ಕಿರಿಕಿರಿ ಶೀತಕ್ಕೆ ತಲೆಬಿಸಿ ಮಾಡಬೇಡಿ! ಆಹಾರ ಪಥ್ಯ ಹೀಗಿರಲಿ...

By: Arshad
Subscribe to Boldsky

ಶೀತ ಬರದೇ ಇರುವ ವ್ಯಕ್ತಿಯೇ ಈ ಜಗತ್ತಿನಲ್ಲಿಲ್ಲ. ವಾಸ್ತವವಾಗಿ ಶೀತವೆಂದರೆ ರೋಗವಲ್ಲ. ಬದಲಿಗೆ ನಮ್ಮ ದೇಹವನ್ನು ಪ್ರವೇಶಿಸುವ ವೈರಸ್ಸುಗಳನ್ನು ಹೊರಹಾಕಲು ದೇಹ ಅನುಸರಿಸುವ ರಕ್ಷಣಾ ತಂತ್ರ. ಶೀತಕ್ಕೆ ಸುಮಾರು ಇನ್ನೂರಕ್ಕೂ ಹೆಚ್ಚು ಬಗೆಯ ವೈರಸ್ಸುಗಳು ಕಾರಣವಾಗುತ್ತವೆ.  ಶೀತ ಆದಾಗ ಏನು ಮಾಡಬೇಕು, ಏನು ಮಾಡಬಾರದು?

ಇದ್ದರಲ್ಲಿ rhinovirus ಎಂಬ ವೈರಸ್ಸಿನಿಂದ ಬರುವ ಶೀತ ಅಂಟುರೋಗವಾಗಿದ್ದು ರೋಗಿ ಸೀನಿದ ಅಥವಾ ಕೆಮ್ಮಿದ ಬಳಿಕ ಗಾಳಿಯಲ್ಲಿ ತೇಲಾಡುವ ಸೂಕ್ಷ್ಮ ಕಣಗಳನ್ನು ಉಸಿರಾಡುವ ಯಾರಿಗೂ ಸುಲಭವಾಗಿ ಅಂಟಿಕೊಳ್ಳುತ್ತದೆ.  ಶೀತ ಇದ್ದಾಗ ಆದಷ್ಟು ಇಂತಹ ಆಹಾರಗಳಿಂದ ದೂರವಿರಿ

ಶೀತ ಬಂದ ಬಳಿಕ ಮದ್ದು ತೆಗೆದುಕೊಳ್ಳುವುದಕ್ಕಿಂತ ಶೀತ ಬರುವ ಮುನ್ನವೇ ಇದನ್ನು ಎದುರಿಸಲು ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಸಬಲಗೊಳಿಸುವುದೇ ಜಾಣತನದ ಕ್ರಮ. ಈ ಕೆಲಸವನ್ನು ಕೆಲವು ಆಹಾರಗಳು ಸಮರ್ಥವಾಗಿ ನಿಭಾಯಿಸುತ್ತವೆ. ಚಿಕ್ಕವರಿಗೂ ದೊಡ್ಡವರಿಗೂ ಸೂಕ್ತವಾದ ಕೆಲವು ಆಹಾರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ...  

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಪ್ರಬಲವಾದ ಬ್ಯಾಕ್ಟೀರಿಯಾನಿವಾರಕ ಮತ್ತು ವೈರಸ್ ನಿವಾರಕ ಗುಣಗಳಿವೆ. ಇದರಲ್ಲಿರುವ ಆಲಿಸಿನ್ ಎಂಬ ಪೋಷಕಾಂಶ ಒಂದು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದ್ದು ಶೀತವನ್ನು ಎದುರಿಸಲು ದೇಹವನ್ನು ಗರಿಷ್ಠ ಮಟ್ಟದಲ್ಲಿ ರೋಗದ ವಿರುದ್ಧ ಹೋರಾಡಲು ಸನ್ನದ್ಧಗೊಳಿಸುತ್ತದೆ. ಮಕ್ಕಳಿಗೂ ಹಿರಿಯರಿಗೂ ಬೆಳ್ಳುಳ್ಳಿ ಸೂಕ್ತವಾಗಿದ್ದು ಶೀತದ ವಿರುದ್ಧ ಹೋರಾಡುವ ಶಕ್ತಿಯಿರುವ ಅತ್ಯುತ್ತಮವಾದ ಆಹಾರವಾಗಿದೆ.ಜ್ವರ ಶೀತಕ್ಕೆ ಸಿದ್ಧೌಷಧ-ಬೆಳ್ಳುಳ್ಳಿ ಕರಿಮೆಣಸು ರಸಂ

ಹಸಿರು ಟೀ

ಹಸಿರು ಟೀ

ಹಸಿರು ಟೀಯಲ್ಲಿ ವಿವಿಧ ರೋಗಗಳ ವಿರುದ್ಧ ಹೋರಾಡುವ ಶಕ್ತಿಯಿರುವ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಶೀತದ ವಿರುದ್ಧ ಹೋರಾಡಲು ವೈರಸ್ ನಿರೋಧಕ ಗುಣವೂ ಇದೆ. ಶೀತದ ವಿರುದ್ಧ ಹೋರಾಡುವ ಶಕ್ತಿಯಿರುವ ಆಹಾರಗಳಲ್ಲಿ ಹಸಿರು ಟೀ ಪ್ರಮುಖವಾಗಿದೆ. ನಿಯಮಿತವಾಗಿ ಗ್ರೀನ್ ಟೀ ಸೇವನೆ-ಆರೋಗ್ಯಕ್ಕೆ ಬಹಳ ಒಳ್ಳೆಯದು

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು

ಕಿತ್ತಳೆಯಲ್ಲಿ ವಿಟಮಿನ್ ಸಿ ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು ವಿಶೇಷವಾಗಿ ವೈರಸ್ಸುಗಳ ಸೋಂಕಿನಿಂದ ರಕ್ಷಿಸಲು ನೆರವಾಗುತ್ತದೆ. ವಿಟಮಿನ್ ಸಿ ಒಂದು ಪ್ರಬಲವಾದ ಆಂಟಿ ಆಕ್ಸಿಡೆಂಟು ಆಗಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.ಹುಳಿ ಸಿಹಿ ರುಚಿಯ ಕಿತ್ತಳೆ ಹಣ್ಣಿನ ಚಿನ್ನದಂತಹ ಗುಣಗಳು

ಅಣಬೆ

ಅಣಬೆ

ತಿನ್ನಲು ಸಾಧ್ಯವಿರುವ ಅಣಗೆಯಲ್ಲಿಯೂ ವೈರಸ್ಸುಗಳ ವಿರುದ್ಧ ಹೋರಾಡುವ ಶಕ್ತಿಯಿದೆ. ಇದರ ಸೇವನೆಯಿಂದ ನಮ್ಮ ದೇಹದಲ್ಲಿ ಸೈಟೋಕೈನ್ಸ್ (cytokines) ಎಂಬ ಕಣಗಳು ಉತ್ಪತ್ತಿಯಾಗುತ್ತವೆ. ಇವು ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿವೆ.ಅಣಬೆ ತಿಂದರೆ ಆರೋಗ್ಯಕ್ಕೆ ನಾನಾ ಲಾಭ!

ಕೆಂಪು ದೊಡ್ಡ ಮೆಣಸು

ಕೆಂಪು ದೊಡ್ಡ ಮೆಣಸು

ಈ ಮೆಣಸಿನಲ್ಲಿ ಉರಿಯೂತ ನಿವಾರಕ ಗುಣ ಹಾಗೂ ಆಂಟಿ ಆಕ್ಸಿಡೆಂಟುಗಳೂ, ಇತರ ಪೋಷಕಾಂಶಗಳೂ ಇದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಮೆಣಸು ದೊಡ್ಡವರಿಗೂ ಚಿಕ್ಕವರಿಗೂ ಸೇವನೆಗೆ ಸೂಕ್ತವಾಗಿವೆ.

ಸಿಹಿಗೆಣಸು

ಸಿಹಿಗೆಣಸು

ಇದರಲ್ಲಿರುವ ಬೀಟಾ-ಕ್ಯಾರೋಟಿನ್ ಎಂಬ ಪೋಷಕಾಂಶಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಉಳಿಸಿಕೊಂಡು ಬರಲು ನೆರವಾಗುತ್ತದೆ ಹಾಗೂ ದೇಹದ ಚಟುವಟಿಕೆಗಳು ಸುಲಲಿತವಾಗಿ ನಡೆಯುವಂತೆ ಮಾಡುತ್ತದೆ.ಮನೆ ಔಷಧ: ಮಧುಮೇಹ ರೋಗಕ್ಕೆ ರಾಮಬಾಣ-'ಸಿಹಿ ಗೆಣಸು'

 
English summary

Foods That Will Help Prevent Cold In Children And Adults

This contagious viral infection will have an effect on the upper part of the respiratory system, including your nose and throat. It spreads through sneezing and coughing. So, the best way to prevent this is to have foods that can prevent cold. So This article deals with the top foods that can prevent common cold in children and adult.
Story first published: Wednesday, March 1, 2017, 23:31 [IST]
Subscribe Newsletter