Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ರಾತ್ರಿಯ ಊಟ ಹೀಗಿರಲಿ..ಖಂಡಿತ ದೇಹದ ತೂಕ ಕಡಿಮೆಯಾಗುತ್ತದೆ...
ಕೆಲವರು ದೇಹದ ಭಾರವನ್ನು ಹೊತ್ತುಕೊಳ್ಳಲು ಕಷ್ಟ ಪಡುತ್ತಾರೆ. ಈ ಭಾರ ಬರುವ ಮೊದಲು ಸಿಕ್ಕಿದೆಲ್ಲವನ್ನು ತಿನ್ನುತ್ತಾ ಇರುತ್ತಾರೆ. ಆದರೆ ಬೊಜ್ಜು ದೇಹ ಆವರಿಸಲು ಆರಂಭಿಸಿದ ಬಳಿಕ ಹಲವಾರು ಸಮಸ್ಯೆಗಳು ಕಾಡುತ್ತದೆ. ಈ ವೇಳೆ ತೂಕ ಇಳಿಸಿಕೊಳ್ಳಬೇಕು ಎನ್ನುವ ಆಸೆ ಮೂಡುತ್ತೆ. ಆದರೆ ತೂಕ ಇಳಿಸಲು ಸಾಧ್ಯವಾಗುವುದೇ ಇಲ್ಲ. ಕೆಲವರು ತಿನ್ನುವ ಆಹಾರದ ಪ್ರಮಾಣ ಕಡಿಮೆ ಮಾಡಿಕೊಂಡು ತೂಕ ಇಳಿಸಲು ಪ್ರಯತ್ನ ಮಾಡುತ್ತಾರೆ. ಆದರೆ ಇದು ಸರಿಯಾದ ಕ್ರಮವಲ್ಲ. ಕೆಲವರು ರಾತ್ರಿ ವೇಳೆ ಊಟ ಮಾಡದೆ ತೂಕ ಕಡಿಮೆ ಮಾಡಬಹುದು ಎಂದು ಭಾವಿಸುತ್ತಾರೆ.
ರಾತ್ರಿ ಊಟ ಮಾಡದೆ ಇದ್ದರೆ ತೂಕ ಮತ್ತಷ್ಟು ಹೆಚ್ಚುವುದು. ರಾತ್ರಿ ಊಟ ತ್ಯಜಿಸಲು ಬದಲು ನೀವು ಸೇವಿಸುವಂತಹ ಆಹಾರವನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳುವುದು ಅತೀ ಆಗತ್ಯ. ತೂಕ ಕಡಿಮೆ ಮಾಡಬೇಕೆಂದರೆ ಸರಿಯಾದ ಆಹಾರ ಸೇವಿಸಿ. ಬೆಳಿಗ್ಗಿನ ಉಪಹಾರ, ಮಧ್ಯಾಹ್ನದ ಊಟದಂತೆ ರಾತ್ರಿಯ ಊಟವೂ ತುಂಬಾ ಅಗತ್ಯ.
ಆದರೆ ನೀವು ಸೇವಿಸುವಂತಹ ಆಹಾರದಲ್ಲಿ ಕ್ಯಾಲರಿ ಪ್ರಮಾಣವು ಹೆಚ್ಚಾಗಬಾರದು ಎಂದು ಗಮನಿಸಬೇಕಾಗುತ್ತದೆ. ರಾತ್ರಿ ಊಟ ಮಾಡಿದ ತಕ್ಷಣ ಮಲಗಬಾರದು. ಊಟ ಮತ್ತು ನಿದ್ರೆಯ ಮಧ್ಯೆ ಸುಮಾರು ಒಂದರಿಂದ ಎರಡು ಗಂಟೆಯ ಅಂತರವಿರಬೇಕು. ಇದು ತೂಕ ಹೆಚ್ಚಳವಾಗುವುದನ್ನು ಕಡಿಮೆ ಮಾಡುತ್ತದೆ. ರಾತ್ರಿ ಊಟಕ್ಕೆ ಯಾವ ಆಹಾರ ಸೇವನೆ ಮಾಡಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.....

ಸಲಾಡ್
ತರಕಾರಿ ಹಾಗೂ ಹಣ್ಣುಗಳನ್ನು ಒಳಗೊಂಡಿರುವ ಸಲಾಡ್ ತೂಕ ಕಾಪಾಡಲು ಪರಿಣಾಮಕಾರಿ. ಕಡಿಮೆ ಕ್ಯಾಲರಿ ಹೊಂದಿರುವ ಸಲಾಡ್ ಹೊಟ್ಟೆ ತುಂಬಿಸಿ ಮತ್ತಷ್ಟು ಹಸಿವಾಗುವುದನ್ನು ಕಡಿಮೆ ಮಾಡುತ್ತದೆ.

ಇಡೀ ಧಾನ್ಯಗಳು
ಕಂದು ಅಕ್ಕಿ ಅಥವಾ ಓಟ್ ಮೀಲ್ಸ್ ನಂತಹ ನಾರಿನಾಂಶ ಅಧಿಕವಾಗಿರುವ ಮತ್ತು ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿರುವ ಇಡೀ ಧಾನ್ಯಗಳು ಒಳ್ಳೆಯದು. ಇದು ದೀರ್ಘ ಕಾಲದ ತನಕ ಹೊಟ್ಟೆ ತುಂಬಿದಂತೆ ಮಾಡುವುದು. ಇದರಲ್ಲಿ ಕ್ಯಾಲರಿ ಕಡಿಮೆ ಇದೆ ಮತ್ತು ಆರೋಗ್ಯಕರ ಕಾರ್ಬೋಹೈಡ್ರೆಟ್ಸ್ ಗಳಿವೆ.

ತರಕಾರಿಗಳು
ನಾರಿನಾಂಶ, ವಿಟಮಿನ್ ಮತ್ತು ಖನಿಜಾಂಶಗಳು ಅಧಿಕವಾಗಿರುವ ತಕರಾರಿಗಳು ಒಳ್ಳೆಯದು. ಅದರಲ್ಲೂ ಹಸಿರೆಳೆ ತರಕಾರಿಗಳು ತುಂಬಾ ಒಳ್ಳೆಯದು. ತೂಕ ಕಳೆದುಕೊಳ್ಳಲು ಇವು ಸಹಕಾರಿಯಾಗಲಿದೆ. ಇದನ್ನು ನಿಮ್ಮ ರಾತ್ರಿಯ ಊಟದಲ್ಲಿ ಬಳಸಿಕೊಳ್ಳಿ.

ಅವಕಾಡೋ ಅಥವಾ ಬೆಣ್ಣೆಹಣ್ಣು
ಅವಕಾಡೋದಲ್ಲಿ ಮೊನೋ ಸ್ಯಾಚುರೇಟರ್ ಕೊಬ್ಬು, ನಾರಿನಾಂಶ ಹಾಗೂ ಹಲವಾರು ರೀತಿಯ ಪೋಷಕಾಂಶಗಳು ಇವೆ. ಅರ್ಧ ಅವಕಾಡೋವನ್ನು ಪ್ರತೀ ದಿನ ನಿಮ್ಮ ರಾತ್ರಿ ಊಟದಲ್ಲಿ ಬಳಸಿಕೊಳ್ಳಿ. ಇದು ದೇಹದ ತೂಕ ನಿಯಂತ್ರಣದಲ್ಲಿರಿಸಿ ಅತಿಯಾಗಿ ತೂಕ ಹೆಚ್ಚಳವಾಗದಂತೆ ನೋಡಿಕೊಳ್ಳುವುದು.

ಬೀಜಗಳು
ಬೀಜಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಮೆಗ್ನಿಶಿಯಂ ಇದೆ. ರಾತ್ರಿ ಊಟಕ್ಕೆ ಬೀಜಗಳ ಸೇವನೆ ಮಾಡಿದರೆ ಹೊಟ್ಟೆ ತುಂಬಿದಂತೆ ಆಗುವುದು ಮತ್ತು ಸಿಹಿ ಸೇವನೆ ಮಾಡದಂತೆ ತಡೆಯುವುದು. ಇದರಿಂದ ದೇಹದ ತೂಕವು ಹೆಚ್ಚುವುದು ಕಡಿಮೆಯಾಗುವುದು.



Click it and Unblock the Notifications