For Quick Alerts
ALLOW NOTIFICATIONS  
For Daily Alerts

ಸೊಂಟ, ಬೆನ್ನಿನ ಬೊಜ್ಜು ಕರಗಿಸಿ ಸೆಕ್ಸಿಯಾಗಿ ಕಾಣಬೇಕೆ? ಈ ವ್ಯಾಯಾಮ ಮಾಡಿ

|

ನಮ್ಮ ದೈಹಿಕ ಆರೋಗ್ಯದ ವಿಚಾರಕ್ಕೆ ಬರುವುದಾದರೆ ಇಂದು ನಾವು ನಮ್ಮ ಜೀವನ ಶೈಲಿಗಿಂತ ನಮ್ಮ ಆರೋಗ್ಯ ಸಮಸ್ಯೆಗಳ ಕಡೆಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಏಕೆಂದರೆ ಪ್ರತಿ ದಿನ ನಾವು ಆಹಾರ ಸೇವನೆ ಮಾಡುತ್ತಿರುವ ಸಂದರ್ಭದಲ್ಲಿ ಮಾಡುವ ಎಡವಟ್ಟುಗಳಿಂದ ಇಂದು ಬಹಳ ಚಿಕ್ಕ ವಯಸ್ಸಿಗೆ ನಮಗೆ ಬಿಪಿ, ಶುಗರ್ ಅಷ್ಟೇ ಏಕೆ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಕೂಡ ಹೆಚ್ಚಾಗುತ್ತಿದೆ.

ಹೀಗಾಗಿಯೇ ಹಿಂದಿನ ಕಾಲದಲ್ಲಿ ನೂರಾರು ವರ್ಷಗಳು ಬದುಕುತ್ತಿದ್ದ ಮನುಷ್ಯ ಇಂದು ಕೇವಲ ಅರ್ಧ ವಯಸ್ಸಿಗೆ ಬದುಕು ಸಾಕೆಂಬ ತೀರ್ಮಾನಕ್ಕೆ ಬಂದು ಬಿಡುತ್ತಾನೆ ಅಥವಾ ಬದುಕೇ ಆತನನ್ನು ಹಲವು ಕಾಯಿಲೆಗಳ ಸಮಜಾಯಿಷಿ ಕೊಟ್ಟು ಮೇಲಕ್ಕೆ ಕಳುಹಿಸುತ್ತದೆ.

ನಮ್ಮ ದೇಹದಲ್ಲಿ ಕೊಬ್ಬು ಹೇಗೆ ಶೇಖರಣೆಯಾಗುತ್ತದೆ?

ನಮ್ಮ ದೇಹದಲ್ಲಿ ಕೊಬ್ಬು ಹೇಗೆ ಶೇಖರಣೆಯಾಗುತ್ತದೆ?

ನಮಗೆ ಎದುರಾಗುವ ಆರೋಗ್ಯದ ಸಮಸ್ಯೆಗಳಲ್ಲಿ ಮುಕ್ಕಾಲು ಪಾಲು ನಾವು ಸೇವಿಸುವ ಆಹಾರಗಳಲ್ಲಿ ಸಮಸ್ಯೆ ಅಡಗಿದೆ. ಕೆಟ್ಟ ಆಹಾರ ಅಭ್ಯಾಸದಿಂದ ಕೆಲವು ಕಾಯಿಲೆಗಳು ಉಂಟಾದರೆ ಇನ್ನೊಂದು ಪ್ರಕಾರದಲ್ಲಿ ನಾವು ಪ್ರತಿ ದಿನ ಆಹಾರ ಸೇವನೆ ಮಾಡುವ ಸಂದರ್ಭದಲ್ಲಿ ಒಂದು ವೇಳೆ ನಮ್ಮ ದೇಹ ತನಗೆ ಅಗತ್ಯವಿರುವ ಪೌಷ್ಟಿಕಾಂಶಗಳಿಗಿಂತ ಹೆಚ್ಚಿನ ಅಂಶಗಳನ್ನು ಸ್ವೀಕರಿಸಿದರೆ ಅವುಗಳನ್ನು ಶಕ್ತಿ ರೂಪದಲ್ಲಿ ಮುಂದೆ ಎಂದಾದರೂ ಉಪಯೋಗಿಸಿಕೊಳ್ಳಲು ನಮ್ಮ ದೇಹದಲ್ಲಿ ಕೊಬ್ಬಿನ ಅಂಶದ ರೀತಿ ಶೇಖರಣೆ ಮಾಡುತ್ತದೆ. ಇದು ನಮ್ಮ ದೇಹದ ಯಾವುದೇ ಭಾಗದಲ್ಲಿ ಶೇಖರಣೆ ಆಗಬಹುದು. ಪುರುಷರಿಗೆ ಹೊಟ್ಟೆಯ ಭಾಗದಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗಿ ಕಂಡು ಬಂದರೆ ಮಹಿಳೆಯರಿಗೆ ವಿಶೇಷವಾಗಿ ತೊಡೆಯ ಭಾಗದಲ್ಲಿ ಸೊಂಟದ ಹಿಂಬದಿಯಲ್ಲಿ ಶೇಖರಣೆಯಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.

ಸಂಶೋಧನೆಗಳ ಮೂಲಗಳು ಹೇಳುವ ಪ್ರಕಾರ ಮನುಷ್ಯನ ದೇಹದಲ್ಲಿ ಕೊಬ್ಬಿನ ಅಂಶ ಶೇಖರಣೆಯಾಗುವ ಸಂಪೂರ್ಣವಾಗಿ ಅನುವಂಶೀಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಈಗಿನ ಜೀವನಶೈಲಿ ಈ ಸತ್ಯವನ್ನೇ ಮೀರಿಸುವಂತಿದೆ. ಏಕೆಂದರೆ ನಗರ ಪ್ರದೇಶಗಳಲ್ಲಿ ವಾಸ ಮಾಡುವ ಪ್ರತಿಯೊಬ್ಬರಿಗೂ ಎಂದು ಅಲ್ಪ ಪ್ರಮಾಣದಲ್ಲಾದರೂ ದೇಹದಲ್ಲಿ ಕೊಲೆಸ್ಟ್ರಾಲ್ ಅಥವಾ ಬೊಜ್ಜಿನ ಅಂಶ ಇದ್ದೇ ಇರುತ್ತದೆ. ಹಾಗಾಗಿ ಈ ಸಮಸ್ಯೆಯಿಂದ ತಕ್ಕ ಮಟ್ಟಿಗೆ ಪರಿಹಾರ ಕಾಣಬೇಕಾದರೆ ನಾವು ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಂಡು ನಮ್ಮ ದೇಹಕ್ಕೆ ಸ್ವಲ್ಪ ಕಸರತ್ತು ನೀಡುವುದು ಒಳ್ಳೆಯದು.

ವಿಶೇಷವಾಗಿ ಮಹಿಳೆಯರು ತಮ್ಮ ಸೌಂದರ್ಯದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ವ್ಯಾಯಾಮಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು.

ನಿಮ್ಮ ಸೊಂಟದ ಭಾಗದ ಬೊಜ್ಜಿನ ಅಂಶವನ್ನು ಕರಗಿಸಲು ಅನುಕೂಲವಾಗುವಂತಹ ವ್ಯಾಯಾಮಗಳು ಈ ಕೆಳಗಿನಂತಿವೆ.

1 ಕಾಲನ್ನು ಪಕ್ಕಕ್ಕೆ ಲಿಫ್ಟ್ ಮಾಡುವ ವ್ಯಾಯಾಮ : - (SIDE LEG LIFT)

1 ಕಾಲನ್ನು ಪಕ್ಕಕ್ಕೆ ಲಿಫ್ಟ್ ಮಾಡುವ ವ್ಯಾಯಾಮ : - (SIDE LEG LIFT)

ಈ ಅಭ್ಯಾಸದಿಂದ ಸೊಂಟದ ಹಿಂಬದಿಯ ಬೊಜ್ಜಿನ ಪ್ರಮಾಣ ಕಡಿಮೆಯಾಗುವುದು ಮಾತ್ರವಲ್ಲದೆ ಸೊಂಟದ ಭಾಗದಲ್ಲಿರುವ ಮತ್ತು ತೊಡೆಯ ಭಾಗದ ಮಾಂಸ - ಖಂಡಗಳು ಸದೃಢವಾಗುತ್ತವೆ. ಸಂಶೋಧನೆಗಳು ಹೇಳುವ ಪ್ರಕಾರ ನಮ್ಮ ಬೆನ್ನಿನ ಭಾಗದ ಬೆನ್ನುಹುರಿ ಮತ್ತು ಕಾಲುಗಳ ಭಾಗದ ಮಾಂಸ - ಖಂಡಗಳಿಗೆ ನರಗಳ ಮೂಲಕ ಸಂಬಂಧವಿರುತ್ತದೆ. ಹಾಗಾಗಿ ಈ ವ್ಯಾಯಾಮದಿಂದ ನಮ್ಮ ಬೆನ್ನುಹುರಿಯ ಮಾಂಸ - ಖಂಡಗಳು ಕೂಡ ಬಲಗೊಳ್ಳುತ್ತವೆ.

ಈ ವ್ಯಾಯಾಮವನ್ನು ಮಾಡುವ ಬಗೆ : -

1. ಮೊದಲಿಗೆ ಒಂದು ಚಾಪೆಯ ಮೇಲೆ ನೇರವಾಗಿ ಅಂಗಾತ ಮಲಗಿಕೊಳ್ಳಿ. ನಿಮ್ಮ ಬಲಗೈಯನ್ನು ನಿಮ್ಮ ತಲೆಯ ಹಿಂಭಾಗದಲ್ಲಿ ಬೆಂಬಲಕ್ಕಾಗಿ ಇಟ್ಟುಕೊಳ್ಳಬಹುದು ಅಥವಾ ಬೇಡವೆಂದರೆ ಹಾಗೇ ನಿಮ್ಮ ಕಾಲಿನ ಮೇಲೆ ಇಟ್ಟುಕೊಳ್ಳಬಹುದು.

2. ಈಗ ನಿಮ್ಮ ಎಡಗಾಲನ್ನು ತೆಗೆದು ನಿಮ್ಮ ಬಲಗಾಲಿನ ಮೇಲೆ ಹಾಕಿ.

3. ಈಗ ನೀವು ನಿಧಾನವಾಗಿ ಉಸಿರನ್ನು ಹೊರಗೆ ಬಿಡುತ್ತಾ ನಿಮ್ಮ ಎರಡೂ ಕಾಲುಗಳನ್ನು ನೆಲದ ಮೇಲಿಂದ ಸುಮಾರು ಮೂರರಿಂದ ನಾಲ್ಕು ಇಂಚುಗಳಷ್ಟು ಮೇಲೆತ್ತಿ.

4.ನೀವು ಉಸಿರನ್ನು ಒಳಗೆ ತೆಗೆದುಕೊಳ್ಳುವಾಗ ನಿಮ್ಮ ಎರಡೂ ಕಾಲುಗಳನ್ನು ಮತ್ತೆ ನಿಧಾನವಾಗಿ ಚಾಪೆ ಕಡೆಗೆ ಅಂದರೆ ನೆಲದ ಮೇಲೆ ಇಡಿ. ಈ ಸಮಯದಲ್ಲಿ ನಿಮ್ಮ ಪಾದ ನೆಲದ ಮೇಲಿಂದ ಸ್ವಲ್ಪ ಮೇಲ್ಭಾಗದಲ್ಲಿ ಇರಲಿ.

5. ಸುಮಾರು 6 ರಿಂದ 8 ಬಾರಿ ಈ ಅಭ್ಯಾಸವನ್ನು ಒಮ್ಮೆಲೇ ಮಾಡಿ.

6 ನಿಮ್ಮ ಎಡಬದಿಯ ಕಾಲನ್ನು ಬದಲಿಸಿ ಮತ್ತೆ ಮೇಲಿನ ಎಲ್ಲಾ ಹಂತಗಳಲ್ಲಿ ವ್ಯಾಯಾಮವನ್ನು ಮುಂದುವರಿಸಿ.

2. ಹಸು ಅಥವಾ ಬೆಕ್ಕಿನ ಭಂಗಿ : - (CAT-COW STRETCH)

2. ಹಸು ಅಥವಾ ಬೆಕ್ಕಿನ ಭಂಗಿ : - (CAT-COW STRETCH)

ನಿಮ್ಮ ಸೊಂಟದ ಹಿಂಬದಿಯಲ್ಲಿ ವಿಪರೀತ ಕೊಬ್ಬಿನ ಅಂಶ ಶೇಖರಣೆಯಾಗಿ ನಿಮ್ಮ ದಿನ ನಿತ್ಯದ ಕಾರ್ಯ ಚಟುವಟಿಕೆಗಳನ್ನು ಮಾಡಿಕೊಳ್ಳಲು ನಿಮಗೆ ಕಷ್ಟವಾಗುತ್ತಿದೆ ಎನಿಸಿದರೆ ಈ ವ್ಯಾಯಾಮ ನೀವು ಖಂಡಿತ ಕೈ ಬಿಡುವಂತಿಲ್ಲ. ಏಕೆಂದರೆ ಈ ವ್ಯಾಯಾಮದಿಂದ ನಿಮ್ಮ ಬೊಜ್ಜಿನ ಅಂಶ ತುಂಬಾ ಪರಿಣಾಮಕಾರಿಯಾಗಿ ಕಡಿಮೆಯಾಗುವುದು ಮಾತ್ರವಲ್ಲದೆ ನಿಮ್ಮ ದೇಹಕ್ಕೆ ಒಂದು ಒಳ್ಳೆಯ ಆಕಾರ ಇದರ ಮೂಲಕ ಸಿಗುತ್ತದೆ.

ಈ ವ್ಯಾಯಾಮ ಮಾಡುವ ವಿಧಾನ : -

1. ಹೆಸರೇ ಹೇಳುವಂತೆ ಮೊದಲಿಗೆ ನೀವು ಈ ವ್ಯಾಯಾಮ ಪ್ರಾರಂಭ ಮಾಡುವುದಕ್ಕೆ ಮುಂಚೆ ಹಸು ಅಥವಾ ಬೆಕ್ಕಿನ ರೀತಿ ನಾಲ್ಕು ಕಾಲುಗಳಲ್ಲಿ ನಿಂತುಕೊಳ್ಳುವ ಹಾಗೆ ನಿಮ್ಮ ಎರಡು ಕೈಗಳನ್ನು ನಿಮ್ಮ ಭುಜಗಳಿಗೆ ನೇರವಾಗಿ ನೆಲದ ಮೇಲೆ ಇರಿಸಿ, ನಿಮ್ಮ ಸೊಂಟಕ್ಕೆ ಸರಿಸಮನಾಗಿ ನಿಮ್ಮ ಮಂಡಿಗಳನ್ನು ನೆಲದ ಮೇಲೆ ಇರಿಸಬೇಕು.

2. ಈಗ ನಿಧಾನವಾಗಿ ನೀವು ಉಸಿರು ಒಳಗೆ ತೆಗೆದುಕೊಳ್ಳುತ್ತಾ ನಿಮ್ಮ ಸೊಂಟದ ಭಾಗವನ್ನು ತಗ್ಗಿಸುತ್ತಾ ನಿಮ್ಮ ಗಲ್ಲ ಹಾಗೂ ನಿಮ್ಮ ಬೆನ್ನುಹುರಿಯ ಕೆಳ ಭಾಗವನ್ನು ಸಾಧ್ಯವಾದಷ್ಟು ಮೇಲೆತ್ತಲು ಪ್ರಯತ್ನಿಸಿ. ಬೇರೆಯವರಿಗೆ ನೀವು ನೋಡಲು ಆಂಗ್ಲಭಾಷೆಯ ' U ' ಅಕ್ಷರದಂತೆ ಕಾಣುವಿರಿ.

3. ನೀವು ಉಸಿರು ಹೊರಗೆ ಬಿಡುವ ಸಂದರ್ಭದಲ್ಲಿ ನಿಮ್ಮ ಸೊಂಟದ ಭಾಗವನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವ ಪ್ರಯತ್ನ ಮಾಡಿ.

4. ಈಗ ನಿಮ್ಮ ಗಲ್ಲವನ್ನು ನಿಧಾನವಾಗಿ ನಿಮ್ಮ ಎದೆಯ ಭಾಗದ ಕಡೆಗೆ ಬಾಗಿಸಿ.

5 . ಈ ವ್ಯಾಯಾಮದ ಅಭ್ಯಾಸವನ್ನು ಸುಮಾರು 4 ರಿಂದ 5 ಬಾರಿ ಪ್ರಯತ್ನ ಮಾಡಿ.

3. ಬೆನ್ನು ವಿಸ್ತರಿಸುವ ವ್ಯಾಯಾಮ : -

3. ಬೆನ್ನು ವಿಸ್ತರಿಸುವ ವ್ಯಾಯಾಮ : -

ಈ ವ್ಯಾಯಾಮದಿಂದ ನಿಮ್ಮ ಕೆಳಗಿನ, ಮಧ್ಯದ ಹಾಗೂ ಮೇಲಿನ ಬೆನ್ನಿನ ಭಾಗವನ್ನು ಸದೃಡಗೊಳಿಸುವ ಪ್ರಕ್ರಿಯೆ ನಡೆಯುತ್ತದೆ. ಅಷ್ಟೇ ಅಲ್ಲದೆ ಇದರಿಂದ ನಿಮ್ಮ ಬೆನ್ನುಹುರಿ ಕೂಡ ಮುಂಬರುವ ದಿನಗಳಲ್ಲಿ ನೋವಿನಿಂದ ಬಳಲುವುದು ತಪ್ಪುತ್ತದೆ.

ಈ ವ್ಯಾಯಾಮ ಮಾಡುವ ವಿಧಾನ : -

1. ಮೊದಲಿಗೆ ಒಂದು ಚಾಪೆಯ ಮೇಲೆ ನಿಮ್ಮ ಹೊಟ್ಟೆಯನ್ನು ಮತ್ತು ನಿಮ್ಮ ಮುಖದ ಭಾಗ ಚಾಪೆ ಕಡೆಗೆ ಇರುವಂತೆ ಮಲಗಿಕೊಳ್ಳಿ.

2. ನಿಮ್ಮ ಎರಡು ಕೈಗಳನ್ನು ನಿಮ್ಮ ದೇಹದ ಅಕ್ಕಪಕ್ಕ ಇಟ್ಟುಕೊಂಡು ಅಂಗೈಗಳು ನಿಮ್ಮ ತೊಡೆಗಳ ಮೇಲ್ಬಾಗದಲ್ಲಿರುವಂತೆ ಇರಿಸಿಕೊಳ್ಳಿ.

3. ಈಗ ನಿಮ್ಮ ಎರಡು ಕಾಲುಗಳನ್ನು ಒಟ್ಟಿಗೆ ಇಟ್ಟುಕೊಳ್ಳಿ. ನಿಮ್ಮ ಕಾಲುಗಳ ಬೆರಳುಗಳು ಮುಂದಕ್ಕೆ ಚಾಚಿರಲಿ.

4. ನಿಮ್ಮ ಹೊಟ್ಟೆಯ ಭಾಗವನ್ನು ಮತ್ತು ನಿಮ್ಮ ಬೆನ್ನಿನ ಭಾಗವನ್ನು ಸಾಧ್ಯವಾದಷ್ಟು ವಿಸ್ತರಿಸಿ.

5. ಈಗ ಉಸಿರನ್ನು ಹೊರಬಿಡುತ್ತಾ ಮತ್ತೆ ಮೊದಲಿನ ಸ್ಥಿತಿಗೆ ವಾಪಸ್ ಬನ್ನಿ.

6. ಇದೇ ರೀತಿ 6 ರಿಂದ 8 ಬಾರಿ ಮಾಡಿ.

ಈ ಮೇಲಿನ ವ್ಯಾಯಾಮಗಳು ಅತ್ಯಂತ ಪರಿಣಾಮಕಾರಿಯಾಗಿ ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡಿದ ಉದಾಹರಣೆಗಳಿವೆ. ಹಾಗಾಗಿ ನೀವು ಕೂಡ ಇವುಗಳನ್ನು ಪ್ರಯತ್ನ ಮಾಡುವ ಮೂಲಕ ಸುಂದರವಾದ ಹಾಗೂ ಸದೃಢವಾದ ದೇಹವನ್ನು ನಿಮ್ಮದಾಗಿಸಿಕೊಳ್ಳಬಹುದು.

English summary

Back Fat Exercises: Do these Exercises to Get Rid of All That Stubborn Fat

Back Fat Exercises: Do these Exercises to Get Rid of All That Stubborn Fat
X
Desktop Bottom Promotion