For Quick Alerts
ALLOW NOTIFICATIONS  
For Daily Alerts

ಯಾವುದೇ ವ್ಯಾಯಾಮದ ಹಂಗಿಲ್ಲದೆ, ನೈಸರ್ಗಿಕವಾಗಿ ದೇಹದ ತೂಕ ಇಳಿಸಿಕೊಳ್ಳಿ!

By Manu
|

ತೂಕ ಹೆಚ್ಚಳ ಇಂದು ಬಡವ-ಬಲ್ಲಿದ, ಚಿಕ್ಕವ-ದೊಡ್ಡವ, ಪುರುಷ-ಮಹಿಳೆ ಎಂಬ ಬೇಧಭಾವವಿಲ್ಲದೇ ಎಲ್ಲರನ್ನೂ ಆವರಿಸುತ್ತಿದೆ. ಇತ್ತೀಚೆಗೆ ಸವಲತ್ತುಗಳು ಹೆಚ್ಚಾಗಿರುವ ಮೂಲಕ ಕಡಿಮೆಯಾಗಿರುವ ವ್ಯಾಯಮ ಒಂದು ಕಾರಣವಾದರೆ ಅರಿವಿಲ್ಲದೇ ನಮ್ಮ ಆಹಾರದ ಮೂಲಕ ದೇಹ ಪ್ರವೇಶಿಸುವ ಅನಾರೋಗ್ಯಕರ ಪೋಷಕಾಂಶಗಳ ಮಹಾಪೂರ ಇನ್ನೊಂದೆಡೆ. ಇವು ಇಷ್ಟೇ ಸಾಕು ದೇಹದ ತೂಕ ಹೆಚ್ಚಾಗಲು, ಅಲ್ಲದೆ ಒಮ್ಮೆ ಇದು ನಮ್ಮನ್ನು ಆವರಿಸಿಕೊಂಡು ಬಿಟ್ಟರೆ ಅಂತೂ ಹಿಂದಿರುಗಿ ಬರುವುದು ಬಹಳ ಕಷ್ಟ! ಆದರೆ ಅಸಾಧ್ಯವೇನಲ್ಲ

ಇದಕ್ಕೆ ಬೇಕಾಗಿರುವುದು ಕೊಂಚ ತಾಳ್ಮೆ ಹಾಗೂ ಕಟ್ಟು ನಿಟ್ಟಿನ ವ್ಯಾಯಮ ಇದರ ಜೊತೆಗೆ ಆಹಾರ ಸೇವನೆಯಲ್ಲಿ ಮಿತಿ ಮತ್ತು ಸೇವಿಸುವ ಆಹಾರದಲ್ಲಿ ಬದಲಾವಣೆ ಇಷ್ಟೇ. ಮೊದಲೆರಡು ವಿಧಾನಗಳು ನಮ್ಮ ಮಾನಸಿಕ ಸ್ಥೈರ್ಯವನ್ನು ಅವಲಂಬಿಸಿದ್ದರೆ ಮೂರನೆಯದು ನಮ್ಮ ಆಯ್ಕೆಯನ್ನು ಅವಲಂಬಿಸಿದೆ.

ಊಟ ಕಡಿಮೆ ಮಾಡಿದರೆ, ತೂಕ ಕಡಿಮೆಯಾಗುವುದಿಲ್ಲ!

ಸರಿಯಾಗಿ ಆಹಾರ ಕ್ರಮ, ವ್ಯಾಯಾಮ ಮಾಡಿದಲ್ಲಿ, ಒಳ್ಳೆಯ ಫಲ ಖಂಡಿತ ನಿಮ್ಮದಾಗುತ್ತದೆ. ಅದಕ್ಕಾಗಿ ಕೆಲವೊಂದು ಸೂತ್ರಗಳನ್ನು ನೀವು ಅಳವಡಿಸಿಕೊಳ್ಳಬೇಕಾಗುತ್ತದೆ. ಅದೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಓದಿ.. ಇವುಗಳಲ್ಲಿ ಪ್ರಮುಖವಾದ ಕೆಲವು ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ...

ಹಸಿ ಪಪ್ಪಾಯಿ

ಹಸಿ ಪಪ್ಪಾಯಿ

ಹಸಿ ಪಪ್ಪಾಯಿಯನ್ನು ತುಂಬಾ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಇತರ ಹಣ್ಣುಗಳೊಂದಿಗೆ ಬೆಳಿಗ್ಗಿನ ಉಪಹಾರಕ್ಕೆ ಸೇವಿಸಬಹುದು. ಇದರಿಂದ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು. ಹಸಿ ಪಪ್ಪಾಯಿಯು ಬೊಜ್ಜಿನ ಸಮಸ್ಯೆಗೆ ರಾಮಬಾಣವಾಗಿದೆ. ಗರ್ಭಿಣಿಯರಿಗೆ ಇದು ನಿಷಿದ್ಧ. ಇನ್ನು ಪಪ್ಪಾಯಿಯನ್ನು ನೇರವಾಗಿ ತಿನ್ನಲು ಆಗದವರು ಅದನ್ನು ಜ್ಯೂಸ್ ಮಾಡಿಕೊಂಡು ಕುಡಿಯಿರಿ. ಆದರೆ ತೂಕ ಕಳೆದುಕೊಳ್ಳಬೇಕೆಂದು ಬಯಸುವವರು ಜ್ಯೂಸ್‌ಗೆ ಸಕ್ಕರೆ ಹಾಕಬೇಡಿ. ಪಪ್ಪಾಯಿಯಲ್ಲಿ ನೈಸರ್ಗಿಕವಾಗಿ ಸಿಹಿ ಅಂಶವಿದೆ.

ದಿನಕ್ಕೆರಡು ಹೊತ್ತೇ ಊಟ ಮಾಡಿ

ದಿನಕ್ಕೆರಡು ಹೊತ್ತೇ ಊಟ ಮಾಡಿ

ದಿನಕ್ಕೆ ಮೂರು ಹೊತ್ತು ಉಣ್ಣುವ ಬದಲು ಎರಡೇ ಹೊತ್ತು ತಿನ್ನುವುದು ಇನ್ನೊಂದು ವಿಧಾನ. ಅದರಲ್ಲೂ ಈ ಊಟದಲ್ಲಿ ಇಡಿಯ ಧಾನ್ಯಗಳು, ಒಂದು ಲೋಟ ಹಾಲು ಅಥವಾ ಮೊಟ್ಟೆ ಹಾಗೂ ಹಸಿರು ತರಕಾರಿಗಳಿದ್ದಷ್ಟೂ ಒಳ್ಳೆಯದು. ದಿನದ ಅಗತ್ಯಕ್ಕೆ ತಕ್ಕಷ್ಟು ಆಹಾರವನ್ನು ಈ ಎರಡೇ ಊಟಗಳ ಮೂಲಕ ಪಡೆಯಲು ಯತ್ನಿಸಿ. ಸರ್ವಥಾ ಉಪಹಾರ ಬಿಡಕೂಡದು, ಆದರೆ ಮಧ್ಯಾಹ್ನದ ಊಟ ಮತ್ತು ರಾತ್ರಿಯೂಟವನ್ನು ಕಡಿಮೆ ಮಾಡಬಹುದು.

ಅರ್ಧ ಚಮಚ ದಾಲ್ಚಿನ್ನಿ+ ಒಂದು ಚಮಚ ಜೇನು

ಅರ್ಧ ಚಮಚ ದಾಲ್ಚಿನ್ನಿ+ ಒಂದು ಚಮಚ ಜೇನು

ಒಂದು ಕಪ್‎ನಷ್ಟು ಬಿಸಿ ನೀರಿಗೆ ಅರ್ಧ ಚಮಚ ದಾಲ್ಚಿನ್ನಿಯನ್ನು ಸೇರಿಸಿಕೊಳ್ಳಿ. ದೊಡ್ಡ ದೊಡ್ಡ ಭಾಗಗಳಿದ್ದರೆ ಅದನ್ನು ಬೇರ್ಪಡಿಸಿ. ಇದಕ್ಕೆ ಒಂದು ಚಮಚ ಜೇನು ಸೇರಿಸಿ. ಖಾಲಿ ಹೊಟ್ಟೆಗೆ ಈ ದ್ರಾವಣವನ್ನು ಸೇವಿಸಿ ನಂತರ ಅರ್ಧಗಂಟೆಯ ಬಳಿಕ ಬೆಳಗ್ಗಿನ ಉಪಹಾರ ಸೇವಿಸಿ.‎ ರಾತ್ರಿ ವೇಳೆಯಲ್ಲಿ ಕೂಡ ಇದನ್ನು ಜ್ಯೂಸ್‎ನಂತೆ ನಿಮಗೆ ಸೇವಿಸಬಹುದಾಗಿದೆ. ಇದರಿಂದ ನಿಮಗೆ ಚೆನ್ನಾಗಿ ನಿದ್ರೆ ಬರಲಿದ್ದು ಹೊಟ್ಟೆಯನ್ನು ಭರ್ತಿಮಾಡಲಿದೆ. ಇದು ಜೀರ್ಣಕ್ರಿಯೆಯನ್ನು ವೇಗಗೊಳಿಸಿ ಒತ್ತಡವನ್ನು ನಿವಾರಿಸಲಿದೆ. ಜಾಸ್ತಿ ತಿನ್ನುವ ಅಭ್ಯಾಸವಿದ್ದವರು ಇಲ್ಲವೇ ರಾತ್ರಿ ಚೆನ್ನಾಗಿ ತಿಂದು ಜೀರ್ಣಕ್ರಿಯೆ ಸಮಸ್ಯೆ ಎದುರಾಗಿದೆ ಎಂದಾದಲ್ಲಿ ಈ ಜೇನು ದ್ರಾವಣ ನಿಮಗೆ ಆರಾಮದಾಯಕವಾಗಿದೆ. ಇದು ನೇರ ಕಾರ್ಬೊಹೈಡ್ರೇಟ್ ಆಗಿದ್ದು ಇದರಲ್ಲಿರುವ ಜೀರ್ಣಕ್ರಿಯೆಗೆ ಸುಗಮವಾಗಿರುವ ಸಕ್ಕರೆಯನ್ನು ಒಳಗೊಂಡಿದೆ.

ವೀಳ್ಯದೆಲೆ

ವೀಳ್ಯದೆಲೆ

ವೀಳ್ಯದೆಲೆಯಲ್ಲಿ ಹಲವು ಆರೋಗ್ಯಕರ ಅಂಶಗಳಿವೆ. ಜೀರ್ಣಕ್ರಿಯೆಗೆ ನೆರವಾಗುವುದು, ಹೊಟ್ಟೆಯಲ್ಲಿ ಹೆಚ್ಚಿನ ಜೀರ್ಣರಸಗಳು ಸ್ರವಿಸಲು ನೆರವಾಗಿ ಉಬ್ಬರವಾಗದಂತೆ ರಕ್ಷಣೆ ನೀಡುವುದು, ಮಲಬದ್ಧತೆಯನ್ನು ತಡೆಯುವುದು ಮೊದಲಾದವು ಈ ಎಲೆಯ ನೇರ ಉಪಯೋಗಗಳಾದರೆ ಕಾಳುಮೆಣಸಿನೊಂದಿಗೆ ಸೇವಿಸಿದರೆ ತೂಕವನ್ನೂ ಇಳಿಸಬಹುದು ಎಂದು ಇತ್ತೀಚೆಗೆ ತಿಳಿದುಬಂದಿದೆ.

ವೀಳ್ಯದೆಲೆಯನ್ನು ಜಗಿದಾಗ ಬಾಯಿಯಲ್ಲಿ ಜೊಲ್ಲು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದೇ ವೇಳೆಯಲ್ಲಿ ಜಠರಕ್ಕೆ ಸಿದ್ಧವಾಗಿರಲು ಮೆದುಳಿನಿಂದ ಸಂದೇಶ ಹೋಗುತ್ತದೆ. ಪರಿಣಾಮವಾಗಿ ಹೊಟ್ಟೆಹಸಿವು ಪ್ರಾರಂಭವಾಗುತತ್ದೆ. ಈ ದ್ರವವನ್ನು ನುಂಗಿದ ಬಳಿಕ ಹೊಟ್ಟೆಯಲ್ಲಿ ಈ ಮೊದಲು ಜೀರ್ಣಗೊಂಡಿದ್ದ ಆಹಾರದಲ್ಲಿದ್ದ ವಿಷಕಾರಿ ವಸ್ತುಗಳನ್ನು (ಆಯುರ್ವೇದದಲ್ಲಿ ಇದಕ್ಕೆ ಆಮ ಎಂದು ಕರೆಯುತ್ತಾರೆ) ಈ ದ್ರವ ಎದುರಿಸಿ ಹಾನಿಯಾಗುವುದನ್ನು ತಪ್ಪಿಸುತ್ತದೆ.

ಹಸಿವಾದರೆ ಹಸಿರು ತಿನ್ನಿ

ಹಸಿವಾದರೆ ಹಸಿರು ತಿನ್ನಿ

ನಮ್ಮ ಹೊಟ್ಟೆಯಲ್ಲಿ ಆಹಾರವಿಲ್ಲದಿದ್ದಾಗ ಆಹಾರ ಕಳಿಸುವಂತೆ ಮೆದುಳು ನೀಡುವ ಸೂಚನೆಯೇ ಹಸಿವು. ಹಸಿವಾದರೆ ಹೆಚ್ಚು ತಿನ್ನುವ ಮೂಲಕ ತೂಕ ಹೆಚ್ಚುತ್ತದೆ. ಆದ್ದರಿಂದ ಹಸಿವಾದರೆ, ವಿಶೇಷವಾಗಿ ರಾತ್ರಿ ಹೊತ್ತು ಹೆಚ್ಚು ಹಸಿವಾದರೆ ಹಸಿರು ಹಾಗೂ ಹಸಿಯಾಗಿ ಸೇವಿಸಬಹುದಾದ ತರಕಾರಿ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಜೊತೆಗೆ ಹಸಿರು ಟೀ ಅಥವಾ ಗಿಡಮೂಲಿಕೆಗಳ ಟೀ ಸೇವಿಸಿ.

ವಾಯುಪ್ರಕೋಪ ಹೆಚ್ಚಿಸುವ ಆಹಾರ ವರ್ಜಿಸಿ

ವಾಯುಪ್ರಕೋಪ ಹೆಚ್ಚಿಸುವ ಆಹಾರ ವರ್ಜಿಸಿ

ವಾಯುಪ್ರಕೋಪವನ್ನು ಹೆಚ್ಚಿಸುವ ಆಹಾರಗಳಾದ ಆಲುಗಡ್ಡೆ, ಬ್ರೋಕೋಲಿ, ಬದನೆ, ಎಲೆಕೋಸು, ಮದ್ಯ, ಜೋಳ, ಕಡ್ಲೆಬೇಳೆ, ಶೇಂಗಾ ಇತ್ಯಾದಿಗಳನ್ನು ವರ್ಜಿಸಿ. ವಾಯುಪ್ರಕೋಪದಿಂದ ಹೊಟ್ಟೆಯುಬ್ಬುತ್ತದೆ ಹಾಗೂ ದೇಹದ ಆಕಾರವನ್ನೂ ಕೆಡಿಸುತ್ತದೆ.

ನಿಮ್ಮ ಸಮಯಪಾಲನೆ ಸತತವಾಗಿರಲಿ

ನಿಮ್ಮ ಸಮಯಪಾಲನೆ ಸತತವಾಗಿರಲಿ

ಬೆಳಿಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ಯಾವ ಯಾವ ಆಹಾರವನ್ನು ತಿನ್ನಬಾರದೆಂದು ಒಂದು ಚಿಕ್ಕ ಪಟ್ಟಿ ಮಾಡಿಟ್ಟುಕೊಳ್ಳಿ. ಸೂಕ್ತ ಸಮಯಕ್ಕೆ ಆರೋಗ್ಯಕರ ಆಹಾರವನ್ನು ಮಿತಪ್ರಮಾಣದಲ್ಲಿ ಸೇವಿಸಿ. ಹಾಗೂ ಪ್ರತಿದಿನವೂ ಒಂದೇ ಸಮಯಕ್ಕೆ ಆಹಾರ ಸೇವಿಸಿ. ಕೆಲವೇ ದಿನಗಳಲ್ಲಿ ನಮ್ಮ ದೇಹ ಈ ಸಮಯಕ್ಕೆ ಹೊಂದಿಕೊಂಡು ಅಗತ್ಯವಿರುವ ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಹೆಚ್ಚಿನ ಸಹಕಾರಿ ನೀಡುತ್ತದೆ. ಸಮಯಪಾಲನೆ ಮಾಡದಿದ್ದರೆ ಜೀರ್ಣಕ್ರಿಯೆಯೂ ಏರುಪೇರಾಗುತ್ತದೆ ಹಾಗೂ ಹೆಚ್ಚು ಹೆಚ್ಚು ಆಹಾರ ತಿನ್ನಲು ಪ್ರೇರೇಪಿಸುತ್ತದೆ. ಇವುಗಳ ಜೊತೆಗೇ ಸಾಕಷ್ಟು ನಡಿಗೆ, ನಿಧಾನಗತಿಯ ಓಟ, ಮನೆಗೆಲಸ, ಮೆಟ್ಟಿಲುಗಳನ್ನು ಹತ್ತುವುದು ಮೊದಲಾದ ಲಘು ವ್ಯಾಯಾಮಗಳಿಂದ ತೂಕ ಇಳಿಸುವ ಪ್ರಕ್ರಿಯೆ ಹೆಚ್ಚಿನ ಬಲ ಸಿಗುತ್ತದೆ ಹಾಗೂ ಹೆಚ್ಚಿನ ಶ್ರಮವಿಲ್ಲದೇ ತೂಕ ಇಳಿಯುತ್ತದೆ.

ಶುಂಠಿ

ಶುಂಠಿ

ಶುಂಠಿ ತೂಕ ಕಳಕೊಳ್ಳಲು ಇದು ಅತ್ಯುತ್ತಮ ಗಿಡಮೂಲಿಕೆ. ಇದು ನೀವು ಸೇವಿಸುವ ಆಹಾರದಲ್ಲಿರುವ ಉಷ್ಣದ ಪ್ರಭಾವನ್ನು ನಿಯಂತ್ರಿಸಿ, ಪೂರ್ಣ ತೃಪ್ತಿ ಉಂಟು ಮಾಡಿ ಹೆಚ್ಚು ಕ್ಯಾಲರಿ ಇರುವ ಆಹಾರವನ್ನು ಸೇವಿಸದಂತೆ ನೋಡಿಕೊಳ್ಳುತ್ತದೆ.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀ ತೂಕ ಕಳಕೊಳ್ಳಲು ಬಯಸುವ ಪ್ರತಿಯೊಬ್ಬರಿಗೂ ಇಂದು ಗ್ರೀನ್ ಟೀ ಸಾಮಾನ್ಯವಾದ ಪಾನೀಯವಾಗಿದೆ. ಇದು ಪಚನಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕ್ಯಾಲರಿ ದಹಿಸಲು ನೆರವಾಗುತ್ತದೆ. ಗ್ರೀನ್ ಟೀಯನ್ನು ಆ್ಯಂಟಿಆಕ್ಸಿಡೆಂಟ್ ಗುಣಗಳಿದ್ದು, ಇದು ಕೊಬ್ಬು ದಹಿಸುವ ಪ್ರಕ್ರಿಯೆಗೆ ನೆರವಾಗುತ್ತದೆ. ಕೊಬ್ಬು ಕರಗಿಸಲು ಇದು ಅತ್ಯುತ್ತಮ ಗಿಡಮೂಲಿಕೆಗಳಲ್ಲಿ ಒಂದಾಗಿದೆ.

ದಾಸವಾಳದ ಹೂ

ದಾಸವಾಳದ ಹೂ

ನೀವು ದಾಸವಾಳದ ಹೂವಿನ ರುಚಿಯನ್ನು ಪ್ರೀತಿಸಿದರೆ ಆಗ ನೀವು ಹೆಚ್ಚು ಸಮಯ ತೆಗೆದುಕೊಳ್ಳದೆ ತೂಕ ಇಳಿಸಿಕೊಳ್ಳುವುದು ಖಂಡಿತ. ಇದರಲ್ಲಿ ನ್ಯೂಟ್ರೀನ್, ಫ್ಲವನಾಯಿಡ್ ಮತ್ತು ಹಲವಾರು ರೀತಿಯ ಖನಿಜಾಂಶಗಳಿವೆ. ಇವೆಲ್ಲವೂ ನಿಮ್ಮ ದೇಹವು ಕೊಬ್ಬು ಮತ್ತು ಕಾರ್ಬೋಹೈಡ್ರೆಟ್ಸ್‌ನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಇದನ್ನು ಯಾವುದೇ ರೀತಿಯಲ್ಲೂ ಸೇವಿಸಬಹುದು.

English summary

Natural remedies to Lose weight without Exercise

When you plan to lose weight quickly, you are been suggested by diet and fitness experts to cut down fat and exercise regularly. They say that dieting and exercising in a long term will fetch desired results but how long can you patiently wait for the magic to take place. For the fast moving life you need speedy weight loss tips. Take a look at some of our suggestions and achieve what you always wanted.
X
Desktop Bottom Promotion