ಇಂತಹ ಹಣ್ಣು-ತರಕಾರಿಗಳು ಹೃದಯಕ್ಕೆ ಬಹಳ ಒಳ್ಳೆಯದು....

By Arshad
Subscribe to Boldsky

ಹೃದಯಕ್ಕೆ ಉತ್ತಮವಾದ ಆಹಾರಗಳಾಗಿರಲು ಅಗತ್ಯವಾದ ಅರ್ಹತೆ ಎಂದರೆ ಈ ಆಹಾರಗಳಲ್ಲಿ ಆಂಟಿ ಆಕ್ಸಿಡೆಂಟುಗಳು, ವಿಟಮಿನ್ ಬಿ, ವಿವಿಧ ಪೋಷಕಾಂಶಗಳು, ಕರಗುವ ನಾರು ಮತ್ತು ಅಪೂರ್ಣ ಕೊಬ್ಬು (monounsaturated ಮತ್ತು polyunsaturated fats) ಗಳು ಉತ್ತಮ ಪ್ರಮಾಣದಲ್ಲಿರಬೇಕು. ಇವೆಲ್ಲವೂ ಒಂದೇ ಆಹಾರದಲ್ಲಿರಲು ಸಾಧ್ಯವಿಲ್ಲ.

ಆದ್ದರಿಂದ ಈ ಅಂಶಗಳು ಹೆಚ್ಚಿರುವ ಆಹಾರದ ಸಂಯೋಜನೆಯನ್ನು ಸಂತುಲಿತವಾಗಿ ಸೇವಿಸುವುದೇ ಜಾಣತನದ ಕ್ರಮ. ಎಷ್ಟು ಹೆಚ್ಚು ನೈಸರ್ಗಿಕ ಮತ್ತು ಎಷ್ಟು ಕಡಿಮೆ ಸಂಸ್ಕರಿತವಾದ ಆಹಾರವನ್ನು ಸೇವಿಸುತ್ತೇವೆಯೋ ಅಷ್ಟೂ ಹೃದಯಕ್ಕೆ ಉತ್ತಮ.

These Foods Are Really Good For Your Heart
 

ಹೃದಯಕ್ಕೆ ಅತ್ಯುತ್ತಮವಾದ ಆಹಾರಗಳಲ್ಲಿ ವಿವಿಧ ವಿಟಮಿನ್ನುಗಳು, ಆಂಟಿ ಆಕ್ಸಿಡೆಂಟುಗಳು, ವಿಟಮಿನ್ ಇ ಮತ್ತು ಸಿ ಇರಬೇಕು. ಇದರಿಂದ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಮೂಲಕ ಜೀವಕೋಶಗಳ ಮೇಲಾಗುವ ಘಾಸಿಯನ್ನು ತಡೆಗಟ್ಟಬಹುದು. ಅಲ್ಲದೇ ಬಿ ಕಾಂಪ್ಲೆಕ್ಸ್, ವಿಶೇಷವಾಗಿ ವಿಟಮಿನ್ ಬಿ6 ಮತ್ತು ಫೋಲಿಕ್ ಆಮ್ಲಗಳು ನರಗಳು ಪೆಡಸಾಗುವುದು ಮತ್ತು ರಕ್ತ ಹೆಪ್ಪುಗಟ್ಟುವುದರಿಂದ ರಕ್ಷಿಸುತ್ತದೆ.

ಅಲ್ಲದೇ ವಿಟಮಿನ್ ಬಿ3 ಅಥವಾ ನಿಯಾಸಿನ್ ಎಂಬ ಪೋಷಕಾಂಶ ಒಳ್ಳೆಯ ಕೊಲೆಸ್ಟ್ರಾಲ್ ಅಥವಾ ಹೆಚ್ ಡಿ. ಎಲ್ ಮಟ್ಟವನ್ನು ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಎಲ್.ಡಿ.ಎಲ್ ಮಟ್ಟವನ್ನು ಕಡಿಮೆಗೊಳಿಸಿ ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಇದೇ ಕಾರಣಕ್ಕೆ 'ಹೃದ್ರೋಗ ಸಮಸ್ಯೆ' ಕಾಣಿಸಿಕೊಳ್ಳುವುದು! 

ಹೃದಯಕ್ಕೆ ಉತ್ತಮವಾದ ಇತರ ಆಹಾರಗಳೆಂದರೆ ಒಮೆಗಾ-3 ಕೊಬ್ಬಿನ ತೈಲವಿರುವ ಆಹಾರಗಳು. ಸಾಲ್ಮನ್ ನಂತಹ ಎಣ್ಣೆಯುಕ್ತ ಮೀನು, ಬಂಗಡೆ, ಭೂತಾಯಿ ಮೊದಲಾದವುಗಳಲ್ಲಿ ಈ ತೈಲ ಉತ್ತಮ ಪ್ರಮಾಣದಲ್ಲಿದೆ.

These Foods Are Really Good For Your Heart
  

ಬಾದಾಮಿಯಲ್ಲಿಯೂ ವಿಟಮಿನ್ ಇ, ಪ್ರೋಟೀನುಗಳ ಸಹಿತ ಇತರ ಉತ್ತಮ ಪೋಷಕಾಂಶಗಳಿದ್ದು ಹೃದಯದ ಪೋಷಣೆಗೆ ನೆರವಾಗುತ್ತದೆ. ಅಗಸೆ ಬೀಜಗಳಲ್ಲಿಯೂ ಉತ್ತಮ ಪ್ರಮಾಣದ ಒಮೆಗಾ-3 ಕೊಬ್ಬಿನ ತೈಲ ಹಾಗೂ ಕರಗದ ನಾರು ಇದ್ದು ಹೃದಯಕ್ಕೆ ಉತ್ತಮವಾಗಿದೆ.

ತರಕಾರಿಗಳಲ್ಲಿ ಹೃದಯಕ್ಕೆ ಉತ್ತಮವಾದವು ಎಂದರೆ ಬೀನ್ಸ್, ಶತಾವರಿ (asparagus) ಇತ್ಯಾದಿ. ಶತಾವರಿಯಲ್ಲಿ ಬೀಟಾ ಕ್ಯಾರೋಟಿನ್, ಲ್ಯುಟಿನ್, ವಿಟಮಿನ್ ಬಿ, ಫೋಲಿಕ್ ಆಮ್ಲ ಮತ್ತು ಕರಗದ ನಾರು ಇವೆ. ಬೀನ್ಸ್ ಗಳಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ವಿಟಮಿನ್ ಬಿ ಇದ್ದು ಹೃದಯಕ್ಕೆ ಉತ್ತಮವಾಗಿದೆ. ಹೃದಯ ಬಡಿತದ ಏರಿಳಿತ: ಇದು ಅಪಾಯದ ಸೂಚನೆಯೇ?

These Foods Are Really Good For Your Heart
 

ಬ್ರೋಕೋಲಿಯಲ್ಲಿಯೂ ಉತ್ತಮ ಪ್ರಮಾಣದ ಬೀಟಾ ಕ್ಯಾರೋಟಿನ್, ವಿಟಮಿನ್ ಸಿ, ಇ, ಕರಗದ ನಾರು ಮತ್ತು ಫೋಲಿಕ್ ಆಮ್ಲಗಳಿವೆ. ಕೆಂಪು ದೊಣ್ಣೆಮೆಣಸಿನಲ್ಲಿಯೂ ಬೀಟಾ ಕ್ಯಾರೋಟಿನ್, ಲ್ಯೂಟಿನ್, ಕರಗುವ ನಾರು, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ ಇವೆ.

ಹಣ್ಣುಗಳಲ್ಲಿ ಹೃದಯಕ್ಕೆ ಅತ್ಯುತ್ತಮವಾದುದು ಎಂದರೆ ಪಪ್ಪಾಯಿ. ಇದರಲ್ಲಿ ಕ್ಯಾರೋಟಿನಾಯ್ದು, ಬೀಟಾ ಕ್ಯಾರೋಟಿನ್, ಲ್ಯೂಟಿನ್, ಆಂಟಿ ಆಕ್ಸಿಡೆಂಟುಗಳು, ವಿಟಮಿನ್ನುಗಳು, ಫೋಲಿಕ್ ಆಮ್ಲ ಮತ್ತು ಮೆಗ್ನೀಶಿಯಂ ಉತ್ತಮ ಪ್ರಮಾಣದಲ್ಲಿದೆ. ಬಳಿಕ ವಿವಿಧ ಬೆರ್ರಿ ಹಣ್ಣುಗಳು ಉತ್ತಮವಾಗಿವೆ. ಇವುಗಳಲ್ಲಿ ಫ್ಲೇವನಾಯ್ದುಗಳು, ಬೀಟಾ ಕ್ಯಾರೋಟೀನ್, ಲ್ಯೂಟಿನ್, ಪಾಲಿಫೆನಾಲುಗಳು, ಕರಗುವ ನಾರು, ವಿವಿಧ ವಿಟಮಿನ್ನು ಮತ್ತು ಖನಿಜಗಳು ಇದ್ದು ಹೃದಯ ಆರೋಗ್ಯವನ್ನು ವೃದ್ಧಿಸುತ್ತವೆ. ನೆನಪಿಡಿ: ಪುಟ್ಟ ಹೃದಯದ ಆರೋಗ್ಯವನ್ನು ಕಡೆಗಣಿಸದಿರಿ! 

ಇದರೊಂದಿಗೆ ಬೂದುಖರಬೂಜ (Cantaloupe)ದಲ್ಲಿಯೂ ಆಲ್ಫಾ ಮತ್ತು ಬೀಟಾ ಕ್ಯಾರೋಟಿನುಗಳು, ಆಂಟಿ ಆಕ್ಸಿಡೆಂಟುಗಳು, ವಿಟಮಿನ್ ಸಿ, ಇ, ಫೋಲಿಕ್ ಆಮ್ಲ ಮತ್ತು ಕರಗುವ ನಾರು ಇವೆ. ಊಟಕ್ಕೆ ಅಕ್ಕಿಯನ್ನು ಆಯ್ದುಕೊಳ್ಳುವುದಾದರೆ ಪಾಲಿಶ್ ಮಾಡದ ಅಥವಾ ಕೊಂಚವೇ ಪಾಲಿಶ್ ಮಾಡಿದ ಬೆಳ್ತಿಗೆ ಅಕ್ಕಿಯೇ ಉತ್ತಮ ಆಯ್ಕೆಯಾಗಿದೆ.

These Foods Are Really Good For Your Heart
  

ಇದರಲ್ಲಿ ಉತ್ತಮ ಪ್ರಮಾಣದ ನಾರು ಮತ್ತು ಬಿ ಕಾಂಪ್ಲೆಕ್ಸ್ ಪೋಷಕಾಂಶಗಳಿದ್ದು ಹೃದಯಕ್ಕೆ ಉತ್ತಮವಾಗಿದೆ. ಎಣ್ಣೆಯ ಆಯ್ಕೆಗೆ ಆಲಿವ್ ಎಣ್ಣೆಯೇ ಅತ್ಯುತ್ತಮವಾಗಿದೆ. ಇದರಲ್ಲಿ ಓಲಿಕ್ ಆಮ್ಲ ಮತ್ತು monounsaturated fat ಅಥವಾ ಅಸಂತುಲಿತ ಕೊಬ್ಬು ಉತ್ತಮ ಪ್ರಮಾಣದಲ್ಲಿದ್ದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಿ ಹೃದಯ ಮತ್ತು ಹೃದಯನಾಳಗಳ ಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    These Foods Are Really Good For Your Heart

    Foods that are good for the heart are foods which are full of antioxidants, B vitamins, nutrients, fibre and monounsaturated and polyunsaturated fats. The key to having a healthy heart is to follow a whole foods diet which only means to eat food in its natural kind, the less processed the better.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more