For Quick Alerts
ALLOW NOTIFICATIONS  
For Daily Alerts

ಡಯಟ್‌ ಮಾಡಿದರೂ ತೂಕ ಇಳಿಯುತ್ತಿಲ್ಲವೇ? ಹಾಗಾದರೆ ಈ ವಿಷಯಗಳನ್ನು ತಿಳಿಯಲೇಬೇಕು

|

ಫಿಟ್ ಆಗಿರಬೇಕು ಅಂತ ಎಲ್ಲರೂ ಇಷ್ಟಪಡುತ್ತಾರೆ. ನಾನು ಎಲ್ಲರಂತೆ ಸ್ಲಿಮ್ ಆಗಿ ಚಂದವಾಗಿ ಕಾಣಿಸಬೇಕು ಎಂದು ಎಲ್ಲ ಹುಡುಗ-ಹುಡುಗಿ ಅನ್ಕೋತಾರೆ. ಆದರೆ ಅನೇಕರಿಗೆ ಇದು ಆಗೋದಿಲ್ಲ. ಅನೇಕರು ಇದಕ್ಕಾಗಿ ಡಯಟ್ ಕೂಡ ಮಾಡುತ್ತಾರೆ. ಆದರೂ ತೂಕ ಇಳಿಸಿ ಫಿಟ್ ಆಗೋದಿಲ್ಲ.

Fat Losing In kannada

ಅನೇಕರು ಡಯಟ್ ಏನೋ ಮಾಡುತ್ತಾರೆ ಆದ್ರೆ ವಾರಾಂತ್ಯದಲ್ಲಿ ಚೀಟ್ ಡೇ ಎಂದು ಕೊಬ್ಬು ಬರುವ ಆಹಾರಗಳನ್ನು ಸೇವಿಸಿ ತೂಕ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಯಶಸ್ವಿ ಆಹಾರ ಪದ್ಧತಿಗಾಗಿ ನೀವು ನಿಮ್ಮ ಗುರಿಯನ್ನು ಬೆಂಬಲಿಸುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು.

ಹಾಗಾದರೆ ನೀವು ಫಿಟ್ ಆಗಿರಲು ಬಯಸುತ್ತೀರಾ? ಹಾಗಾದರೆ ನಾವು ಹೇಳುವ ಕೆಲವೊಂದು ಹ್ಯಾಬಿಟ್ ಗಳನ್ನು ಡಯಟ್ ನಲ್ಲಿ ಪಾಲಿಸಿ. ಏನದು..? ಇಲ್ಲಿದೆ ಈ ಬಗ್ಗೆ ಮಾಹಿತಿ:

ಟ್ರಾಕ್ ಯುರ್ ನ್ಯೂಟ್ರಿಷನ್!

ಟ್ರಾಕ್ ಯುರ್ ನ್ಯೂಟ್ರಿಷನ್!

ಕೆಲವರು ಸುಮ್ಮನೆ ಡಯಟ್ ಮಾಡುವುದುಂಟು. ಅದಕ್ಕೆ ಸರಿಯಾದ ಮಾರ್ಗದರ್ಶನವೇ ಇರುವುದಿಲ್ಲ. ಅಂದರೆ, ಯಾವ ಆಹಾರ ತಿನ್ನಬೇಕು ಏನು ಹೇಗೆ ಎಂಬ ಕತೆಯೇ ಇರುವುದಿಲ್ಲ. ಇದರಿಂದ ಏನಾಗುತ್ತದೆ ಅಂದರೆ ತೂಕ ಇಳಿಯುವುದಿಲ್ಲ. ಇದರಿಂದ ನಿಮಗೆ ಬೇಸರ ಮೂಡಿ ಡಯಟ್ ಬೇಡ್ವೇ ಬೇಡ ಎಂದು ಅಂದುಕೊಳ್ಳುತ್ತೀರಿ. ಹೀಗಾಗಿ ನೀವು ಫಿಟ್ ಆಗಿರಬೇಕು ಎಂದರೆ ನಿಮ್ಮ ನ್ಯೂಟ್ರಿಷಿಯನ್ ನಲ್ಲಿ ಟ್ರ್ಯಾಕರ್ ಬಳಸಬೇಕು.

ಹೌದು, ನೀವು ಯಾವ ಆಹಾರದಲ್ಲಿ ಎಷ್ಟು ಕ್ಯಾಲೋರಿಗಳನ್ನು ಪಡೆಯುತ್ತಿದ್ದೀರಿ? ಎಷ್ಟು ಪ್ರೊಟೀನ್ ಪಡೆಯುತ್ತಿದ್ದೀರಿ? ಎಷ್ಟು ಕೊಬ್ಬು ಪಡೆಯುತ್ತಿದ್ದೀರಿ ಎನ್ನುವುದನ್ನು ನೀವು ಕ್ಯಾಲೋರಿ ಕೌಂಟಿಂಗ್ ಆಪ್ ಅಥವಾ ಜರ್ನಲ್ ಗಳ ಮೂಲಕ ಟ್ರ್ಯಾಕ್ ಮಾಡಿ ತಿಳಿದುಕೊಳ್ಳಬೇಕು. ಇದು ನಿಮಗೆ ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯಮಾಡುತ್ತದೆ. ಯಾವ ಆಹಾರ ತಿಂದರೆ ದೇಹದ ಯಾವ ಭಾಗಕ್ಕೆ ಹೋಗುತ್ತದೆ ಎನ್ನುವುದು ನ್ಯೂಟ್ರಿಷಿಯನ್ ಟ್ರಾಕರ್ ಮೂಲಕ ತಿಳಿದುಕೊಳ್ಳಬಹುದು. ಇದರ ಪ್ರಕಾರ ಆಹಾರ ಸೇವಿಸಬಹುದು. ಹೀಗೆ ಮಾಡಿದಲ್ಲಿ ನೀವು ಉತ್ತಮ ಡಯಟ್ ಮೂಲಕ ಉತ್ತಮ ಫಿಟ್ ನೆಸ್ ಪಡೆಯಬಹುದು.

ಫ್ಯಾಡ್ ಡಯಟ್!

ಫ್ಯಾಡ್ ಡಯಟ್!

ನೀವು ಬೇಗ ವೈಟ್ ಲಾಸ್ ಆಗಬೇಕಾ? ನೀವು ತೂಕ ಇಳಿಸಿ ಸುಂದರವಾಗಿ ಕಾಣಬೇಕಾ? ಹಾಗಾದರೆ ಈ ಡಯಟ್ ಅನ್ನು ಅನುಸರಿಸಿ ಎನ್ನುವ ಜಾಹೀರಾತುಗಳನ್ನು ನೋಡಿರಬಹುದು. ಹೌದು, ತೂಕ ಇಳಿಸುವ ಸಂಬಂಧ ಸದ್ಯ ಟ್ರೆಂಡಿಂಗ್ ನಲ್ಲಿದೆ ಫ್ಯಾಡ್ ಡಯಟ್. ಎರಡು ಮೂರು ವಾರದಲ್ಲಿ ನಿಮ್ಮ ತೂಕವನ್ನು ಈ ಫ್ಯಾಡ್ ಡಯಟ್ ಗಳು ಇಳಿಸುತ್ತವೆ. ಆದರೆ ಇದು ದೀರ್ಘವಾಗಿ ಉಳಿಯುವುದಿಲ್ಲ.

ಹೌದು, ಫ್ಯಾಡ್ ಡಯಟ್ ಗಳು ಕೆಲವೇ ವಾರಗಳಲ್ಲಿ ನಿಮ್ಮ ತೂಕ ಇಳಿಸಬಹುದು ಆದರೆ ಇದು ದೀರ್ಘಕಾಲಿಕವಾಗಿ ಇರುವುದಿಲ್ಲ. ಈ ರೀತಿಯ ಡಯಟ್ ಸ್ಟಾಪ್ ಮಾಡಿದರೆ ಮತ್ತೆ ನಿಮ್ಮ ದೇಹದ ತೂಕ ಹೆಚ್ಚುತ್ತದೆ ಇದರಿಂದ ನಿಮಗೆ ಖಿನ್ನತೆ ಉಂಟಾಗಬಹುದು. ಅಥವಾ ಡಯಟ್ ಮೇಲಿನ ನಂಬಿಕೆಯೇ ಹೋಗಿಬಿಡಬಹುದು. ಫ್ಯಾಡ್ ಡಯಟ್ ಅಂದರೆ ಕೆಲವೇ ಕೆಲವು ಬಗೆಯ ಆಹಾರಗಳನ್ನು ಸೇವಿಸುವುದಾಗಿದೆ. ಕೆಟೋ ಡಯಟ್, ವೇಗನ್ ಡಯಟ್, ಪಲೆಯೋ ಡಯಟ್ ಹೀಗೆ ವಿವಿಧ ಡಯಟ್ ಗಳಿವೆ. ಈ ಡಯಟ್ ಗಳ ಸಂಪೂರ್ಣ ಮಾಹಿತಿಗಳ ಪುಸ್ತಕಳು ಇದೆ. ಒಂದೊಂದು ಡಯಟ್ ನಲ್ಲಿ ಏನು ತಿನ್ನಬೇಕು ಎಂದು ಹೇಳಲಾಗುತ್ತದೆ. ಆದರೆ ಫಿಟ್ ನೆಸ್ ತಜ್ಞರ ಪ್ರಕಾರ, ಇದರಿಂದ ಆರೋಗ್ಯ ನ್ಯೂನ್ಯತೆ ಬರುತ್ತದೆ ಎಂದು ಹೇಳಿದ್ದಾರೆ.

ಇದರಲ್ಲಿ ಕೆಲ ದೇಹಕ್ಕೆ ಬೇಕಾದ ಆಹಾರಗಳನ್ನು ಕೈಬಿಡಲಾಗಿದೆ ಇದರಿಂದ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಹೀಗಾಗಿ ಸರಿಯಾಗಿ ಡಯಟ್ ಮಾಡಿ ತೂಕ ಇಳಿಸಬೇಕು ಎಂದು ಅಂದುಕೊಂಡಿದ್ದರೆ ಈ ಡಯಟ್ ಬಿಟ್ಟುಬಿಡಿ.

ಹಿತ ಮಿತವಾದ ಡಯಟ್!

ಹಿತ ಮಿತವಾದ ಡಯಟ್!

ನಮ್ಮಲ್ಲಿ ಅನೇಕರು ಈ ಆಹಾರ ತಿಂದರೆ ಕೆಟ್ಟದ್ದು, ಈ ಆಹಾರ ತಿಂದರೆ ಒಳ್ಳೆಯದು ಎನ್ನುವ ಮನೋಭಾವವಿದೆ. ಆದರೆ ನಿಜಕ್ಕೂ ಕೆಟ್ಟ ಆಹಾರ ಹಾಗೂ ಒಳ್ಳೆಯ ಆಹಾರ ಎಂಬ ವಿಚಾರವೇ ಇಲ್ಲ. ನಾವು ತಿನ್ನುವ ಎಲ್ಲವೂ ಒಳ್ಳೆಯ ಆಹಾರವೇ ಆಗಿರುತ್ತದೆ. ಹೀಗಾಗಿ ನಾವು ಎಲ್ಲ ಆಹಾರವನ್ನು ಸೇವಿಸಬೇಕು. ಆದರೆ ಅದಕ್ಕೆ ಇತಿ ಮಿತಿ ಇರಬೇಕು. ಹೆಚ್ಚು ಕೊಬ್ಬು ಕೊಡುವ ಆಹಾರವನ್ನು ಮಿತವಾಗಿ ಸೇವಿಸಬೇಕು. ಹೀಗೆ ಮಾಡುವುದರಿಂದ ನಿಮಗೆ ನಿಮ್ಮ ಇಷ್ಟದ ಆಹಾರದ ಜೊತೆಗೆ ಡಯಟ್ ಮಾಡಬಹುದು. ಇದರಿಂದ ನಿಮ್ಮ ತೂಕದ ಮೇಲೂ ಒಳ್ಳೆಯ ಪರಿಣಾಮ ಬೀರುತ್ತದೆ. ಜೊತೆಗೆ ನಿಮಗೆ ಡಯಟ್ ಎಂದಾಗ ಸಪ್ಪೆ ಮೋರೆ ಆಗುವುದಿಲ್ಲ. ಹಾಗಾದರೆ ನೀವು ಏನು ಮಾಡಬೇಕು ಅಂದರೆ ಎಲ್ಲಾ ಆಹಾರವನ್ನು ಸೇವಿಸಬೇಕು. ಆದರೆ ಅದಕ್ಕೆ ಇತಿ ಮಿತಿ ಇರಬೇಕು ಅಷ್ಟೇ. ಅದರಲ್ಲಿರುವ ಕ್ಯಾಲೋರಿಗಳ ಆಧಾರದ ಮೇಲೆ ಆಹಾರ ಸೇವಿಸಬೇಕು.

ಗುಡ್ ಡಯಟ್ ಹಾಗೂ ಬ್ಯಾಡ್ ಡಯಟ್!

ಗುಡ್ ಡಯಟ್ ಹಾಗೂ ಬ್ಯಾಡ್ ಡಯಟ್!

ಗುಡ್ ಡಯಟ್ ಹಾಗೂ ಬ್ಯಾಡ್ ಡಯಟ್ ಏನು ಅನ್ನೋದನ್ನ ಅರ್ಥ ಮಾಡಿಕೊಂಡರೆ ನಿಮಗೆ ನಿಮ್ಮ ತೂಕವನ್ನು ಇಳಿಸಬಹುದು. ಜೊತೆಗೆ ನಿಮಗೆ ನೀವು ಮಾಡುವ ಡಯಟ್ ಇಷ್ಟವೂ ಆಗಬಹುದು. ಹೀಗಾಗಿ ಗುಡ್ ಅಂಡ್ ಬ್ಯಾಡ್ ಡಯಟನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಗುಡ್ ಡಯಟ್ ನಲ್ಲಿ ಹಣ್ಣು ಹಂಪಲು, ತರಕಾರಿ ಇರುತ್ತದೆ. ಇದನ್ನು ಸೇವಿಸುವುದರಿಂದ ನಿಮಗೆ ಜಾಸ್ತಿ ಕ್ಯಾಲೋರಿಗಳು ಇರೋದಿಲ್ಲ. ಇದರಿಂದ ತೂಕವು ಇಳಿಕೆ ಕಾಣುತ್ತದೆ. ಆದರೆ ನೀವು ಬ್ಯಾಡ್ ಡಯಟ್ ಮೊರೆ ಹೋದರೆ ಅಂದರೆ ಜಂಖ್ ಫುಡ್ ಗಳ ಮೊರೆ ಹೋದರೆ ನಿಮ್ಮ ದೇಹ ಏಕಾಏಕಿ ಬೆಳೆಯುತ್ತದೆ. ತೂಕ ಇಳಿಯುವುದಿಲ್ಲ. ಹೀಗಾಗಿ ನೀವು ಡಯಟ್ ಇಷ್ಟಪಟ್ಟು ತೂಕ ಇಳಿಸಬೇಕು ಅಂದರೆ ನೀವು ಗುಡ್ ಡಯಟ್ ಅನ್ನು ಚೂಸ್ ಮಾಡಬೇಕು.

 ತೂಕ ಇಳಿಸುವ ಬಗ್ಗೆ ಯೋಚಿಸಿ!

ತೂಕ ಇಳಿಸುವ ಬಗ್ಗೆ ಯೋಚಿಸಿ!

ನೀವು ಯಾವುದೇ ಕೆಲಸ ಮಾಡುತ್ತಿದ್ದರೂ ಅದನ್ನು ನಾನು ಸಂಪೂರ್ಣವಾಗಿ ಮಾಡಿ ಮುಗಿಸುತ್ತೇನೆ ಎನ್ನುವ ದೃಢ ಸಂಕಲ್ಪವನ್ನು ಹೊಂದಬೇಕು. ಇದನ್ನು ನೀವು ಡಯಟ್ ನಲ್ಲೂ ಫಾಲೋ ಮಾಡಬೇಕು. ನಾನು ತೂಕ ಇಳಿಸುತ್ತೇನೆ, ಜಂಕ್ ಫುಡ್ ಜಾಸ್ತಿ ತಿನ್ನುವುದಿಲ್ಲ ಎಂದು ನಿರ್ಧಾರ ಮಾಡಬೇಕು. ಹಾಗಿದ್ದರೆ ಮಾತ್ರ ನೀವು ತೂಕ ಇಳಿಸಬಹುದಾಗಿದೆ. ಅಲ್ಲದೇ ಡಯಟ್ ಆಹಾರವನ್ನು ಪ್ರೀತಿಯಿಂದ ತಿನ್ನುತ್ತೇನೆ ಎಂದು ನೀವು ಯೋಚಿಸಬೇಕು.

English summary

What To Do If You're Struggling With Losing Fat And Sticking To Your Diet in kannada

Following strict diet still struggling to loose weight? Then you must read this story....
Story first published: Thursday, August 4, 2022, 9:01 [IST]
X
Desktop Bottom Promotion