ಆರೋಗ್ಯ ಟಿಪ್ಸ್: ಪ್ರೋಟೀನ್ ಶೇಕ್ ಸೇವಿಸಿ, ತೂಕ ಇಳಿಸಿ

By: Hemanth
Subscribe to Boldsky

ಪ್ರೋಟೀನ್ ಪ್ರತಿಯೊಬ್ಬರ ದೇಹಕ್ಕೂ ಅಗತ್ಯವಿರುವ ಅಂಶ. ನಾವು ತಿನ್ನುವ ಯಾವುದಾದರೂ ಒಂದು ಆಹಾರದಿಂದ ಪ್ರೋಟೀನ್ ನಮ್ಮ ದೇಹಕ್ಕೆ ಲಭ್ಯವಾಗುವುದು. ಆದರೆ ಇಂದಿನ ದಿನಗಳಲ್ಲಿ ನೀವು ಪ್ರೋಟೀನ್ ಶೇಕ್ ಬಗ್ಗೆ ಕೇಳಿರಬಹುದು. ದೇಹ ಕಟ್ಟಮಸ್ತಾಗಿ ಬೆಳೆಸುವವರಿಗೆ ಇದು ಚಿರಪರಿಚಿತ. ಸ್ನಾಯುಗಳು ಬಲಶಾಲಿಯಾಗಿ ಬೆಳೆಯಲು, ಸಿಕ್ಸ್ ಪ್ಯಾಕ್ಸ್ ತೋರಿಸಲು ಪ್ರೋಟೀನ್ ಶೇಕ್ ಸೇವಿಸುವರು. ದೇಹದ ಸ್ನಾಯುಗಳು ಬೇಗನೆ ಬೆಳೆಯಲು ಪ್ರೋಟೀನ್ ಶೇಕ್ ಬೇಕು. ದೇಹದ ಕೊಬ್ಬನ್ನು ಪ್ರೋಟೀನ್ ಶೇಕ್ ಕರಗಿಸುವುದು ಎನ್ನುವುದು ಮತ್ತೊಂದು ಸತ್ಯವಾಗಿದೆ.

Milk shake

ಹೆಚ್ಚಿನ ಜನರಿಗೆ ತಿಳಿಯದೇ ಇರುವ ವಿಚಾರವೆಂದರೆ ಪ್ರೋಟೀನ್ ಕೊಬ್ಬನ್ನು ಕರಗಿಸುವುದು ಸಾಮಾನ್ಯ ನಿಯಮ. ಕೊಬ್ಬು ಕರಗಿಸುವುದು ಮಾತ್ರವಲ್ಲದೆ ತೂಕ ಕಳೆದುಕೊಂಡು ದೇಹವು ಕಟ್ಟುಮಸ್ತಾಗಿರಲು ಪ್ರೋಟೀನ್ ಇರುವ ಆಹಾರ ಮತ್ತು ಪ್ರೋಟೀನ್ ಸಪ್ಲಿಮೆಂಟ್ ಗಳು ನೆರವಾಗುವುದು. ದೇಹದಲ್ಲಿ ಕೊಬ್ಬು ಅತಿಯಾಗಿ ಬೆಳೆದರೆ ಅದರಿಂದ ಬೊಜ್ಜು, ಹೆಚ್ಚಿನ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು ಕಾಡುವುದು. ತೂಕ ಹೆಚ್ಚಿದ್ದರೆ ಅದರಿಂದ ಸೌಂದರ್ಯವು ಕೆಡುವುದು ಮತ್ತು ಆತ್ಮವಿಶ್ವಾಸದ ಮೇಲೂ ಪರಿಣಾಮವಾಗುವುದು. 

ತೂಕ ಇಳಿಸಿಕೊಳ್ಳಲು ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್

ಇದರಿಂದ ಆರೋಗ್ಯಕರ ತೂಕ ಕಾಪಾಡಿಕೊಂಡು ಆರೋಗ್ಯವಾಗಿರುವುದು ಅತೀ ಅಗತ್ಯ. ಅನಾರೋಗ್ಯಕರ ಆಹಾರ ಸೇವನೆ, ವ್ಯಾಯಾಮದ ಕೊರತೆ, ಹಾರ್ಮೋನು ಅಸಮತೋಲನ ಮತ್ತು ಅನುವಂಶೀಯವಾಗಿ ಅತಿಯಾದ ತೂಕ ಬರಬಹುದು. ತೂಕ ಹೆಚ್ಚಳಕ್ಕೆ ಕಾರಣ ತಿಳಿದುಕೊಂಡು ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ದೇಹದ ತೂಕ ಅತಿಯಾದರೆ ಅದರಿಂದ ಹೃದಯದ ಸಮಸ್ಯೆ, ಫಲವತ್ತತೆ ಕೊರತೆ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆ ಬರಬಹುದು. ಎಲ್ಲಾ ಸಲ ನಮಗೆ ಸಮತೋಲಿತ ಆಹಾರ ಸೇವನೆ ಮಾಡಲು ಸಾಧ್ಯವಿಲ್ಲ. ಇದರಿಂದ ನೀವೇ ತಯಾರಿಸಿ ಸೇವಿಸಬಹುದಾದ ಪ್ರೋಟೀನ್ ಶೇಕ್ ಬಗ್ಗೆ ತಿಳಿಸಿಕೊಡಲಿದ್ದೇವೆ.

Almond Milk

ಬೇಕಾಗುವ ಸಾಮಗ್ರಿಗಳು

ಒಂದು ದೊಡ್ಡ ಬಾಳೆಹಣ್ಣು

ಬಾದಾಮಿ ಹಾಲು ½ ಕಪ್

2 ಮೊಟ್ಟೆಯ ಬಿಳಿ ಭಾಗ

ಈ ನೈಸರ್ಗಿಕ ಪೇಯವನ್ನು ನಿಯಮಿತವಾಗಿ ಬಳಸಿದಾಗ ದೇಹದಲ್ಲಿ ಶೇಖರಣೆಯಾಗಿರುವ ಅತಿಯಾದ ಕೊಬ್ಬು ಕರಗಿಸಿ ದೇಹವನ್ನು ಕಟ್ಟುಮಸ್ತಾಗಿಸುವುದು.

egg yolks

ಕೇವಲ ಈ ಪೇಯ ಸೇವನೆ ಮಾಡುವುದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗಲ್ಲ. ಮನೆಯಲ್ಲೇ ತಯಾರಿಸಿದ ಈ ಪೇಯದೊಂದಿಗೆ ಆರೋಗ್ಯಕರ ಆಹಾರ ಸೇವನೆ, ಜಂಕ್ ಫುಡ್ ಕಡೆಗಣನೆ ಮತ್ತು ಪ್ರತೀ ದಿನ ಸುಮಾರು 40 ನಿಮಿಷ ಕಾಲ ವ್ಯಾಯಾಮ ಮಾಡುವುದು ಅತೀ ಅಗತ್ಯವಾಗಿದೆ.

banana

ಬಾಳೆಹಣ್ಣಿನಲ್ಲಿ ಇರುವಂತಹ ಪೊಟಾಶಿಯಂ ಚಯಾಪಚಾಯ ಕ್ರಿಯೆ ಹೆಚ್ಚುಮಾಡಿ ವ್ಯಾಯಾಮಕ್ಕೆ ಬೇಕಾಗಿರುವ ಶಕ್ತಿ ಒದಗಿಸುವುದು. ಇದರೊಂದಿಗೆ ಕೊಬ್ಬು ಕರಗಿಸಲು ನೆರವಾಗುವುದು. ಬಾದಾಮಿ ಹಾಲು ಮತ್ತು ಮೊಟ್ಟೆಯ ಬಿಳಿ ಭಾಗದಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಕಾರಣ ಕೊಬ್ಬು ಕರಗಿಸಿ, ದೇಹದ ತೂಕ ಕಡಿಮೆ ಮಾಡುವುದು. ಪ್ರೋಟೀನ್ ಸ್ನಾಯುಗಳನ್ನು ಬಿಗಿಯಾಗಿಸಿ ಬಲಶಾಲಿಯಾಗಿಸುವುದು.

ತಯಾರಿಸುವ ವಿಧಾನ

ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಒಂದು ಮಿಕ್ಸಿಗೆ ಹಾಕಿ

ಇದನ್ನು ಸರಿಯಾಗಿ ರುಬ್ಬಿ ದ್ರವ ರೂಪಕ್ಕೆ ತನ್ನಿ

ಈ ಪೇಯವನ್ನು ದಿನದಲ್ಲಿ ಒಂದು ಸಲ ವ್ಯಾಯಾಮದ ಬಳಿಕ ಸೇವಿಸಿ

ಪೇಯಕ್ಕೆ ಸಕ್ಕರೆ ಹಾಕಬೇಡಿ

ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!

English summary

Natural homemade protein shake for weight loss

The minute we hear the words 'protein shake' our first impulse would be to think that it is only for people who are interested in building muscles, right? Well, although it is true that protein shakes are usually consumed by people who lift weights at the gym and bodybuilders who need protein supplements for quicker muscle growth, it is also a fact that protein shakes can help burn body fat!
Subscribe Newsletter