ವ್ಯಾಯಾಮದ ನಂತರ ಒಂದು ಗ್ಲಾಸ್ ಸೋರೆಕಾಯಿ ಜ್ಯೂಸ್ ಕುಡಿಯಿರಿ

By: Arshad
Subscribe to Boldsky

ವ್ಯಾಯಾಮದ ಬಳಿಕ ಪ್ರೋಟೀನ್ ಯುಕ್ತ ಪೇಯವನ್ನು ಕುಡಿಯಲು ಎಲ್ಲರೂ ಬಯಸುತ್ತಾರೆ. ವ್ಯಾಯಾಮದ ಅವಧಿಯಲ್ಲಿ ದೇಹ ಕಳೆದುಕೊಂಡ ಪೋಷಕಾಂಶಗಳನ್ನು ಮರುತುಂಬಿಸಿಕೊಳ್ಳಲು ಈ ಪೇಯ ನೆರವಾಗುವುದರ ಜೊತೆಗೇ ಬಳಲಿದ್ದ ಸ್ನಾಯುಗಳಿಗೆ ಪುನಃಶ್ಚೇತನ ನೀಡಲೂ ನೆರವಾಗುತ್ತದೆ.  

ಸೋರೆಕಾಯಿ ಜ್ಯೂಸ್‌ಗೆ ಜೇನು ಬೆರೆಸಿ ಕುಡಿದು ನೋಡಿ...

ಈ ಕಾರ್ಯವನ್ನು ಸೋರೆಕಾಯಿಯ ಜ್ಯೂಸ್ ಸಹಾ ಸಮರ್ಥವಾಗಿ ನಿಭಾಯಿಸುತ್ತದೆ. ನಿಮ್ಮ ನಿತ್ಯದ ಪ್ರೋಟೀನ್ ಶೇಕ್ ಬದಲು ಕೊಂಚ ಭಿನ್ನವಾದ ರುಚಿಯ ಹಾಗೂ ಅತ್ಯಂತ ಪ್ರಬಲವಾಗಿರುವ ಸೋರೆಕಾಯಿ ಜ್ಯೂಸ್ ಅನ್ನು ಏಕೆ ಪ್ರಯತ್ನಿಸಬಾರದು? ನಿಮ್ಮ ನಿತ್ಯದ ಪೇಯಕ್ಕಿಂತಲೂ ಇದು ಹೆಚ್ಚು ಪರಿಣಾಮಕಾರಿಯಾಗಿದೆ. ಅಚ್ಚರಿಯಾಯಿತೇ? ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಈಗ ನೋಡೋಣ.... 

ತಯಾರಿಕಾ ಕ್ರಮ....

ತಯಾರಿಕಾ ಕ್ರಮ....

ಒಂದು ಸೋರೆಕಾಯಿಯ ಸಿಪ್ಪೆಯನ್ನು ಸುಲಿದು ಬೀಜ ನಿವಾರಿಸಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಮಿಕ್ಸಿಯ ಬ್ಲೆಂಡರಿನಲ್ಲಿ ಕಡೆಯಿರಿ. ಇದಕ್ಕೆ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿ ಮತ್ತು ಉಪ್ಪನ್ನು ಬೆರೆಸಿ. ಕೆಲವು ಪುದೀನಾ ಎಲೆಗಳನ್ನು ಬೆರೆಸಿ ಕಡೆದು ನಿಮಗೆ ಸೂಕ್ತವೆನಿಸಿದಷ್ಟು ನೀರು ಸೇರಿಸಿ ಕುಡಿಯಿರಿ.

ಪ್ರಯೋಜನ #1

ಪ್ರಯೋಜನ #1

ಈ ಜ್ಯೂಸ್‌ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ ಹಾಗೂ ಕಡಿಮೆ ಕ್ಯಾಲೋರಿಗಳಿವೆ. ಇದರಿಂದ ಹೆಚ್ಚು ಹೊತ್ತು ಹೊಟ್ಟೆ ತುಂಬಿದಂತಾಗಿದ್ದು ಅನಗತ್ಯವಾಗಿ ಆಹಾರವನ್ನು ಸೇವಿಸುವುದರಿಂದ ತಡೆದಂತಾಗುತ್ತದೆ. ಇದು ಪ್ರಮುಖ ಪ್ರಯೋಜನವಾಗಿದೆ.

ಯಾವುದೇ ಕಾರಣಕ್ಕೂ 'ಸೋರೆಕಾಯಿ-ಜ್ಯೂಸ್‌' ಮಿಸ್ ಮಾಡಬೇಡಿ!

ಪ್ರಯೋಜನ #2

ಪ್ರಯೋಜನ #2

ವ್ಯಾಯಾಮದ ಅವಧಿಯಲ್ಲಿ ದೇಹದಿಂದ ಅಪಾರವಾದ ಬೆವರು ಹರಿಯುತ್ತದೆ. ಬೆವರಿನ ಮೂಲಕ ದೇಹ ನೀರನ್ನು ಕಳೆದುಕೊಳ್ಳುತ್ತದೆ. ಈ ಜ್ಯೂಸ್ ಕುಡಿಯುವ ಮೂಲಕ ದೇಹ ಕಳೆದುಕೊಂಡಿದ್ದ ನೀರನ್ನು ಮತ್ತೆ ಪಡೆದುಕೊಳ್ಳುತ್ತದೆ. ಹಾಗೂ ಬಿಸಿಯಾಗಿದ್ದ ದೇಹವನ್ನು ಮತ್ತೆ ತಂಪಾಗಿಸಲೂ ನೆರವಾಗುತ್ತದೆ.

ಪ್ರಯೋಜನ #3

ಪ್ರಯೋಜನ #3

ವ್ಯಾಯಾಮದ ಬಳಿಕ ಸುಸ್ತು ಆವರಿಸಿ ಮುಂದಿನ ಕಾರ್ಯಕ್ರಮಕ್ಕೆ ಶಕ್ತಿಯೇ ಉಳಿಯುವುದಿಲ್ಲ. ಆದರೆ ಈ ಜ್ಯೂಸ್ ಕುಡಿದರೆ ಸುಸ್ತು ತಕ್ಷಣವೇ ನಿವಾರಣೆಯಾಗುತ್ತದೆ. ಈ ಜ್ಯೂಸ್ ನಲ್ಲಿರುವ ಅಮೈನೋ ಆಮ್ಲಗಳನ್ನು ದೇಹ ತಕ್ಷಣವೇ ಚಟುವಟಿಕೆಗೆ ತಯಾರಾಗುವಂತೆ ಮಾಡುತ್ತದೆ.

ಪ್ರಯೋಜನ #4

ಪ್ರಯೋಜನ #4

ಈ ಜ್ಯೂಸ್‍ನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ತೂಕ ಇಳಿಸಲು ನೆರವಾಗುತ್ತದೆ.

ಆರೋಗ್ಯಕ್ಕೆ ಆಸರೆಯಾಗೋ ತರಕಾರಿ-ಸೋರೆಕಾಯಿ

ಪ್ರಯೋಜನ #5

ಪ್ರಯೋಜನ #5

ಈ ಜ್ಯೂಸ್ ನಲ್ಲಿ ನೈಸರ್ಗಿಕ ಸಕ್ಕರೆ ಇದ್ದು ಇವು ವ್ಯಾಯಾಮದ ಬಳಿಕ ದೇಹದಲ್ಲಿ ಬಳಕೆಯಾಗಿದ್ದ ಕಾರ್ಬೋಹೈಡ್ರೇಟುಗಳು ಹಾಗೂ ಸ್ನಾಯುಗಳಲ್ಲಿ ಕಡಿಮೆಯಾಗಿದ್ದ ಗ್ಲೈಕೋಜೆನ್ ಮಟ್ಟಗಳನ್ನು ಮತ್ತೆ ಸರಿಪಡಿಸಿಕೊಳ್ಳಲು ನೆರವಾಗುತ್ತದೆ.

ಪ್ರಯೋಜನ #6

ಪ್ರಯೋಜನ #6

ಸೋರೆಕಾಯಿಯಲ್ಲಿ ಇನ್ನೇನೇನಿದೆ? ಇದರಲ್ಲಿ ವಿಟಮಿನ್ B, C, ಖನಿಜಗಳಾದ ಸೋಡಿಯಂ, ಪೊಟ್ಯಾಶಿಯಂ ಹಾಗೂ ಕಬ್ಬಿಣಗಳು ಉತ್ತಮ ಮಟ್ಟದಲ್ಲಿದೆ.

ಪ್ರಯೋಜನ #7

ಪ್ರಯೋಜನ #7

ಖಾಲಿಹೊಟ್ಟೆಯಲ್ಲಿ ಸೋರೆಕಾಯಿ ಜ್ಯೂಸ್ ಅನ್ನು ಸೇವಿಸುವ ಮೂಲಕ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಹಾಗೂ ತನ್ಮೂಲಕ ಹೃದಯದ ತೊಂದರೆಗಳಿಂದ ರಕ್ಷಿಸುತ್ತದೆ.

ಪ್ರಯೋಜನ #8

ಪ್ರಯೋಜನ #8

ಸೋರೆಕಾಯಿ ಅಪಾರ ಪ್ರಯೋಜನಗಳಲ್ಲಿ ಕಡೆಯದಾದರೂ ಅಂತಿಮವಲ್ಲದ ಪ್ರಯೋಜನವೆಂದರೆ ಮೂತ್ರನಾಳದ ಸೋಂಕಿನಿಂದ ರಕ್ಷಣೆ ನೀಡುವುದಾಗಿದೆ. ಸೋರೆಕಾಯಿಯ ಜ್ಯೂಸ್‌ನೊಂದಿಗೆ ಲಿಂಬೆರಸವನ್ನು ಬೆರೆಸಿ ಕುಡಿಯುವ ಮೂಲಕ ಮೂತ್ರನಾಳದ ಸೋಂಕು ಉಂಟಾಗುವುದನ್ನು ತಪ್ಪಿಸಬಹುದು.

ವ್ಯಾಯಾಮದ ನಂತರ, ಒಮ್ಮೆ ಇಂತಹ ಜ್ಯೂಸ್ ಕುಡಿದು ನೋಡಿ....

English summary

Why Bottle Gourd Juice Can Be A Good Post Workout Drink

After a workout, you would generally prefer a protein shake. The main objective behind it is to refuel your body and help your muscles recover faster. Even the juice of bottle gourd can do the job for you. Instead of your regular protein shake, have you ever tried bottle gourd juice? Here are some of its benefits especially if you make it your post workout drink.
Subscribe Newsletter