Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೆನಪಿಡಿ: ಪುಟ್ಟ ಹೃದಯದ ಆರೋಗ್ಯವನ್ನು ಕಡೆಗಣಿಸದಿರಿ!
ಹೃದಯವೆನ್ನುವುದು ದೇಹದ ಮುಖ್ಯ ಕೇಂದ್ರವಿದ್ದಂತೆ. ಇಲ್ಲಿಂದಲೇ ಪ್ರಮುಖ ಅಂಗಾಂಗಗಳಿಗೆ ರಕ್ತ ಪೂರೈಕೆಯಾಗುವುದು. ಹೃದಯದ ಕಾರ್ಯಕ್ಕೆ ಯಾವುದೇ ತೊಂದರೆಯಾದರೂ ಅದರಿಂದ ದೇಹದ ಇತರ ಅಂಗಾಂಗಗಳ ಮೇಲೂ ಪರಿಣಾಮ ಬೀರುವುದು ಖಚಿತ. ಹೃದಯಲ್ಲಿ ರಕ್ತ ಪರಿಚಲನೆಯಾಗದೆ ನಿಂತಾಗ ಸಮಸ್ಯೆಗಳು ಆರಂಭವಾಗುತ್ತದೆ. ಇಂತಹ ಕೆಲವೊಂದು ಹೃದಯದ ಸಮಸ್ಯೆಗಳು ಮತ್ತು ಅವುಗಳ ಲಕ್ಷಣಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳುವ.

ಪರಿಧಮನಿಯ ಕಾಯಿಲೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವಂತಹ ಕಾಯಿಲೆಗಳಲ್ಲಿ ಅಪಧಮನಿಯ ಕಾಯಿಲೆಯು ಹೃದಯದ ಊತಕ್ಕೆ ಕಾರಣವಾಗುವುದು. ಇದನ್ನು ಹೃದಯಾಘಾತವೆನ್ನಲಾಗುತ್ತದೆ. ಹೃದಯ ರೋಗಗಳಲ್ಲಿ ಮುಖ್ಯವಾಗಿ ಹೃದಯಾಘಾತ, ಹೃದಯ ಕವಾಟ ರೋಗ, ರಕ್ತನಾಳ ರೋಗ, ಪೆರಿಕಾರ್ಡಿಯಲ್ ರೋಗ, ಅನಿಯಮಿತ ಹೃದಯದ ಲಯ, ಜನ್ಮಜಾತ ಹೃದಯ ಸಮಸ್ಯೆಗಳು, ಹೃದಯ ಸ್ನಾಯು ರೋಗ, ಮಹಾಪಧಮನಿಯ ರೋಗ, ಇತ್ಯಾದಿಗಳು ಹೃದಯದಲ್ಲಿ ಕಾಣಿಸಿಕೊಳ್ಳುವ ರೋಗಗಳಾಗಿವೆ. ಪುಟ್ಟ ಹೃದಯದ ಆರೋಗ್ಯಕ್ಕೂ ಸ್ವಲ್ಪ ಆದ್ಯತೆ ನೀಡಿ!
ಪ್ರತಿಯೊಂದು ರೋಗಗಳು ತನ್ನದೇ ಆದ ರೀತಿಯಲ್ಲಿದ್ದರೂ ಅವುಗಳ ಲಕ್ಷಣಗಳು ಮಾತ್ರ ಭಿನ್ನವಾಗಿರುತ್ತದೆ ಮತ್ತು ಇದರ ಬಗ್ಗೆ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯವಾಗಿದೆ. ಇದರಲ್ಲಿನ ಕೆಲವೊಂದು ಲಕ್ಷಣಗಳು ಒಂದೆರಡು ಕಾಯಿಲೆಗಳಲ್ಲಿ ಸಮಾನವಾಗಿರುತ್ತದೆ. ನಿಮಗೆ ಯಾವುದೇ ರೀತಿಯ ಲಕ್ಷಣಗಳು ಗೋಚರಿಸಿದಾಗ ಆದಷ್ಟು ಬೇಗನೆ ವೈದ್ಯರನ್ನು ಭೇಟಿಯಾಗುವುದು ತುಂಬಾ ಮುಖ್ಯ. ಹೃದಯದ ಆರೋಗ್ಯಕ್ಕೆ-ಪುರಾತನ ಕಾಲದ ಆಯುರ್ವೇದ ಚಿಕಿತ್ಸೆ
ಅಪಧಮನಿಯ ಕಾಯಿಲೆಯಲ್ಲಿ ಪ್ರಮುಖವಾಗಿ ಗೋಚರಿಸುವ ಲಕ್ಷಣವೆಂದರೆ ಎದೆಯಲ್ಲಿ ನೋವು ಮತ್ತು ಎದೆಭಾರವಾಗಿರುವಂತೆ ಆಗುತ್ತದೆ. ಆದರೆ ಇದನ್ನು ಹೆಚ್ಚಿನವರು ಎದೆಯುರಿಯೆಂದು ಭಾವಿಸುತ್ತಾರೆ. ಈ ರೀತಿಯ ನೋವು ಭುಜ, ಕೈ, ಗಂಟಲು, ದವಡೆ, ಬೆನ್ನು ಮತ್ತು ಕುತ್ತಿಗೆಯಲ್ಲಿ ಕೂಡ ಕಾಣಿಸಿಕೊಳ್ಳಬಹುದು. ಉಸಿರಾಡಲು ಕಷ್ಟವಾಗುವುದು, ನಾಡಿಮಿಡಿತ ಹೆಚ್ಚಾಗುವುದು, ನಿತ್ರಾಣ, ತಲೆಸುತ್ತುವಿಕೆ, ಬೆವರು, ವಾಕರಿಕೆ ಮತ್ತು ಅನಿಯಮಿತ ನಾಡಿಬಡಿತ ಇತರ ಲಕ್ಷಣಗಳಾಗಿವೆ.
ಎದೆಯ ಮೇಲೆ ಭಾರವಾಗಿರುವ ಏನಾದರೂ ನಿಂತಂತೆ ಆಗಿರುವುದು ಅಥವಾ ಎದೆಯಲ್ಲಿ ಸ್ನಾಯುವನ್ನು ಎಳೆದಂತೆ ಆಗುವುದು ನಿಮ್ಮ ಹೃದಯವು ಸರಿಯಾಗಿ ಕೆಲಸ ಮಾಡುತ್ತಿಲ್ಲವೆನ್ನುವುದರ ಸೂಚನೆಯಾಗಿದೆ. ವ್ಯಾಯಾಮ ಮಾಡಿದ ಬಳಿಕ ನಿಮ್ಮ ಎದೆಯಲ್ಲಿ ನೋವು ಕಾಣಿಸಿಕೊಂಡರೆ ಹೃದಯದಲ್ಲಿ ರಕ್ತ ಪರಿಚಲನೆಯಲ್ಲಿ ಏನೋ ಸಮಸ್ಯೆಯಿದೆಯೆಂದು ಅರ್ಥ. ಹೃದಯವನ್ನು ಹೀಗೆ ಜೋಪಾನ ಮಾಡಿ
ಲಘುವಾದ ಚಟುವಟಿಕೆ ವೇಳೆ ಮತ್ತು ಮಲಗಿರುವಾಗ ನಿಮಗೆ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಇದು ಹೃದಯದ ಸಮಸ್ಯೆಯಾಗಿರುತ್ತದೆ. ಇದು ಕವಾಟ ರೋಗದ ಲಕ್ಷಣವಾಗಿದೆ. ತುಂಬಾ ನಿತ್ರಾಣವಾದಂತೆ ನಿಮಗೆ ಯಾವಾಗಲೂ ಭಾವನೆಯಾಗುತ್ತಿದ್ದರೆ ಅದು ಕವಾಟದಲ್ಲಿನ ಸಮಸ್ಯೆ ಅಥವಾ ರಕ್ತ ಬ್ಲಾಕ್ ಆಗಿರಬಹುದು. ಹೃದಯದ ಸಮಸ್ಯೆ ಕಾಣಿಸಿಕೊಳ್ಳುವ ಕೆಲವು ಜನರಲ್ಲಿ ಹೊಟ್ಟೆಯ ಸಮಸ್ಯೆಯಾದ ಅಜೀರ್ಣ ಮತ್ತು ಭೇದಿ ಕಾಣಿಸಿಕೊಳ್ಳುತ್ತದೆ.
ತುಂಬಾ ಆಯಾಸವಾದಂತೆ ಅಥವಾ ನಿದ್ರೆ ಸರಿಯಾಗಿಲ್ಲವೆನ್ನುವಂತೆ ಆಗುತ್ತಲಿದ್ದರೆ ಇದು ಹೃದಯ ಸಮಸ್ಯೆಯ ಸೂಚನೆಯಾಗಿರಬಹುದು. ಹಠಾತ್ ನಿತ್ರಾಣವಾಗುವುದು, ಶೀತ, ವಾಕರಿಕೆ ಅಥವಾ ಬೆವರು ಕಾಣಿಸಿಕೊಳ್ಳುವುದು ರಕ್ತಸರಿಯಾಗಿ ಪರಿಚಲನೆಯಾಗದಿರುವ ಲಕ್ಷಣವಾಗಿದೆ. ಇವುಗಳು ಕೂಡ ಹೃದಯದ ರೋಗಗಳ ಲಕ್ಷಣವಾಗಿರಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



