ಆರೋಗ್ಯಕ್ಕೆ ಆಸರೆಯಾಗೋ ತರಕಾರಿ-ಸೋರೆಕಾಯಿ

By Arshad
Subscribe to Boldsky

ಕೊಂಚ ಕಾಲ ಕೆಡದೇ ಇರಿಸಲು ಸಾಧ್ಯವಾಗುವ ತರಕಾರಿಗಳ ಪಟ್ಟಿಯಲ್ಲಿ ಸೋರೆಕಾಯಿಯೂ ಒಂದು. ಪಲ್ಯಕ್ಕೂ ಸೈ, ಸಾಂಬಾರಿಗೂ ಸೈ ಎಂಬ ಬಹುಪಯೋಗಿ ತರಕಾರಿಯಾದುದರಿಂದಲೂ ಸುಲಭವಾಗಿ ಹೆಚ್ಚಲು ಸಾಧ್ಯವಾಗುವುದರಿಂದಲೂ ಇದು ಗೃಹಿಣಿಯರ ನೆಚ್ಚಿನ ಆಯ್ಕೆಯಾಗಿದೆ. ಇದರಲ್ಲಿ ಹೆಚ್ಚಿನ ನೀರಿನ ಅಂಶವಿರುವ ಕಾರಣ ನೀರು ಬೆರೆಸದೇ ಮಾಡಿದ ಪಲ್ಯ ಬಲುರುಚಿ.   ಸೋರೆಕಾಯಿ ಜ್ಯೂಸ್‌ಗೆ ಜೇನು ಬೆರೆಸಿ ಕುಡಿದು ನೋಡಿ...

ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋರೆಕಾಯಿ ಮತ್ತು ಸಿಗಡಿ ಮಿಶ್ರಣದ ಪಲ್ಯ ಮಾಡುತ್ತಾರೆ. ಮಾಂಸಾಹಾರಿಗಳಿಗೆ ಇದು ಅತ್ಯಂತ ಪ್ರಿಯವಾದ ಖಾದ್ಯವಾಗಿದೆ. ತಿರುಳನ್ನು ಹಿಂಡಿ ತೆಗೆದ ರಸದ ಸೇವನೆಯೂ ಆರೋಗ್ಯಕ್ಕೆ ಉತ್ತಮ.  ಸೋರೆಕಾಯಿ ಜ್ಯೂಸ್‌ನಲ್ಲಿ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?

ಇದರ ಗುಣಗಳನ್ನು ಆಯುರ್ವೇದವೂ ಹೊಗಳಿ ಕೆಲವಾರು ಕಾಯಿಲೆಗಳಿಂದ ಶೀಘ್ರ ಗುಣಮುಖರಾಗಲು ಸಲಹೆಯನ್ನೂ ಮಾಡುತ್ತದೆ. ವಾಸ್ತವವಾಗಿ ಸೋರೆಕಾಯಿಯ ಆರೋಗ್ಯಕರ ಗುಣಗಳು ಬಹಳಷ್ಟಿದ್ದು ಇದುವರೆಗೆ ಇದರ ಬಗ್ಗೆ ಹೆಚ್ಚು ತಿಳಿದೇ ಇರಲಿಲ್ಲ. ಬನ್ನಿ, ಈ ಗುಣಗಳ ಬಗ್ಗೆ ಈ ಲೇಖನಗಳಲ್ಲಿ ನೀಡಲಾಗಿದೆ, ಮುಂದೆ ಓದಿ....   

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಕೆಲವು ಕಾರಣಗಳಿಂದ ಥಟ್ಟನೇ ಏರುವ ರಕ್ತದೊತ್ತಡವನ್ನು ಸೋರೆಕಾಯಿ ನಿಯಂತ್ರಿಸುತ್ತದೆ. ಅಲ್ಲದೇ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುವ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ. ಇದರಲ್ಲಿರುವ ಪೊಟಾಶಿಯಂ ಅಂಶ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೊಂದು ವರದಾನವಾಗಿದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಆದರೆ ಇದಕ್ಕೂ ಮುನ್ನ ಹೃದಯ ಸಂಬಂಧಿ ಕಾಯಿಲೆಗಳ ಇತಿಹಾಸವುಳ್ಳವರು ಅಧಿಕ ಪೊಟ್ಯಾಶಿಯಂ ತಮಗೆ ಉತ್ತಮವೇ ಎಂದು ವೈದ್ಯರಿಂದ ಪರಿಶೀಲಿಸಿಕೊಂಡ ಬಳಿಕವೇ ಸೇವಿಸುವುದು ಉತ್ತಮ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಆಯುರ್ವೇದದ ಪ್ರಕಾರ ಪಿತ್ತರಸದ ವಿಕೋಪಕ್ಕೆ ವಿರುದ್ದವಾದ ಗುಣ (anti-bilious effect) ಇದರಲ್ಲಿರುವ ಕಾರಣ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಬಿ ದೇಹದ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಯಕೃತ್ತಿಗೂ ಸೋರೆಕಾಯಿ ಉತ್ತಮವಾಗಿದೆ. ಇದರಲ್ಲಿರುವ ಉತ್ತಮ ಪ್ರಮಾಣದ ಕರಗುವ ಮತ್ತು ಕರಗದ ನಾರು ಹಾಗೂ ವಿವಿಧ ಖನಿಜಗಳು ಜೀರ್ಣಕ್ರಿಯೆ ಉತ್ತಮಗೊಳಿಸಿ ವಿಸರ್ಜನೆಯೂ ಸರಾಗವಾಗಿ ಆಗುವಂತೆ ಮಾಡುತ್ತದೆ.

ಕಾಮಾಲೆ ರೋಗ ಕಡಿಮೆಗೊಳಿಸಲು ನೆರವಾಗುತ್ತದೆ

ಕಾಮಾಲೆ ರೋಗ ಕಡಿಮೆಗೊಳಿಸಲು ನೆರವಾಗುತ್ತದೆ

ಕಾಮಾಲೆ ರೋಗ ಬಂದ ಬಳಿಕ ಹಲವು ಆಹಾರಗಳ ಸೇವನೆ ನಿಷಿದ್ದವಾಗಿದೆ. ಆದರೆ ಕಾಮಾಲೆ ರೋಗಿಗಳು ಸೋರೆಕಾಯಿಯನ್ನು ಸುರಕ್ಷಿತವಾಗಿ ಸೇವಿಸಬಹುದು. ಅಲ್ಲದೇ ಇದರಲ್ಲಿರುವ ಆರೋಗ್ಯಕರ ಗುಣಗಳು ಕಾಮಾಲೆರೋಗವನ್ನು ಶೀಘ್ರವಾಗಿ ಗುಣಪಡಿಸಲೂ ನೆರವಾಗುತ್ತದೆ. ಜಾಂಡೀಸ್ ರೋಗ: ವೈದ್ಯರಿಗೆ ಸವಾಲೆಸೆಯುವ ಹಳ್ಳಿ ಮದ್ದು!

ಮೂತ್ರಪಿಂಡಗಳಿಗೂ ಉತ್ತಮ

ಮೂತ್ರಪಿಂಡಗಳಿಗೂ ಉತ್ತಮ

ಮೂತ್ರಪಿಂಡಗಳು ಮತ್ತು ಮೂತ್ರವ್ಯವಸ್ಥೆಯನ್ನು ಉತ್ತಮಗೊಳಿಸಲು ಸೋರೆಕಾಯಿ ಉತ್ತಮವಾಗಿದೆ. ಇದು ಕ್ಷಾರೀಯವಾಗಿದ್ದು ದ್ರವದಲ್ಲಿರುವ ಆಮ್ಲೀಯತೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೇ ಇದು ಉತ್ತಮ ಮೂತ್ರವರ್ಧಕವೂ ಆಗಿದ್ದು ಮೂತ್ರದ ಸೋಂಕಿನಿಂದ ಕಾಪಾಡುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಸಂತಾನಫಲವನ್ನು ಹೆಚ್ಚಿಸುವ ಮೂಲಕ ಶುಭಸುದ್ದಿ ಪಡೆಯಲು ನೆರವಾಗುತ್ತದೆ.

ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ

ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ

ರಾತ್ರಿ ಸರಿಯಾಗಿ ನಿದ್ದೆ ಬರದೇ ಇದ್ದರೆ ಮಲಗುವ ಮುನ್ನ ಕೊಂಚ ಎಳ್ಳೆಣ್ಣೆ ಬೆರೆಸಿದ ಸೋರೆಕಾಯಿ ರಸವನ್ನು ಕುಡಿದು ಕೊಂಚವೇ ಅಡ್ಡಾಡಿ ತಣ್ಣೀರಿನಿಂದ ಪಾದಗಳನ್ನು ತೊಳೆದು ತಕ್ಷಣ ಮಲಗಿದರೆ ಸುಖನಿದ್ದೆ ಆವರಿಸುತ್ತದೆ.

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ಸೋರೆಕಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಸತುವಿನ ಪ್ರಮಾಣ ವೃದ್ಧಾಪ್ಯಕ್ಕೆ ಕಾರಣವಾಗುವ ಕಣಗಳ ಕ್ಷಮತೆಯನ್ನು ಕಡಿಮೆಗೊಳಿಸಿ ಚರ್ಮದಲ್ಲಿ ನೆರಿಗೆ ಮೂಡದಂತೆ ನೋಡಿಕೊಳ್ಳುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ನಿಯಮಿತವಾಗಿ ಸೋರೆಕಾಯಿಯ ರಸವನ್ನು ಕುಡಿಯುತ್ತಾ ಬಂದರೆ ತೂಕವಿಳಿಸುವ ಚಟುವಟಿಕೆಗಳಿಗೆ ಹೆಚ್ಚಿನ ಬಲ ಸಿಗುತ್ತದೆ. ವಿಶೇಷವಾಗಿ ಒಂದು ಲೋಟ ಸೋರೆಕಾಯಿ ರಸವನ್ನು ಸಕ್ಕರೆ ಬೆರೆಸದೇ ಬೆಳಿಗ್ಗೆದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ ಪರಿಣಾಮವನ್ನು ಪಡೆಯಬಹುದು.

ಚರ್ಮದ ಆರೈಕೆಗೆ

ಚರ್ಮದ ಆರೈಕೆಗೆ

ಚರ್ಮದ ತೊಂದರೆಗಳಾದ ಮೊಡವೆ, ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳು, ಚಿಳಿಚುಕ್ಕೆಗಳು, ಕಪ್ಪುಚುಕ್ಕೆಗಳು ಮೊದಲಾದವುಗಳಿಗೆ ಸೋರೆರಸದಲ್ಲಿ ಮುಳುಗಿಸಿದ ಹತ್ತಿಯುಂಡೆಯಿಂದ ಅದ್ದಿಕೊಳ್ಳುವುದರಿಂದಲೂ ಪರಿಹಾರ ಸಿಗುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ಇದರಲ್ಲಿರುವ ಕರಗುವ ಮತ್ತು ಕರಗದ ನಾರು ಆಹಾರತ್ಯಾಜ್ಯಗಳನ್ನು ಸಡಿಲಗೊಳಿಸಿ ಸುಲಭವಾಗಿ ವಿಸರ್ಜಿಸಲು ನೆರವಾಗುತ್ತದೆ. ತನ್ಮೂಲಕ ಮಲಬದ್ಧತೆ, ಮೂಲವ್ಯಾಧಿ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ.

ದೇಹವನ್ನು ತಂಪಾಗಿರಿಸುತ್ತದೆ

ದೇಹವನ್ನು ತಂಪಾಗಿರಿಸುತ್ತದೆ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ನಿತ್ಯವೂ ಕೊಂಚವಾದರೂ ಸೋರೆಕಾಯಿಯನ್ನು ಸೇವಿಸುವುದು ಉತ್ತಮ. ಇದರಲ್ಲಿರುವ ವಿಟಮಿನ್ ಬಿ ಮತ್ತು ಸಿ ಉತ್ತಮ ಆಂಟಿ ಆಕ್ಸಿಡೆಂಟುಗಳಾಗಿದ್ದು ದೇಹದ ವ್ಯವಸ್ಥೆಯನ್ನು ಸೂಕ್ತ ತಾಪಮಾನದಲ್ಲಿರಿಸಲು ನೆರವಾಗುತ್ತವೆ. ಅಲ್ಲದೇ ಬೇಸಿಗೆಯ ಬಿಸಿಲನ್ನು ಸಮರ್ಥವಾಗಿ ಎದುರಿಸಲೂ ಸಾಧ್ಯವಾಗುತ್ತದೆ.

ಸೋಡಿಯಂ ನಷ್ಟವಾಗುವುದನ್ನು ತಡೆಯುತ್ತದೆ

ಸೋಡಿಯಂ ನಷ್ಟವಾಗುವುದನ್ನು ತಡೆಯುತ್ತದೆ

ದೇಹದಿಂದ ಬೆವರು ಮೂತ್ರದಲ್ಲಿ ಅಧಿಕ ಪ್ರಮಾಣದಲ್ಲಿ ಸೋಡಿಯಂ ನಷ್ಟವಾಗುತ್ತಿದ್ದರೆ ನಿಯಮಿತವಾಗಿ ಸೋರೆಕಾಯಿಯ ರಸವನ್ನು ಕೊಂಚ ಉಪ್ಪು ಬೆರೆಸಿ ಕುಡಿಯುವ ಮೂಲಕ ನಿವಾರಿಸಬಹುದು.

 

For Quick Alerts
ALLOW NOTIFICATIONS
For Daily Alerts

    English summary

    Reasons why bottle gourd is good for our health

    Bottle gourd, or lauki, is a humble yet one of the most popular vegetables that we eat. The longish green vegetable, which has a high water content, though is not tasty as such, has a lot of health benefits.Bottle gourd is also recommended by Ayurveda for its diverse benefits and it sure helps us lead a healthy life. So, here we've listed health benefits of eating bottle gourd regularly, take a look:
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more