Latest Updates
-
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ಮಧುಮೇಹಿಗಳು ತಿನ್ನಬಾರದ 10 ಹಣ್ಣುಗಳು
ಸಮತೋಲಿತ ಆಹಾರ ತಿನ್ನುವುದರಿಂದ ದೇಹ ಮತ್ತು ಮನಸ್ಸಿನ ಅರೋಗ್ಯ ಉತ್ತಮವಾಗಿರಲು ಸಾಧ್ಯ.ಆಹಾರದ ಜೊತೆಗೆ ಹಣ್ಣುಗಳನ್ನು ಬಳಸಿದಲ್ಲಿ ಉತ್ತಮ ಅರೋಗ್ಯ ನಿಮ್ಮದಾಗುವುದರಲ್ಲಿ ಅನುಮಾನವಿಲ್ಲ.ಪ್ರತಿದಿನ ಆಹಾರದಲ್ಲಿ ಹಣ್ಣನ್ನು ಬಳಸುವುದರಿಂದ ಹಣ್ಣುಗಳು ವಿಟಮಿನ್,ಕರ್ಬೋಹೈಡ್ರೇಟ್,ಖನಿಜಾಂಶಗಳು ಇವುಗಳನ್ನು ದೇಹಕ್ಕೆ ಒದಗಿಸುತ್ತವೆ.
ಆದರೆ ಮಧುಮೇಹ ಇರುವವರು ಹಣ್ಣುಗಳನ್ನು ಬಳಸುವಾಗ ಸ್ವಲ್ಪ ಎಚ್ಚರದಿಂದಿರಬೇಕಾಗುತ್ತದೆ.ಹಣ್ಣುಗಳು ಆರೋಗ್ಯವನ್ನು ಸರಿಯಾಗಿರಿಸುತ್ತದೆಯಾದರೂ ಸಕ್ಕರೆ ಕಾಯಿಲೆ ಇರುವವರಿಗೆ ಎಲ್ಲಾ ಹಣ್ಣುಗಳು ಅರೋಗ್ಯ ಸುಧಾರಿಸುವುದಿಲ್ಲ.ಆದ್ದರಿಂದ ಮಧುಮೇಹಿಗಳು ಆಯ್ದ ಕೆಲವೇ ಹಣ್ಣುಗಳನ್ನು ಹೆಚ್ಚು ಬಳಸಬಹುದು. ಮಧುಮೇಹಿಗಳಿಗೆ 'ಆಹಾರ ಪಥ್ಯ', ತಪ್ಪದೇ ಅನುಸರಿಸಿ...
ಹಣ್ಣುಗಳಲ್ಲಿ ಪೌಷ್ಟಿಕಾಂಶ ಮತ್ತು ಶಕ್ತಿ ಹೆಚ್ಚಾಗಿ ದೊರಕುತ್ತದೆ ಅದರಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎಂಬುದಿಲ್ಲ.ಅವುಗಳಲ್ಲಿ ಆಂಟಿಆಕ್ಸಿಡೆಂಟ್ ಗಳಿದ್ದು ಕೇವಲ ಪೋಷಕಾಂಶಗಳ ಪ್ರಮಾಣ ಭಿನ್ನವಾಗಿರುತ್ತದೆ.ಮಧುಮೇಹಿ ರೋಗಿಗಳು ವಿವಿಧ ರೀತಿಯ ಹಣ್ಣುಗಳನ್ನು ಬಳಸುವುದರಿಂದ ಅದರಲ್ಲಿರುವ ಭಿನ್ನ ಪೋಷಕಾಂಶಗಳು ದೇಹದ ಸಕ್ಕರೆ ಅಂಶದ ಮೇಲೆ ಭಿನ್ನ ಪರಿಣಾಮ ಬೀರಬಹುದು.ಆದ್ದರಿಂದ ಇದನ್ನು ತಡೆಯಲು ಕೆಲವು ಹಣ್ಣುಗಳಿಂದ ದೂರವಿರುವುದು ಒಳ್ಳೆಯದು. ಮಧುಮೇಹವನ್ನು ನಿಯಂತ್ರಣದಲ್ಲಿಡುವ ಸೂಪರ್ ತರಕಾರಿಗಳು
ಹೆಚ್ಚಿನ ಹಣ್ಣುಗಳು ರಕ್ತದ ಸಕ್ಕರೆ ಅಂಶದ ಮಟ್ಟವನ್ನು ಹೆಚ್ಚಿಸುತ್ತವೆ.ಅಂತಹ ಹಣ್ಣುಗಳನ್ನು ಮಧುಮೇಹ ಕಾಯಿಲೆ ಇರುವವರು ತಮ್ಮ ಆಹಾರದಲ್ಲಿ ಬಳಸಬಾರದು.ಸಾಮಾನ್ಯವಾಗಿ ಮಧುಮೇಹಿಗಳಿಗೆ ಜಿ ಐ (ಗ್ಲೈಸಮಿಕ್ ಇಂಡೆಕ್ಸ್) ಮೌಲ್ಯ 55 ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಸುರಕ್ಷಿತ ಎನ್ನಲಾಗುತ್ತದೆ.ಸ್ಟ್ರಾಬೆರಿ,ಪಿಯರ್ಸ್,ಸೇಬು ಹಣ್ಣುಗಳಲ್ಲಿ ಕಡಿಮೆ ಕರ್ಬೋಹೈಡ್ರೇಟ್ ಗಳು ಇರುವುದರಿಂದ ಸಕ್ಕರೆ ಕಾಯಿಲೆ ಇರುವವರು ತಮ್ಮ ಆಹಾರದಲ್ಲಿ ಇವುಗಳನ್ನು ಬಳಸಬಹುದು.
ಮಧುಮೇಹಿಗಳು ಬಳಸಬಾರದ 10 ರೀತಿಯ ಹಣ್ಣುಗಳು:

ಮಾವಿನಹಣ್ಣು
ಹಣ್ಣುಗಳ ರಾಜ ಎನ್ನಲಾದ ಮಾವಿನ ಹಣ್ಣಿನಲ್ಲಿ ಹೆಚ್ಚು ಸಕ್ಕರೆ ಅಂಶ ಇರುವುದರಿಂದ ಮಧುಮೇಹ ಕಾಯಿಲೆ ಇರುವವರು ಇದನ್ನು ತಿನ್ನಬಾರದು.ಅದರಲ್ಲೂ ಪ್ರತಿದಿನ ಇದನ್ನು ತಿಂದರೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿ ದೀರ್ಘ ಕಾಲದ ಸಮಸ್ಯೆಯಾಗಬಹುದು.

ಚಿಕ್ಕು ಅಥಾ ಸಪೋಟ ಹಣ್ಣು
ಸಪೋಟ ಹಣ್ಣಿನಲ್ಲಿ ಜಿ ಐ(ಗ್ಲೈಸಮಿಕ್ ಇಂಡೆಕ್ಸ್)ಮೌಲ್ಯ 55 ಕ್ಕಿಂತ ಅಧಿಕವಿರುವುದರಿಂದ ಇದು ಮಧುಮೇಹ ಕಾಯಿಲೆ ಇರುವವರ ಆರೋಗ್ಯಕ್ಕೆ ಉತ್ತಮವಲ್ಲ.ಚಿಕ್ಕು ಹಣ್ಣಿನಲ್ಲಿ ಸಕ್ಕರೆ ಮತ್ತು ಕರ್ಬೋಹೈಡ್ರೇಟ್ ಅಂಶ ಅಧಿಕವಿರುತ್ತದೆ.

ದ್ರಾಕ್ಷಿ
ದ್ರಾಕ್ಷಿ ಹಣ್ಣಿನಲ್ಲಿ ಅಧಿಕ ಪ್ರಮಾಣದ ಪೌಷ್ಟಿಕಾಂಶ,ನಾರಿನಂಶ,ವಿಟಮಿನ್ ಗಳಿರುತ್ತವೆ,ಜೊತೆಗೆ ದ್ರಾಕ್ಷಿ ಹಣ್ಣಿನಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶವಿರುತ್ತದೆ.3 ಔನ್ಸ್ ದ್ರಾಕ್ಷಿಯಲ್ಲಿ 15 ಗ್ರಾಂ ನಷ್ಟು ಕಾರ್ಬೋಹೈಡ್ರೇಟ್ ಗಳಿರುವುದರಿಂದ ಮಧುಮೇಹ ಕಾಯಿಲೆ ಇರುವವರು ಇದನ್ನು ಬಳಸುವುದರಿಂದ ಅರೋಗ್ಯ ಹದಗೆಡಬಹುದು.

ಅನಾನಸ್ ಹಣ್ಣು ಅಥವಾ ಪೈನಾಪಲ್
ಈ ಹಣ್ಣನ್ನು ಮಧುಮೇಹ ಇರುವವರು ಖಂಡಿತವಾಗಿ ತಿನ್ನಬಾರದು.ಇದರಲ್ಲಿ ಸಕ್ಕರೆ ಅಂಶ ಅಧಿಕ ಪ್ರಮಾಣದಲ್ಲಿರುತ್ತದೆ.ಒಂದು ಸಣ್ಣ ಕಪ್ ಅನಾನಸ್ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ 20 ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆ.

ಕಸ್ಟರ್ಡ್ ಆಪಲ್
ಇದರಲ್ಲಿ ವಿಟಮಿನ್ ಸಿ,ಕ್ಯಾಲ್ಸಿಯಂ,ಕಬ್ಬಿಣದಂಶ,ನಾರಿನಂಶಗಳಿದ್ದರೂ ಮಧುಮೇಹಿಗಳು ದೂರವಿರಬೇಕಾದ ಹಣ್ಣುಗಳಲ್ಲಿ ಇದು ಕೂಡ ಒಂದು.100 ಗ್ರಾಂ ಹಣ್ಣಿನಲ್ಲಿ 23 ಗ್ರಾಂನಷ್ಟು ಕಾರ್ಬೋಹೈಡ್ರೇಟ್ ಗಳಿರುತ್ತವೆ.

ಆಪ್ರಿಕಾಟ್ಸ್
ಇದರಲ್ಲಿ ಜಿ ಐ(ಗ್ಲೈಸಮಿಕ್ ಇಂಡೆಕ್ಸ್)ಮೌಲ್ಯ 57 ರಷ್ಟಿರುವುದರಿಂದ ಇದನ್ನು ಮಧುಮೇಹ ಇರುವವರು ಬಳಸುವುದು ಉತ್ತಮವಲ್ಲ.ಅರ್ಧ ಕಪ್ ನಷ್ಟು ಆಪ್ರಿಕಾಟ್ ನಲ್ಲಿ 8 ಗ್ರಾಂ ನಷ್ಟು ಕಾರ್ಬೋಹೈಡ್ರೇಟ್ ಇರುತ್ತದೆ.

ಬಾಳೆಹಣ್ಣು:
ಅರ್ಧ ಕಪ್ ಬಾಳೆಹಣ್ಣಿನಲ್ಲಿ 15 ಗ್ರಾಂನಷ್ಟು ಕಾರ್ಬೋಹೈಡ್ರೇಟ್ ಇರುತ್ತದೆ.ಬಾಳೆಹಣ್ಣು 40 ರಿಂದ 70 ರಷ್ಟು ಜಿ ಐ(ಗ್ಲೈಸಮಿಕ್ ಇಂಡೆಕ್ಸ್)ಮೌಲ್ಯ ಒಳಗೊಂಡಿರುತ್ತದೆ.ಆದ್ದರಿಂದ ಕಳಿತ ಬಾಳೆಹಣ್ಣು ಮಧುಮೇಹ ಕಾಯಿಲೆ ಇರುವವರಿಗೆ ಸೂಕ್ತವಲ್ಲ.

ಕಲ್ಲಂಗಡಿ ಹಣ್ಣು
ನಾರಿನಂಶ ಮತ್ತು ಕ್ಯಾಲೋರಿ ಕಡಿಮೆ ಇರುವ ಕಲ್ಲಂಗಡಿ ಹಣ್ಣು 72 ರಷ್ಟು ಜಿ ಐ(ಗ್ಲೈಸಮಿಕ್ ಇಂಡೆಕ್ಸ್)ಮೌಲ್ಯವನ್ನು ಹೊಂದಿರುತ್ತದೆ.ಜೊತೆಗೆ ಇದರಲ್ಲಿ ವಿಟಮಿನ್ ಎ ಮತ್ತು ಸಿ ಇರುತ್ತದೆ.ಆದಾಗ್ಯೂ ಅರ್ಧ ಕಪ್ ನಷ್ಟು ಕಲ್ಲಂಗಡಿ ಹಣ್ಣು 5 ಗ್ರಾಂನಷ್ಟು ಕಾರ್ಬೋಹೈಡ್ರೇಟ್ ಹೊಂದಿರುತ್ತದೆ.

ಪಪ್ಪಾಯಿ ಹಣ್ಣು:
ಸರಾಸರಿ 59 ರಷ್ಟು ಜಿ ಐ(ಗ್ಲೈಸಮಿಕ್ ಇಂಡೆಕ್ಸ್)ಮೌಲ್ಯ ಹೊಂದಿರುವ ಪಪ್ಪಾಯಿ ಹಣ್ಣು ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿಯನ್ನು ಅಧಿಕವಾಗಿ ಹೊಂದಿದೆ.ಮಧುಮೇಹ ಕಾಯಿಲೆ ಇರುವವರು ಇದನ್ನು ತಿನ್ನುವುದಾದರೆ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡಿಕೊಳ್ಳಲು ಕಡಿಮೆ ಪ್ರಮಾಣದಲ್ಲಿ ಬಳಸಬೇಕು.

ಖರ್ಜೂರ
ಇದು ಮಧುಮೇಹಿಗಳು ಬಳಸಬಾರದ ಹಣ್ಣುಗಳಲ್ಲಿ ಪ್ರಾಥಮಿಕವಾದುದು.ಇದರಲ್ಲಿ 103 ನಷ್ಟು ಜಿ ಐ(ಗ್ಲೈಸಮಿಕ್ ಇಂಡೆಕ್ಸ್)ಪ್ರಮಾಣವಿದ್ದು,ಕಾಲು ಕಪ್ ಹಣ್ಣಿನಲ್ಲಿ 24 ಗ್ರಾಂ ನಷ್ಟು ಕಾರ್ಬೋ ಹೈಡ್ರೇಟ್ ಇರುತ್ತದೆ.



Click it and Unblock the Notifications











