For Quick Alerts
ALLOW NOTIFICATIONS  
For Daily Alerts

ಹಸಿರು ಸೊಪ್ಪಿನಿಂದ ಮುಪ್ಪಿನ ಸಮಸ್ಯೆ ದೂರವಿರಿಸಿ

|
Foods to avoid age related diseases
ಮುಪ್ಪಾದ ಮೇಲೆ ಒಪ್ಪವಾಗಿ ಬದುಕಬೇಕು ಎಂದು ಬಯಸುವವರು ದಿನ ನಿತ್ಯ ತಮ್ಮ ಆಹಾರದೊಂದಿಗೆ ಹಸಿರು ತರಕಾರಿ, ಧಾನ್ಯ, ಸಾಂಬಾರು ಪದಾರ್ಥಗಳನ್ನು ಬಳಸುತ್ತಿರಬೇಕು. ಇಂದು ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೆ ಸಾಕು, ಮುಂದಿನ ದಿನಗಳಲ್ಲಿ ಅದರ ಫಲಿತಾಂಶವು ನಿಮ್ಮನ್ನು ಸುಖಮಯ ಜೀವನ ನಡೆಸುವಂತೆ ಮಾಡುತ್ತದೆ

ಹಚ್ಚ ಹಸಿರಿನ ಸೊಪ್ಪು: ಹಸಿರು ತರಕಾರಿ, ಸೊಪ್ಪಿನ ಉಪಯೋಗಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಇದರಲ್ಲಿ ಇನ್ನೂ ಅಗತ್ಯ ಅಂಶಗಳಿವೆ. ಹಸಿರು ಸೊಪ್ಪಿನ ಸೇವನೆ ಕಣ್ಣುಗಳನ್ನು ದೀರ್ಘಕಾಲ ಸ್ವಾಸ್ಥ್ಯವಾಗಿಡುತ್ತದೆ. ಅಷ್ಟೇ ಅಲ್ಲ, ಜ್ಞಾಪಕ ಶಕ್ತಿ ಹೆಚ್ಚಿಸುವ ಮೂಲಕ ಮರೆಗುಳಿತನ ಬರುವುದನ್ನು ತಡೆಯುತ್ತದೆ. ಇದರಲ್ಲಿನ ಕ್ಯಾಲ್ಸಿಯಂ ವಯಸ್ಸಿಗೆ ಸಂಬಂಧಿಸಿದ ಮೂಳೆ ಸಮಸ್ಯೆಯನ್ನು ದೂರವಿರಿಸುತ್ತದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿ ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧಿ. ಚರ್ಮ, ಶ್ವಾಸಕೋಶದ ಕ್ಯಾನ್ಸರ್ ಬರದಂತೆ ತಡೆಯುವಲ್ಲಿ ಇದು ಸಹಕಾರಿ. ಇದರ ಸಲ್ಫ್ಯೂರಿಕ್ ಅಂಶ ಒತ್ತಡವನ್ನೂ ಕಡಿಮೆಮಾಡಿ, ಹೃದಯದ ಸ್ವಾಸ್ಥ್ಯಕ್ಕೆ ಎಡೆಮಾಡಿಕೊಡುತ್ತದೆ.

ದವಸ ಧಾನ್ಯ: ಎಲ್ಲಾ ದವಸ ಧಾನ್ಯಗಳಲ್ಲೂ ಒಂದೊಂದು ವಿಶೇಷತೆಯಿದೆ. ಆದ್ದರಿಂದ ಲಭ್ಯವಿರುವ ಧಾನ್ಯಗಳನ್ನು ನಿತ್ಯ ಒಂದಲ್ಲಾ ಒಂದು ರೂಪದಲ್ಲಿ ಬಳಸಿಕೊಳ್ಳಬಹುದು. ಇದರಲ್ಲಿ ತುಂಬಿರುವ ನಾರಿನಂಶ, ವಿಟಮಿನ್ಸ್, ಮಿನರಲ್ಸ್, ವಯಸ್ಸಾದಂತೆ ಕಾಡುವ ಅನೇಕ ರೋಗಗಳನ್ನು ತಡೆಗಟ್ಟುತ್ತದೆ. ಕ್ಯಾನ್ಸರ್ ತಡೆದು, ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಣಕ್ಕೆ ತರುತ್ತದೆ.

English summary

Five Foods to Avoid Age Related Disease | Green Leafs and Grains for Good Health | ಮುಪ್ಪಿನಲ್ಲಿ ಕಂಡುಬರುವ ಕಾಯಿಲೆ ತಡೆಯುವ ಐದು ಆಹಾರ | ಹಸಿರು ಸೊಪ್ಪು ಮತ್ತು ಧಾನ್ಯಗಳಿಂದ ಉತ್ತಮ ಆರೋಗ್ಯ

The easiest and least expensive way to reduce risk for health is just by eating a healthy diet." In fact, researchers say that up to 60 percent of the disease could be prevented if people were to adopt healthier lifestyles. The health benefits of leafy greens and grains are innumerable, it keeps the health strong for a long, long time.
Story first published: Thursday, September 15, 2011, 18:11 [IST]
X
Desktop Bottom Promotion