For Quick Alerts
ALLOW NOTIFICATIONS  
For Daily Alerts

ಇಂತಹ ತರಕಾರಿಗಳು ಮಧುಮೇಹಿಗಳಿಗೆ ಬಹಳ ಒಳ್ಳೆಯದು,,,,

By Manu
|

ಮಧುಮೇಹ (ಡಯಾಬಿಟಿಸ್) ಎನ್ನುವುದು ಸದ್ದಿಲ್ಲದೆ ಕೊಲ್ಲುವ ರೋಗವೆನ್ನಬಹುದು. ಯಾಕೆಂದರೆ ಇದರ ಬಗ್ಗೆ ಗಮನಹರಿಸದಿದ್ದರೆ ಖಂಡಿತವಾಗಿಯೂ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ದೇಹದಲ್ಲಿನ ಇನ್ಸುಲಿನ್ ಮಟ್ಟವು ಅಸಾಮಾನ್ಯವಾಗಿದ್ದಾಗ ಅಥವಾ ಅದನ್ನು ಬಳಸಿಕೊಳ್ಳಲು ದೇಹವು ವಿಫಲವಾದಾಗ ಮಧುಮೇಹ ಉಂಟಾಗುತ್ತದೆ.

ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚುವುದು, ತೂಕ ಕಳೆದುಕೊಳ್ಳುವುದು, ಅತಿಯಾಗಿ ಮೂತ್ರ ಹೋಗುವುದು, ದೃಷ್ಟಿ ಮಂದುವಾಗುವುದು, ಆಗಾಗ ಹಸಿವಾಗುವುದು, ಇತ್ಯಾದಿ ಮಧುಮೇಹದ ಲಕ್ಷಣಗಳು. ಮಧುಮೇಹ ಇರುವುದು ಪತ್ತೆಯಾದ ಬಳಿಕ ಅದರ ಬಗ್ಗೆ ಜಾಗೃತೆ ವಹಿಸಿಕೊಳ್ಳಬೇಕು. ತಿನ್ನುವ ಆಹಾರದಿಂದ ಹಿಡಿದು ಪ್ರತಿಯೊಂದರ ಬಗ್ಗೆಯೂ ಹೆಜ್ಜೆ ಹೆಜ್ಜೆಗೆ ಎಚ್ಚರಿಕೆ ಅಗತ್ಯ. ಮಧುಮೇಹವನ್ನು ಸಂಪೂರ್ಣವಾಗಿ ನಿವಾರಿಸಲು ಅಸಾಧ್ಯ. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ಆದರೆ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಸರಿಯಾದ ಚಿಕಿತ್ಸೆ ಪಡೆಯುತ್ತಾ ಇದ್ದರೆ ಸಾಮಾನ್ಯ ಜೀವನ ಸಾಗಿಸಬಹುದು. ಮಧುಮೇಹಿಗಳು ಯಾವೆಲ್ಲಾ ಆಹಾರವನ್ನು ತಿನ್ನಬಹುದು. ಪೋಷಕಾಂಶಗಳು ಇರುವಂತಹ ಕೆಲವೊಂದು ಆಹಾರಗಳು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದು ಯಾವುದೆಂದು ಈ ಲೇಖನದಲ್ಲಿ ತಿಳಿದುಕೊಳ್ಳುವ....

ಬೀಟ್ ರೂಟ್

ಬೀಟ್ ರೂಟ್

ಬೀಟ್ ರೂಟ್‌ನಲ್ಲಿ ಉನ್ನತಮಟ್ಟದ ಪೊಟಾಶಿಯಂ ಮತ್ತು ವಿಟಮಿನ್ ಸಿ ಇದೆ. ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದು ದೇಹದ ಶಕ್ತಿಯನ್ನು ಉತ್ತಮಮಟ್ಟದಲ್ಲಿರಿಸಿ ಮಧುಮೇಹದಿಂದ ಉಂಟಾಗುವ ನಿಶ್ಯಕ್ತಿಯನ್ನು ನಿವಾರಿಸುತ್ತದೆ. ಕೆಂಪು ಕೆಂಪಾದ ಗಡ್ಡೆ ಬೀಟ್‌ರೂಟ್‌ನ ವೈಶಿಷ್ಟ್ಯವೇನು?

ಹಾಗಲಕಾಯಿ

ಹಾಗಲಕಾಯಿ

ಹಾಗಲಕಾಯಿ ಮಧುಮೇಹಿಗಳಿಗೆ ಮತ್ತೊಂದು ಒಳ್ಳೆಯ ತರಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಡುತ್ತದೆ. ಚೋಟುದ್ದ ಹಾಗಲಕಾಯಿ-ಬಾಯಿಗೆ ಕಹಿ, ಆರೋಗ್ಯಕ್ಕೆ ಸಿಹಿ

ಗೆಣಸು

ಗೆಣಸು

ಗೆಣಸು ಮಧುಮೇಹಿಗಳ ಆಹಾರ ಕ್ರಮದಲ್ಲಿರಬೇಕಾದ ಮತ್ತೊಂದು ತರಕಾರಿ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನೈಸರ್ಗಿಕವಾಗಿ ತಗ್ಗಿಸುತ್ತದೆ. ಸಿಹಿ ಗೆಣಸು ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ

ಬೆಂಡೆಕಾಯಿ

ಬೆಂಡೆಕಾಯಿ

ಬೆಂಡೆಕಾಯಿ ಮಧುಮೇಹಿಗಳಿಗೆ ಮತ್ತೊಂದು ಉತ್ತಮ ತರಕಾರಿಯಾಗಿದೆ. ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಬೆಂಡೆಕಾಯಿ ನೆನೆಸಿಟ್ಟ ನೀರು ಕುಡಿದರೆ ಹತ್ತಾರು ಲಾಭ

ಎಲೆಕೋಸು

ಎಲೆಕೋಸು

ಎಲೆಕೋಸನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿಡಲು ನೆರವಾಗುವುದು. ಆದರೆ ಇದು ತೂಕ ಕಳೆದುಕೊಳ್ಳಲು ನೆರವಾಗುವುದು. ಎಲೆಕೋಸಿನ ಅತ್ಯುತ್ತಮ 10 ಪ್ರಯೋಜನಗಳು

ಹೂಕೋಸು

ಹೂಕೋಸು

ಹೂಕೋಸಿನಲ್ಲಿರುವ ನಾರಿನಾಂಶವು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಇದು ಮಧುಮೇಹಿಗಳಿಗೆ ಅತೀ ಉತ್ತಮ ತರಕಾರಿಯಾಗಿದೆ. ಹೂಕೋಸು ಎಂದಾಕ್ಷಣ ಮುಖ ಸಿಂಡರಿಸಬೇಡಿ ಪ್ಲೀಸ್!

English summary

Sugar Free Vegetables For Diabetics

Diabetes really don't have a choice when it comes to certain foods. They are always retained from eating the foods they like. If you are diabetic, then you would know how painful it is to just stare at something delicious and not have the opportunity to eat it. Therefore, there are certain sugar free vegetables and you can bravely consume.... have a look
X
Desktop Bottom Promotion