ಸೂಪ್ ರೆಸಿಪಿ: ತಿಂಗಳೊಳಗೆ ದೇಹದ 10 ಕೆಜಿಯಷ್ಟು ತೂಕ ಇಳಿಕೆ!

By: Arshad
Subscribe to Boldsky

ತೂಕ ಕಳೆದುಕೊಳ್ಳಲಿಚ್ಛಿಸುವ ವ್ಯಕ್ತಿಗಳಿಗೆ ಸೂಪ್ ಉತ್ತಮವಾದ ಆಯ್ಕೆಯಾಗಿದ್ದು ಆರೋಗ್ಯಕರವೂ ಆಗಿದೆ. ತೂಕ ಕಳೆದುಕೊಳ್ಳುವವರಿಗೆ ದ್ರವಾಹಾರ ಹೆಚ್ಚು ಸೂಕ್ತ. ಈ ಆಹಾರ ಸುಲಭವಾಗಿ ಜೀರ್ಣವಾಗುವುದು ಮಾತ್ರವಲ್ಲ, ಸುಲಭವಾಗಿ ಇದರ ಪೋಷಕಾಂಶಗಳನ್ನು ಹೀರಿಕೊಳ್ಳಲೂ ಸಾಧ್ಯವಾಗುತ್ತದೆ.  ಅಲ್ಲದೇ ನೀರು ಹೆಚ್ಚಿರುವ ಕಾರಣ ಕೊಂಚ ಪ್ರಮಾಣಕ್ಕೇ ಹೊಟ್ಟೆ ತುಂಬಿದಂತಾಗಿ ಅನಗತ್ಯವಾದ ಆಹಾರವನ್ನು ಸೇವಿಸದಂತೆ ತಡೆಯುತ್ತದೆ ಹಾಗೂ ಲಭ್ಯವಿರುವ ಪೋಷಕಾಂಶಗಳ ಗರಿಷ್ಟ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?

ವಾಸ್ತವವಾಗಿ ಸೂಪ್ ಎಂದರೆ ಊಟಕ್ಕೂ ಮುನ್ನ ಬಡಿಸುವ ಖಾದ್ಯವಾಗಿದ್ದು ಇದು ಹಸಿವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಆದರೆ ಕೆಲವು ಸೂಪ್ ಗಳು ಇದಕ್ಕೆ ವ್ಯತಿರಿಕ್ತವಾಗಿ ಕೆಲಸ ಮಾಡುತ್ತವೆ, ಅಂದರೆ ಇದರ ಸೇವನೆಯ ಬಳಿಕ ಊಟದ ತೃಪ್ತಿಯನ್ನು ಒದಗಿಸಿ ಹಸಿವು ನೀಗುವಂತೆ ನೋಡಿಕೊಳ್ಳುತ್ತವೆ. ಈ ಸೂಪ್ ಗಳು ಜೀವರಾಸಾಯನಿಕ ಕ್ರಿಯೆಯನ್ನು ತೀವ್ರಗೊಳಿಸುವುದು ಮಾತ್ರವಲ್ಲ, ದೇಹದಲ್ಲಿ ಸಂಗ್ರಹವಾಗಿದ್ದ ಕ್ಯಾಲೋರಿಗಳನ್ನು ಶೀಘ್ರವಾಗಿ ದಹಿಸಲೂ ನೆರವಾಗುತ್ತದೆ.

ಇಂದು ಸಾದರಪಡಿಸಲಾಗುತ್ತಿರುವ ಸೂಪ್‌ಗಳು ತೂಕವನ್ನು ಕಳೆದುಕೊಳ್ಳಲು ನೆರವಾಗುವುದರ ಜೊತೆಗೇ ಹಸಿವಾಗದಂತೆ ತಡೆದು ತನ್ಮೂಲಕ ಕ್ಯಾಂಡಿ, ಹುರಿದ, ಕರಿದ, ಸಕ್ಕರೆಭರಿತ ಮೊದಲಾದ ಅನಾರೋಗ್ಯಕರ ಸಿದ್ಧ ಆಹಾರಗಳನ್ನು ತಿನ್ನುವುದರಿಂದ ತಡೆಯುತ್ತದೆ. ಏಕೆಂಡರೆ ಈ ಸೂಪ್ ಕುಡಿದ ಬಳಿಕ ಮೆದುಳಿಗೆ ತೃಪ್ತಿಯ ಸೂಚನೆ ಲಭಿಸಿ ಹೊಟ್ಟೆ ಭರ್ತಿಯಾಗಿದೆ ಇನ್ನು ಹೆಚ್ಚು ತಿನ್ನುವ ಅಗತ್ಯವಿಲ್ಲ ಎಂದು ನಿರ್ಧರಿಸುವ ಮೂಲಕ ಅನಗತ್ಯವಾಗಿ ತಿನ್ನುವುದರಿಂದ ತಡೆಯುತ್ತದೆ.   ದೇಹದ ಹೆಚ್ಚುವರಿ ತೂಕದ ನಿಯಂತ್ರಣಕ್ಕೆ ಜೇನಿನಲ್ಲಿದೆ ಪರಿಹಾರ

ಇಂದು ಈ ಗುಣವಿರುವ ಕೆಲವು ಸೂಪ್‌ಗಳನ್ನು ಸಂಗ್ರಹಿಸಲಾಗಿದ್ದು ಇವುಗಳ ನಿಯಮಿತ ಸೇವನೆಯಿಂದ ಒಂದೇ ತಿಂಗಳಲ್ಲಿ ತೂಕ ಕಡಿಮೆಯಾಗಲು ಪ್ರಾರಂಭವಾಗುವುದನ್ನು ಗಮನಿಸಬಹುದು. ಸರಿಯಾದ ಕ್ರಮದಲ್ಲಿ ಸೇವಿಸುತ್ತಾ ಬಂದರೆ ಹೆಚ್ಚಿನ ಶ್ರಮವಿಲ್ಲದೇ ಹತ್ತು ಕೇಜಿಗಳವರೆಗೂ ತೂಕ ಇಳಿಸಬಹುದು....    

ಬಿಸಿ ಮತ್ತು ಹುಳಿಯಾದ ಕೋಸಿನ ಸೂಪ್

ಬಿಸಿ ಮತ್ತು ಹುಳಿಯಾದ ಕೋಸಿನ ಸೂಪ್

ಈ ಸೂಪ್ ತಯಾರಿಸಲು ಕೊಂಚ ಎಲೆಕೋಸನ್ನು ಚಿಕ್ಕದಾಗಿ ತುರಿದು ಆಲಿವ್ ಎಣ್ಣೆಯಲ್ಲಿ ಚಿಕ್ಕ ಉರಿಯಲ್ಲಿ ಹುರಿದುಕೊಳ್ಳಬೇಕು. ಬಳಿಕ ಕಾಳುಮೆಣಸು, ಉಪ್ಪು, ಸೇಬಿನ ಶಿರ್ಕಾ ಮತ್ತು ಒಂದು ಟೊಮಾಟೋ ಸೇರಿಸಿ ಕೊಂಚ ಹುರಿಯಬೇಕು. ಬಳಿಕ ಕೋಸಿನ ತುರಿ ಮುಳುಗುವಷ್ಟು ನೀರು ಬೆರೆಸಿ ಸುಮಾರು ಇಪ್ಪತ್ತು ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಬೇಕು. ಈ ಸೂಪ್‌ನಲ್ಲಿ ಕೇವಲ 248 ಕ್ಯಾಲೋರಿಗಳಿವೆ ಹಾಗೂ ಜೀವರಾಸಾಯನಿಕ ಕ್ರಿಯೆಯನ್ನು ತೀವ್ರಗೊಳಿಸಿ ಹೆಚ್ಚಿನ ಕ್ಯಾಲೋರಿಗಳನ್ನು ಖರ್ಚುಮಾಡಲು ನೆರವಾಗುತ್ತದೆ.

ಕಪ್ಪು ಬೀನ್ಸ್ ಸೂಪ್

ಕಪ್ಪು ಬೀನ್ಸ್ ಸೂಪ್

ನಾಲ್ಕು ಎಸಳು ಬೆಳ್ಳುಳ್ಳಿ, ಒಂದು ಈರುಳ್ಳಿ - ಚಿಕ್ಕದಾಗಿ ಹೆಚ್ಚಿದ್ದು, ಒಂದು ದೊಡ್ಡ ಚಮಚ ಜೀರಿಗೆ ಇಷ್ಟನ್ನೂ ಕೊಂಚ ಆಲಿವ್ ಎಣ್ಣೆಯೊಂದಿಗೆ ನೀರುಳ್ಳಿ ಕೆಂಪಗಾಗುವವರೆಗೆ ಹುರಿಯಿರಿ. ಇದಕ್ಕೆ ಮೂರು ಟೊಮಾಟೋ ಹಾಗೂ ನಾಲ್ಕು ಹಸಿಮೆಣಸು ಹಾಕಿ ಹುರಿಯಿರಿ. ಬಳಿಕ ನಿನ್ನೆ ರಾತ್ರೆ ತಣ್ಣೀರಿನಲ್ಲಿ ಮುಳುಗಿಸಿಟ್ಟ ಕಪ್ಪು ಬೀನ್ಸ್ ಅಥವಾ ರಾಜ್ಮಾ ಕಾಳುಗಳನ್ನು ಸೇರಿಸಿ ಕೊಂಚ ನೀರು ಹಾಕಿ ಸುಮಾರು ಇಪ್ಪತ್ತು ನಿಮಿಷ ಬೇಯಿಸಿ. ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸುವುದು ಉತ್ತಮ. ಈ ಸೂಪ್ ನಲ್ಲಿ ಕೇವಲ 245 ಕ್ಯಾಲೋರಿಗಳಿವೆ ಹಾಗೂ ಹತ್ತು ಗ್ರಾಂ ಪ್ರೋಟೀನುಇದೆ. ಇದು ತೂಕ ಇಳಿಸಲು ಸಹಕಾರಿಯಾಗಿದೆ. ವಿಶೇಷವಾಗಿ ಹೊಟ್ಟೆಯ ಕೊಬ್ಬು ಶೀಘ್ರವಾಗಿ ಕರಗಿಸಲು ಸಹಕರಿಸುತ್ತದೆ.

ಕುಂಬಳ ಮತು ಚೀಸ್ ಸೂಪ್

ಕುಂಬಳ ಮತು ಚೀಸ್ ಸೂಪ್

ಈ ಸೂಪ್ ಹೆಚ್ಚು ಶಕ್ತಿದಾಯಕವಾಗಿದ್ದು ಹೆಚ್ಚಿನ ಹೊತ್ತು ಹಸಿವಾಗದೇ ಇರಲು ನೆರವಾಗುತ್ತದೆ. ವಿಶೇಷವಾಗಿ ಸಕ್ಕರೆಯ ಬಯಕೆಯನ್ನು ಈ ಸೂಪ್ ನ ಸೇವನೆ ಉಡುಗಿಸುತ್ತದೆ. ಈ ಸೂಪ್ ತಯಾರಿಸಲು ಒಂದು ನೀರುಳ್ಳಿ-ಚಿಕ್ಕದಾಗಿ ಹೆಚ್ಚಿದ್ದು, ಮೂರು ಹಸಿಮೆಣಸು, ಒಂದು ದೊಡ್ಡಚಮಚ ಕಾಳುಮೆಣಸು ಹಾಗೂ ಒಂದು ದೊಡ್ಡಚಮಚ ಚೀಸ್ ಇಷ್ಟನ್ನೂ ಚಿಕ್ಕ ಉರಿಯಲ್ಲಿ ಕೊಂಚನೆ ಹುರಿಯಿರಿ. ಇದಕ್ಕೆ ಒಂದೆರಡು ತುಂಡು ಕುಂಬಳದ ಹೋಳುಗಳನ್ನು ಹಾಕಿ ಇವು ಮುಳುಗುವಷ್ಟು ನೀರು ಹಾಕಿ ಇಪ್ಪತ್ತು ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ.

 ಬಿಸಿ ಕ್ಯಾರೆಟ್ ಮತ್ತು ಬೆಳ್ಳುಳ್ಳಿ ಸೂಪ್

ಬಿಸಿ ಕ್ಯಾರೆಟ್ ಮತ್ತು ಬೆಳ್ಳುಳ್ಳಿ ಸೂಪ್

ಒಂದು ಕ್ಯಾರೆಟ್ ತುರಿ, ಒಂದು ಚಿಕ್ಕಚಮಚ ಕಾಳು ಮೆಣಸು ಮತ್ತು ಕೆಲವು ಎಸಳು ಜಜ್ಜಿದ ಬೆಳ್ಳುಳ್ಳಿ ಯನ್ನು ಕೊಂಚ ಆಲಿವ್ ಎಣ್ಣೆಯೊಂದಿಗೆ ಐದು ನಿಮಿಷಗಳ ಕಾಲ ಹುರಿಯಿರಿ. ಬಳಿಕ ಕೊಂಚ ನೀರು ಹಾಕಿ ಕುದಿಸಿ. ಕ್ಯಾರೆಟ್ ಮೃದುವಾಗುವವರೆಗೆ ಕುದಿಸಿ ಬಳಿಕ ಕೊಂಚ ಮೆಣಸಿನ ಸಾಸ್ ಹಾಕಿ ಕಲಕಿ. ಈ ಸೂಪ್ ಕೊಂಚ ಖಾರವಾಗಿದ್ದರೂ ಹೆಚ್ಚು ಕ್ಯಾಲೋರಿಗಳನ್ನು ಶೀಘ್ರವಾಗಿ ಖರ್ಚು ಮಾಡಲು ನೆರವಾಗುತ್ತದೆ. ಈ ಸೂಪ್ ರಾತ್ರಿಯೂಟದ ಮುನ್ನ ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

ತಣ್ಣನೆಯ ಸೌತೆಯ ಸೂಪ್

ತಣ್ಣನೆಯ ಸೌತೆಯ ಸೂಪ್

ಕ್ಯಾಲೋರಿಗಳನ್ನು ಶೀಘ್ರವಾಗಿ ಖರ್ಚುಮಾಡಲು ಬಿಸಿ ಸೂಪ್ ಗಿಂತಲೂ ತಣ್ಣನೆಯ ಸೂಪ್ ಉತ್ತಮ. ಏಕೆಂದರೆ ತಣ್ಣನೆಯ ಈ ದ್ರವವನ್ನು ಬಿಸಿಮಾಡಲು ಕ್ಯಾಲೋರಿಗಳನ್ನು ಬಳಸಬೇಕಾಗಿ ಬರುತ್ತದೆ. ಈ ಸೂಪ್ ತಯಾರಿಸಲು ಕೆಲವು ಸೌತೆಯ ಹೋಳುಗಳನ್ನು ಕೊಂಚ ನೀರಿನಲ್ಲಿ ಮೃದುವಾಗುವವರೆಗೆ ಬೇಯಿಸಿ. ಬಳಿಕ ಇದನ್ನು ಹೊರತೆಗೆದು ತಣಿಸಿ. ಬಳಿಕ ಕೊಂಚ ಮೊಸರು ಮತ್ತು ಉಪ್ಪು ಬೆರೆಸಿ ಮಿಕ್ಸಿಯಲ್ಲಿ ಕಡೆಯಿರಿ. ಬಳಿಕ ಫ್ರಿಜ್ಜಿನಲ್ಲಿರಿಸಿ. ಈ ಸೂಪ್ ಮದ್ಯಾಹ್ನದ ಊಟಕ್ಕೂ ಮುನ್ನ ಸೇವಿಸಿ.

ಬೀಟ್ರೂಟ್ ಬೆಳ್ಳುಳ್ಳಿ ಸೂಪ್

ಬೀಟ್ರೂಟ್ ಬೆಳ್ಳುಳ್ಳಿ ಸೂಪ್

ಈ ಸೂಪ್ ತೂಕ ಇಳಿಸಲು ನೆರವಾಗುವುದು ಮಾತ್ರವಲ್ಲ, ಇದರಿಂದ ರಕ್ತದ ಕಣಗಳ ಸಂಖ್ಯೆಯಲ್ಲಿಯೂ ವೃದ್ಧಿಯಾಗುತ್ತದೆ. ಅಲ್ಲದೇ ಚರ್ಮದ ಮತ್ತು ಕೂದಲಿನ ಕಾಂತಿ ಹೆಚ್ಚಿಸಲೂ ನೆರವಾಗುತ್ತದೆ. ಈ ಸೂಪ್ ತಯಾರಿಸಲು ಒಂದು ಬೀಟ್ ರೂಟ್ ಅನ್ನು ಚಿಕ್ಕದಾಗಿ ಹೆಚ್ಚಿ ನಾಲ್ಕು ಸೀಟಿ ಬರುವವರೆಗೆ ಕುದಿಸಿ. ಬಳಿಕ ಈ ನೀರನ್ನು ಪಾತ್ರೆಯೊಂದರಲ್ಲಿ ಸಂಗ್ರಹಿಸಿ ಬೀಟ್ರೂಟ್ ತುರಿಯನ್ನು ಪ್ರತ್ಯೇಕಿಸಿ. ಒಂದು ಬಾಣಲೆಯಲ್ಲಿ ಕೊಂಚ ಓಟ್ಸ್, ಈರುಳ್ಳಿ, ಟೊಮಾಟೋ ಹುರಿದ ಬಳಿಕ ಬೀಟ್ರೂಟ್ ತುರಿ ಸೇರಿಸಿ ಕೊಂಚ ಹುರಿಯಿರಿ. ಬಳಿಕ ಕೊಂಚ ನೀರು ಮತ್ತು ಮೊದಲೇ ತೆಗೆದಿಟ್ಟಿದ್ದ ನೀರನ್ನು ಬೆರೆಸಿ ಹತ್ತು ನಿಮಿಷಗಳವೆರೆಗೆ ಕುದಿಸಿ ಬಿಸಿಬಿಸಿಯಾಗಿ ಕುಡಿಯಿರಿ.

English summary

Lose Up To 10 Kg With These Soups For Weight Loss

In this article, we have summed up some of the best soups for you to lose weight in just 1 month. Have a look these mighty soups for weight loss and lose up to 10 kg.
Subscribe Newsletter