For Quick Alerts
ALLOW NOTIFICATIONS  
For Daily Alerts

ಕೀಟೋ ಡಯಟ್‌ನಿಂದ ತೂಕ ಇಳಿಕೆ ಜೊತೆಗೆ ವೀರ್ಯಾಣು ವೃದ್ಧಿ: ಕೇಸ್ ಸ್ಟಡಿ

|

ಕೀಟೋ ಡಯಟ್ ಬಗ್ಗೆ ಕೇಳಿರುತ್ತೀರಿ, ತೂಕ ಇಳಿಕೆಗೆ ಬೆಸ್ಟ್ ಡಯಟ್‌ ಇದಾಗಿದೆ. ಕೀಟೋ ಡಯಟ್‌ ಪ್ರಾರಂಭಿಸಿದ ಎರಡು ತಿಂಗಳಿನ ಒಳಗಾಗಿ ಮೈ ತೂಕ ಕಡಿಮೆಯಾಗುವುದು ಗಮನಕ್ಕೆ ಬರುವುದು. ಅಲ್ಲದೆ ಕೀಟೋ ಡಯಟ್ ಒಂದು ಆರೋಗ್ಯಕರವಾದ ತೂಕ ಇಳಿಕೆಯ ವಿಧಾನವಾಗಿದೆ.

ಕೀಟೋ ಡಯಟ್‌ನಲ್ಲಿ ಕಡಿಮೆ ಕಾರ್ಬ್ಸ್ ಹಾಗೂ ಅಧಿಕ ಕೊಬ್ಬಿನಂಶ ಬಳಸಲಾಗುವುದು. ಇದರಲ್ಲಿ ಚಿಕನ್, ಮೀನು, ಪನ್ನೀರ್, ತುಪ್ಪ ಹೀಗೆ ಆರೋಗ್ಯಕರ ಕೊಬ್ಬಿನಂಶ ಬಳಸಲಾಗುವುದು. ಈ ಡಯಟ್ ಪಾಲಿಸಿದರೆ ಹಸಿವು ಇರುವುದಿಲ್ಲ, ನಾನ್‌ವೆಜ್‌ ಪ್ರಿಯರಿಗೆ ಬಾಯಿ ರುಚಿಗೂ ತೊಂದರೆಯಿಲ್ಲ, ಇದೀಗ ಕೀಟೋ ಡಯಟ್ ಪಾಲಿಸಿದರೆ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮಾರ್ಥ್ಯ ಹೆಚ್ಚುವುದು ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:

ಕೀಟೋ ಡಯಟ್‌ನಿಂದ ವೀರ್ಯಾಣು ಸಂಖ್ಯೆ ವೃದ್ಧಿ

ಕೀಟೋ ಡಯಟ್‌ನಿಂದ ವೀರ್ಯಾಣು ಸಂಖ್ಯೆ ವೃದ್ಧಿ

  • ಕೀಟೋ ಡಯಟ್ ಪಾಲಿಸಿದರೆ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮಾರ್ಥ್ಯ ಹೆಚ್ಚುವುದು ಎಂದು ಹೇಳಿದ 2 ಅಧ್ಯಯನಗಳು
  • 10-15 ಕೆಜಿಯಷ್ಟು ತೂಕ ಕಳೆದುಕೊಂಡವರಲ್ಲಿ ಸಂತಾನೋತ್ಪತ್ತಿ ಸಾಮಾರ್ಥ್ಯ ವೃದ್ಧಿ
  • ಲೈಂಗಿಕ ಆಸಕ್ತಿ ಹೆಚ್ಚಿಸುವುದು, ಇದರಂತೆ ಮೆಡಿಟೇರಿಯನ್ ಡಯಟ್ ಕೂಡ ಒಳ್ಳೆಯದು
  • ಅಧಿಕ ಕೊಬ್ಬಿನಂಶವಿರುವ ಡಯಟ್‌ನಿಂದಾಗಿ ಸಂತಾನೋತ್ಪತ್ತಿ ಸಾಮಾರ್ಥ್ಯ ವೃದ್ಧಿ

    ಅಧಿಕ ಕೊಬ್ಬಿನಂಶವಿರುವ ಡಯಟ್‌ನಿಂದಾಗಿ ಸಂತಾನೋತ್ಪತ್ತಿ ಸಾಮಾರ್ಥ್ಯ ವೃದ್ಧಿ

    ಹೊಸದಾಗಿ ನಡೆಸಿದ ಅಧ್ಯಯನದಲ್ಲಿ ಕೀಟೋ ಡಯಟ್ ಪಾಲಿಸಿ ತೂಕ ಕಳೆದುಕೊಂಡ ಇಬ್ಬರು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ವೃದ್ಧಿಯಾಗಿರುವುದು ಅಧ್ಯಯನಿಂದಾಗಿ ತಿಳಿದು ಬಂದಿದೆ. ಬ್ರೆಜಿಲ್‌ನ Universidade de São Paulo ಈ ಅಧ್ಯಯನವನ್ನು ನಡೆಸಿತ್ತು.

     ಮೊದಲ ಅಧ್ಯಯನದ ಫಲಿತಾಂಶ

    ಮೊದಲ ಅಧ್ಯಯನದ ಫಲಿತಾಂಶ

    ಮೊದಲನೇ ಕೇಸ್‌ನಲ್ಲಿ ವ್ಯಕ್ತಿ 3 ತಿಂಗಳು ಕೀಟೋ ಡಯಟ್ ಪಾಲಿಸಿ 15 ಕೆಜಿಯಷ್ಟು ತೂಕ ಕಡಿಮೆ ಮಾಡಿಕೊಂಡರು. ಅವರ ದೇಹದಲ್ಲಿ ಕೊಬ್ಬಿನಂಶ ಶೇ. 42ರಷ್ಟು ಕಡಿಮೆಯಾಗಿತ್ತು, ಜೊತೆಗೆ ವೂರ್ಯಾಣು ಸಂಖ್ಯೆ ಶೇ. 100ರಷ್ಟು ಹೆಚ್ಚಾಗಿತ್ತು. ಆತನ ಟೆಸ್ಟೋಸ್ಟೊರೋನ್ ಪ್ರಮಾಣ ದುಪ್ಪಟ್ಟಾಗಿತ್ತು.

    ಎರಡನೇ ಅಧ್ಯಯನ

    ಎರಡನೇ ಅಧ್ಯಯನ

    ಎರಡನೇ ಕೇಸ್‌ನಲ್ಲಿ ವ್ಯಕ್ತಿ ಮೂರು ತಿಂಗಳಿನಲ್ಲಿ 10 ಕೆಜಿಯಷ್ಟು ಕಡಿಮೆಯಾಗಿದ್ದರು ಅವರ ದೇಹದಲ್ಲಿ ಕೊಬ್ಬಿನಂಶ ಶೇ. 26ರಿಂದ 21ಕ್ಕೆ ಇಳಿದಿತ್ತು. ಆತನ ವೀರ್ಯಾಣುಗಳ ಸಂಖ್ಯೆ ವೃದ್ಧಿಯಾಗಿತ್ತು. ಈತನ ವೀರ್ಯಾಣು ಸಂಖ್ಯೆ ಶೇ.30ರಷ್ಟು ಅಧಿಕವಾಗಿತ್ತು. ಆದರೆ ಈ ಕೇಸ್‌ನಲ್ಲಿ ಆತನ ಟೆಸ್ಟೋಸ್ಟಿರೋನ್ ಪ್ರಮಾಣ ಕಡಿಮೆಯಾಗಿತ್ತು

    ಕೀಟೋ ಡಯಟ್ ಕುರಿತು ಸ್ಪೇನ್‌ನಲ್ಲಿ 2004ರಲ್ಲಿ ಅಧಿಕ ಅಧ್ಯಯನಗಳನ್ನು ನಡೆಸಲಾಗಿತ್ತು. ಇದೀಗ ಹೆಚ್ಚಿನವರು ತೂಕ ಇಳಿಕೆಗೆ ಕೀಟೋ ಡಯಟ್ ಪಾಲಿಸುತ್ತಾರೆ. ಅದರ ಆಧಾರದ ಮೇಲೆ ಅಧ್ಯನ ನಡೆಸಲಾಗುತ್ತು. ಇದೀಗ ಈ ಎರಡು ಕೇಸ್‌ ಸ್ಟಡಿ ಕೀಟೋ ಡಯಟ್‌ ಪಾಲಿಸಿದರೆ ವೀರ್ಯಾಣು ಸಂಖ್ಯೆ ವೃದ್ಧಿಯಾಗಿ ಸಂತಾನೋತ್ಪತ್ತಿ ಸಾಮಾರ್ಥ್ಯ ಹೆಚ್ಚುವುದು ಎಂಬುವುದಕ್ಕೆ ಪುಷ್ಠಿ ನೀಡಿದೆ.

English summary

The Keto Weight Loss Diet Could Help Boost Sperm Count and Quality

Two new case reports proves that weight loss keto weight loss diet could benefit sperm count and quality in obese men.
X
Desktop Bottom Promotion