For Quick Alerts
ALLOW NOTIFICATIONS  
For Daily Alerts

ವ್ಯಾಯಾಮದ ನಂತರ, ಒಮ್ಮೆ ಇಂತಹ ಜ್ಯೂಸ್ ಕುಡಿದು ನೋಡಿ....

By Manjula Balaraj
|

ಮನುಷ್ಯ ತನ್ನ ದೇಹವನ್ನು ದಂಡಿಸುವುದು ಎಷ್ಟು ಮುಖ್ಯವೋ ಅದಕ್ಕೆ ಸರಿಯಾಗಿ ವಿಟಮಿನ್ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಮತ್ತು ಪಾನೀಯಗಳನ್ನು ಸೇವಿಸಿವುದು ಮುಖ್ಯ. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಜಿಮ್ (ವ್ಯಾಯಾಮ) ಮಾಡಿದ ನಂತರ ಕುಡಿಯಬಹುದಾದ ಕೆಲವೊಂದು ಅತ್ಯುತ್ತಮ ಪಾನೀಯಗಳ ವಿವರಗಳನ್ನು ಇಲ್ಲಿ ಪರಿಚಯಿಸುತ್ತಿದೆ.

ಮನೆಯಲ್ಲಿ ತಯಾರಿಸಲಾದ ಶಕ್ತಿವರ್ಧಕ ಪಾನೀಯಗಳು ಅಂಗಡಿಯಲ್ಲಿ ಸಿಗುವ ಕೃತಕ ಪಾನೀಯಗಳಿಗಿಂತ ಉತ್ತಮ ಕೃತಕ ಪಾನೀಯಗಳಲ್ಲಿ ಸಕ್ಕರೆಯ ಪ್ರಮಾಣ ಜಾಸ್ತಿ ಇರುತ್ತದೆ. ಇಂತಹ ಪಾನೀಯಗಳನ್ನು ಹೆಚ್ಚುದಿನ ಉಳಿಯುವಂತೆ ಮಾಡಲು ಅನೇಕ ರಾಸಾಯನಿಕ ಪದಾರ್ಥವನ್ನು ಬಳಸಲಾಗುತ್ತದೆ ಕೃತಕ ಪಾನೀಯಗಳಿಗೆ ಹೋಲಿಸಿದರೆ ಮನೆಯಲ್ಲಿ ತಯಾರಿಸಿದ ಪಾನೀಯಗಳು ಕೃತಕ ಬಣ್ಣ, ಅಸಹಜ ಸ್ವಾದ ಹೊಂದಿರುವುದಿಲ್ಲ. ಇದನ್ನು ಯಾವಾಗ ಬೇಕಾಗುತ್ತೋ ಆವಾಗ ತಯಾರಿಸಿ ಕುಡಿಯಬಹುದು.

Amazing Super Drink Recipes To Sip After The Gym

ಆದ್ದರಿಂದ, ಕೆಳಗೆ ಸೂಚಿಸಿದ ಪಾನೀಯಗಳು ವ್ಯಾಯಾಮನ್ದ ನಂತರ ನಿಮ್ಮ ದಿನ ಆರಂಭಿಸಲು ಸಹಾಯಕವಾಗುತ್ತದೆ. ಬೆಳಿಗ್ಗೆ ಅಥವಾ ಮಧ್ಯಾಹ್ನ ಇದನ್ನು ಪ್ರಯತ್ನಿಸಬಹುದು ಅಥವಾ ಇವುಗಳನ್ನು ತಾಲೀಮು (ವರ್ಕೌಟ್) ಮಾಡಿದ ನಂತರ ಇದನ್ನು ಕುಡಿಯುವುದರಿಂದ ಪುನಶ್ಚೇತನ ಬರಲು ಸಹಾಯಕಾರಿಯಾಗುತ್ತದೆ. ಇಂತಹ ಕೆಲವು ಪಾನೀಯಗಳಲ್ಲಿರುವ ಪದಾರ್ಥಗಳು ಪ್ರಕೃತಿಯಿಂದ ಪಡೆದದ್ದಾಗಿರುತ್ತದೆ. ಮನೆಯಿಂದ ತಯಾರಿಸುವ ಪಾನೀಯಗಳನ್ನು ನೀರು ಕುಡಿಯುವ ಬದಲಿಗೆ ಕುಡಿಯಬಹುದು. ಕೆಳಗೆ ಉತ್ತಮವಾದ ನಾಲ್ಕು ಪಾನೀಯಗಳ ಬಗ್ಗೆ ವಿವರಿಸಲಾಗಿದೆ. ಇದನ್ನು ತಾಲೀಮು ಅಥವಾ ಜಿಮ್ ಮಾಡಿದ ನಂತರ ಕುಡಿಯಿರಿ.

ಚಾಕೋಲೇಟ್‌ನ ಪಾನೀಯ
ಚಾಕೋಲೇಟ್‌ನಲ್ಲಿ ಪ್ರಾಕೃತಿಕವಾದ ಕೆಫೆನ್ ಅಂಶ ಹೆಚ್ಚಾಗಿರುತ್ತದೆ, ಹಾಗಾಗಿ ಇದರಲ್ಲಿ ತಯಾರಿಸಲಾದ ಪಾನೀಯವನ್ನು ಕುಡಿಯುವುದರಿಂದ ಹೊಸ ಉತ್ತೇಜನವನ್ನು ಪಡೆಯಬಹುದಾಗಿದೆ. ಇದರಲ್ಲಿ ಸಕ್ಕರೆಯ ಅಂಶ ಬೆರೆಸಲ್ಪಟ್ಟಿರುವುದಿಲ್ಲ. ಚಾಕೋ ಒಂದು ಹಣ್ಣಾಗಿದ್ದು ಅದರಲ್ಲಿಯೇ ನೈಸರ್ಗಿಕವಾದ ಸಿಹಿ ಹೊಂದಿರುತ್ತದೆ. ಈ ಪಾನೀಯವನ್ನು ಬೇಸಿಗೆಯಲ್ಲಿ ಕುಡಿಯುವುದರಿಂದ ದೇಹವನ್ನು ತಂಪಾಗಿಡಬಹುದಾಗಿದೆ.

ಗೋಧಿ ಹುಲ್ಲು (ವೀಟ್ ಗ್ರಾಸ್) ಮತ್ತು ಬಾಳೇಹಣ್ಣಿನ ಪಾನೀಯ
ಪುರಾತನ ಕಾಲದಿಂದಲೂ ಗೋಧಿ ಹುಲ್ಲು (ವೀಟ್ ಗ್ರಾಸ್) ನಿಂದ ತಯಾರಿಸಲಾದ ಪೇಯವು ದೇಹಕ್ಕೆ ತುಂಬಾ ಆರೋಗ್ಯದಾಯಕ ಎಂಬ ನಂಬಿಕೆ ಇದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ವೀಟ್ ಗ್ರಾಸ್ ಮತ್ತು ಮಾಗಿದ ಬಾಳೆಹಣ್ಣಿನಿಂದ ಮಾಡಿದ ಪಾನೀಯ ಒಂದು ಉತ್ತಮವಾದ ಪೋಷಕಾಂಶಗಳಿಂದ ಕೂಡಿದ ಪಾನೀಯ ಎಂಬುದರಲ್ಲಿ ಸಂಶಯವೇ ಇಲ್ಲ.

ಕ್ಯಾರೆಟ್ ಮತ್ತು ಕಿತ್ತಳೆ ಹಣ್ಣಿನ ಪಾನೀಯ
ನಿಮ್ಮ ಮುಂಜಾನೆಯನ್ನು ಕ್ಯಾರೆಟ್ ಮತ್ತು ಕಿತ್ತಳೆ ಹಣ್ಣಿನ ಪಾನೀಯದೊಂದಿಗೆ ಆರಂಭಿಸಿ. ಹೆಸರಿಗೆ ಮಾತ್ರವಲ್ಲದೆ ಈ ಪಾನೀಯವು ದಿನದ ಯಾವುದೇ ಹೊತ್ತಿನಲ್ಲ್ಲಿಯೂ ಕುಡಿಯಬಹುದಾದ ಪಾನೀಯ. ಇದರಲ್ಲಿರುವ ಸಿಹಿ ವಿವಿಧ ಹಣ್ಣುಗಳದ್ದೇ ಆಗಿದ್ದು ಈ ಪಾನೀಯವು ಉತ್ತಮವಾದುದು. 'ಸಿ' ಜೀವಸತ್ವ ಪೂರ್ಣ ಪ್ರಮಾಣದಲ್ಲಿ ಈ ಪಾನೀಯಗಳಲ್ಲಿ ಇರುವುದರಿಂದ ದೇಹಕ್ಕೆ ತ್ವರಿತವಾಗಿ ಶಕ್ತಿ ಬರುವಂತೆ ಮಾಡಲು ಈ ಪಾನೀಯ ಉತ್ತಮ ಮತ್ತು ಸುಲಭ ಮಾರ್ಗವಾಗಿದೆ.ಈ ಸ್ವಾದಭರಿತ ಪಾನೀಯವನ್ನು ದಿನ ಕುಡಿದರೆ ಸುಸ್ತಿನ, ಆಯಾಸದ ತೊಂದರೆಯಿಂದ ದೂರವಾಗಬಹುದು.

ಮೇಪಲ್, (ಏಸರ್ ಮರದ ದಾರು) ಸಿರಪ್
ಇವು ಹೆಚ್ಚಾಗಿ ದ್ವೀಪ ಪ್ರದೇಶಗಳಲ್ಲಿ ಸಿಗುವ ಒಂದು ರೀತಿಯ ಎಲೆ, ಇದರಲ್ಲಿ ತಯಾರಾದ ಸಿರಪ್ ತುಂಬಾ ಆರೋಗ್ಯದಾಯಕವಾಗಿರುತ್ತದೆ. ಮೇಪಲ್ ಒಳಗೊಂಡಿರುವಂತಹ ಎಲ್ಲಾ ಪಾನೀಯಗಳು ಸಿಹಿಯಾದ ಮತ್ತು ಉತ್ತಮವಾದ ಶಕ್ತಿವರ್ಧಕ ಪಾನೀಯವಾಗಿದೆ.

ಇದರಲ್ಲಿ ಸೋಡಿಯಂನ ಅಂಶವು ಜಾಸ್ತಿ ಇರುವುದರಿಂದ ರಕ್ತದೊತ್ತಡ ಜಾಸ್ತಿ ಇರುವವರು ಇದನ್ನು ಬಳಸುವುದು ಸೂಕ್ತವಲ್ಲ. ಈ ಪಾನೀಯದ ಜೊತೆ ಶುಂಠಿ ಯನ್ನು ಕೂಡ ಬಳಸಬಹುದು. ಹೀಗೆ ಈ ಪಾನೀಯವನ್ನು ಕುಡಿಯುವುದರಿಂದ ಉತ್ತಮ ತಾಲೀಮು ಮಾಡುವವರಿಗೆ ದಿನವಿಡಿ ಆಹ್ಲಾದದಲ್ಲಿ ಇರಬಹುದಾಗಿದೆ.

English summary

Amazing Super Drink Recipes To Sip After The Gym

Homemade energy drinks are much cheaper than ready-made ones that are filled with sugar, present in stores. Some of those drinks are made to restore electrolytes and also to give new impetus when required. Unlike store-purchased versions, these beverages don't have any synthetic additives, colourings, or abnormal flavourings. This drink isn't heavy on caffeine or sugar to give you an increase of energy when it's needed.
Story first published: Friday, May 20, 2016, 20:25 [IST]
X
Desktop Bottom Promotion