For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ, ದಂಡಾಸನ ಮಾಡಿದರೆ ಹೊಟ್ಟೆ ಬೊಜ್ಜು ಬರುವುದೇ ಇಲ್ಲ ಗೊತ್ತಾ? ಜೊತೆಗೆ ಈ ಪ್ರಯೋಜನಗಳೂ ಇವೆ

|

ಫಿಟ್‌ ಆಗಿರಬೇಕೆಂದು ಪ್ರತಿಯೊಬ್ಬರು ಬಯಸುತ್ತೇವೆ, ಆದರೆ ಅನೇಕ ಕಾರಣಗಳಿಂದಾಗಿ ನಮ್ಮ ಮೈ ತೂಕ ಹೆಚ್ಚಾಗಿರುತ್ತದೆ, ಅದರಲ್ಲೂ ಮಹಿಳೆಯರಿಗೆ ಮದುವೆ-ಮಕ್ಕಳು ಅಂತ ಆದ ಮೇಲೆ ತಮ್ಮ ದೇಹದ ಕಡೆಗೆ ಹೆಚ್ಚಿನ ಗಮನ ಕೊಡದೆ ಮೈ ತೂಕ ಹೆಚ್ಚಾಗುವುದು. ನೀವು ಮತ್ತೆ ಫಿಟ್ನೆಸ್ ಕಡೆ ಮರಳಬೇಕು, ಅದರ ಜೊತೆಗೆ ಸ್ನಾಯುಗಳು ಬಲವಾಗಬೇಕು ಅದಕ್ಕೇನು ಮಾಡಬೇಕು ಎಂದು ನೀವು ಕೇಳುವುದಾದರೆ, ಅದಕ್ಕೆ ಪರ್ಫೆಕ್ಟ್ ಉತ್ತರ ಎಂದರೆ ಅದು ದಂಡಾಸನ.

ಈ ದಂಡಾಸನ ನೀವು ಪ್ರತಿನಿತ್ಯ ಮಾಡುತ್ತಿದ್ದರೆ ನೀವು ಬಯಸಿದ ಮೈಕಟ್ಟು ಬರುತ್ತದೆ, ಅಲ್ಲದೆ ಅಯ್ಯೋ.. ಹೊಟ್ಟೆ ಹೆಚ್ಚಾಗಿದೆ ಎಂದು ನೀವು ಹೇಳುವುದೂ ಇಲ್ಲ. ಇದನ್ನು ಇಂಗ್ಲಿಷ್‌ನಲ್ಲಿ Planks ಎಂದು ಹೇಳಲಾಗುವುದು.'

ದಂಡಾಸನ ಮಾಡುವುದು ಕೂಡ ಸುಲಭ

ದಂಡಾಸನವೇನೂ ತುಂಬಾ ಕಷ್ಟದ ವ್ಯಾಯಾಮವಲ್ಲ. ಯಾವುದೇ ವಯಸ್ಸಿನವರು ಅಭ್ಯಾಸ ಮಾಡಬಹುದಾದ ಒಂದು ಭಂಗಿಯಾಗಿದೆ. ದಂಡಾಸನ ಮೊದಲಿಗೆ ಮಾಡುವಾಗ ಶರೀರ ಬ್ಯಾಲೆನ್ಸ್ ಮಾಡಲು ಸ್ವಲ್ಪ ಕಷ್ಟ ಅನಿಸಿದರೂ ಒಂದು ವಾರಕ್ಕೆಲ್ಲಾ ಸರಿ ಹೋಗುತ್ತದೆ.ಅಲ್ಲದೆ ನೀವು ಈ ಭಂಗಿಯಲ್ಲಿ ಮೊದ-ಮೊದಲು 1 ನಿಮಿಷ, ನಂತರ 2 ನಿಮಿಷ ಮಾಡಿದರೆ ಆಯ್ತು.

ದಿನದಲ್ಲಿ 2 ನಿಮಿಷ ಈ ಭಂಗಿಯಲ್ಲಿದ್ದರೆ ಸಾಕು, ಸಾಧ್ಯವಾದರೆ ಅದನ್ನು 5 ನಿಮಿಷದವರೆಗೆ ಮುಂದುವರೆಸಬಹುದು.

ಆದರೆ ದಂಡಾಸನ ಮಾಡುವ ನಿಮ್ಮ ಶರೀರದ ಭಂಗಿ ಸರಿಯಾಗಿರಬೇಕು, ವೀಡಿಯೋಗಳನ್ನು ನೋಡಿ ಅಥವಾ ಪರಿಣಿತರ ಸಲಹೆ ಪಡೆದು ಪ್ರಾರಂಭಿಸಿ.

ನೀವು ಪ್ರತಿದಿನ ದಂಡಾಸನ ಅಭ್ಯಾಸ ಮಾಡಿದರೆ ಈ ಪ್ರಯೋಜನಗಳನ್ನು ಪಡೆಯಬಹುದು:

ನೀವು ಪ್ರತಿದಿನ ದಂಡಾಸನ ಅಭ್ಯಾಸ ಮಾಡಿದರೆ ಈ ಪ್ರಯೋಜನಗಳನ್ನು ಪಡೆಯಬಹುದು:

ಕೆಳಹೊಟ್ಟೆಯ ಸ್ನಾಯುಗಳನ್ನು ಬಿಗಿಯಾಗಿಸಿ, ಬಲಗೊಳಿಸುತ್ತದೆ

ನೀವು ದಂಡಾಸನದಲ್ಲಿದ್ದಾಗ ಕಿಬ್ಬೊಟ್ಟೆಯಲ್ಲಿ ಸೆಳೆತ ನಿಮ್ಮ ಗಮನಕ್ಕೆ ಬರುತ್ತದೆ. ದಂಡಾಸನ ನಿಮ್ಮ ಕೆಳಹೊಟ್ಟೆಯ ಸ್ನಾಯುಗಳನ್ನು ಬಿಗಿಗೊಳಿಸುತ್ತದೆ, ನಿಮ್ಮ ಗರ್ಭಕೋಶದ ಆರೋಗ್ಯಕ್ಕೆ ಒಳ್ಳೆಯದು.

ದೇಹದ ಬ್ಯಾಲೆನ್ಸ್ ಹೆಚ್ಚಿಸುತ್ತದೆ

ನಿಮಗೆ ಯಾವುದೇ ಸಪೋರ್ಟ್‌ ಇಲ್ಲದೆ ಒಂಟಿಕಾಲಿನಲ್ಲಿ ನಿಲ್ಲಲು ಸಾಧ್ಯವೇ? ಇಲ್ಲ ಅಂದ್ರೆ ನಿಮ್ಮ ಹೊಟ್ಟೆಯ ಸ್ನಾಯುಗಳು ಬಲವಾಗಿಲ್ಲ ಎಂದರ್ಥ. ನೀವು ದಂಡಾಸನ ಒಂದು ತಿಂಗಳು ಅಭ್ಯಾಸ ಮಾಡಿ ವೃಕ್ಷಾಸನ ಅಂದ್ರೆ ಒಂಟಿ ಕಾಲಿನಲ್ಲಿ ನಿಂತು ನೋಡಿ, ಖಂಡಿತ ಬಾಡಿ ಬ್ಯಾಲೆನ್ಸ್ ಮಾಡಲು ಸಾಧ್ಯವಾಗುವುದು.

ದೇಹದ ಫ್ಲೆಕ್ಸಿಬಿಲಿಟಿ ಹೆಚ್ಚುತ್ತದೆ

ಯಾವುದೇ ವಯಸ್ಸಿನವರಾಗಲಿ ದೇಹ ಫ್ಲೆಕ್ಸಿಬಲ್‌ ಆಗಿದ್ದರೆ ಒಳ್ಳೆಯದು. ಆದರೆ ಕೆಲವರಿಗೆ ವಯಸ್ಸು 30 ದಾಟುತ್ತಿದ್ದಂತೆ ಆ ಫ್ಲೆಕ್ಸಿಬಿಲಿಟಿ ಹೋಗುತ್ತದೆ. ನೆಲದಲ್ಲಿ ಕೂರಲು ಕೂಡ ಸಾಧ್ಯವಾಗುವುದಿಲ್ಲ, ನಿಮ್ಮ ದೇಹ ಕೂಡ ಅದೇ ರೀತಿ ಇದೆಯೇ? ಇಂದಿನಿಂದಲೇ ದಂಡಾಸನ ಪ್ರಾರಂಭಿಸಿ, ಆರೋಗ್ಯ ಎಲ್ಲಕ್ಕಿಂತ ಮುಖ್ಯ.

ಚಯಪಚಯ ಕ್ರಿಯೆ ಚೆನ್ನಾಗಿ ನಡೆಯುತ್ತದೆ

ಚಯಪಚಯ ಕ್ರಿಯೆ ಚೆನ್ನಾಗಿ ನಡೆಯುತ್ತದೆ

ಚಯಪಚಯ ಕ್ರಿಯೆ ಚೆನ್ನಾಗಿ ನಡೆದರೆ ಒಟ್ಟು ದೇಹ ಆರೋಗ್ಯವಾಗಿರುತ್ತದೆ. ಪ್ರತಿದಿನ ದಂಡಾಸನ ಮಾಡುತ್ತಿದ್ದರೆ ದೇಹವು ಶಕ್ತಿಯನ್ನು ಚೆನ್ನಾಗಿ ಬಳಸಿಕೊಳ್ಳುತ್ತದೆ, ಇದರಿಂದ ಬೊಜ್ಜು ಸಂಗ್ರಹವಾಗುವುದಿಲ್ಲ. ಈ ಕಾರಣಕ್ಕೆ ಮೈ ಬೊಜ್ಜು ಬರುವುದಿಲ್ಲ.

ಹೆರಿಗೆಯ ಬಳಿಕ ಹೊಟ್ಟೆ ಬೊಜ್ಜು ಇರಲ್ಲ

ಬಹುತೇಕ ಮಹಿಳೆಯರ ಸಮಸ್ಯೆಯೆಂದರೆ ಹೊಟ್ಟೆ ಬೊಜ್ಜು, ಆ ಬೊಜ್ಜು ತಡೆಗಟ್ಟಲು ಈ ದಂಡಾಸನ ತುಂಬಾನೇ ಸಹಕಾರಿ. ನಿಮ್ಮದು ನಾರ್ಮಲ್‌ ಡೆಲಿವರಿ ಆಗಿದ್ದರೆ ನೀವು ಹೆರಿಗೆಯಾಗಿ 2 ತಿಂಗಳಿಗೆ ದಂಡಾಸನ ಅಭ್ಯಾಸ ಮಾಡಬಹುದು. ಸಿ ಸೆಕ್ಷನ್ ಆಗಿದ್ದರೆ ಡೆಲಿವರಿಯಾಗಿ 6 ತಿಂಗಳ ಬಳಿಕ ಈ ದಂಡಾಸನ ಅಭ್ಯಾಸ ಮಾಡಿ. ಏನಾದರೂ ಕಾಂಪ್ಲಿಕೇಷನ್‌ ಇದ್ದಿದ್ದರೆ ನೀವು ನಿಮ್ಮ ತಜ್ಞರ ಸಲಹೆ ಪಡೆದು ಈ ವ್ಯಾಯಾಮ ಪ್ರಾರಂಭಿಸಿ.

ನಿಮ್ಮ ಮೂಡ್‌ ಚೆನ್ನಾಗಿಡುತ್ತದೆ?

ನಿಮ್ಮ ಮೂಡ್‌ ಚೆನ್ನಾಗಿಡುತ್ತದೆ?

ಮನೆ, ಮಕ್ಕಳು, ಕೆಲಸ ಎಲ್ಲಾ ಜವಾಬ್ದಾರಿ ನಿಭಾಯಿಸಿಕೊಂಡು ಹೋಗುವುದು ಅಷ್ಟು ಸುಲಭವೇನಲ್ಲ, ಕೆಲವೊಮ್ಮೆ ಮೂಡ್‌ ಅಪ್‌ಸೆಟ್‌ ಆಗುತ್ತದೆ, ಬೇಸರ ಆಗುತ್ತದೆ. ಆದರೆ ನೀವು ದಂಡಾಸನ ಪ್ರತಿನಿತ್ಯ ಅಭ್ಯಾಸ ಮಾಡಿದರೆ ಈ ರೀತಿಯ ಮೂಡ್‌ ಸ್ವಿಂಗ್ ಕಡಿಮೆಯಾಗುವುದು, ಬೇಗ ಕೋಪ ಬರುವುದಿಲ್ಲ.

ಮುಟ್ಟಿನ ನೋವು ಕಡಿಮೆಯಾಗುವುದು

ನಿಮಗೆ ಮುಟ್ಟಿನ ಸಮಯದಲ್ಲಿ ತುಂಬಾ ನೋವುಂಟಾಗುತ್ತಿದ್ದರೆ ಈ ದಂಡಾಸನ ಅಭ್ಯಾಸ ಮಾಡುವುದರಿಂದ ಆ ಸಮಯದಲ್ಲಿ ನೋವು ಕಡಿಮೆಯಾಗುವುದು.

ಯಾವಾಗ ದಂಡಾಸನ ಒಳ್ಳೆಯದು

ಯಾವಾಗ ದಂಡಾಸನ ಒಳ್ಳೆಯದು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ,ಇತರ ಸಮಯದಲ್ಲೂ ಮಾಡಬಹುದು, ಆದರೆ ಈ ಭಂಗಿ ಅಭ್ಯಾಸ ಮಾಡುವ 2 ಗಂಟೆ ಮೊದಲು ಏನೂ ಸೇವಿಸಿರಬಾರದು.

ಯಾರು ದಂಡಾಸನ ಮಾಡಬಾರದು?

* ಭುಜಕ್ಕೆ ಗಾಯವಾಗಿದ್ದರೆ

* ಭುಜ ಅಥವಾ ಕುತ್ತಿಗೆ ನೋವಿದ್ದರೆ

* ಪೆಲ್ವಿಕ್‌ ನೋವು ಇದ್ದರೆ

* ಗರ್ಭಿಣಿಯರು ಮಾಡಬಾರದು

* ಬಾಣಂತಿಯರು ಮಾಡಬಾರದು

FAQ's
  • ಎಷ್ಟು ನಿಮಿಷ ದಂಡಾಸನ ಮಾಡಬೇಕು?

    ನೀವು 2 ನಿಮಿಷ ದಂಡಾಸನ ಅಭ್ಯಾಸ ಮಾಡಿ. ಪ್ರಾರಂಭದಲ್ಲಿ ಅಷ್ಟು ಮಾಡಲು ಸಾಧ್ಯವಾಗಲ್ಲ, ಮೊದಲಿಗೆ 30 ಸೆಕೆಂಡ್ ಮಾಡಿ, ನಿಧಾನಕ್ಕೆ 60 ಸಕೆಂಡ್‌ಗೆ ಜಾಸ್ತಿ ಮಾಡಿ, ನಂತರ 2 ನಿಮಿಷ ಅಭ್ಯಾಸ ಮಾಡಿ.

  • ಪ್ರತಿದಿನ ದಂಡಾಸನ ಅಭ್ಯಾಸ ಮಾಡಿದರೆ ಏನಾಗುತ್ತದೆ

    ನೀವು ಪ್ರತಿದಿನ ದಂಡಾಸನ ಅಭ್ಯಾಸ ಮಾಡುವುದರಿಂದ ನಿಮ್ಮ ಕಾಲು, ಕೈ, ಹೊಟ್ಟೆ ಭಾಗದ ಸ್ನಾಯುಗಳು, ಭುಜದ ಸ್ನಾಯುಗಳು ಬಲವಾಗುವುದು.

  • ದಂಡಾಸನದಿಂದ ಹೊಟ್ಟೆ ಬೊಜ್ಜು ಕರಗುತ್ತದಾ?

    ಹೌದು, ನೀವು ಪ್ರತಿದಿನ ದಂಡಾಸನ ಅಭ್ಯಾಸ ಮಾಡಿದರೆ ಹೊಟ್ಟೆ ಬೊಜ್ಜು ಕರಗುವುದು.

English summary

Benefits Of Doing The Plank Exercise Every Day for Women in Kannada

Plank Exercise: Dear women, if you do plank exercise daily will get these benefits...
Story first published: Friday, December 2, 2022, 10:18 [IST]
X
Desktop Bottom Promotion