For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿಯೇ ಈ ವ್ಯಾಯಾಮವನ್ನು ಮಾಡೋದ್ರಿಂದ ತೋಳಿನಲ್ಲಿರುವ ಬೊಜ್ಜನ್ನು ಕರಗಿಸಬಹುದು

|

ದೇಹದ ಯಾವುದೇ ಬಾಗದಲ್ಲಿ ಕೊಬ್ಬು ಸಂಗ್ರಹಣೆಯಾಗುವುದನ್ನು ಯಾರೂ ಇಷ್ಟಪಡುವುದಿಲ್ಲ. ಅದರಲ್ಲೂ ಕೈಯಲ್ಲಿ ಕೊಬ್ಬು ಶೇಖರಣೆಯಾದರಂತೂ ಅದರ ಕಷ್ಟ ಹೇಳತಿರದು. ಏಕೆಂದರೆ ಇಡೀ ದೇಹ ತೆಳ್ಳಗಿದ್ದು, ಕೈ ತೋಳಷ್ಟೇ ಬೊಜ್ಜಿನಿಂದ ತುಂಬಿಕೊಂಡಿದ್ದರೆ, ಯಾರಿಂದಲೂ ಸಹಿಸಲು ಆಗುವುದಿಲ್ಲ. ಆದ್ದರಿಂದ ಇಂತಹ ಕೊಬ್ಬನ್ನು ಮನೆಯಲ್ಲಿಯೇ ವ್ಯಾಯಾಮ ಮಾಡಿ ಕಳೆದುಕೊಳ್ಳಬಹುದು. ಹಾಗಾದರೆ ಬನ್ನಿ, ಕೈ ತೋಳಿನಲ್ಲಿ ಸಂಗ್ರಹವಾಗುವ ಕೊಬ್ಬುಗಳ ಬಗ್ಗೆ ಮತ್ತಷ್ಟು ನೋಡಿಕೊಂಡು ಬರೋಣ.

ಕೈ ತೋಳಿನಲ್ಲಿ ಕೊಬ್ಬನ್ನು ಹೊಂದಿದ್ದಾರೆಂದು ತಿಳಿಯುವುದು ಹೇಗೆ?:

ಕೈ ತೋಳಿನಲ್ಲಿ ಕೊಬ್ಬನ್ನು ಹೊಂದಿದ್ದಾರೆಂದು ತಿಳಿಯುವುದು ಹೇಗೆ?:

ವಾಸ್ತವವೆಂದರೆ ಒಬ್ಬ ವ್ಯಕ್ತಿಯು ತೋಳಿನ ಕೊಬ್ಬನ್ನು ಹೊಂದಿದ್ದರೆ, ಸಾಮಾನ್ಯವಾಗಿ ದೇಹದಾದ್ಯಂತ ಕೊಬ್ಬನ್ನು ಹೊಂದಿರುತ್ತಾನೆ. ನಿಮ್ಮ ತೋಳಿನ ಸುತ್ತಲೂ ಕೊಬ್ಬು ಸಂಗ್ರಹವಾಗಿರುವುದು ಗೋಚರಿಸುವುದು ಬಹಳ ಕಡಿಮೆ. ಆದರೆ ತೋಳಿನ ಸುತ್ತಲೂ ಆವರಿಸಿರುತ್ತದೆ. ನಿಮ್ಮ ದೇಹದ ಕೊಬ್ಬಿಗಿಂತ ಸುಮಾರು ಮೂವತ್ತು ಪ್ರತಿಶತಕ್ಕಿಂತ ಹೆಚ್ಚು ಏನಾದರೂ ಕೈಯಲ್ಲಿ ಹೊಂದಿದ್ದರೆ ಮಾತ್ರ ಕೈಯಲ್ಲಿನ ಕೊಬ್ಬು ಅದು ಗೋಚರವಾಗುವುದು.

ತೋಳಿನ ಕೊಬ್ಬನ್ನು ಕರಗಿಸಲು ಮನೆಯಲ್ಲಿ ವರ್ಕೌಟ್ ಮಾಡಬಹುದೇ:

ತೋಳಿನ ಕೊಬ್ಬನ್ನು ಕರಗಿಸಲು ಮನೆಯಲ್ಲಿ ವರ್ಕೌಟ್ ಮಾಡಬಹುದೇ:

ನಿಮಗೆಲ್ಲಾ ತಿಳಿದಿರುವಂತೆ ಕೈಯಲ್ಲಿರುವ ಕೊಬ್ಬು ಕರಗಿಸಲು ಸ್ಪಾಟ್ ರಿಡಕ್ಷನ್ ಮಾಡಬಹುದು ಎಂಬ ಮಾತಿದೆ. ಆದರೆ ವರ್ಕೌಟ್‌ಗಳ ಸಹಾಯದಿಂದ ಸ್ಪಾಟ್ ರಿಡಕ್ಷನ್ ಮಾಡಲು ಆಗುವುದಿಲ್ಲ. ನಿಮ್ಮ ಕೈಗಳ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಲು ಸಾಕಷ್ಟು ಯೋಗ ಅಥವಾ ವ್ಯಾಯಾಮ ಮಾಡಿದರೆ, ನಿಮ್ಮ ಕೈಗಳಿಂದ ಮಾತ್ರವಲ್ಲ, ದೇಹದಾದ್ಯಂತ ಇರುವ ಕೊಬ್ಬನ್ನು ಕಡಿಮೆ ಮಾಡಬಹುದು. ಆದ್ದರಿಂದ ಕೇವಲ ಕೈ ಕೊಬ್ಬನ್ನು ಮಾತ್ರ ಕರಗಿಸಿಕೊಳ್ಳಲು ಜಿಮ್ ಹೋಗಬೇಡಿ. ಇಡೀ ದೇಹದ ಕೊಬ್ಬು ಕರಗಿಸುವ ವ್ಯಾಯಾಮಗಳನ್ನು ಮಾಡಿ, ಇದರಿಂದ ದೇಹದ ಜೊತೆಗೆ ನಿಮ್ಮ ಕೈ-ಕಾಲಿನಲ್ಲಿರುವ ಕೊಬ್ಬುಗಳನ್ನು ಆರಾಮವಾಗಿ ಕರಿಗಸಬಹುದು.

ಯಾವ ಹೋಮ್ ವರ್ಕೌಟ್‌ಗಳನ್ನು ಮಾಡಬಹುದು?

ಯಾವ ಹೋಮ್ ವರ್ಕೌಟ್‌ಗಳನ್ನು ಮಾಡಬಹುದು?

ಮನೆಯಲ್ಲಿಯೇ ಕೈಯಲ್ಲಿರುವ ಕೊಬ್ಬನ್ನು ಕಡಿಮೆ ಮಾಡಲು ಸೂರ್ಯ ನಮಸ್ಕಾರಗಳನ್ನು ಮಾಡಬಹುದು ಅದು ನಿಮಗೆ ಉತ್ತಮ ಮತ್ತು ಬಲವಾದ ತೋಳುಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ಕೊಬ್ಬನ್ನು ತಡೆಯಲು ಸೇವಿಸಬಾರದ ಆಹಾರಗಳು:

ಕೊಬ್ಬನ್ನು ತಡೆಯಲು ಸೇವಿಸಬಾರದ ಆಹಾರಗಳು:

ನಿಮ್ಮ ದೇಹದ ಒಳಗೆ ಕೊಬ್ಬು ಸಂಗ್ರಹವಾಗಬಾರದೆಂದರೆ, ನೀವು ಸೇವಿಸುವ ಆಹಾರದ ಬಗ್ಗೆ ಜಾಗೃತಿ ವಹಿಸಬೇಕು. ಅದಕ್ಕಾಗಿ ಕೊಬ್ಬಿನಾಂಶ ಹೆಚ್ಚಿರುವ ಆಹಾರಗಳಿಂದ ದೂರವಿರಬೇಕು. ಸಿಹಿತಿಂಡಿ ಮತ್ತು ಎಣ್ಣೆಯುಕ್ತ ಆಹಾರಗಳನ್ನು ತಪ್ಪಿಸುವುದು ಒಳ್ಳೆಯದು. ಕರಿದ ಪದಾರ್ಥಗಳು ಕೊಬ್ಬು ಸಂಗ್ರಹಕ್ಕೆ ಕಾರಣವಾಗುವುದು.

ಆರೋಗ್ಯಕರ ತೋಳಿಗಾಗಿ ಮಾಡಬೇಕಾದ ಕೆಲಸಗಳು:

ಆರೋಗ್ಯಕರ ತೋಳಿಗಾಗಿ ಮಾಡಬೇಕಾದ ಕೆಲಸಗಳು:

ಸಾಕಷ್ಟು ವ್ಯಾಯಾಮ, ಪುಷ್ ಅಪ್ ಮಾಡಬಹುದು. ಜತೆಗೆ ಸ್ಟ್ರೆಚಿಂಗ್ ನಿಂದಲೂ ಅನೇಕ ಪ್ರಯೋಜನಗಳಿವೆ. ನಿಮ್ಮ ತೋಳುಗಳು ಆರೋಗ್ಯಕರವಾಗಿರಬೇಕಾದರೆ, ಭುಜಗಳನ್ನು ಆರೋಗ್ಯಕರವಾಗಿಡಬೇಕು. ಏಕೆಂದರೆ ಅವು ಒಂದಕ್ಕೊಂದು ಸಂಬಂಧ ಹೊಂದಿವೆ. ಉತ್ತಮ ಪ್ರಮಾಣದ ನೀರನ್ನು ಕುಡಿಯಿರಿ. ನಿಮ್ಮ ಸ್ನಾಯುಗಳನ್ನು ಆರೋಗ್ಯವಾಗಿಡಲು ಸಾಕಷ್ಟು ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡಿ. ಉಸಿರಾಟದ ವ್ಯಾಯಾಮವು ನಿಮ್ಮನ್ನು ಹೆಚ್ಚು ಸಡಿಲವಾಗಿಸುವುದು.

ಮಾಡಬಾರದ ವಿಚಾರಗಳು:

ಮಾಡಬಾರದ ವಿಚಾರಗಳು:

ಯಾವುದೇ ರೀತಿಯ ಸ್ನಾಯುವಿನ ಆಯಾಸವನ್ನು ತಪ್ಪಿಸಿ. ಸರಿಯಾಗಿ ಉಸಿರಾಡುವಂತೆ ನೋಡಿಕೊಳ್ಳಿ. ಏಕೆಂದರೆ ಸರಿಯಾಗಿ ಉಸಿರಾಡದಿದ್ದಾಗ, ನಮ್ಮ ಸ್ನಾಯುಗಳಲ್ಲಿ ಮೈಯೋಫಾಸಿಯಲ್ ಗಂಟುಗಳು ರೂಪುಗೊಳ್ಳುತ್ತವೆ. ಇದು ತುಂಬಾ ಹಾನಿಕಾರಕವಲ್ಲದಿದ್ದರೂ, ಸ್ನಾಯುಗಳಲ್ಲಿ ಕಿರಿಕಿರಿ ಮತ್ತು ನೋವನ್ನು ಉಂಟುಮಾಡುತ್ತವೆ ಜೊತೆಗೆ ನಿಮ್ಮ ಚಲನೆಯನ್ನು ಸಹ ಮಿತಿಗೊಳಿಸಬಹುದು.

English summary

Home Workout Tips to Lose Arm fat in Kannada

Here we talking about Home workout tips to lose arm fat in kannada, read on
Story first published: Saturday, September 11, 2021, 17:38 [IST]
X
Desktop Bottom Promotion