For Quick Alerts
ALLOW NOTIFICATIONS  
For Daily Alerts

ಕೊಹ್ಲಿ ಫಿಟ್‌ನೆಸ್‌ಗಾಗಿ ತಿನ್ನುವುದು ವೇಗನ್ ಅಲ್ಲ ವೆಜಿಟೇರಿಯನ್

|

ಫಿಟ್‌ನೆಸ್‌ ವಿಷಯದಲ್ಲಿ ತುಂಬಾ inspire ಮಾಡುವ ವ್ಯಕ್ತಿಗಳಲ್ಲೊಬ್ಬರು ವಿರಾಟ್‌ ಕೊಹ್ಲಿ. ಅವರ ಫಿಟ್‌ನೆಸ್‌ ನೋಡಿದವರು ತಾವು ಕೂಡ ಅವರಂಥ ಮೈಕಟ್ಟ ಪಡೆಯಬೇಕೆಂದು ಬಯಸುವಂಥ ಮೈಕಟ್ಟು. ಅವರ ಫಿಟ್ನೆಸ್‌ ಸೀಕ್ರೆಟ್‌ಯೇನು ಎಂದು ತಿಳಿಯ ಬಯಸುವವರಿಗೆ ಸ್ವಲ್ಪ ಅಚ್ಚರಿಯಾಗಬಹುದು, ಏಕೆಂದರೆ ಅವರು ವೆಜಿಟೇರಿಯನ್‌ ಡಯಟ್ ಫಾಲೋ ಮಾಡ್ತಾರೆ.

ಸಾಮಾನ್ಯವಾಗಿ ಜಿಮ್‌ಗಾಗಿ ವರ್ಕೌಟ್‌ ಮಾಡಿ ಬಿಲ್ಡ್‌ ಮಾಡುವವರು ಪ್ರೊಟೀನ್‌ಗಾಗಿ ಮೀನು, ಮಾಂಸ ಆಹಾರ ಸೇವಿಸುತ್ತಾರೆ, ಆದರೆ ಕೊಹ್ಲಿ ಸಸ್ಯಾಹಾರ ಬಿಟ್ಟರೆ ಮತ್ತೇನೂ ಸೇವಿಸುವುದಿಲ್ಲ. ಕೆಲವರು ಕೊಹ್ಲಿ ಫಿಟ್‌ನೆಸ್‌ ಸೀಕ್ರೆಟ್‌ ವೇಗನ್‌ ಡಯಟ್‌ ಎಂದು ಹೇಳುತ್ತಿದ್ದಾರೆ. ಆದರೆ ಕೊಹ್ಲಿ ಮಾಡುತ್ತಿರುವುದು ವೆಜಿಟೇರಿಯನ್‌ ಡಯಟ್‌ನಾ ಅಥವಾ ವೇಗನ್‌ ಡಯಟ್‌ನಾ? ಈ ಕುರಿತು ಸ್ವತಃ ಕೊಹ್ಲಿಯೇ ನೀಡಿರುವ ಸ್ಪಷ್ಟನೆ ಏನು ಎಂದು ನೋಡೋಣ ಬನ್ನಿ:

ಮೊದಲಿಗೆ ವೇಗನ್‌ ಡಯಟ್‌ ಎಂದರೇನು ನೋಡೋಣ:

ಮೊದಲಿಗೆ ವೇಗನ್‌ ಡಯಟ್‌ ಎಂದರೇನು ನೋಡೋಣ:

ವೇಗನ್‌ ಡಯಟ್‌ ವೆಜಿಟೇರಿಯನ್‌ ಡಯಟ್‌ಗಿಂತ ಭಿನ್ನ. ಎಷ್ಟೋ ಜನರು ಇದು ಅರೋಗ್ಯಕ್ಕೆ ಒಳ್ಳೆಯದು ಎಂದು ವೇಗನ್‌ ಡಯಟ್‌ ಪಾಲಿಸಲಾರಂಭಿಸಿದೆ. ಈ ವೇಗನ್‌ ಡಯಟ್‌ನಲ್ಲಿ ಸಸ್ಯಾಹರಿಗಳು ತಿನ್ನುವ ಕೆಲವೊಂದು ಆಹಾರ ಪದಾರ್ಥಗಳನ್ನೂ ಬಳಸುವುದಿಲ್ಲ. ಹಾಲು, ಮೊಸರು, ತುಪ್ಪ, ಜೇನು ಇಂಥ ಯಾವುದೇ ಆಹಾರ ಪದಾರ್ಥಗಳನ್ನು ಬಳಸುವುದಿಲ್ಲ. ಇದರಲ್ಲಿ ಬರೀ ಸಸ್ಯಗಳ ಮೂಲದ ಆಹಾರವನ್ನಷ್ಟೇ ಸೇವಿಸಲಾಗುವುದು.

ವೇಗಟ್‌ ಡಯಟ್‌ ಪ್ರಯೋಜನಗಳು

ವೇಗಟ್‌ ಡಯಟ್‌ ಪ್ರಯೋಜನಗಳು

ವೇಗನ್‌ ಡಯಟ್‌ ಉಂಬಾ ಪ್ರಯೋಜನಗಳನ್ನು ಹೊಂದಿದೆ. ವೇಗನ್‌ ಡಯಟ್‌ ಪಾಲಿಸುವುದರಿಂದ ಮೈ ತೂಕ ಹೆಚ್ಚಾಗುವುದಿಲ್ಲ. ಹೃದಯಾಘಾತ, ರಕ್ತದೊತ್ತಡ, ಕ್ಯಾನ್ಸರ್ ಈ ಬಗೆಯ ಅಪಾಯಕಾರಿ ಕಾಯಿಲೆಗಳ ಅಪಾಯವನ್ನು ತಪ್ಪಿಸುತ್ತದೆ.

ವಿರಾಟ್‌ ಕೊಹ್ಲಿ ವೆಜೆಟೆರಿಯನ್ ಪಾಲಿಸುವುದಾ? ವೇಗನ್‌ ಡಯಟ್‌ ಪಾಲಿಸುವುದಾ?

ವಿರಾಟ್‌ ಕೊಹ್ಲಿ ವೆಜೆಟೆರಿಯನ್ ಪಾಲಿಸುವುದಾ? ವೇಗನ್‌ ಡಯಟ್‌ ಪಾಲಿಸುವುದಾ?

ವಿರಾಟ್‌ ಕೊಹ್ಲಿ ಯಾವ ಡಯಟ್‌ ಪಾಲಿಸುತ್ತಿದ್ದಾರೆ ಎಂಬ ಗೊಂದಲ ಹಲವರಲ್ಲಿದೆ. ಕೆಲವರು ಅವರು ವೇಗನ್‌ ಡಯಟ್ ಪಾಲಿಸುವುದಾಗಿ ಹೇಳುತ್ತಾರೆ, ಆದರೆ ಕೊಹ್ಲಿ ಈ ಬಗ್ಗೆ ಸ್ವತಃ ಸ್ಪಷ್ಟನೆ ಈ ಹಿಂದೆಯೇ ನೀಡಿದ್ದಾರೆ. ಅವರೇ ಹೇಳಿರುವ ಪ್ರಕಾರ ಅವರು ಪಾಲಿಸುತ್ತಿರುವುದು ವೇಗನ್‌ ಡಯಟ್‌ ಅಲ್ಲ, ವೆಜಿಟೇರಿಯನ್‌ ಡಯಟ್.

ವಿರಾಟ್‌ ಕೊಹ್ಲಿಯ ಆಹಾರ ಶೈಲಿಯೇನು?

ವಿರಾಟ್‌ ಕೊಹ್ಲಿಯ ಆಹಾರ ಶೈಲಿಯೇನು?

ತುಂಬಾ ತರಕಾರ ಸೇವಿಸುತ್ತಾರೆ. ಹಣ್ಣು, ತರಕಾರಿಗಳ ಜೊತೆಗೆ ಸೀಸನಲ್‌ ಅಂದರೆ ಆಯಾ ಕಾಲಕ್ಕೆ ಸಿಗುವ ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಸ್ವಲ್ಪ ಮೊಟ್ಟೆ, 2 ಕಪ್ ಕಾಫಿ, ನವಣೆ ಹಾಗೂ ತುಂಬಾ ಪಾಲಾಕ್‌ ಇವರ ಡಯಟ್‌ನ ಭಾಗವಾಗಿದೆ ಎಂಬುವುದಾಗಿ ಹೇಳಿದ್ದಾರೆ. ಕೊಹ್ಲಿಗೆ ದೋಸೆಯೆಂದರೆ ತುಂಬಾ ಇಷ್ಟ, ಆದರೆ ಲಿಮಿಟ್‌ನಲ್ಲಿ ಸೇವಿಸುತ್ತಾರೆ .

ಕೊಹ್ಲಿ ಬ್ರೇಕ್‌ಫಾಸ್ಟ್, ಲಂಚ್‌, ಡಿನ್ನರ್ ಏನನ್ನು ಸೇವಿಸುತ್ತಾರೆ?

ಬ್ರೇಕ್‌ಫಾಸ್ಟ್‌ಗೆ ಬೇಯಿಸಿದ ತರಕಾರಿ, ನವಣೆ, ಚೀಸ್, ಆಮ್ಲೆಟ್‌, ಹಣ್ಣುಗಳಾದ ಪಪ್ಪಾಯಿ, ಡ್ರ್ಯಾಗನ್‌ ಫ್ರೂಟ್‌, ಕಲ್ಲಂಗಡಿ ಹಣ್ಣು ಸೇವಿಸುತ್ತಾರೆ.

ಬೆಳಗ್ಗೆ ಸ್ನ್ಯಾಕ್ಸ್

ಸ್ವಲ್ಪ ತರಕಾರಿ, ಚೀಸ್ ಅಥವಾ ಆಮ್ಲೆಟ್ , ಗ್ರೀನ್‌ ಟೀ ಸವಿಯುತ್ತಾರೆ.

ಲಂಚ್:

ಲಂಚ್‌ಗೆ ತರಕಾರಿಗಳು, ಪ್ರೊಟೀನ್‌ ಶೇಕ್‌, ಆಮ್ಲೆಟ್‌, ದಾಲ್‌, ರೊಟ್ಟಿ, ಸಬ್ಜಿ ಹೀಗೆ ತೆಗೆದುಕೊಳ್ಳುತ್ತಾರೆ.

ಕಾಫಿ ಬ್ರೇಕ್‌ಗೆ

ಕೊಹ್ಲಿ ಸಕ್ಕರೆ ಹಾಕದೆ ಬ್ಲ್ಯಾಕ್‌ ಕಾಫಿ ತೆಗೆದುಕೊಳ್ಳುತ್ತಾರೆ.

ಡಿನ್ನರ್‌ಗೆ ತುಂಬಾ ತರಕಾರಿ ಸೇವಿಸುತ್ತಾರೆ, ಇವರ ಆಹಾರಕ್ರಮದಲ್ಲಿ ಕೆಲವೊಮ್ಮೆ ಟೋಸ್ಟಡ್‌ ಬ್ರೆಡ್‌ ಕೂಡ ಇರುತ್ತೆ.

English summary

Virat Kohli: Vegetarian Diet The Secret Behind his Fitness In kannada

Virat Kohli Birthday: Vegan or vegetarian diet is the secret behind the kohli's fitness, Read on...
X
Desktop Bottom Promotion