ಇಂತಹ ಹಣ್ಣುಗಳನ್ನು ತಿನ್ನದಿರಿ... ಇವು ಮಧುಮೇಹಕ್ಕೆ ಮಾರಿ...

By: Divya
Subscribe to Boldsky

ಕಲುಶಿತ ವಾತಾವರಣ, ಅನುಚಿತ ಆಹಾರ ಪದ್ಧತಿ ಹಾಗೂ ವಂಶಾವಳಿಯ ಕಾರಣದಿಂದ ಕಾಡುವ ರೋಗಗಳಲ್ಲಿ ಸಕ್ಕರೆ ಕಾಯಿಲೆಯೂ ಒಂದು. ನೂರು ಮಂದಿಯಲ್ಲಿ ಶೇ.50 ಮಂದಿಗೆ ಇರಬಹುದಾದ ಸಾಮಾನ್ಯ ಕಾಯಿಲೆ ಇದು. ಹಾಗಂತ ಇದನ್ನು ಕೈಬಿಡುವ ಹಾಗಿಲ್ಲ. ಪ್ರತಿದಿನವೂ ಇದರ ಬಗ್ಗೆ ಹೆಚ್ಚು ಗಮನ ನೀಡಲೇ ಬೇಕು. ಇಲ್ಲವಾದರೆ ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಕೆಲವೊಮ್ಮೆ ದೇಹದ ಕೆಲವು ಅಂಗಾಂಗಗಳು ಶಾಶ್ವತವಾಗಿ ತಮ್ಮ ಕಾರ್ಯ ನಿಲ್ಲಿಸುವಂತೆ ಮಾಡುತ್ತವೆ.   ಇಂತಹ ತರಕಾರಿಗಳು ಮಧುಮೇಹಿಗಳಿಗೆ ಬಹಳ ಒಳ್ಳೆಯದು....

ಮಧುಮೇಹವನ್ನು ಸಾಮಾನ್ಯವಾಗಿ ಮೆಲ್ಟಿಟಸ್(ಡಿಎಮ್) ಎಂದು ಕಾರೆಯುತ್ತಾರೆ. ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಹೆಚ್ಚುಮಾಡುತ್ತದೆ. ರಕ್ತದಲ್ಲಿ ಉಂಟಾಗುವ ಸಕ್ಕರೆಯ ವ್ಯತ್ಯಯವನ್ನು ಎರಡು ವಿಧಗಳಲ್ಲಿ ವಿಂಗಡಿಸಬಹುದು. 1. ಇನ್ಸುಲಿನ್ ಉತ್ಪಾದನೆ ಇಲ್ಲದ ರೀತಿಯ ಮಧುಮೇಹ. 2. ಇನ್ಸುಲಿನ್ ಕೊರತೆಯಿಂದ ಉಂಟಾಗುವ ಮಧುಮೇಹ ಎಂದು. ಮೊದಲನೆಯದು ಸುಮಾರು ನೂರರಲ್ಲಿ ಹತ್ತು ಮಂದಿಯಲ್ಲಿ ಕಾಣಿಸಿಕೊಳ್ಳುವ ಮಧುಮೇಹ. ಎರಡನೆಯದು ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುವ ಮಧುಮೇಹ.   ಮಧುಮೇಹಿಗಳು ತಿನ್ನಬಾರದ 10 ಹಣ್ಣುಗಳು

ಮಧುಮೇಹ ಒಮ್ಮೆ ನಮ್ಮ ದೇಹವನ್ನು ಆವರಿಸಿಕೊಂಡಿತು ಎಂದಾದರೆ ಇದನ್ನು ಗುಣ ಪಡಿಸಲು ಸಾಧ್ಯವಿಲ್ಲ. ಬದಲಾಗಿ ಒಂದು ಹಿಡಿತದಲ್ಲಿ ಇಟ್ಟುಕೊಳ್ಳಬಹುದು ಅಷ್ಟೆ. ಅದಕ್ಕಾಗಿ ವ್ಯಾಯಾಮ, ಆಹಾರದ ನಿಯಂತ್ರಣ ಮತ್ತು ಕಾಲಕಾಲಕ್ಕೆ ರಕ್ತದಲ್ಲಿರುವ ಸಕ್ಕರೆ ಪ್ರಮಾಣದ ತಪಾಸಣೆಯನ್ನು ಮಾಡಬೇಕು. ಆಗಲೇ ಎರಡು ವಿಧದ ಸಕ್ಕರೆ ರೋಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಅಲ್ಲದೆ ಕೆಲವು ಪ್ರಮುಖ ಹಣ್ಣುಗಳಿಂದ ದೂರ ಇರಲೇ ಬೇಕು.   ಮಧುಮೇಹಿಗಳೇ, ವೈದ್ಯರಲ್ಲಿ ತಪ್ಪದೇ ಈ ಪ್ರಶ್ನೆಗಳನ್ನು ಕೇಳಿ...

ಈ ವಿಷಯ ಕೇಳಲು ಸ್ವಲ್ಪ ಕಷ್ಟವೆನಿಸಿದರೂ ನಂಬಲೇ ಬೇಕು. ಹಣ್ಣಿನಲ್ಲಿರುವ ಸಿಹಿ ಅಂಶ ನಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಲು ಎಡೆಮಾಡಿ ಕೊಡುತ್ತದೆ. ಅಯ್ಯೋ! ಅದ್ಯಾವ ಹಣ್ಣುಗಳು ಎನ್ನುವ ಕುತೂಹಲ ನಿಮ್ಮಲ್ಲಿದ್ದರೆ ಮುಂದೆ ಓದಿ...     

ಬಾಳೆ ಹಣ್ಣು

ಬಾಳೆ ಹಣ್ಣು

ಪ್ರತಿ 100 ಗ್ರಾಂ ಬಾಳೆ ಹಣ್ಣಿನಲ್ಲಿ ಸಕ್ಕರೆ ಅಂಶ ಸುಮಾರು 12 ಗ್ರಾಂ ಇರುತ್ತದೆ. ಇವುಗಳ ಸೇವನೆ ಪದೇ ಪದೇ ಮಾಡುತ್ತಿದ್ದರೆ ರಕ್ತದಲ್ಲಿ ಸಿಹಿ ಪ್ರಮಾಣ ಹೆಚ್ಚಾಗುತ್ತದೆ. ಮಧುಮೇಹದವರಿಗೆ 45-50 ಗ್ರಾಂ ಕಾರ್ಬೋಸ್‍ಗಳು ಇರಬೇಕು ಇದು ಇವುಗಳ ಪ್ರಮಾಣವನ್ನು ಹೆಚ್ಚಿಸುತ್ತದೆ.

ಮಾವಿನ ಹಣ್ಣು

ಮಾವಿನ ಹಣ್ಣು

ಪ್ರತಿ 100 ಗ್ರಾಂ ಹಣ್ಣಿನಲ್ಲಿ 14 ಗ್ರಾಂ ಸಕ್ಕರೆ ಅಂಶವಿರುತ್ತದೆ. ಇದರ ಸೇವನೆಯಿಂದ ಬಹಳ ಬೇಗ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ನೆನಪಿಡಿ ಅತಿಯಾದ ಮಾವಿನ ಹಣ್ಣು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ!

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಹೆಚ್ಚು ನೀರಿನಂಶ ಹೊಂದಿರುವ ಈ ಹಣ್ಣಿನಲ್ಲಿ ಪ್ರತಿ 100 ಗ್ರಾಂ ಗೆ 6 ಗ್ರಾಂ ಅಷ್ಟು ಸಕ್ಕರೆ ಅಂಶ ಇರುತ್ತದೆ. ಇದನ್ನು ಕಡಿಮೆ ಪ್ರಮಾಣದಲ್ಲಿಯೇ ಸೇವಿಸಬೇಕು. ಅತಿಯಾಗಿ ತಿಂದರೆ ತೊಂದರೆ ತಪ್ಪಿದ್ದಲ್ಲ ಎನ್ನುವುದನ್ನು ಮರೆಯಬಾರದು.

ಸ್ಟ್ರಾಬೆರಿ

ಸ್ಟ್ರಾಬೆರಿ

ಅತ್ಯಂತ ರುಚಿಕರವಾದ ಈ ಹಣ್ಣು ಇಲ್ಲರನ್ನು ಸೆಳೆದುಕೊಳ್ಳುತ್ತದೆ. ಈ ಹಣ್ಣಿನ 100 ಗ್ರಾಂ ಅಷ್ಟರಲ್ಲಿ ಸುಮಾರು 5 ಗ್ರಾಂ ಸಕ್ಕರೆ ಪ್ರಮಾಣ ಇರುತ್ತದೆ. ಇದನ್ನು ಪ್ರತಿದಿನ ಸೇವಿಸಿದರೆ ಮಧುಮೇಹ ಗಣನೀಯವಾಗಿ ಏರಿಕೆಯಾಗುತ್ತದೆ.

ಸಪೋಟ ಹಣ್ಣು

ಸಪೋಟ ಹಣ್ಣು

ಈ ಹಣ್ಣಿನ ಪ್ರತಿ 100 ಗ್ರಾಂ ಗೆ 7 ಗ್ರಾಂ ಅಷ್ಟು ಸಕ್ಕರೆ ಅಂಶ ಇರುತ್ತದೆ. ಬಹಳ ರುಚಿಕರವಾಗಿರುವ ಈ ಹಣ್ಣು ಮಧುಮೇಹಿಗಳಿಗೆ ಅತ್ಯಂತ ಅಪಾಯಕಾರಿ. ಅತಿಯಾಗಿ ಇದರ ಸೇವನೆ ಮಾಡಿದರೆ ಸಕ್ಕರೆ ಪ್ರಮಾಣ ಹೆಚ್ಚಾಗುವುದು.

ಅನಾನಸ್

ಅನಾನಸ್

ಸ್ವಲ್ಪ ಹುಳಿ ಹಾಗೂ ನೀರಿನಂಶ ಎರಡನ್ನೂ ಹೊಂದಿರುವ ಈ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗದು. ಈ ದೈತ್ಯ ಹಣ್ಣಿನ ಪ್ರತಿ 100 ಗ್ರಾಂ ಗೆ ಸುಮಾರು 10 ಗ್ರಾಂ ಗಳಷ್ಟು ಸಕ್ಕರೆ ಪ್ರಮಾಣವಿರುತ್ತದೆ. ಇದನ್ನು ತಿನ್ನಬಾರದು ಎನ್ನುವ ವಿಚಾರಕ್ಕೆ ವಿವರಣೆಯ ಅಗತ್ಯವಿಲ್ಲ. ಅಷ್ಟು ವೇಗದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ.

ದ್ರಾಕ್ಷಿ

ದ್ರಾಕ್ಷಿ

ಇದು ಬಹಳ ಸಣ್ಣ ಹಣ್ಣು ಎನಿಸಿದರೂ ಇದರ 100 ಗ್ರಾಂ ಹಣ್ಣಿನಲ್ಲಿ 16 ಗ್ರಾಂ ಗಳಷ್ಟು ಸಕ್ಕರೆ ಪ್ರಮಾಣವಿರುತ್ತದೆ. ಇದನ್ನು ಮಧುಮೇಹಿಗಳು ತಿನ್ನದೆ ಇದ್ದರೆ ಒಳಿತು.

ಮರಸೇಬು/ಪಿಯರ್

ಮರಸೇಬು/ಪಿಯರ್

ಸಮೃದ್ಧವಾದ ಕನಿಜಾಂಶ ಹೊಂದಿರುವ ಈ ಹಣ್ಣಿನ ಪ್ರತಿ 100 ಗ್ರಾಂ ಗೆ 10 ಗಾಂ್ರ ಗಳಷ್ಟು ಸಕ್ಕರೆ ಇರುತ್ತದೆ. ಇದನ್ನು ತಿನ್ನಲು ಮಧುಮೇಹಿಗಳು ಮನಸ್ಸು ಮಾಡದೆ ಇದ್ದರೆ ಒಳಿತು.

English summary

Does Diabetes Run In Your Family? Then, Avoid These Fruits!

They say diabetes doesn't run in the family. But, it happens because no one "runs in the family". One of the most prevalent diseases among Indian families, Diabetes has always remained a huge question if the lineage of it is hereditary or a pure lifestyle thing. Turns out, it's a bit of both.
Subscribe Newsletter