For Quick Alerts
ALLOW NOTIFICATIONS  
For Daily Alerts

ಶೀತ ಆದಾಗ ಏನು ಮಾಡಬೇಕು, ಏನು ಮಾಡಬಾರದು?

|

ಸಾಮಾನ್ಯ ಶೀತವನ್ನು ಶಾಶ್ವತವಾಗಿ ಹೋಗಲಾಡಿಸಲು ಸಾಧ್ಯವಿಲ್ಲ. ಔಷಧಿ ತೆಗೆದುಕೊಂಡಾಗ ಕಡಿಮೆಯಾಗುತ್ತದೆ, ಮತ್ತೆ ಕೆಲವು ದಿನಗಳ ಬಳಿಕ ಕಾಣಿಸಿಕೊಳ್ಳುತ್ತದೆ. ಶೀತ ಕಾಣಿಸಿಕೊಂಡಾಗ ಮದ್ದು ಮಾಡಿದರೆ ಬೇಗನೆ ಕಮ್ಮಿಯಾಗುತ್ತದೆ. ಆದರೆ ಅಡ್ಡ ಪರಿಣಾಮವಿಲ್ಲದ ಮದ್ದು ಮಾಡಬೇಕು, ಆದರೆ ಅದರ ಬಗ್ಗೆ ನಾವೇ ಯೋಚಿಸುವುದೇ ಇಲ್ಲ, ಶೀತ ಕಮ್ಮಿಯಾದರೆ ಸಾಕೆಂದು ಯೋಚಿಸುತ್ತೇವೆ. ಶೀತ ಬಂದಾಗ ಏನು ಮಾಡಬೇಕು, ಏನು ಮಾಡಬಾರದು ಎಂದು ತಿಳಿಯಲು ಮುಂದೆ ಓದಿ:

ಬಿಟ್ಟು, ಬಿಡದೆ ಕಾಡುವ ಶೀತಕ್ಕೆ ಮನೆ ಮದ್ದು ಮಾಡುವುದೇ ಒಳ್ಳೆಯದು. ಶೀತವನ್ನು ತಕ್ಷಣ ಶಮನ ಮಾಡುವ ಪರಿಣಾಮಕಾರಿಯಾದ ಮನೆ ಮದ್ದು ಏನು ಎಂದು ಮೊದಲಿಗೆ ನೋಡೋಣ ಬನ್ನಿ:

ನೀರು ಮತ್ತು ಇತರ ಪಾನೀಯಗಳು

ನೀರು ಮತ್ತು ಇತರ ಪಾನೀಯಗಳು

ನೀರು, ಜ್ಯೂಸ್ ಕುಡಿಯಿರಿ. ಇವು ದೇಹದಲ್ಲಿ ನೀರಿನಂಶ ಕಡಿಮೆಯಾಗುವುದನ್ನು ತಡೆಯುತ್ತದೆ. ಕಾಫಿ, ಮದ್ಯ, ಸೋಡಾ ಇವುಗಳನ್ನು ಶೀತವಾದಾಗ ಕುಡಿಯಬೇಡಿ, ಇವುಗಳು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.

ಉಪ್ಪು ನೀರು

ಉಪ್ಪು ನೀರು

ಅರ್ಧ ಗ್ಲಾಸ್ ಬಿಸಿ ನೀರಿಗೆ ಅರ್ಧ ಚಮಚ ಉಪ್ಪು ಹಾಕಿ ಮಿಕ್ಸ್ ಮಾಡಿ ಅದರಿಂದ ಬಾಯಿ ಮುಕ್ಕಳಿಸಿದರೆ ಗಂಟಲಿನ ಕೆರೆತ ಕಡಿಮೆಯಾಗುವುದು.

ಮೂಗಿಗೆ saline ಡ್ರಾಪ್ ಹಾಕುವುದು

ಮೂಗಿಗೆ saline ಡ್ರಾಪ್ ಹಾಕುವುದು

ಇದು ಮೂಗು ಕಟ್ಟಿದ್ದನ್ನು ಕಮ್ಮಿ ಮಾಡುತ್ತದೆ, ಇದರಿಂದ ಶೀತದಿಂದಾದ ತೊಂದರೆ ಕಡಿಮೆಯಾಗಿ ಉಸಿರಾಟ ಸರಾಗವಾಗಿ ಆಗುವುದು.

 ಚಿಕನ್ ಸೂಪ್

ಚಿಕನ್ ಸೂಪ್

ಶೀತವನ್ನು ಹೋಗಲಾಡಿಸುವ ಮತ್ತೊಂದು ಅತ್ಯುತ್ತಮವಾದ ಮನೆ ಮದ್ದೆಂದರೆ ಚಿಕನ್ ಸೂಪ್ . ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಕಾಡಿದ ಶೀತ ತಕ್ಷಣ ಇಲ್ಲವಾಗುವುದು.

 ಮಕ್ಕಳು ಮತ್ತು ವಯಸ್ಕರ ಮೇಲೆ ಶೀತ ಮತ್ತು ಕೆಮ್ಮಿನ ಔಷಧಿಗಳ ಪ್ರಭಾವ

ಮಕ್ಕಳು ಮತ್ತು ವಯಸ್ಕರ ಮೇಲೆ ಶೀತ ಮತ್ತು ಕೆಮ್ಮಿನ ಔಷಧಿಗಳ ಪ್ರಭಾವ

ಇವುಗಳು ತಕ್ಷಣಕ್ಕೆ ರಿಲೀಫ್ ನೀಡಿದರೂ ಈ ಔಷಧಿಗಳು ಅಡ್ಡ ಪರಿಣಾಮವನ್ನು ಬೀರುತ್ತದೆ. ಈ ಔಷಧಿಗಳನ್ನು ಕೆಲವು ದಿನಗಳವರೆಗೆ ನಿರಂತರವಾಗಿ ತೆಗೆದುಕೊಳ್ಳುತ್ತಿದ್ದರೆ ಖಂಡಿತ ಇವುಗಳು ನಮ್ಮ ಶರೀರದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

ಶುಷ್ಕ ಗಾಳಿ

ಶುಷ್ಕ ಗಾಳಿ

ಶುಷ್ಕ ಗಾಳಿಯಲ್ಲಿ ಶೀತ ತರುವ ಸೋಂಕಾಣುಗಳು ತುಂಬಾ ಚಟುವಟಿಕೆಯಿಂದ ಇರುತ್ತದೆ. ಆದ್ದರಿಂದಲೇ ಚಳಿಗಾಲದಲ್ಲಿ ಶೀತ, ಗೆಂಟಲು ಕೆರೆತ ಈ ರೀತಿಯ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು.

ಶೀತ ಬಂದಾಗ ನಾವು ಮಾಡಬಾರದ ಕಾರ್ಯಗಳು

ಶೀತ ಬಂದಾಗ ನಾವು ಮಾಡಬಾರದ ಕಾರ್ಯಗಳು

ಇಲ್ಲಿ ನಾವು ಕೆಲವೊಂದು ಅಂಶಗಳನ್ನು ಲಿಸ್ಟ್ ಮಾಡಿದ್ದೇವೆ, ಶೀತದಿಂದ ಮುಕ್ತಿ ಪಡೆಯಲು ನಾವೆಲ್ಲಾ ಈ ವಿಧಾನವನ್ನು ಅನುಸರಿಸುತ್ತೇವೆ, ಆದರೆ ಅದು ಒಳ್ಳೆಯದಲ್ಲ. ಏಕೆ ಒಳ್ಳೆಯದಲ್ಲ ಎಂಬ ಮಾಹಿತಿ ಮುಂದಿನ ಸ್ಲೈಡ್ ನಲ್ಲಿದೆ ನೋಡಿ.

ಆಂಟಿ ಬಯೋಟಿಕ್ ಮಾತ್ರೆಗಳು

ಆಂಟಿ ಬಯೋಟಿಕ್ ಮಾತ್ರೆಗಳು

ಇವುಗಳು ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ ನಿಜ, ಆದರೆ ಶೀತ ಬಂದಾಗ ಇವುಗಳನ್ನು ತೆಗೆದುಕೊಳ್ಳುವುದನ್ನು ಕಮ್ಮಿ ಮಾಡಿ. ಇದನ್ನು ತೆಗೆದುಕೊಂಡರೆ ತಕ್ಷಣ ಗುಣ ಮುಖವಾಗುವುದಿಲ್ಲ, ಅಲ್ಲದೆ ದೇಹದಲ್ಲಿ ಸೋಂಕಾಣುಗಳ ವಿರುದ್ಧ ಹೋರಾಡುವ ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಅಡಚಣೆ ಉಂಟು ಮಾಡುತ್ತದೆ.

ಚಿಕ್ಕ ಮಕ್ಕಳಿಗೆ ಶೀತ, ಕೆಮ್ಮಿಗೆ ಮಾತ್ರೆ ಕೊಡಬಾರದು

ಚಿಕ್ಕ ಮಕ್ಕಳಿಗೆ ಶೀತ, ಕೆಮ್ಮಿಗೆ ಮಾತ್ರೆ ಕೊಡಬಾರದು

ಮಕ್ಕಳಿಗೆ ಮಾತ್ರೆ ಕೊಡುವುದಾದರೆ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಕೊಡಬೇಕು, ಇಲ್ಲದಿದ್ದರೆ ಓವರ್ ಡೊಸ್ ಆಗುವುದು. ಅಲ್ಲದೆ ಚಿಕ್ಕ ಮಕ್ಕಳಿಗೆ ಅಡ್ಡ ಪರಿಣಾಮವಿಲ್ಲದ ಮನೆ ಮದ್ದು ಕೊಡುವುದು ಒಳ್ಳೆಯದು.

ಸತು

ಸತು

ಶೀತವಾದಾಗ ಸತುವಿನಂಶವಿರುವ ಆಹಾರಗಳನ್ನು ತೆಗೆದುಕೊಂಡರೆ ಶೀತ ಕಮ್ಮಿಯಾಗುತ್ತದೆ, ಆದರೆ ಇದರಿಂದ ಅಡ್ಡ ಪರಿಣಾಮವೂ ಉಂಟಾಗುವುದು, ಇದನ್ನು ತೆಗೆದುಕೊಂಡರೆ ರುಚಿ ಗ್ರಹಿಸುವ ಶಕ್ತಿ ಸ್ವಲ್ಪ ದಿನದವರೆಗೆ ಇಲ್ಲದಾಗುವ ಸಾಧ್ಯತೆ ಇದೆ.

English summary

Cold Remedies: What Works, What Doesn't

There's no cure for the common cold. But what about cold remedies that claim to make you feel better faster? Find out what's effective — and what's not.
X
Desktop Bottom Promotion