For Quick Alerts
ALLOW NOTIFICATIONS  
For Daily Alerts

ಮೈ ತೂಕ ಕಡಿಮೆ ಮಾಡುವ ಆಹಾರಗಳಿವು

|

ಮೈ ಕೊಬ್ಬು ಕರಗಬೇಕೆಂದು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ತಮ್ಮ ಇಷ್ಟದ ಉಡುಪು ನೋಡುವಾಗ ಅಯ್ಯೋ ಸ್ವಲ್ಪ ತೂಕ ಕಮ್ಮಿಯಾದರೆ ಆ ಡ್ರೆಸ್‌ ಸರಿಯಾಗುತ್ತಿತ್ತು ಎಂದು ಅನಿಸದೆ ಇರಲ್ಲ.

ಕೆಲವರಿಗೆ ಆಹಾರದ ಕ್ರಮದಲ್ಲಿ ಬದಲಾವಣೆ ತಂದು ಸ್ವಲ್ಪ ವ್ಯಾಯಾಮ ಮಾಡಿದರೆ ಸಾಕು ಹೆಚ್ಚಾದ ಮೈ ತೂಕ ಬೇಗನೆ ಕಡಿಮೆಯಾಗುವುದು, ಇನ್ನು ಕೆಲವರಿಗೆ ಮಾತ್ರ ಎಷ್ಟೇ ಪ್ರಯತ್ನ ಪಟ್ಟರೂ ಅರ್ಧ ಕೆಜಿ ಕಡಿಮೆಯಾಗಲು ತುಂಬಾ ದಿನ ತೆಗೆದುಕೊಳ್ಳುತ್ತದೆ.

ಮೈ ತೂಕ ಬೇಗನೆ ಕರಗುವುದಿಲ್ಲ ಎಂದು ತಿನ್ನುವುದನ್ನೇ ಬಿಡುತ್ತಾರೆ, ಆದರೆ ಆ ರೀತಿ ಮಾಡಿದರೆ ತೂಕ ಕಡಿಮೆಯಾಗುವುದರ ಜೊತೆಗೆ ಕಾಯಿಲೆ ಬೀಳುತ್ತಾರೆ. ತೂಕ ಕಡಿಮೆಯಾಗುವುದಾದರೆ ಆರೋಗ್ಯಕರವಾಗಿ ತೂಕ ಕಡಿಮೆಯಾಗಬೇಕು. ಕೆಲವೊಂದು ಆಹಾರಗಳು ಬಾಯಿಗೆ ರುಚಿ ಮಾತ್ರವಲ್ಲ ಮೈ ಕೊಬ್ಬನ್ನು ಕೂಡ ಕರಗಿಸುತ್ತದೆ. ನಾವಿಲ್ಲಿ ಮೈಕೊಬ್ಬು ಕರಗಿಸುವ ಕೆಲವೊಂದು ಆಹಾರಗಳ ಬಗ್ಗೆ ಹೇಳಿದ್ದೇವೆ ನೋಡಿ.

ನಟ್ಸ್: ನಟ್ಸ್ ಅತ್ಯಂತ ಪೋಷಕಾಂಶವಿರುವ ಆಹಾರವಾಗಿದೆ. ಇದರಲ್ಲಿ ನೈಸರ್ಗಿಕವಾಗಿ ಪ್ರೊಟೀನ್ ಹಾಗೂ ಒಳ್ಳೆಯ ಕೊಬ್ಬಿನಂಶವಿದ್ದು ಬಾಯಿಗೆ ರುಚಿ, ಹಸಿವು ನಿಯಂತ್ರಿಸುತ್ತದೆ, ಆರೋಗ್ಯ ಹಾಗೂ ತ್ವಚೆ ಸೌಂದರ್ಯಕ್ಕೂ ತುಂಬಾನೇ ಒಳ್ಳೆಯದು.

ನಟ್ಸ್ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂಬ ಭಯ ಇರಲ್ಲ, ಸ್ನಾಕ್ಸ್‌ಗೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನುವ ಬದಲಿಗೆ ನಟ್ಸ್ ತಿಂದರೆ ಒಳ್ಳೆಯದು.

ಇದರಲ್ಲಿರುವ ಒಮೆಗಾ 3 ಕೊಬ್ಬಿನಂಶ ಮೂಳೆ ಕ್ಯಾಲ್ಸಿಯಂ ಹೀರಿಕೊಳ್ಳುವಂತೆ ಮಾಡುತ್ತದೆ.

 ಮೀನು

ಮೀನು

ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿರುವ ಆರೋಗ್ಯಕರ ಕೊಬ್ಬಿನ ಆಮ್ಲ ಇತರ ಆಹಾರಗಳಲ್ಲಿ ಸಿಗುವುದು ಕಷ್ಟ. ಇದು ಚಯಪಚಯ ಕ್ರಿಯೆಗೆ ತುಂಬಾನೇ ಒಳ್ಳೆಯದು. ಮೀನನ್ನು ಫ್ರೈ ಮಾಡಿ ತಿನ್ನುವುದರಿಂದ ಮೈ ತೂಕ ಹೆಚ್ಚುವುದು, ಬದಲಿಗೆ ಸಾರು ಅಥವಾ ಗ್ರಿಲ್ಡ್ ಮಾಡಿ ತಿನ್ನಿ.

ಮೊಸರು/ಯೋಗರ್ಟ್

ಮೊಸರು/ಯೋಗರ್ಟ್

ಮೊಸರು , ಯೋಗರ್ಟ್ ಇವೆಲ್ಲಾ ಆರೋಗ್ಯಕರವಾದ ಕೊಬ್ಬಿನಂಶದ ಆಹಾರವಾಗಿದೆ. ಗ್ರೀಕ್‌ ಯೋಗರ್ಟ್ ಆಗಿರಲಿ, ಪ್ಲೇನ್ ಯೋಗರ್ಟ್ ಆಗಿರಲಿ ಎರಡೂ ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ಅತ್ಯಧಿಕ ವಿಟಮಿನ್ಸ್ ಹಾಗೂ ಖನಿಜಾಂಶ, ಪ್ರೋಬಯೋಟಿಕ್‌ ಅಂಶವಿದ್ದು ಇತರ ಆಹಾರ ತುಂಬಾ ತಿನ್ನುವುದು ನಿಯಂತ್ರಿಸಲೂ ಸಹಕಾರಿ.

 ಮೊಟ್ಟೆ

ಮೊಟ್ಟೆ

ಪ್ರೊಟೀನ್ ತೂಕ ಇಳಿಕೆಗೆ ತುಂಬಾನೇ ಸಹಾಯ ಮಾಡುತ್ತದೆ. ಪ್ರೊಟೀನ್ ಸ್ನಾಯುಗಳು ಬಲವಾಗಲು ಸಹಾಯ ಮಾಡುತ್ತದೆ. ಪ್ರತೀ ಮೊಟ್ಟೆಯಲ್ಲಿ 6 ಗ್ರಾಂ ಪ್ರೊಟೀನ್ ಇರುತ್ತದೆ.

 ಅಗಸೆ ಬೀಜ

ಅಗಸೆ ಬೀಜ

ಅಗಸೆ ಬೀಜ ತೂಕ ಇಳಿಕೆಗೆ ತುಂಬಾನೇ ಸಹಕಾರಿ. ಮಹಿಳೆಯರು ಇದನ್ನು ತಿನ್ನುವುದರಿಂದ ತುಂಬಾನೇ ಒಳ್ಳೆಯದು. ಇದನ್ನು ಆಹಾರಕ್ರಮದಲ್ಲಿ ಸೇರಿಸಿದರೆ ತೂಕ ಇಳಿಕೆಯಾಗುವುದು.

 ತೆಂಗಿನೆಣ್ಣೆ

ತೆಂಗಿನೆಣ್ಣೆ

ಕೆಲವರು ತೆಂಗಿನೆಣ್ಣೆ ಕೊಲೆಸ್ಟ್ರಾಲ್ ಎಂದು ದೂರ ಮಾಡುತ್ತಾರೆ. ಆದರೆ ತೆಂಗಿನೆಣ್ಣೆ ಗತುಂಬಾನೇ ಒಳ್ಳೆಯದು. ಇದನ್ನು ಅಡುಗೆಯಲ್ಲಿ ಬಳಸುವುದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುವುದು ತಡೆಗಟ್ಟಲು ಸಹಕಾರಿ ಎಂಬುವುದನ್ನು ವಿಜ್ಞಾನಿಗಳು ಕೂಡ ಹೇಳುತ್ತಾರೆ.

 ಗ್ರೀನ್ ಟೀ

ಗ್ರೀನ್ ಟೀ

ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಗ್ರೀನ್‌ ಟೀ ಕುಡಿದರೆ ಅದು ದೇಹವನ್ನು ಡಿಟಾಕ್ಸ್ ಮಾಡುತ್ತದೆ ಅಲ್ಲದೆ ದೇಹದಲ್ಲಿ ಕೊಬ್ಬು ಸಂಗ್ರಹವಾಗದಂತೆ ತಡೆಗಟ್ಟುತ್ತದೆ. ಗ್ರೀನ್‌ ಟೀ ತೂಕ ಇಳಿಕೆಗೆ ಸಹಕಾರಿ ಎಂಬುವುದನ್ನು ಸಂಶೋಧನೆಗಳು ಕೂಡ ದೃಢಪಡಿಸಿವೆ.

ಈ ಕೊಬ್ಬಿನ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಹೇಗೆ?

ಈ ಕೊಬ್ಬಿನ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಹೇಗೆ?

* ನೀವು ಈ ಎಲ್ಲಾ ಆಹಾರವನ್ನು ನಿಮ್ಮ ದಿನ ನಿತ್ಯದ ಆಹಾರಕ್ರಮದಲ್ಲಿ ಬಳಸಬಹುದು. ಬೆಳಗ್ಗೆ ಎದ್ದ ತಕ್ಷಣ ಗ್ರೀನ್ ಟೀ ಕುಡಿಯಿರಿ, ಆಹಾರದಲ್ಲಿ ಮೀನು, ಮೊಟ್ಟೆ, ಅಗಸೆ ಬೀಜ ಇವುಗಳನ್ನು ಸೇರಿಸಿ. ಸ್ನಾಕ್ಸ್‌ಗೆ ನಟ್ಸ್ ಬಳಸಿ.

ಇವುಗಳ ಜೊತೆಗೆ ಅರ್ಧ ಗಂಟೆ ವ್ಯಾಯಾಮ ಮಾಡಿ. ಇಷ್ಟು ಮಾಡಿದರೆ ಸಾಕು ನೀವು ಬಯಸಿದ ಆಕರ್ಷಿಕ ಮೈಕಟ್ಟು ನಿಮ್ಮದಾಗುವುದು.

English summary

Fat-Burning Foods to Eat for Weight Loss

Here are fat burning foods that you can include in your diet to loose weight...
Story first published: Tuesday, November 17, 2020, 10:55 [IST]
X
Desktop Bottom Promotion