For Quick Alerts
ALLOW NOTIFICATIONS  
For Daily Alerts

ಸಂಧಿವಾತಕ್ಕೆ ಆಹಾರಕ್ರಮ: ತಿನ್ನಬೇಕಾದ ಹಾಗೈ ತಿನ್ನಲೇಬಾರದ ಆಹಾರಗಳಿವು

|

ಸಂಧಿವಾತ ಎಂಬುವುದು 40 ವರ್ಷ ಮೇಲ್ಪಟ್ಟ ಬಹುತೇಕ ಜನರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಅದರಲ್ಲೂ 60 ವರ್ಷ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಸಂಧಿವಾತ ಬಂದರೆ ನಡೆಯಲೂ ಆಗದೆ, ಕೂರಲೂ ಆಗದೆ ಕಷ್ಟ ಪಡುತ್ತಾರೆ. ಮಂಡಿಗಳು, ಕೈಗಳು, ಹಿಂಬದಿ, ಬೆನ್ನು ಮೂಳೆ ಇವುಗಳಲ್ಲಿ ನೋವು ಕಂಡು ಬರುವುದು.

ಸಂಧಿವಾತ ಸಮಸ್ಯೆ ಇರುವವರು ಔಷಧಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಆಹಾರಕ್ರಮದ ಕಡೆಯೂ ಗಮನ ಹರಿಸಬೇಕು. ಕೆಲವೊಂದು ಆಹಾರಗಳನ್ನು ಸೇವಿಸಬೇಕು, ಕೆಲವೊಂದು ಆಹಾರಗಳನ್ನು ತಿನ್ನಲೇಬಾರದು. ನಾವಿಲ್ಲಿ ಸಂಧಿವಾತ ಸಮಸ್ಯೆ ಇರುವವರಿಗೆ ಯಾವ ಆಹಾರ ಒಳ್ಳೆಯದು, ಯಾವ ಆಹಾರ ಒಳ್ಳೆಯದಲ್ಲ ಎಂದು ನೋಡೋಣ ಬನ್ನಿ:

ಸಂಧಿವಾತ ಇರುವವರಿಗೆ ಯಾವ ಆಹಾರ ಒಳ್ಳೆಯದು

1. ಈ ಬಗೆಯ ಮೀನುಗಳು

1. ಈ ಬಗೆಯ ಮೀನುಗಳು

ಕೊಬ್ಬಿನಂಶ/ಎಣ್ಣೆಯಂಶವಿರುವ ಮೀನುಗಳ ಸೇವನೆ ಒಳ್ಳೆಯದು. ಇಂಥ ಮೀನುಗಳಲ್ಲಿ ಒಮೆಗಾ 3 ಕೊಬ್ಬಿನಂಶವಿರುತ್ತದೆ. ಸಂಧಿವಾತ ಸಮಸ್ಯೆ ಇರುವವರು ಈ ಮೀನುಗಳನ್ನು ತಿನ್ನುವುದು ಒಳ್ಳೆಯದು

* ಬೂತಾಯಿ

* ಬಂಗುಡೆ

* ಸಾಲ್ಮೋನ್

* ತುನಾ

ಯಾರು ಮೀನು ತಿನ್ನುದಿಲ್ಲವೋ ಅವರು ಸಪ್ಲಿಮೆಂಟ್‌ ತೆಗೆದುಕೊಳ್ಳಬಹುದು. ಜೊತೆಗೆ ಫ್ಲ್ಯಾಕ್ಸಿ ಸೀಡ್‌ ಆಯಿಲ್, ವಾಲ್ನಟ್‌ ಇವುಗಳನ್ನು ಆಹಾರದಲ್ಲಿ ಸೇರಿಸಬೇಕು, ಇದು ಉರಿಯೂತ ತಡೆಗಟ್ಟಲು ಸಹಕಾರಿ.

2. ಈ ಎಣ್ಣೆ ಬಳಸಿ

2. ಈ ಎಣ್ಣೆ ಬಳಸಿ

ಫಿಶ್‌ ಆಯಿಲ್‌ ಜೊತೆಗೆ ಎಕ್ಸ್ಟ್ರಾ ವರ್ಜಿನ್ ಆಯಿಲ್ ಸೇವಿಸಿ. ಇದನ್ನು ಆಹಾರದಲ್ಲಿ ಅಥವಾ ಸಲಾಡ್‌ನಲ್ಲಿ ಹಾಕಿ ಬಳಸಿ. ಜೊತೆಗೆ ಬೆಣ್ಣೆ ಹಣ್ಣು ತಿನ್ನಿ. ಸೂರ್ಯಕಾಂತಿ ಎಣ್ಣೆಯನ್ನು ಅಡುಗೆಗೆ ಬಳಸಿ.

 3. ಹಾಲಿನ ಉತ್ಪನ್ನಗಳು

3. ಹಾಲಿನ ಉತ್ಪನ್ನಗಳು

ಹಾಲು, ಮೊಸರು, ಚೀಸ್‌ ಇವುಗಳಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುತ್ತದೆ. ಇದು ಮೂಳೆಯ ಆರೋಗ್ಯಕ್ಕೆ ಒಳ್ಳೆಯದು. ವಿಟಮಿನ್ ಡಿ ಕಡಿಮೆಯಾದರೆ ಮೂಳೆಗಳು ಬಲಹೀನವಾಗುವುದು. ಬೆಳಗ್ಗೆ ಸ್ವಲ್ಪ ಹೊತ್ತು ಸೂರ್ಯನ ಬೆಳಕಿಗೆ ಮೈಯೊಡ್ಡಿ ನಿಲ್ಲಿ.

4. ಸೊಪ್ಪುಗಳು

4. ಸೊಪ್ಪುಗಳು

ಸೊಪ್ಪುಗಳನ್ನ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ಅವಶ್ಯಕವಾಗಿದೆ. ಎಲ್ಲಾ ಬಗೆಯ ಸೊಪ್ಪುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ಇದರಿಂದ ಕ್ಯಾಲ್ಸಿಯಂ ಕೊರತೆಯಾಗದಂತೆ ನೋಡಿಕೊಳ್ಳಬಹುದು.

5. ಬ್ರೊಕೋಲಿ

5. ಬ್ರೊಕೋಲಿ

ಬ್ರೊಕೋಲಿಯಲ್ಲಿ ಸಲ್ಫೋರಾಫೆನೆ ಎಂಬ ಅಂಶವಿದೆ, ಇದು ಸಂಧಿವಾತ ಉಲ್ಭಣವಾಗದಂತೆ ತಡೆಗಟ್ಟಲು ಸಹಕಾರಿ. ವಿಟಮಿನ್‌ ಕೆ ಮತ್ತು ಸಿ ಅಧಿಕವಿರುವ ಆಹಾರಗಳನ್ನು ಸೇವಿವಿಸಿ. ಇಂಥ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದು.

6. ಗ್ರೀನ್ ಟೀ

6. ಗ್ರೀನ್ ಟೀ

ಪಾಲಿಫೀನೋಲ್ಸ್‌ ಎಂಬ ಆ್ಯಂಟಿಆಕ್ಸಿಡೆಂಟ್‌ ಗ್ರೀನ್‌ ಟೀಯಲ್ಲಿದ್ದು ಇದು ಉರಿಯೂತ ತಡೆಗಟ್ಟಲು ಸಹಕಾರಿಯಾಗಿದೆ. ದಿನದಲ್ಲಿ 1-2 ಲೋಟ ಗ್ರೀನ್‌ ಟೀ ಕುಡಿಯಿರಿ. ಇದು ದೇಹವನ್ನು ಡಿಟಾಕ್ಸ್ ಮಾಡಲು ಕೂಡ ಸಹಕಾರಿ.

7. ಬೆಳ್ಳುಳ್ಳಿ

7. ಬೆಳ್ಳುಳ್ಳಿ

ಬೆಳ್ಳುಳ್ಳಿನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಮೂಳೆಗಳು ಹಾನಿಯೊಳಗಾಗುವುದನ್ನು ತಪ್ಪಿಸಬಹುದು ಎಂಬುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.

8. ನಟ್ಸ್

8. ನಟ್ಸ್

ನಟ್ಸ್‌ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಇದರಲ್ಲಿ ಕ್ಯಾಲ್ಸಿಯಂ, ಮೆಗ್ನಿಷ್ಯಿಯಂ, ಸತು, ವಿಟಮಿನ್‌ ಇ, ನಾರಿನಂಶಗಳು ಅಧಿಕವಿರುವುದರಿಂದ ಸಂಧಿವಾತ ಸಮಸ್ಯೆ ತಡೆಗಟ್ಟುವುದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು.

ಈ ಆಹಾರಗಳನ್ನು ತಿನ್ನಬೇಡಿ

ಈ ಆಹಾರಗಳನ್ನು ತಿನ್ನಬೇಡಿ

1. ಸಕ್ಕರೆಯಂಶವಿರುವ ಆಹಾರ

ಸಕ್ಕರೆ ಸೈಟೋಕೈನ್ಸ್ ಬಿಡುಗಡೆ ಮಾಡುವುದು, ಇದು ಉರಿಯೂತಕ್ಕೆ ಕಾರಣವಾಗುವುದು. ಆದ್ದರಿಂದ ಸಕ್ಕರೆ ಹಾಕಿದ ಆಹಾರ ಪದಾರ್ಥಗಳು, ಕಾಫಿ, ಟೀ, ಸೋಡಾ, ಪಾನೀಯಗಳು ಇವುಗಳನ್ನು ಸೇವಿಸಬಾರದು.

2. ಸ್ಯಾಚುರೇಟಡ್ ಕೊಬ್ಬಿನಂಶವಿರುವ ಆಹಾರ

ಸ್ಯಾಚುರೇಟಡ್ ಕೊಬ್ಬಿನಂಶವಿರುವ ಆಹಾರ ಕೂಡ ಸಂಧಿವಾತ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ. ಪಿಜ್ಜಾ, ಕೆಂಪು ಮಾಂಸ ಮುಂತಾದ ಸ್ಯಾಚುರೇಟಡ್‌ ಕೊಬ್ಬಿನಂಶದ ಆಹಾರ ವರ್ಜಿಸಿ.

3. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಸ್

ಬ್ರೆಡ್, ಬಿಳಿ ಅಕ್ಕಿ, ಆಲೋಗಡ್ಡೆ ಚಿಪ್ಸ್ ಮುಂತಾದ ಆಹಾರಗಳು ಉರಿಯೂತದ ಸಮಸ್ಯೆ ಹೆಚ್ಚಿಸುವುದು. ಆದ್ದರಿಂದ ಇಂಥ ಆಹಾರಗಳನ್ನು ತಿನ್ನಬೇಡಿ.

FAQ's
  • ಟೊಮೆಟೊ, ಆಲೂಗಡ್ಡೆ, ಬದನೆಕಾಯಿ ತಿನ್ನಬಹುದೇ?

    ಟೊಮೆಟೊ, ಆಲೂಗಡ್ಡೆ, ಮೆಣಸು, ಬದನೆಕಾಯಿ ಇವುಗಳಲ್ಲಿರುವ ಸೋಲೋನೈನ್ ಉರಿಯೂತದ ಸಮಸ್ಯೆ ಹೆಚ್ಚಿಸಬಹುದು. ಆದರೆ ಆರ್ಥರೈಟಿಸ್‌ ಫೌಂಡೇಷನ್‌ ಈ ತರಕಾರಿಗಳನ್ನು ಸಂಧಿವಾತ ಇರುವವರು ತಿನ್ನಬಾರದು ಎಂಬುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದಿದೆ.

  • ಹಾಲು, ಹಾಲಿನ ಉತ್ಪನ್ನಗಳನ್ನು ಸೇವಿಸಬಹುದೇ?

    ಕೆಲವರು ಸಂಧಿವಾತಕ್ಕೆ ಹಾಲು, ಹಾಲಿನ ಉತ್ಪನ್ನಗಳು ಒಳ್ಳೆಯದಲ್ಲ ಎಂದು ಭಾವಿಸುತ್ತಾರೆ, ಆದರೆ ಅದು ಸರಿಯಲ್ಲ. ಇದು ಕೆಲವರಿಗೆ ಒಳ್ಳೆಯದಲ್ಲ, ಆದರೆ ಎಲ್ಲರಿಗಲ್ಲ. ನೀವು ಸ್ವಲ್ಪ ಸಮಯ ಹಾಲಿನ ಉತ್ಪನ್ನಗಳನ್ನು ತೆಗೆದುಕೊಳ್ಳದೇ ನಿಮ್ಮ ರೋಗ ಲಕ್ಷಣಗಳು ಕಡಿಮೆಯಾಗಿದೆಯೇ ಅಥವಾ ಹೆಚ್ಚಾಗಿದೆಯೇ ಎಂದು ಪರೀಕ್ಷಿಸಬಹುದು. ಹಾಲಿನ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳ ಆರೋಗ್ಯಕ್ಕೆ ಇದು ಒಳ್ಳೆಯದು, ಯಾವುದಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯಿರಿ.

  • ಸಿಟ್ರಸ್‌ ಆಹಾರಗಳಿಂದ ಉರಿಯೂತ ಹೆಚ್ಚುವುದೇ?

    ಸಂಧಿವಾತ ಸಮಸ್ಯೆ ಇದ್ದರೆ ಸಿಟ್ರಸ್‌ ಆಹಾರಗಳನ್ನು ತಿನ್ನಬಾರದು, ಇದರಿಂದ ಉರಿಯೂತದ ಸಮಸ್ಯೆ ಹೆಚ್ಚಾಗುತ್ತದೆ ಎಂದೇ ಕೆಲವರು ಭಾವಿಸುತ್ತಾರೆ. ಆದರೆ ಅದು ತಪ್ಪು ಕಲ್ಪನೆಯಾಗಿದೆ. ವಿಟಮಿನ್‌ ಸಿ ಇರುವ ಆಹಾರಗಳನ್ನು ಸಂಧಿವಾತ ಇರುವವರು ಸೇವಿಸುವುದು ಒಳ್ಳೆಯದು. ವೈದ್ಯರು ಸಂಧಿವಾತಕ್ಕೆ ಚಿಕಿತ್ಸೆ ನೀಡುವುದರ ಜೊತೆಗೆ ದ್ರಾಕ್ಷಿ ಜ್ಯೂಸ್‌ ತೆಗೆದುಕೊಳ್ಳುವಂತೆಯೂ ಸುಚಿಸುತ್ತಾರೆ.

English summary

Osteoarthritis diet: List of foods to eat and avoid in Kannada

Osteoarthritis diet: List of foods to eat and avoid in Kannada, read on...
X
Desktop Bottom Promotion