For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಕಂಡುಬರುವ ಕ್ಯಾನ್ಸರ್‌ ವಿಧಗಳು

|

ವರದಿಗಳ ಪ್ರಕಾರ, ಜಗತ್ತಿನಲ್ಲಿ ತನ್ನ ಸಂಚಲನವನ್ನುಂಟು ಮಾಡಿರುವ ಜನನಾಂಗ ಕ್ಯಾನ್ಸರ್ ಈ ಅತಿಯಾತನೀಯ ರೋಗದಿಂದ ಮಿಲಿಯಗಟ್ಟಲೆ ಪುರುಷರು ಬಳಲುತ್ತಿದ್ದಾರೆ. ಹೆಚ್ಚಾಗಿ ಜನನಾಂಗ ಹಾಗೂ ವೃಷಣ ಕ್ಯಾನ್ಸರ್ ಪುರುಷರಲ್ಲಿ ಕಾಣಿಸಿಕೊಳ್ಳುವುದು ಒಂದು ನಿರ್ದಿಷ್ಟ ವಯಸ್ಸಿನಲ್ಲಿ ಅಂದರೆ 50 ವರುಷದ ನಂತರ, ಇಂದು ಪುರುಷರನ್ನು ಕಾಡುವ ಕ್ಯಾನ್ಸರ್ ಇದೊಂದೇ ಅಲ್ಲ.

ಹಲವಾರು ವಿಧದ ಕ್ಯಾನ್ಸರ್‌ಗಳು ಇಂದು ಅವರನ್ನು ಆಳುತ್ತಿದೆ. ಆ ಕ್ಯಾನ್ಸರ್‌ಗಳು ಯಾವುವೆಂದರೆ ಚರ್ಮ, ಮೂತ್ರಕೋಶ ಮತ್ತು ಶಿಶ್ನ ಕ್ಯಾನ್ಸರ್ ಇಂದು ದಿನದಿಂದ ಹೆಚ್ಚುತ್ತಿದೆ.ವರದಿಗಳ ಪ್ರಕಾರ 8 ಪುರುಷರಲ್ಲಿ ಪ್ರತಿದೀನ ಒಬ್ಬನಿಗೆ ಈ ಜನನಾಂಗ ಕ್ಯಾನ್ಸರ್ ಕಂಡುಬರುತ್ತಿದ್ದು ಮುಂಚಿತವಾಗಿ ಈ ಕ್ಯಾನ್ಸರ್ ಅನ್ನು ಪತ್ತೆಹಚ್ಚಿದರೆ ಮಾತ್ರ ಅದನ್ನು ಗುಣಪಡಿಸಲಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕ್ಯಾನ್ಸರ್ ತಡೆಗಟ್ಟುವ ಡಯಟ್ ಪಾಲಿಸಲು ಬಯಸುವಿರಾ?

 Common Types Of Cancer In Men

ಇದು ಪುರುಷರಲ್ಲಿ 50 ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ಕಾಣಿಸಿಕೊಳ್ಳುವುದರಿಂದ ಅಪಾಯದ ತೀವ್ರತೆ ಹೆಚ್ಚು ಇರುತ್ತದೆ. ಮೂಲಗಳ ಪ್ರಕಾರ ಕ್ಯಾನ್ಸರ್ ಜನಾಂಗವನ್ನು ಆಧರಿಸಿ ಕಾಣಿಸಿಕೊಳ್ಳುತ್ತದೆ ಎಂಬುದು ಸಾಬೀತಾಗಿದೆ.

ಕಕೇಶಿಯನ್ ಪುರುಷರಲ್ಲಿ ಮೂತ್ರಕೋಶದ ಕ್ಯಾನ್ಸರ್ ಹೆಚ್ಚುಕಂಡುಬಂದರೆ ಏಷ್ಯಾದ ಪುರುಷರು ಹೆಚ್ಚು ಬಳಲುವುದು ಉದರ ಕ್ಯಾನ್ಸರ್‌ನಿಂದ. ಅದೇ ರೀತಿ ಆಫ್ರಿಕನ್ ಜನಾಂಗಕ್ಕೆ ಶಾಪವಾಗಿ ಪರಿಣಮಿಸಿದ ಕ್ಯಾನ್ಸರ್ ಬಾಯಿಯ ಕ್ಯಾನ್ಸರ್ ಆಗಿದೆ.

ಬೋಲ್ಡ್‌ಸ್ಕೈ ಇಂದು ನಿಮ್ಮೊಂದಿಗೆ ಪುರುಷರಲ್ಲಿ ಕಂಡುಬರುವ ಕೆಲವೊಂದು ಕ್ಯಾನ್ಸರ್ ಪ್ರಕಾರಗಳನ್ನು ಹಂಚಿಕೊಳ್ಳಲು ಬಯಸುತ್ತಿದೆ. ಈ ಬಗೆಯ ಕ್ಯಾನ್ಸರ್ ವಿಧಗಳು ಇಂದು ಜಗತ್ತಿನಾದ್ಯಂತ ಪುರುಷರಲ್ಲಿ ಹೆಚ್ಚುತ್ತಿದೆ.

ಜನನಾಂಗ ಕ್ಯಾನ್ಸರ್
ಪುರುಷರಲ್ಲಿ ಕಂಡುಬರುವ ಎರಡನೆಯ ಅತಿದೊಡ್ಡ ವಿಧ ಈ ಕ್ಯಾನ್ಸರ್ ಆಗಿದೆ. ಭಾರತದಲ್ಲಿ 2 ಮಿಲಿಯನ್ ಪುರುಷರು ಜನನಾಂಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. 50 ವರ್ಷ ಮೇಲ್ಪಟ್ಟ ಪುರುಷರಲ್ಲಿ ಈ ಕ್ಯಾನ್ಸರ್ ಕಂಡುಬರುತ್ತದೆ ಎಂಬುದು ಸಾಬೀತಾಗಿದೆ. ಮುಂಚೆಯೇ ಗಮನಕ್ಕೆ ಬಂದು ಚಿಕಿತ್ಸೆ ಪಡೆದುಕೊಂಡಲ್ಲಿ ಬದುಕುಳಿಯಲು ಸಾಧ್ಯ.

ಶ್ವಾಸಕೋಶದ ಕ್ಯಾನ್ಸರ್
ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಒಂದು ಕ್ಯಾನ್ಸರ್ ವಿಧ ಶ್ವಾಸಕೋಶದ ಕ್ಯಾನ್ಸರ್ ಆಗಿದೆ. ಅರ್ಧ ಮಿಲಿಯನ್ ಪುರುಷರ ಮೇಲೆ ಈ ಕ್ಯಾನ್ಸರ್ ತನ್ನ ಪ್ರಭಾವ ಬೀರಿದೆ. ಇದಕ್ಕೆ ಮುಖ್ಯ ಕಾರಣ ಧೂಮಪಾನವಾಗಿದೆ. ಶ್ವಾಸಕೋಶದ ಕ್ಯಾನ್ಸರ್ ಪ್ರಾಣಾಂತಿಕ ಕ್ಯಾನ್ಸರ್ ಕೂಡ ಹೌದು.

ಚರ್ಮ ಕ್ಯಾನ್ಸರ್
ಪುರುಷರಲ್ಲಿ ಕಂಡುಬರುವ ಈ ಕ್ಯಾನ್ಸರ್ ವಿಧದ ಬಗೆಗೆ ಹೆಚ್ಚಿನವರಿಗೆ ತಿಳಿದಿಲ್ಲ. ಮಹಿಳೆಯರಲ್ಲಿ ಈ ಬಗೆಯ ಕ್ಯಾನ್ಸರ್ ಹೆಚ್ಚು ಕಂಡುಬರುತ್ತದೆಂದೇ ಹೆಚ್ಚಿನವರು ಆಲೋಚಿಸುತ್ತಾರೆ. ಆದರೆ ವರದಿಗಳ ಪ್ರಕಾರ ಈ ಕ್ಯಾನ್ಸರ್‌ಗೆ ಹೆಚ್ಚಾಗಿ ಬಲಿಯಾಗುವವರು ಪುರುಷರು ಎಂದಾಗಿದೆ. ಚರ್ಮ ಕ್ಯಾನ್ಸರ್ ಮೊದಲೇ ಅರಿವಿಗೆ ಬಂದಲ್ಲಿ ಅದರ ಉಪಶಮನ ಸಾಧ್ಯ ಎಂಬುದು ಇದರ ಧನಾತ್ಮಕ ಅಂಶವಾಗಿದೆ.

ದೊಡ್ಡ ಕರುಳಿನ ಕ್ಯಾನ್ಸರ್
50 ವರ್ಷದೊಳಗಿನ ಪುರುಷರಲ್ಲಿ ಈ ಕ್ಯಾನ್ಸರ್ ಕಂಡುಬರುತ್ತದೆ. ಮಲವಿಸರ್ಜನೆ ವೇಳೆ ಅತಿಯಾದ ರಕ್ತಸ್ರಾವ ಕರುಳಿನ ಕ್ಯಾನ್ಸರ್‌ನ ಮೊದಲ ಲಕ್ಷಣವಾಗಿದೆ.

ಸಣ್ಣ ಕರುಳಿನ ಕ್ಯಾನ್ಸರ್
ಜಗತ್ತಿನಾದ್ಯಂತ ಪ್ರತೀ ವರ್ಷ 1,300 ಕ್ಕಿಂತಲೂ ಅಧಿಕ ಸಣ್ಣ ಕರುಳಿನ ಕ್ಯಾನ್ಸರ್ ರೋಗಿಗಳು ಕಂಡುಬರುತ್ತಿದ್ದಾರೆ. ಅತಿಯಾದ ಮದ್ಯಪಾನ ಈ ಕ್ಯಾನ್ಸರ್‌ ಉಗಮಕ್ಕೆ ಕಾರಣವಾಗಿದೆ.

ಮೂತ್ರಕೋಶದ ಕ್ಯಾನ್ಸರ್
ಪುರುಷರಲ್ಲಿ ಆಗಾಗ್ಗೆ ಮೂತ್ರವಿಸರ್ಜನೆ ಹಾಗೂ ಶ್ರೋಣಿ ಪ್ರದೇಶದಲ್ಲಿ ನಿರಂತರ ನೋವು ಮೂತ್ರಕೋಶದ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣವಾಗಿದೆ.

ಮೆದೋಜೀರಕ ಗ್ರಂಥಿಯ ಕ್ಯಾನ್ಸರ್
ಸಕ್ಕರೆ ಕಾಯಿಲೆಯಿಂದ ಬಳಲುವ ಪುರುಷರು ಈ ಕ್ಯಾನ್ಸರ್‌ನಿಂದ ಬಳಲುತ್ತಾರೆ. ಮೊದೋಜೀರಕ ಗ್ರಂಥಿಯನ್ನೇ ತೆಗೆದುಹಾಕುವಂತಹ ಸ್ಥಿತಿಯ ಕೊನೆಯ ಹಂತದಲ್ಲಿ ಈ ಕ್ಯಾನ್ಸರ್ ತನ್ನ ಇರುವಿಕೆಯನ್ನು ತೋರಿಸಿಕೊಡುತ್ತದೆ ಎಂಬುದು ಈ ಕ್ಯಾನ್ಸರ್‌ನ ಋಣಾತ್ಮಕ ಅಂಶವಾಗಿದೆ.

ಶಿಶ್ನ ಕ್ಯಾನ್ಸರ್
ಪುರುಷರಲ್ಲಿ ಅಪರೂಪವಾಗಿ ಕಂಡುಬರುವ ಕ್ಯಾನ್ಸರ್ ಇದಾಗಿದೆ. ಸುನ್ನತಿ, ಎಚ್‌ಪಿವಿ (ಮಾನವ ವೈರಸ್) ಹಾಗೂ ಧೂಮಪಾನದ ಕಾರಣದಿಂದ ಈ ಕ್ಯಾನ್ಸರ್ ಉಂಟಾಗುತ್ತದೆ.

Read more about: health ಆರೋಗ್ಯ
English summary

Common Types Of Cancer In Men

According to reports, it is said that prostate cancer is on the rise worldwide and there are more than a million men who suffer from this painful disease.
Story first published: Monday, January 13, 2014, 14:02 [IST]
X
Desktop Bottom Promotion