ಶೀತ ಇದ್ದಾಗ ಆದಷ್ಟು ಇಂತಹ ಆಹಾರಗಳಿಂದ ದೂರವಿರಿ

By Jaya Subramanya
Subscribe to Boldsky

ಚಳಿಗಾಲ ಬಂತೆಂದರೆ ಸಾಕು, ಎಲ್ಲೆಡೆ ಫ್ಲೂ ಜ್ವರ, ಶೀತ, ಕೆಮ್ಮು ಆವರಿಸುತ್ತದೆ. ಇದನ್ನು ತಡೆಯಲು ಹಲವಾರು ಔಷಧಿ, ಮುನ್ನೆಚ್ಚರಿಕೆ, ದಪ್ಪನೆಯ ಉಣ್ಣೆಯ ಉಡುಪು ಮೊದಲಾದವುಗಳನ್ನೆಲ್ಲಾ ಅನುಸರಿಸಿದರೂ ಯಾವುದೋ ಮಾಯೆಯಲ್ಲಿ ಶೀತಕ್ಕ ಬಂದೇ ಬಿಡುತ್ತಾಳೆ! ಸಾಮಾನ್ಯವಾಗಿ ಶೀತ, ಕೆಮ್ಮು ಜ್ವರ ಮೊದಲಾದ ಕಾಯಿಲೆಗಳು ಸರ್ವೇ ಸಾಮಾನ್ಯವಾಗಿದ್ದರೂ ಇದು ಉಂಟುಮಾಡುವ ಪರಿಣಾಮಗಳು ಮಾತ್ರ ಅಸಹನೀಯವಾಗಿರುತ್ತದೆ.

ಇದಕ್ಕೆಲ್ಲಾ ಕಾರಣ ಕಲುಷಿತ ವಾತಾವರಣ, ಸಹೋದ್ಯೋಗಿಗಳಿಗೆ ಅಥವಾ ಸಹಪಾಠಿಗಳಿಗೆ ಶೀತ ಉಂಟಾದಲ್ಲಿ, ಚಳಿಗಾಲದ ಸಮಯದಲ್ಲಿ, ಮಂಜು ನಮ್ಮನ್ನು ಸೋಕಿದಲ್ಲಿ ಶೀತ ನಮ್ಮನ್ನು ಆವರಿಸಿಬಿಡುತ್ತದೆ.... ಚಳಿಗಾಲದ ಅತಿಥಿ 'ಶೀತಕ್ಕೆ' ಕಡಿವಾಣ ಹಾಕುವ ಮನೆಮದ್ದು

ಆದರೆ ಶೀತದೊಂದಿಗೆ ಬರುವ ತಲೆನೋವು, ಗಂಟು ಉರಿತ, ಮೈಕೈನೋವು, ಸಮಸ್ಯೆಗಳು ಯಾರಿಗೆ ಬೇಕು ಹೇಳಿ...? ಹಾಗಿದ್ದರೆ ನಿಮಗೆ ಬಂದಿರುವ ಶೀತವನ್ನು ಕೂಡಲೇ ಹೊಡೆದೋಡಿಸಬೇಕು ಎಂದಾದಲ್ಲಿ ನೀವು ಕೆಲವೊಂದು ಆಹಾರಗಳ ಸೇವನೆಯನ್ನು ನಿಲ್ಲಿಸಲೇಬೇಕು.    ನೆಗಡಿ-ತಲೆನೋವಿಗೆಲ್ಲಾ ವೈದ್ಯರ ಹಂಗೇಕೆ?

ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆಗಳನ್ನು ಮಾಡಿದಾಗ ಹೆಮ್ಮಾರಿ ಶೀತವನ್ನು ಹೆಡೆಮುರಿ ಕಟ್ಟಿ ವಾಪಾಸು ಕಳುಹಿಸಬಹುದಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಶೀತಕ್ಕೆ ಕಾರಣವಾಗಿರುವ ನೀವು ಸೇವಿಸಲೇಬಾರದ ಆಹಾರ ಪದಾರ್ಥಗಳ ಪಟ್ಟಿಯನ್ನು ಇಲ್ಲಿ ನಾವು ನೀಡುತ್ತಿದ್ದು ಪರಿಶೀಲಿಸಿಕೊಳ್ಳಿ.....   

ತಂಪು ಪಾನೀಯಗಳು

ತಂಪು ಪಾನೀಯಗಳು

ತಂಪು ಪಾನೀಯಗಳ ಸೇವನೆ ಕೂಡ ನಿಮ್ಮನ್ನು ಶೀತದಿಂದ ಹೆಚ್ಚು ಬಾಧಿತವಾಗುವಂತೆ ಮಾಡುತ್ತವೆ. ಇದು ಸ್ವಭಾವದಲ್ಲಿ ಶೀತದಿಂದ ಕೂಡಿದ್ದು ದೇಹಕ್ಕೆ ಹೆಚ್ಚುವರಿ ತಂಪನ್ನು ನೀಡಿ ಶೀತವನ್ನುಂಟು ಮಾಡುತ್ತದೆ.

ಕರಿದ ಆಹಾರಗಳು

ಕರಿದ ಆಹಾರಗಳು

ಸಮೋಸಾ, ಫ್ರೆಂಚ್ ಫ್ರೈಸ್, ಬೋಂಡಾ ಮೊದಲಾದ ಕರಿದ ಆಹಾರ ಪದಾರ್ಥಗಳು ಸಾಮಾನ್ಯ ಶೀತಕ್ಕೆ ಕಾರಣವಾಗಿವೆ. ಈ ಆಹಾರಗಳಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗಿದ್ದು ಮೂಗಿನ ಕುಳಿಗಳ ಉರಿಯೂತಕ್ಕೆ ಕಾರಣವಾಗಿವೆ.

ಮೊಸರು

ಮೊಸರು

ನಿಯಮಿತವಾಗಿ ಬಳಸುವ ಮೊಸರು ಅಥವಾ ಯೋಗರ್ಟ್ ಶೀತವನ್ನು ಉಂಟುಮಾಡುತ್ತದೆ. ಇದು ದೇಹದ ಉಷ್ಣತೆಯನ್ನು ಇಳಿಮುಖಗೊಳಿಸಿ, ಉಸಿರಾಟದ ಸೋಂಕುಗಳಿಗೆ ನೀವು ಬೇಗನೇ ಒಳಗಾಗುವಂತೆ ಮಾಡುತ್ತದೆ.

ಸಂಸ್ಕರಿಸಿದ ಮಾಂಸ

ಸಂಸ್ಕರಿಸಿದ ಮಾಂಸ

ಪರ್ಯಾಪ್ತ ಕೊಬ್ಬಿನಾಮ್ಲಗಳಂತಹ ಹಾನಿಕಾರಕ ಕೊಬ್ಬುಗಳನ್ನು ಇದು ಹೊಂದಿದ್ದು, ಇದು ಶೀತ ಮತ್ತು ಜ್ವರಕ್ಕೆ ನಿಮ್ಮನ್ನು ತೀವ್ರವಾಗಿ ಒಳಗಾಗುವಂತೆ ಮಾಡುತ್ತದೆ.

ಚೀಸ್

ಚೀಸ್

ಶೀತಕ್ಕೆ ನಿಮ್ಮನ್ನು ಹೆಚ್ಚು ಒಳಗಾಗುವಂತೆ ಮಾಡುವ ಚೀಸ್, ದೇಹದಲ್ಲಿ ಮ್ಯೂಕಸ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಫಾಸ್ಟ್ ಫುಡ್

ಫಾಸ್ಟ್ ಫುಡ್

ಪಿಜಾ, ಬರ್ಗರ್‌ಗಳು, ಗೋಬಿ ಮಂಚೂರಿ ಮೊದಲಾದ ಫಾಸ್ಟ್‌ ಫುಡ್‌ಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಿ ಜ್ವರ ಮತ್ತು ಶೀತಕ್ಕೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ.

ಅನಾರೋಗ್ಯಕರ ಆಹಾರಗಳು

ಅನಾರೋಗ್ಯಕರ ಆಹಾರಗಳು

ಅನಾರೋಗ್ಯಕರವಾದ ಆಹಾರಗಳು ಸಾಮಾನ್ಯ ಶೀತವನ್ನು ಉಂಟುಮಾಡಲಿದ್ದು, ಇದು ಹಾನಿಕಾರಕ ಮೈಕ್ರೋಬ್‌ಗಳನ್ನು ಒಳಗೊಂಡಿರುತ್ತವೆ.

 
For Quick Alerts
ALLOW NOTIFICATIONS
For Daily Alerts

    English summary

    these-foods-can-cause-common-cold

    Apparently, there are certain common foods that we consume on a regular basis that can cause or worsen common cold. So, have a look at the list of foods you must not consume to avoid common cold!
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more