಅದಕ್ಕೆ ದಿನನಿತ್ಯದ ವ್ಯಾಯಾಮ ಎಲ್ಲ ರೀತಿಯಿಂದಲೂ ಸೌಖ್ಯ ನೀಡುತ್ತದೆ ಎಂದು ತಿಳಿಸಿದ್ದಾರೆ.

English summary

Exercise for Migraine | Exercise Benefits | ಮೈಗ್ರೇನ್ ಸಮಸ್ಯೆಗೆ ವ್ಯಾಯಾಮವಿರಲಿ | ವ್ಯಾಯಾಮದ ಉಪಯೋಗ

If you are suffering from migraine, than you can get benefit out from exercise to solve your problem. Scientists proved that along with relaxation therapy and prescribed drugs, exercise will also help to reduce the migraine problem.
Story first published: Friday, November 4, 2011, 23:09 [IST]
X
Desktop Bottom Promotion