ಯಾವುದೇ ಕಾರಣಕ್ಕೂ 'ಸೋರೆಕಾಯಿ-ಜ್ಯೂಸ್‌' ಮಿಸ್ ಮಾಡಬೇಡಿ!

By: Arshad
Subscribe to Boldsky

ಕೊಂಚ ಕಾಲ ಕೆಡದೇ ಇರಿಸಲು ಸಾಧ್ಯವಾಗುವ ತರಕಾರಿಗಳ ಪಟ್ಟಿಯಲ್ಲಿ ಸೋರೆಕಾಯಿಯೂ ಒಂದು. ಪಲ್ಯಕ್ಕೂ ಸೈ, ಸಾಂಬಾರಿಗೂ ಸೈ ಎಂಬ ಬಹುಪಯೋಗಿ ತರಕಾರಿಯಾದುದರಿಂದಲೂ ಸುಲಭವಾಗಿ ಹೆಚ್ಚಲು ಸಾಧ್ಯವಾಗುವುದರಿಂದಲೂ ಇದು ಗೃಹಿಣಿಯರ ನೆಚ್ಚಿನ ಆಯ್ಕೆಯಾಗಿದೆ. ಇದರಲ್ಲಿ ಹೆಚ್ಚಿನ ನೀರಿನ ಅಂಶವಿರುವ ಕಾರಣ ನೀರು ಬೆರೆಸದೇ ಮಾಡಿದ ಪಲ್ಯ ಬಲುರುಚಿ. ಸೋರೆಕಾಯಿ ಜ್ಯೂಸ್‌ಗೆ ಜೇನು ಬೆರೆಸಿ ಕುಡಿದು ನೋಡಿ... 

ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋರೆಕಾಯಿ ಮತ್ತು ಸಿಗಡಿ ಮಿಶ್ರಣದ ಪಲ್ಯ ಮಾಡುತ್ತಾರೆ. ಮಾಂಸಾಹಾರಿಗಳಿಗೆ ಇದು ಅತ್ಯಂತ ಪ್ರಿಯವಾದ ಖಾದ್ಯವಾಗಿದೆ, ಅಲ್ಲದೇ ಇದರ ತಿರುಳನ್ನು ಹಿಂಡಿ ತೆಗೆದ ರಸದ ಸೇವನೆಯೂ ಆರೋಗ್ಯಕ್ಕೆ ಉತ್ತಮ.

ಇನ್ನು ಕೊಬ್ಬು ಇಳಿಸಲು ಇಚ್ಛೆಸುವವರಿಗೆ ಇದು ಅತ್ಯುತ್ತಮವಾದ ಆಯ್ಕೆಯಾಗಿದ್ದು ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇದ್ದು ಆಂಟಿ ಆಕ್ಸಿಡೆಂಟುಗಳು ಹೆಚ್ಚಿವೆ. ಅಷ್ಟೇ ಅಲ್ಲದೆ, ಸೌತೆಕಾಯಿಯ ತರಹ ಇದರಲ್ಲಿಯೂ ಹೆಚ್ಚಿನ ಪ್ರಮಾಣದ ನೀರಿದೆ. ಇದೇ ಕಾರಣಕ್ಕೆ ಬೇಸಿಗೆಯಲ್ಲಿ ಸೋರೆಕಾಯಿಯನ್ನು ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಸೋರೆಕಾಯಿ ಜ್ಯೂಸ್‌ನಲ್ಲಿ ಇಷ್ಟೆಲ್ಲಾ ಪ್ರಯೋಜನಗಳಿವೆಯೇ? 

ಅದರಲ್ಲಿಯೂ ಸೋರೆಕಾಯಿಯ ಚಿಕ್ಕ ಚಿಕ್ಕ ತುಂಡುಗಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಗೊಟಾಯಿಸಿ ಜ್ಯೂಸ್ ತಯಾರಿಸಿ, ಇದಕ್ಕೆ ಒಂದು ದೊಡ್ಡಚಮಚ ಜೇನು ಸೇರಿಸಿ ಚೆನ್ನಾಗಿ ಕಲಕಿ, ಪ್ರತಿದಿನ ಸೇವಿಸುತ್ತಾ ಬಂದರೆ ಆರೋಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ... ಬನ್ನಿ ಸೋರೆಕಾಯಿಯ ಆರೋಗ್ಯಕರ ಗುಣಗಳು ಬಹಳಷ್ಟಿದ್ದು ಕೆಲವೊಂದನ್ನು ಈ ಲೇಖನಗಳಲ್ಲಿ ನೀಡಲಾಗಿದೆ, ಮುಂದೆ ಓದಿ....  

ರಕ್ತಹೀನತೆ ಸಮಸ್ಯೆಗೆ

ರಕ್ತಹೀನತೆ ಸಮಸ್ಯೆಗೆ

ಇದರಲ್ಲಿ ಕಬ್ಬಿಣ ಹೆಚ್ಚಿರುವ ಕಾರಣದಿಂದ ರಕ್ತದ ಕಣಗಳಿಗೆ ಉಪಯುಕ್ತವಗಿದೆ. ರಕ್ತಹೀನತೆಯಿಂದ ಬಳಲುವವರಿಗೆ ಇದು ಅತ್ಯುತ್ತಮವಾದ ಆಯ್ಕೆಯಾಗಿದೆ.

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಈ ಜ್ಯೂಸ್ ನಲ್ಲಿರುವ ವಿಟಮಿನ್ ಬಿ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಗೆ ಹೆಚ್ಚಿನ ನೆರವು ನೀಡುತ್ತದೆ.

ಸಂತಾನಫಲತೆಗೆ ಸಹಕಾರಿ

ಸಂತಾನಫಲತೆಗೆ ಸಹಕಾರಿ

ಈ ಜ್ಯೂಸ್ ಕುಡಿಯುವ ಮೂಲಕ ಮಹಿಳೆಯರಲ್ಲಿ ಸಂತಾನಫಲತೆಯ ಸಾಧ್ಯತೆ ಹೆಚ್ಚುತ್ತದೆ.

ಮಧುಮೇಹಿಗಳಿಗೆ ರಾಮಬಾಣ

ಮಧುಮೇಹಿಗಳಿಗೆ ರಾಮಬಾಣ

ಈ ಜ್ಯೂಸ್ ಮಧುಮೇಹಿಗಳಿಗೆ ಅತ್ಯುತ್ತಮವಾದ ಆಯ್ಕೆಯಾಗಿದೆ. ಆದರೂ ನಿಮ್ಮ ಕುಟುಂಬ ವೈದ್ಯರ ಸಲಹೆ ಪಡೆದೇ ಕುಡಿಯುವುದು ಸೂಕ್ತ.

ದೇಹವನ್ನು ತಂಪಾಗಿಸುತ್ತದೆ

ದೇಹವನ್ನು ತಂಪಾಗಿಸುತ್ತದೆ

ಬೇಸಿಗೆಯಲ್ಲಿ ಈ ಜ್ಯೂಸ್ ದೇಹವನ್ನು ತಂಪಾಗಿಡುವ ಮೂಲಕ ಬಿಸಿಲ ಬೇಗೆಯಿಂದ ರಕ್ಷಿಸಲು ನೆರವಾಗುತ್ತದೆ. ಇದರಲ್ಲಿರುವ ಅಪಾರ ಪ್ರಮಾಣದ ನೀರು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಬಿಸಿಲನ್ನು ಎದುರಿಸಲು ಸಾಧ್ಯವಾಗುತ್ತದೆ.

ನಿದ್ರಾಹೀನತೆ ಸಮಸ್ಯೆಯಿದ್ದರೆ

ನಿದ್ರಾಹೀನತೆ ಸಮಸ್ಯೆಯಿದ್ದರೆ

ನಿದ್ರಾಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಒಂದು ಕಪ್ ಅನ್ನು ನಿತ್ಯವೂ ಮಲಗುವ ಮುನ್ನ ಕುಡಿದರೆ ಉತ್ತಮ ನಿದ್ದೆ ಲಭ್ಯವಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ ರಕ್ತ ದೊತ್ತಡವನ್ನೂ ಸಾಮಾನ್ಯ ಮಟ್ಟಕ್ಕೆ ತರಲು ನೆರವಾಗುವ ಮೂಲಕ ಉತ್ತಮ ನಿದ್ದೆ ಪಡೆಯಲು ಸಹಕರಿಸುತ್ತವೆ.

ಮೂತ್ರಪಿಂಡಗಳಿಗೂ ಉತ್ತಮ

ಮೂತ್ರಪಿಂಡಗಳಿಗೂ ಉತ್ತಮ

ಮೂತ್ರಪಿಂಡಗಳು (ಕಿಡ್ನಿ) ಮತ್ತು ಮೂತ್ರವ್ಯವಸ್ಥೆಯನ್ನು ಉತ್ತಮಗೊಳಿಸಲು ಸೋರೆಕಾಯಿ ಉತ್ತಮವಾಗಿದೆ. ಇದು ಕ್ಷಾರೀಯವಾಗಿದ್ದು ದ್ರವದಲ್ಲಿರುವ ಆಮ್ಲೀಯತೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೇ ಇದು ಉತ್ತಮ ಮೂತ್ರವರ್ಧಕವೂ ಆಗಿದ್ದು ಮೂತ್ರದ ಸೋಂಕಿನಿಂದ ಕಾಪಾಡುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಸಂತಾನಫಲವನ್ನು ಹೆಚ್ಚಿಸುವ ಮೂಲಕ ಶುಭಸುದ್ದಿ ಪಡೆಯಲು ನೆರವಾಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ನಿಯಮಿತವಾಗಿ ಸೋರೆಕಾಯಿಯ ರಸವನ್ನು ಕುಡಿಯುತ್ತಾ ಬಂದರೆ ತೂಕವಿಳಿಸುವ ಚಟುವಟಿಕೆಗಳಿಗೆ ಹೆಚ್ಚಿನ ಬಲ ಸಿಗುತ್ತದೆ. ವಿಶೇಷವಾಗಿ ಒಂದು ಲೋಟ ಸೋರೆಕಾಯಿ ರಸವನ್ನು ಸಕ್ಕರೆ ಬೆರೆಸದೇ ಬೆಳಿಗ್ಗೆದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ ಪರಿಣಾಮವನ್ನು ಪಡೆಯಬಹುದು.

 
English summary

Why Drink Bottle Gourd Juice?

Even if you hate to drink bottle gourd juice, you can't underestimate it. It is very healthy and nutritious. It is rich in vitamins B and C and minerals like iron, potassium, and sodium. Are you worried about the calories? Well, it isn't the regular fruit juice that has lots of calories and sugar.
Story first published: Saturday, March 4, 2017, 23:33 [IST]
Subscribe Newsletter