For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೆ ಮಸ್ಟ್ ಈ ಮೆನೊಪಾಸ್ ಡಯಟ್

|
Menopause Diet
ನಲವತ್ತು ದಾಟಿದ ನಂತರ ಮಹಿಳೆಯರಲ್ಲಿ ಮೂಳೆ ಸವೆತ ಕಾಣಿಸಿಕೊಳ್ಳುತ್ತೆ. ಮುಟ್ಟು ನಿಲ್ಲುವ ಈ ಸಮಯದಲ್ಲಿ ಸರಿಯಾಗಿ ಪೋಷಣೆ ದೊರೆಯದಿದ್ದರೆ ಮೂಳೆ ಸವೆತ, ಕೀಲು ಮತ್ತು ಮಂಡಿ ನೋವಿನಿಂದ ಬಳಲುವಂತಾಗುತ್ತದೆ. ಆದ್ದರಿಂದ ಮಹಿಳೆಯರು ಈ ಮೆನೋಪಾಸ್ ಡಯಟ್ ಪಾಲಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು.

ಮೆನೋಪಾಸ್ ಡಯಟ್ ಹೀಗಿದೆ:

1. ಕ್ಯಾಲ್ಸಿಯಂ ಪೂರಿತ ಆಹಾರ: ಮೂಳೆ ಹೆಚ್ಚು ಬಲಶಾಲಿಯಾಗಿರಲು, ಹಲ್ಲು, ಹೃದಯ, ನರಮಂಡಲ ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಅವಶ್ಯವಿರುವುದು ಕ್ಯಾಲ್ಸಿಯಂ. ಆದ್ದರಿಂದ ಕ್ಯಾಲ್ಸಿಯಂ ಪೂರಿತವಾಗಿರುವ ಹಾಲು, ಹಾಲಿನ ಉತ್ಪನ್ನ, ಹಸಿರು ತರಕಾರಿ, ಮೀನು ಮತ್ತು ಡ್ರೈ ಫ್ರೂಟ್ ಗಳನ್ನು ಆಹಾರದಲ್ಲಿ ರೂಢಿಸಿಕೊಳ್ಳಬೇಕು.

2. ವಿಟಮಿನ್ಸ್: ಮೂಳೆಗೆ ಶಕ್ತಿ ನೀಡುವ ವಿಟಮಿನ್ ಡಿ ಯುವಿ ಕಿರಣಗಳಿಂದ ಹೆಚ್ಚು ದೊರೆಯುತ್ತದೆ. ಆದ್ದರಿಂದ ಬಿಸಿಲಿನಲ್ಲಿ 10-15 ನಿಮಿಷ ಇದ್ದರೆ ಮೂಳೆಗೆ ಅವಶ್ಯವಾದ ವಿಟಮಿನ್ಸ್ ಸಿಕ್ಕಿದಂತಾಗುತ್ತದೆ. ಇದರೊಂದಿಗೆ ಹಾಲು, ಮೊಟ್ಟೆ, ಮೀನು ಸೇವನೆಯೂ ವಿಟಮಿನ್ಸ್ ನೀಡುತ್ತದೆ.

3. ಪ್ರೊಟೀನ್: ಪ್ರೊಟೀನ್ ಯುಕ್ತವಾಗಿರುವ ಮೊಟ್ಟೆ, ಮಾಂಸ, ಹಾಲು, ಸಮುದ್ರದ ಆಹಾರಗಳು (ಸೀಗಡಿ) ಮತ್ತು ಮಾಂಸಾಹಾರವನ್ನು ಮಹಿಳೆಯರು ಆಗಾಗ್ಗೆ ಸೇವಿಸುತ್ತಿದ್ದರೆ ನಲವತ್ತರ ನಂತರ ಆರೋಗ್ಯದ ಸಮಸ್ಯೆಯಿಂದ ಬಳಲುವುದು ತಪ್ಪುತ್ತದೆ.

4. ಫಾಸ್ಪರಸ್:
ಜೀವಕಣಗಳ ಬೆಳವಣಿಗೆಗೆ ಈ ಮಿನರಲ್ ತುಂಬಾ ಅವಶ್ಯಕ. ಧಾನ್ಯಗಳು, ಡ್ರೈಫ್ರೂಟ್ಸ್ ನೊಂದಿಗೆ ಮಾಂಸ, ಹಾಲು, ಮೀನು, ಮೊಟ್ಟೆ ಇವೆಲ್ಲವೂ ನಿಮ್ಮ ದಿನ ನಿತ್ಯದ ಆಹಾರದೊಂದಿಗೆ ಸೇವಿಸುತ್ತಿದ್ದರೆ ವಯಸ್ಸಾದ ನಂತರ ಸಮಸ್ಯೆಗಳಿಂದ ಬಳಲುವುದು ತಪ್ಪುತ್ತದೆ.

20 ರಿಂದ 30 ರ ವಯೋಮಿತಿಯ ಮಹಿಳೆಯರಲ್ಲಿ ಎಷ್ಟು ಕ್ಯಾಲ್ಸಿಯಂ ಇದ್ದರೂ ಕಡಿಮೆಯೇ. ಈ ಅವಧಿಯಲ್ಲಿ ಮಗು ಜನಿಸುವುದರಿಂದ ಅರ್ಧದಷ್ಟು ಪೋಷಕಾಂಶ ಮಗುವಿಗೆ ಹೋಗುತ್ತದೆ. ಅದರಲ್ಲೂ ನಲವತ್ತು ದಾಟಿದ ಮಹಿಳೆಯರಲ್ಲಿ ಪುರುಷರಿಗೆ ಹೋಲಿಸಿದರೆ 2-7 % ಹೆಚ್ಚು ಮೂಳೆ ಸವೆಯುತ್ತದೆ. ಆದ್ದರಿಂದ ಈ ಆಹಾರವನ್ನು ದಿನನಿತ್ಯದ ಆಹಾರದೊಂದಿಗೆ ಸೇವಿಸುತ್ತಾ ಬಂದರೆ ಮೆನೊಪಾಸ್ ಸಮಸ್ಯೆಯನ್ನು ದೂರವಿಡಬಹುದು.

English summary

Menopause Diet | Bone Nourishment | ಮುಟ್ಟು ನಿಂತ ನಂತರ ಮೂಳೆ ಪೋಷಣೆ | ಮೆನೋಪಾಸ್ ಡಯಟ್

Most women over 40 suffer from weak bones, joint and knee problems because of improper nourishment during menopause. Bones getting thinner and weaker because of deficiency in calcium and other minerals. Here is a list of nourishment that needs to be a part of the menopause diet. Take a look.
Story first published: Monday, September 26, 2011, 16:53 [IST]
X
Desktop Bottom Promotion