Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಇದೇ ಕಾರಣಕ್ಕೆ 'ಹೃದ್ರೋಗ ಸಮಸ್ಯೆ' ಕಾಣಿಸಿಕೊಳ್ಳುವುದು!
ದೇಶಕ್ಕೆ ರಾಜಧಾನಿಯಿರುವಂತೆ ದೇಹಕ್ಕೆ ಕೂಡ ಹೃದಯವು ರಾಜಧಾನಿಯೆನ್ನಬಹುದು. ದೇಶ ಚೆನ್ನಾಗಿರಬೇಕಾದರೆ ರಾಜಧಾನಿ ಸರಿಯಿರಬೇಕು. ಅದೇ ಹೃದಯವು ಸರಿಯಾಗಿದ್ದರೆ ಎಲ್ಲವೂ ಸುಸೂತ್ರವಾಗಿದೆ ಎಂದರ್ಥ. ಹೃದಯವು ತನ್ನ ಕಾರ್ಯವನ್ನು ನಿಲ್ಲಿಸಿದರೆ ಆಗ ಜೀವ ಹೊರಟು ಹೋಗುತ್ತದೆ. ಹೃದಯದ ಆರೋಗ್ಯಕ್ಕೆ, ನಿತ್ಯ 'ದಾಳಿಂಬೆ ಜ್ಯೂಸ್' ಕುಡಿಯಿರಿ
ಸಂಪೂರ್ಣ ದೇಹವನ್ನು ನೋಡಿಕೊಳ್ಳುವಲ್ಲಿ ಹೃದಯವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದೇ ಹೃದಯವನ್ನು ನಾವು ಯಾವ ರೀತಿಯಿಂದ ನೋಡಿಕೊಳ್ಳುತ್ತಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಹೃದಯವನ್ನು ಆರೋಗ್ಯವಾಗಿಡುವಲ್ಲಿ ನಮ್ಮ ಪಾತ್ರ ಎಷ್ಟಿದೆ ಎಂದು ತಿಳಿದುಕೊಳ್ಳಲೇಬೇಕು. ಪುಟ್ಟ ಹೃದಯದ ಸ್ವಾಸ್ಥ್ಯಕ್ಕೆ-ಈ ಜ್ಯೂಸ್ ತಪ್ಪದೇ ಕುಡಿಯಿರಿ
ಎಣ್ಣೆ, ಎಣ್ಣೆಯುಕ್ತ ಆಹಾರ, ಅತಿಯಾದ ಮಾಂಸಾಹಾರ ಆಹಾರ ಇವುಗಳು ಹೃದಯದ ಆರೋಗ್ಯವನ್ನು ಕೆಡಿಸುವುದು. ಇದರಿಂದ ನಿಮ್ಮ ಹೃದಯಕ್ಕೆ ತುಂಬಾ ಹಾನಿಯಾಗಬಹುದು. ಹೃದಯದ ಆರೋಗ್ಯವನ್ನು ಯಾವ ರೀತಿಯಲ್ಲಿ ಮತ್ತು ಹೇಗೆ ಕಾಪಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳಲು ನೀವು ಈ ಲೇಖನವನ್ನು ಮುಂದಕ್ಕೆ ಓದಲೇಬೇಕು. ಹೃದಯ ಬಡಿತದ ಏರಿಳಿತ: ಇದು ಅಪಾಯದ ಸೂಚನೆಯೇ?

ಅಡುಗೆಗೆ ಒಂದೇ ವಿಧದ ಎಣ್ಣೆ ಬಳಕೆ
ಈಗೀಗ ಕರಿದ ಪದಾರ್ಥಗಳೇ ಹೆಚ್ಚಿನವರಿಗೆ ಇಷ್ಟವಾಗುವ ಕಾರಣದಿಂದ ಎಣ್ಣೆಯು ಅತಿಯಾಗಿ ನಮ್ಮ ದೇಹವನ್ನು ಸೇರಿಕೊಳ್ಳುವುದು. ಇದರಿಂದ ಹೃದಯದ ಕಾಯಿಲೆ ಸಮಸ್ಯೆಯು ಹೆಚ್ಚಾಗಿರುತ್ತದೆ. ದೈನಂದಿನ ಆಹಾರ ಕ್ರಮದಲ್ಲಿ ಮೂರರಿಂದ ನಾಲ್ಕು ಚಮಚಕ್ಕಿಂತ ಹೆಚ್ಚಿನ ಎಣ್ಣೆ ಬಳಸಬೇಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಅಡುಗೆಗೆ ಒಂದೇ ವಿಧದ ಎಣ್ಣೆ ಬಳಕೆ
3-4 ತಿಂಗಳಿಗೊಮ್ಮೆ ಎಣ್ಣೆ ಬದಲಾಯಿಸುತ್ತಾ ಇರಿ. ತೆಂಗಿನ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಆಲಿವ್ ಎಣ್ಣೆ, ಸಾಸಿವೆ ಎಣ್ಣೆ ಹೀಗೆ ಬದಲಾಯಿಸುತ್ತಾ ಇದ್ದರೆ ವಿವಿಧ ರೀತಿಯ ಪೋಷಕಾಂಶಗಳು ನಿಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ಇದರಿಂದ ಹೃದಯವು ಆರೋಗ್ಯವಾಗಿರುತ್ತದೆ.

ಊಟದ ಬಳಿಕ ಸಿಹಿ ತಿನ್ನುವುದು
ಭಾರತದಲ್ಲಿ ಹೆಚ್ಚಿನವರು ಊಟದ ಬಳಿಕ ಸಿಹಿ ತಿನ್ನುವಂತಹ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಇದರಿಂದ ರಕ್ತದ ಗ್ಲೂಕೋಸ್ ಮಟ್ಟ ಹೆಚ್ಚಾಗಿ ಮಧುಮೇಹ ಕಾಣಿಸಿಕೊಳ್ಳಬಹುದು. ಸಿಹಿಯಲ್ಲಿ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆ ಇರುವುದರಿಂದ ಇದು ನಿಮ್ಮನ್ನು ಹೃದಯದ ಕಾಯಿಲೆಯ ಅಪಾಯಕ್ಕೆ ಒಡ್ಡಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಊಟದ ಬಳಿಕ ಸಿಹಿ ತಿನ್ನುವುದು
ಊಟದ ಬಳಿಕ ಸ್ವಲ್ಪ ಚಾಕಲೇಟ್ ತಿಂದರೆ ಒಳ್ಳೆಯದು. ಅದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಇದೆ. ಆದರೆ ಅತಿಯಾಗಿ ಚಾಕಲೇಟ್ ಸೇವನೆ ಕೂಡ ಒಳ್ಳೆಯದಲ್ಲ.

ಅತಿಯಾಗಿ ಖಾರ ತಿನ್ನುವುದು
ಖಾರವಾಗಿರುವ ಮೆಣಸನ್ನು ತಿಂದರೆ ಅದರಿಂದ ತೂಕ ಕಳೆದುಕೊಳ್ಳಬಹುದು ಎಂದು ಹೇಳುತ್ತಾರೆ. ಆದರೆ ಕೆಂಪು ಮೆಣಸನ್ನು ಆಹಾರದಲ್ಲಿ ಅತಿಯಾಗಿ ಬಳಸುವುದು ಒಳ್ಳೆಯದಲ್ಲ. ಮೆಣಸು ವಿಶ್ರಾಂತಿಯಲ್ಲಿರುವ ಹೃದಯದ ಬಡಿತವನ್ನು ಕಡಿಮೆ ಮಾಡುವುದು ಮತ್ತು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅತಿಯಾಗಿ ಖಾರ ತಿನ್ನುವುದು
ಆದರೆ ಅತಿಯಾಗಿ ಮೆಣಸು ಸೇವನೆ ಮಾಡಿದರೆ ಅದರಿಂದ ಹೊಟ್ಟೆಯಲ್ಲಿ ಉರಿ ಉಂಟಾಗಿ ಹೃದಯದ ಮೇಲೆ ಒತ್ತಡ ಹೆಚ್ಚಾಗಬಹುದು. ಇದರಿಂದ ದಿನದಲ್ಲಿ 1-2 ಚಮಚಕ್ಕಿಂತ ಹೆಚ್ಚು ಮೆಣಸಿನ ಹುಡಿ ಅಥವಾ ಮೆಣಸನ್ನು ಸೇವನೆ ಮಾಡಬೇಡಿ. ದಾಲ್ಚಿನಿ, ಏಲಕ್ಕಿ ಮತ್ತು ಕರಿಮೆಣಸಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ಫಾಲಿಫೆನಾಲ್‌ನಿಂದ ಇವುಗಳು ಹೃದಯಕ್ಕೆ ಒಳ್ಳೆಯದು.

ಉಪಹಾರಕ್ಕೆ ಎಣ್ಣೆಯ ಆಹಾರ
ಬೆಳಗ್ಗಿನ ಉಪಹಾರದಲ್ಲಿ ನೀವು ಬೆಣ್ಣೆ ಅಥವಾ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನುತ್ತಾ ಇದ್ದರೆ ಅದರಿಂದ ದೂರವಿರುವುದು ಒಳ್ಳೆಯದು. ಕೆಲವರು ಬೆಣ್ಣೆ ಹಾಕಿರುವ ಪರೋಟ, ಎಣ್ಣೆಯಲ್ಲಿ ಕರಿದಿರುವ ವಡೆ ಅಥವಾ ಸಮೋಸ ಸೇವನೆ ಮಾಡುತ್ತಾರೆ. ಇದು ಹೃದಯಕ್ಕೆ ಒಳ್ಳೆಯದಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉಪಹಾರಕ್ಕೆ ಎಣ್ಣೆಯ ಆಹಾರ
ಬೆಳಗ್ಗಿನ ಉಪಹಾರಕ್ಕೆ ಎಣ್ಣೆಯಲ್ಲಿ ಮಾಡಿದಂತಹ ತಿಂಡಿಗಳನ್ನು ತಿಂದರೆ ಅದರಿಂದ ಜೀರ್ಣಕ್ರಿಯೆಯು ಕಡಿಮೆಯಾಗುವುದು ಮತ್ತು ಹೊಟ್ಟೆ ತುಂಬದೆ ಇರುವುದರಿಂದ ನೀವು ಮತ್ತಷ್ಟು ತಿನ್ನುತ್ತಲೇ ಇರುತ್ತೀರಿ. ಇದರಿಂದ ಕ್ಯಾಲರಿ ಸೇವನೆ ಹೆಚ್ಚಾಗುವುದು. ಉಪಹಾರದಲ್ಲಿ ಹೆಚ್ಚಿನ ಪ್ರೋಟೀನ್ ಕಡಿಮೆ ಕಾರ್ಬೋಹೈಡ್ರೆಟ್ಸ್ ಮತ್ತು ಕೊಬ್ಬಿನಾಂಶ ಸ್ವಲ್ಪವೇ ಇರುವ ಆಹಾರವನ್ನು ಸೇವಿಸಿ.



Click it and Unblock the Notifications











