For Quick Alerts
ALLOW NOTIFICATIONS  
For Daily Alerts

ಬಾದಾಮಿ ಡಯೆಟ್ ಏಕೆ ಮಾಡಬೇಕು?

|
Benefit From Almond Diet
ಬಾದಾಮಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು, ಅದರಲ್ಲೂ ಹೃದಯಕ್ಕೆ ತುಂಬಾ ಒಳ್ಳೆಯದು, ದೇಹದ ತೂಕವನ್ನು ಹೆಚ್ಚಿಸುವುದಿಲ್ಲ ಎಂದು ಕೇಳಿರುತ್ತೀರಿ. ಅದು ದೇಹಕ್ಕೆ ಎಷ್ಟು ಒಳ್ಳೆಯದು, ಅದು ಹೇಗೆ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಯಲು ಮುಂದೆ ಓದಿ.

1. ಒಂದು ಮುಷ್ಠಿ ತುಂಬಾ ಬಾದಾಮಿ ತಿಂದರೆ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು 4.5% ಕಡಿಮೆ ಮಾಡುತ್ತದೆ. ಇದು ಹೃದಯ ಕಾಯಿಲೆಗಳನ್ನು ತರುವಂತಹ ಕೊಬ್ಬನ್ನು ಕೂಡ ಕಡಿಮೆ ಮಾಡುವ ಸಾಮಾರ್ಥ್ಯವನ್ನು ಹೊಂದಿದೆ.

2.
ಬಾದಾಮಿಯಲ್ಲಿ ಅಧಿಕ ನ್ಯೂಟ್ರಿಷಿಯಸ್ ಹೊಂದಿದೆ. ಇದರಲ್ಲಿ ವಿಟಮಿನ್ ಇ, ಮ್ಯಾಗ್ನಿಷಿಯಂ, ಹೃದಯದ ಆರೋಗ್ಯವನ್ನು ಹೆಚ್ಚಿಸುವ ಕೊಬ್ಬು, ಪ್ರೊಟೀನ್, ಕ್ಯಾಲ್ಸಿಯಂ, ಪೊಟಾಶಿಯಂ, ಕಬ್ಬಿಣದಂಶ ಮತ್ತು ಅಧಿಕ ನಾರಿನಂಶವನ್ನು ಹೊಂದಿದೆ.

3. ಇದನ್ನು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ತಿನ್ನಬಹುದು, ಇದನ್ನು ಮೊಸರಿನಲ್ಲಿ ಹಾಕಿ ಕೂಡ ತಿನ್ನಬಹುದು.

4.
ಊಟ ಮಾಡಿದ ನಂತರ ಪುನಃ ಹಸಿವು ಆಗುತ್ತಿದ್ದರೆ ಇದನ್ನು ತಿಂದರೆ ಹಸಿವು ಕಡಿಮೆಯಾಗುವುದು.

5. ಬಾದಾಮಿಯಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಅಂಶವಿದ್ದು ಅಧಿಕ ನಾರಿನಂಶವಿರುವುದರಿಂದ ಇದನ್ನು ತಿಂದರೆ ಹಸಿವು ಬೇಗನೆ ಆಗುವುದಿಲ್ಲ.

6. ಬಾದಾಮಿ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮಾರ್ಥ್ಯವನ್ನು ಹೊಂದಿದೆ. ಅಲ್ಲದೆ ಇದನ್ನು ಸೇವಿಸುವುದರಿಂದ ತ್ವಚೆಗೆ ಕೂಡ ಒಳ್ಳೆಯದು.

ಬಾದಾಮಿ ಡಯೆಟ್ ನಲ್ಲಿ ಬಾದಾಮಿ ಮಾತ್ರ ಸೇವಿಸುವ ಬದಲು ಅದನ್ನು ಮೊಸರು ಅಥವಾ ಸಲಾಡ್ ಜೊತೆ ಸೇವಿಸಬೇಕು.

English summary

Benefit From Almond Diet | Tips For Diet | ಬಾದಾಮಿ ಡಯೆಟ್ ನ ಪ್ರಯೋಜನಗಳು | ಆಹಾರಕ್ರಮಕ್ಕೆ ಕೆಲ ಸಲಹೆ

Almonds contain good fat that are heart healthy and do not add to weight. An almonds weight loss is more quicker than any low-fat diet. It is easier to follow the diet as the nuts are tasty and can be ate with a bread toast, cereal or salads.
Story first published: Monday, December 12, 2011, 16:28 [IST]
X
Desktop Bottom Promotion