Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಧುಮೇಹಿಗಳೇ, ವೈದ್ಯರಲ್ಲಿ ತಪ್ಪದೇ ಈ ಪ್ರಶ್ನೆಗಳನ್ನು ಕೇಳಿ...
ಪ್ರತೀ ಸಲ ವೈದ್ಯರನ್ನು ಭೇಟಿಯಾದಾಗ ಮಧುಮೇಹವಿರುವ ರೋಗಿಗಳು ಕೆಲವೊಂದು ಪ್ರಶ್ನೆಗಳನ್ನು ಕೇಳಲೇಬೇಕು. ನಿಮ್ಮ ದೇಹಕ್ಕೆ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ವೈದ್ಯರ ಬಳಿ ಕೆಲವೊಂದು ಪ್ರಶ್ನೆಗಳನ್ನು ಕೇಳುವುದು ಅತ್ಯಗತ್ಯವಾಗಿದೆ.
ಮಧುಮೇಹ (ಡಯಾಬಿಟಿಸ್) ದೇಹವನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಇದರ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಸಾಲದು. ಅದರಲ್ಲೂ ಮಧುಮೇಹ ಹೆಚ್ಚಾಗಿರುವ ರೋಗಿಗಳು ತಮ್ಮ ದೇಹವನ್ನು ಹೂವಿನಂತೆ ಕಾಪಾಡಿಕೊಳ್ಳಬೇಕು. ಯಾಕೆಂದರೆ ಮಧುಮೇಹ ಇರುವವರು ಕೆಲವೊಂದು ಆಹಾರ ಕ್ರಮ ಹಾಗೂ ಜೀವನಶೈಲಿಯನ್ನು ಅನುಸರಿಸಿಕೊಂಡು ಹೋಗಬೇಕಾಗುತ್ತದೆ. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು
ಪ್ರತೀ ಸಲ ವೈದ್ಯರನ್ನು ಭೇಟಿಯಾದಾಗ ಮಧುಮೇಹವಿರುವ ರೋಗಿಗಳು ಕೆಲವೊಂದು ಪ್ರಶ್ನೆಗಳನ್ನು ಕೇಳಲೇಬೇಕು. ನಿಮ್ಮ ದೇಹಕ್ಕೆ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ವೈದ್ಯರ ಬಳಿ ಕೆಲವೊಂದು ಪ್ರಶ್ನೆಗಳನ್ನು ಕೇಳುವುದು ಅತ್ಯಗತ್ಯವಾಗಿದೆ. ಮಧುಮೇಹಿಗಳಿಗೆ ವೈದ್ಯರ ಬಳಿ ಏನು ಕೇಳಬೇಕೆಂದು ತಿಳಿದಿರುವುದಿಲ್ಲ. ಮಧುಮೇಹ ನಿಯಂತ್ರಣಕ್ಕೆ, ಪ್ರಯತ್ನಿಸಿ ನೈಸರ್ಗಿಕ ಆಹಾರಗಳು
ಇದಕ್ಕಾಗಿಯೇ ನಾವು ಈ ಲೇಖನದಲ್ಲಿ ಮಧುಮೇಹಿಗಳು ವೈದ್ಯರ ಬಳಿ ಕೇಳಬೇಕಾದ ಕೆಲವೊಂದು ಅತೀ ಮುಖ್ಯ ಪ್ರಶ್ನೆಗಳ ಬಗ್ಗೆ ಪಟ್ಟಿಯನ್ನು ಮಾಡಿದ್ದೇವೆ. ಇದನ್ನು ಓದಿಕೊಂಡು ನಿಮ್ಮ ಕುಟುಂಬದಲ್ಲಿ ಯಾರಾದರೂ ಮಧುಮೇಹಿಗಳು ಇದ್ದರೆ ಅವರಿಗೆ ಈ ಬಗ್ಗೆ ತಿಳಿಸಿ...

ಎಷ್ಟು ಸಲ ನಾನು ರಕ್ತದಲ್ಲಿನ ಸಕ್ಕರೆ ಮಟ್ಟ ಪರೀಕ್ಷಿಸಬೇಕು?
ಸಮಸ್ಯೆಗಳನ್ನು ನಿವಾರಣೆ ಮಾಡಲು ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆಗಾಗ ಪರೀಕ್ಷಿಸುತ್ತಾ ಇರಲೇಬೇಕಾಗುತ್ತದೆ. ಇದರಿಂದಾಗಿ ವೈದ್ಯರಲ್ಲಿಗೆ ಹೋದಾಗ ಎಷ್ಟು ಸಲ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕೇಳಿ. ಇದು ಪ್ರತಿಯೊಬ್ಬ ರೋಗಿಗೆ ಭಿನ್ನವಾಗಿರುತ್ತದೆ.

ಔಷಧಿಯನ್ನು ಯಾವಾಗ ತೆಗೆದುಕೊಳ್ಳಬೇಕು?
ಮಧುಮೇಹಿಗಳು ಸ್ವತಃ ಔಷಧಿ ತೆಗೆದುಕೊಳ್ಳುವುದು ಸರಿಯಾದ ನಿರ್ಧಾರವಲ್ಲ. ಇದರಿಂದ ಯಾವ ಔಷಧಿ ನಿಮಗೆ ಒಳ್ಳೆಯದು ಮತ್ತು ಅದನ್ನು ಯಾವಾಗ ತೆಗೆದುಕೊಳ್ಳಬೇಕು ಎಂದು ವೈದ್ಯರಲ್ಲಿ ಕೇಳಿ.

ಕಡಿಮೆ ಖರ್ಚಿನ ಔಷಧಿ ಇದೆಯಾ?
ಕೆಲವೊಂದು ಸಂದರ್ಭಗಳಲ್ಲಿ ತುಂಬಾ ಕಡಿಮೆ ವೆಚ್ಚದಲ್ಲಿ ಒಳ್ಳೆಯ ಔಷಧಿ ಸಿಗುತ್ತಿರುತ್ತದೆ. ವೈದ್ಯರಲ್ಲಿ ಕಡಿಮೆ ದರದಲ್ಲಿ ಸಿಗುವ ಔಷಧಿ ಬಗ್ಗೆ ಕೇಳಿ ತಿಳಿಯಿರಿ.

ಅಡ್ಡ ಪರಿಣಾಮಗಳು ಏನು?
ಮಧುಮೇಹದ ಮಾತ್ರೆಗಳಿಂದ ಆಗುವಂತಹ ಅಡ್ಡಪರಿಣಾಮಗಳು ಏನು ಎಂದು ವೈದ್ಯರಲ್ಲಿ ಕೇಳಿ. ಇದರಿಂದ ನೀವು ಮಾನಸಿಕವಾಗಿ ತಯಾರಾಗಿರಬಹುದು.

ಆಹಾರ ಕ್ರಮ ಹೇಗಿರಬೇಕು?
ಮಧುಮೇಹವು ಜೀವನಶೈಲಿಯಿಂದ ಬರುವ ರೋಗವಾಗಿರುವ ಕಾರಣದಿಂದ ಇದರ ಲಕ್ಷಣಗಳನ್ನು ನಿವಾರಣೆ ಮಾಡಲು ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸುವುದು ಅತ್ಯಗತ್ಯ. ವೈದ್ಯರನ್ನು ಕೇಳಿ ಅವರಿಂದ ಸಲಹೆ ಪಡೆದು ಆಹಾರಕ್ರಮ ಪಾಲಿಸಿ. ಮಧುಮೇಹ ರೋಗಿಗಳ ಆಹಾರ ಕ್ರಮ ಹೇಗಿರಬೇಕು?

ಯಾವ ಆಹಾರ ತ್ಯಜಿಸಬೇಕು?
ಮಧುಮೇಹ ತುಂಬಾ ಕೆಟ್ಟ ಸ್ಥಿತಿಗೆ ತಲುಪುವುದನ್ನು ತಡೆಯಲು ಯಾವ್ಯಾವ ಆಹಾರಗಳನ್ನು ಕಡೆಗಣಿಸಬೇಕು ಎನ್ನುವ ಬಗ್ಗೆ ಅಗತ್ಯವಾಗಿ ವೈದ್ಯರಲ್ಲಿ ಕೇಳಿ.

ಮಾತ್ರೆ ಕಡಿಮೆ ಮಾಡಬಹುದೇ?
ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಸ್ಥಿರವಾಗಿ ಸಮತೋಲನ ಕಂಡುಬಂದಾಗ ಮಾತ್ರೆ ಕಡಿಮೆ ಮಾಡಬಹುದೇ ಎಂದು ವೈದ್ಯರನ್ನು ಕೇಳಿನೋಡಿ.



Click it and Unblock the Notifications
