For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಲು ಬಿಸಿನೀರು, ಜೇನುತುಪ್ಪ- ಹಸಿ ಬೆಳ್ಳುಳ್ಳಿ

By Hemanth
|

ಟಿವಿ ಆನ್ ಮಾಡಿ ಯಾವುದೇ ಚಾನೆಲ್ ಹಾಕಿ ನೋಡಿದರೂ ನಿಮಗೆ ಹಲವಾರು ರೀತಿಯಲ್ಲಿ ದೇಹದ ತೂಕ ಕಡಿಮೆ ಮಾಡುವಂತಹ ಜಾಹೀರಾತುಗಳು ಕಂಡುಬರುವುದು. ಹಿಂದೆಲ್ಲಾ ಹೀಗೆ ಇರಲಿಲ್ಲ. ಈಗೀಗ ಇದು ಅತಿಯಾಗುತ್ತಿದೆ ಎಂದು ಅನಿಸುವುದುಂಟು. ಯಾಕೆ ಹೀಗೆ? ಇದಕ್ಕೆ ಪ್ರಮುಖ ಕಾರಣ ಜೀವನಶೈಲಿ. ಇಂದಿನ ಜೀವನಶೈಲಿ ಹಾಗೂ ಆಹಾರ ಕ್ರಮದಿಂದ ಪ್ರತಿಯೊಬ್ಬರ ದೇಹದಲ್ಲೂ ಬೊಜ್ಜು ಆವರಿಸಿಕೊಂಡಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಂಪೆನಿಗಳು ದೇಹದ ಬೊಜ್ಜು ಕರಗಿಸುವ ಸಲಕರಣೆಗಳು, ಪೌಡರ್ ಗಳು ಹಾಗೂ ಪೇಯಗಳನ್ನು ಮಾರುಕಟ್ಟೆಗೆ ತಂದಿದೆ.

ಆದರೆ ಇದು ಒಂದು ಸಲ ನಿಮ್ಮ ಬೊಜ್ಜು ಕಡಿಮೆ ಮಾಡಿದರೂ ಮತ್ತೆ ಹಾಗೆ ಬೆಳೆಯುವುದು ಖಚಿತ. ಇದಕ್ಕೆ ಬದಲು ನೀವು ಕೆಲವೊಂದು ನೈಸರ್ಗಿಕ ವಿಧಾನಗಳನ್ನು ಅನುಸರಿಸಿಕೊಂಡು ಹೋದರೆ ಅದರಿಂದ ಯಾವುದೇ ಅಡ್ಡಪರಿಣಾಮವು ಇಲ್ಲ ಮತ್ತು ದೇಹದ ಬೊಜ್ಜು ಕರಗಿಸಲು ಪರಿಣಾಮಕಾರಿಯಾಗಿರುವುದು. ಭಾರತೀಯರು ಹಿಂದಿನಿಂದಲೂ ಬೊಜ್ಜು ಕರಗಿಸಲು ಅನುಸರಿಸಿಕೊಂಡು ಬಂದಿರುವ ನೈಸರ್ಗಿಕ ವಿಧಾನವೆಂದರೆ ಜೇನುತುಪ್ಪ, ಬಿಸಿ ನೀರು ಮತ್ತು ಹಸಿ ಬೆಳ್ಳುಳ್ಳಿ. ಇದು ಯಾವ ರೀತಿಯಲ್ಲಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ನಿಮ್ಮ ದೇಹವನ್ನು ಫಿಟ್ ಆಗಿರಿಸುತ್ತದೆ ಎಂದು ಈ ಲೇಖನ ಮೂಲಕ ತಿಳಿಯಿರಿ.
ಆರೋಗ್ಯ ಟಿಪ್ಸ್: ಪ್ರೋಟೀನ್ ಶೇಕ್ ಸೇವಿಸಿ, ತೂಕ ಇಳಿಸಿ

ಬಿಸಿನೀರಿನ ಜತೆಗೆ ಜೇನುತುಪ್ಪ
ನೀರು ನಮ್ಮ ದೇಹಕ್ಕೆ ಅಗತ್ಯ. ಅದೇ ನೀರನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ತೂಕ ಕಳೆದುಕೊಳ್ಳಲು ಸಹಕಾರಿಯಾಗುವುದು. ಬಿಸಿ ನೀರು ಕುಡಿದರೆ ಇದಕ್ಕೆ ವೇಗ ಸಿಗುವುದು. ಬಿಸಿನೀರಿಗೆ ಜೇನುತುಪ್ಪ ಸೇರಿಸಿ ಕುಡಿದಾಗ ದೇಹದಲ್ಲಿರುವ ಹೆಚ್ಚುವರಿ ಕೊಬ್ಬು ಕರಗಿಸಲು ನೆರವಾಗುವುದು. ಇದು ಕೊಬ್ಬನ್ನು ಚಯಾಪಚಯವಾಗುವಂತೆ ಮಾಡುವುದು ಮತ್ತು ಅದನ್ನು ವಿಘಟಿಸಿ ದೇಹಕ್ಕೆ ಶಕ್ತಿ ಒದಗಿಸುವುದು. ಇದನ್ನು ಕ್ಯಾಲರಿ ದಹಿಸುವುದು ಎಂದು ಕರೆಯಲಾಗುತ್ತದೆ.

Honey

ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣ ಸೇವನೆ ಮಾಡಿದಾಗ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಹಾಕಲು ನೆರವಾಗುವುದು. ವಾರದಲ್ಲಿ ಒಂದು ಸಲ ಈ ನೀರನ್ನು ಸೇವಿಸಿದರೆ ತೂಕ ಕಳೆದುಕೊಳ್ಳಬಹುದು ಎನ್ನುವ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಇದನ್ನು ನಿಯಮಿತವಾಗಿ ಸೇವಿಸಿ, ಸರಿಯಾದ ಆಹಾರಕ್ರಮ ಪಾಲಿಸಿ. ಈ ಅದ್ಭುತ ಪಾನೀಯದ ಮತ್ತೊಂದು ಲಾಭವೆಂದರೆ ಇದಕ್ಕೆ ನಾವು ಸಕ್ಕರೆಯನ್ನು ಬಳಸುವುದಿಲ್ಲ. ಅದರ ಬದಲಿಗೆ ಜೇನುತುಪ್ಪ ಬಳಸುವ ಕಾರಣದಿಂದ ಕ್ಯಾಲರಿ ಸೇವನೆ ಶೇ.60ರಷ್ಟು ಕಡಿಮೆಯಾಗುವುದು. ಇದರಿಂದ ಪ್ರತಿನಿತ್ಯ ಬಿಸಿನೀರಿನ ಜತೆಗೆ ಜೇನುತುಪ್ಪ ಪ್ರತಿನಿತ್ಯ ಸೇವಿಸಿ. ಬಳಿಕ ಆರೋಗ್ಯಕಾರಿ ಉಪಾಹಾರ ಸೇವಿಸಿ. ಅರ್ಧ ಲಿಂಬೆ ಹಿಂಡಿದರೆ ಇದು ಮತ್ತಷ್ಟು ಪರಿಣಾಮಕಾರಿ.

ಹಸಿ ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಇದರಲ್ಲಿ ಇರುವಂತಹ ಸಲ್ಫರ್ ಅಂಶವು ಇದಕ್ಕೆ ಕಾರಣವಾಗಿದೆ. ಹಸಿ ಬೆಳ್ಳುಳ್ಳಿಯು ದೇಹದ ತೂಕ ಕಡಿಮೆ ಮಾಡುವಲ್ಲಿಯೂ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು.
ದೇಹದಲ್ಲಿ ಅತಿಯಾಗಿ ಹಸಿವಾಗಲು ಕಾರಣವೆಂದರೆ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿನ ಅಸಮತೋಲನ. ಹಸಿ ಬೆಳ್ಳುಳ್ಳಿಯು ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು ಮತ್ತು ತುಂಬಾ ಶಕ್ತಿಶಾಲಿ ನಿರ್ವಿಷಕಾರಿಯಾಗಿ ಕೆಲಸ ಮಾಡುವುದು.

ಹಲವಾರು ವಿಧಾನದಿಂದ ಸೇವಿಸಬಹುದು
ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿಯನ್ನು ಬಿಸಿ ನೀರು, ಜೇನುತುಪ್ಪ, ಅಲೋವೆರಾ ಜ್ಯೂಸ್, ಲಿಂಬೆರಸ, ಆ್ಯಪಲ್ ಸೀಡರ್ ವಿನೇಗರ್ ಅಥವಾ ಗಿಡಮೂಲಿಕೆ ಚಹಾದೊಂದಿಗೆ ಸೇವಿಸಬಹುದು. ಇದು ಪರಿಣಾಮಕಾರಿ ಎನ್ನುವ ಕಾರಣಕ್ಕಾಗಿ ಸಿಕ್ಕಿದಷ್ಟನ್ನು ತಿನ್ನುವುದಲ್ಲ. 4-5 ಎಸಲು ಹಸಿ ಬೆಳ್ಳುಳ್ಳಿ ತಿಂದರೆ ಆಗ ಹೊಟ್ಟೆಯು ಕೆಡುವುದು, ಎದೆಉರಿ ಶುರುವಾಗುವುದು ಮತ್ತು ಇತರ ಕೆಲವು ಅಡ್ಡಪರಿಣಾಮಗಳು ಉಂಟಾಗಬಹುದು.

ಹಿತಮಿತ ಮತ್ತು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಪರಿಣಾಮಕಾರಿಯಾಗಿ ಬೆಳ್ಳುಳ್ಳಿ ಕೆಲಸ ಮಾಡುವುದು.
ಜೇನುತುಪ್ಪದಿಂದ ಬಿಸಿನೀರು ಅಥವಾ ಹಸಿ ಬೆಳ್ಳುಳ್ಳಿ ಸೇವನೆಯಿಂದ ತೂಕ ಕಳೆದುಕೊಳ್ಳಬಹುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇದರೊಂದಿಗೆ ಆಹಾರ ಕ್ರಮದಲ್ಲಿ ಬದಲಾವಣೆ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಇದು ಚಯಾಪಚಯವನ್ನು ಹೆಚ್ಚಿಸಿ, ಹಸಿವು ಕಡಿಮೆ ಮಾಡಿ, ಸಿಕ್ಕಿದೆಲ್ಲವನ್ನೂ ತಿನ್ನದಂತೆ ತಡೆಯುವುದು.

ಅತಿ ಬೇಗನೆ ಬೊಜ್ಜು ಕರಗಿಸಲು ಐದೇ ಐದು ಮಾರ್ಗ

ತೂಕ ಇಳಿಸಿಕೊಳ್ಳಲು ಯಾವುದೇ ಶಾರ್ಟ್ ಕಟ್ ಇಲ್ಲ. ಸರಿಯಾದ ಕ್ರಮ ಪಾಲಿಸಿಕೊಂಡು ಹೋದರೆ ಖಂಡಿತವಾಗಿಯೂ ತೂಕ ಇಳಿಸಬಹುದು. ಇದರಿಂದ ನಿಮ್ಮ ದೇಹದ ಒಳಗಿನ ಪರಿಸ್ಥಿತಿ ಮತ್ತು ಕಾರ್ಯವು ಸುಧಾರಣೆಯಾಗುವುದು. ಆರೋಗ್ಯಕಾರಿಯಾಗಿ ತಿನ್ನಿ, ಕಠಿಣ ಕೆಲಸ ಮಾಡಿ, ಚಿಂತೆ ಬಿಡಿ ಮತ್ತು ಧೈರ್ಯವಿರಲಿ.

English summary

Drink Warm Water With Honey and Raw Garlic for Weight Loss

Lucky are those who are happy with their body the way it is. We think that all our problems exist because of those extra kilos that we gained binge-eating on stressful days. Weight loss is wrongly associated with an individual's lack of confidence and success. We think that life will be better if we're just thinner. And since we're impatient, we want everything fast.Two of the most effective aids for weight loss we've heard about from many hundreds of years are warm water with honey and raw garlic.
X
Desktop Bottom Promotion