For Quick Alerts
ALLOW NOTIFICATIONS  
For Daily Alerts

ನಿಮಗೆ ಸಕ್ಕರೆ ಕಾಯಿಲೆ ಇದೆಯೇ? ಹಾಗಿದ್ದರೆ ಈ ಆಹಾರಗಳಿಂದ ದೂರವಿರಿ

By Divya Pandith
|

ಮಧುಮೇಹ ಎನ್ನುವುದು ದೀರ್ಘಕಾಲದ ಕಾಯಿಲೆ. ಪ್ರಪಂಚದಾದ್ಯಂತ ಅನೇಕ ಜನರನ್ನು ಈ ಕಾಯಿಲೆ ಕಾಡುತ್ತಿದೆ. ಈ ರೋಗ ಮಿತಿ ಮೀರಿದಾಗ ಹೃದಯದ ಕಾಯಿಲೆ, ಮೂತ್ರಪಿಂಡದ ಸಮಸ್ಯೆ, ಕುರುಡುತನ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಗಂಭೀರವಾಗಿ ಕಾಡುವ ಸಾಧ್ಯತೆ ಇದೆ. ಹಾಗಾಗಿ ನಾವು ಸೇವಿಸುವ ಊಟ-ತಿಂಡಿಗಳಲ್ಲಿ ಮಿತಿ ಹಾಗೂ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಸಕ್ಕರೆ ಕಾಯಿಲೆ ಇದ್ದವರು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಟ್ಟುಕೊಳ್ಳಲು ನಿತ್ಯದ ಆಹಾರದಲ್ಲಿ ಕ್ರಮಬದ್ಧತೆ ಹಾಗೂ ಆಯ್ಕೆಯನ್ನು ಅನುಸರಿಸಬೇಕಾಗುವುದು. ಹಾಗೊಮ್ಮೆ ಅಪ್ಪಿತಪ್ಪಿ ಮನಸ್ಸಿಗೆ ತೋಚಿದ್ದನ್ನು ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ರೋಗದ ಅಪಾಯವನ್ನು ಹೆಚ್ಚಿಸಿ, ಉರಿಯೂತವನ್ನು ಉತ್ತೇಜಿಸುತ್ತದೆ.

ಡಯಾಬಿಟಿಸ್ ಬಂದಾಗ ಕಾಣಿಸಿಕೊಳ್ಳುವ ಲಕ್ಷಣಗಳು

ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ ಮತ್ತು ಕೊಬ್ಬುಗಳು ದೇಹಕ್ಕೆ ಶಕ್ತಿಯನ್ನು ಒದಗಿಸುವ ಮ್ಯಾಕ್ರೋನ್ಯೂಟ್ರಿಯೆಂಟ್ಗಳಾಗಿವೆ. ಕಾಬ್ರ್ಸ್ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಹೆಚ್ಚಿಸುವಲ್ಲಿ ಮಹಾನ್ ಕಾರ್ಯವನ್ನು ನಿರ್ವಹಿಸುತ್ತದೆ. ಸಕ್ಕರೆ ಕಾಯಿಲೆ ಇದ್ದವರು ಕಾಬ್ರ್ಸ್ ಇರುವ ಆಹಾರವನ್ನು ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟವು ಅಪಾಯಕಾರಿ ಮಟ್ಟವನ್ನು ಏರಬಹುದು. ಹಾಗಾಗಿ ಮಧುಮೇಹಿಗಳು ಯಾವೆಲ್ಲಾ ಆಹಾರ ಪದಾರ್ಥಗಳಿಂದ ದೂರ ಉಳಿಯಬೇಕು ಎನ್ನುವ ಪಟ್ಟಿಯನ್ನು ಈ ಲೇಖನದ ಮುಂದಿನ ಭಾಗದಲ್ಲಿ ವಿವರಿಸಿದ್ದೇವೆ...

ಸಿಹಿಯಾದ ಪಾನಿಯಗಳು

ಸಿಹಿಯಾದ ಪಾನಿಯಗಳು

ಸಿಹಿಯಾದ ಪಾನಿಯಗಳು ಕಾರ್ಬ್ಸ್ ಮತ್ತು ಫ್ರಕ್ಟೋಸ್ನಿಂದ ತುಂಬಿರುತ್ತವೆ. ಅದು ಇನ್ಸುಲಿನ್ ಪ್ರತಿರೋಧ ಮತ್ತು ಮಧುಮೇಹಗಳೊಂದಿಗೆ ಬಲವಾಗಿ ಸಂಬಂಧ ಹೊಂದಿದೆ. ಸಕ್ಕರೆ ಸಿಹಿಯಾದ ಪಾನೀಯಗಳನ್ನು ಸೇವಿಸುವುದರಿಂದ ಕೊಬ್ಬಿನ ಯಕೃತ್ತಿನಂತಹ ಮಧುಮೇಹ-ಸಂಬಂಧಿತ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಅಧ್ಯಯನಗಳು ಸೂಚಿಸಿವೆ.

ಟ್ರಾನ್ಸ್ ಕೊಬ್ಬುಗಳು

ಟ್ರಾನ್ಸ್ ಕೊಬ್ಬುಗಳು

ಟ್ರಾನ್ಸ್ ಕೊಬ್ಬುಗಳು ಸ್ಥಿರವಾಗಿ ಅಪರ್ಯಾಪ್ತ ಕೊಬ್ಬಿನ ಆಮ್ಲಗಳಿಗೆ ಹೈಡ್ರೋಜನ್ ಸೇರಿಸುವ ಮೂಲಕ ಇವುಗಳನ್ನು ರಚಿಸಲಾಗುತ್ತದೆ. ಉರಿಯೂತ, ಇನ್ಸುಲಿನ್ ಪ್ರತಿರೋಧ ಮತ್ತು ಹೊಟ್ಟೆ ಕೊಬ್ಬನ್ನು ಹೆಚ್ಚಿಸಲು ಟ್ರಾನ್ಸ್ ಕೊಬ್ಬುಗಳು ಸಹಾಯ ಮಾಡುತ್ತವೆ.

ವೈಟ್ ಬ್ರೆಡ್, ಪಾಸ್ಟಾ ಮತ್ತು ಅಕ್ಕಿ

ವೈಟ್ ಬ್ರೆಡ್, ಪಾಸ್ಟಾ ಮತ್ತು ಅಕ್ಕಿ

ಇವುಗಳು ಹೆಚ್ಚಿನ ಕಾರ್ಬೋಹೈಡ್ರೇಟ್ಸ್ ಹೊಂದಿರುತ್ತವೆ ಮತ್ತು ಸಂಸ್ಕರಿಸಿದ ಆಹಾರಗಳಾಗಿವೆ. ಸಂಸ್ಕರಿಸಿದ-ಹಿಟ್ಟಿನ ಆಹಾರಗಳನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಟೈಪ್ 1 ಮತ್ತು ಟೈಪ್ 2 ಮಧುಮೇಹ ಇರುವವರಲ್ಲಿ ಹೆಚ್ಚಿಸುತ್ತದೆ.

ಹಣ್ಣಿನ ಸುವಾಸನೆಯ ಮೊಸರು

ಹಣ್ಣಿನ ಸುವಾಸನೆಯ ಮೊಸರು

ಹಣ್ಣಿನ ಸುವಾಸನೆಯ ಮೊಸರಿನಲ್ಲಿ ಅಧಿಕ ಪ್ರಮಾಣದ ಕೊಬ್ಬು ಇರುತ್ತದೆ. ಅಧಿಕ ಕೊಬ್ಬಿನಿಂದ ಕೂಡಿರುವ ಹಾಲಿನಿಂದಲೇ ಮೊಸರನ್ನು ತಯಾರಿಸಲಾಗಿರುತ್ತದೆ. ಹಾಗಾಗಿ ಕಾರ್ಬೋಹೈಡ್ರೇಟ್ಸ್ ಮತ್ತು ಸಕ್ಕರೆ ಪ್ರಮಾಣ ಸಮೃದ್ಧವಾಗಿರುತ್ತದೆ. ಒಂದು ಕಪ್ ಹಣ್ಣಿನ ಸುವಾಸನೆಯ ಮೊಸರು 47 ಗ್ರಾಂ ಸಕ್ಕರೆ ಹೊಂದಿರಬಹುದು, ಇದು ಸಕ್ಕರೆಯಿಂದ ಬರುವ ಸುಮಾರು 81% ಕ್ಯಾಲೋರಿಯನ್ನು ಹೆಚ್ಚಿಸುತ್ತದೆ ಎನ್ನಲಾಗುವುದು.

ಸಿಹಿಯಾದ ಬೆಳಗಿನ ಧಾನ್ಯಗಳ ತಿಂಡಿ

ಸಿಹಿಯಾದ ಬೆಳಗಿನ ಧಾನ್ಯಗಳ ತಿಂಡಿ

ಧಾನ್ಯಗಳು ಹೆಚ್ಚು ಸಂಸ್ಕರಿಸಲ್ಪಟ್ಟಿವೆ ಮತ್ತು ಬೇರೆ ಎಲ್ಲಕ್ಕಿಂತಲೂ ಹೆಚ್ಚು ಕಾರ್ಬೋಹೈಡ್ರೇಟ್ಸ್ ಹೊಂದಿರುತ್ತವೆ.ಅಲ್ಲದೆ ಇದು ಯಾವುದೇ ಪ್ರೋಟೀನ್ ಅನ್ನು ಹೊಂದಿರುವುದಿಲ್ಲ.ಇದು ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವ ಜವಾಬ್ದಾರಿಯುತ ಪೋಷಕಾಂಶವಾಗಿದೆ. ಮಧುಮೇಹದಿಂದ ತಪ್ಪಿಸಿಕೊಳ್ಳುವ ಆಹಾರಗಳಲ್ಲಿ ಇದೂ ಒಂದು.

ಕಾಫಿ ಪಾನೀಯಗಳು

ಕಾಫಿ ಪಾನೀಯಗಳು

ಇವು ಕಾರ್ಬ್ ಗಳಿಂದ ಲೋಡ್ ಆಗುತ್ತವೆ. ಇವುಗಳನ್ನು ಮುಂಜಾನೆ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಬಹುಬೇಗ ದ್ವಿಗುಣವಾಗುವುದು.

ಹನಿ, ಭೂತಾಳೆ ಮಕರಂದ ಮತ್ತು ಮ್ಯಾಪಲ್ ಸಿರಪ್

ಹನಿ, ಭೂತಾಳೆ ಮಕರಂದ ಮತ್ತು ಮ್ಯಾಪಲ್ ಸಿರಪ್

ಇವು ವಿವಿಧ ಬಗೆಯ ಸಕ್ಕರೆ ಮೂಲಗಳನ್ನು ಹೊಂದಿರುವ ಉತ್ಪನ್ನಗಳು. ಅವು ಹೆಚ್ಚು ಸಂಸ್ಕರಿಸದಿದ್ದರೂ, ಅವುಗಳು ಬಿಳಿ ಸಕ್ಕರೆಯಂತೆ ಅನೇಕ . ಕಾರ್ಬ್ಗಳನ್ನು ಹೊಂದಿರುತ್ತವೆ.

ಒಣ ಹಣ್ಣುಗಳು

ಒಣ ಹಣ್ಣುಗಳು

ಒಣಗಿಸುವ ಪ್ರಕ್ರಿಯೆಯಲ್ಲಿ ನೀರಿನ ಪ್ರಮಾಣವನ್ನು ಕಳೆದುಕೊಳ್ಳುತ್ತವೆ. ಇದು ಸಕ್ಕರೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ಒಣ ಹಣ್ಣುಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.

ಪ್ಯಾಕ್ಡ್ ಸ್ನ್ಯಾಕ್ ಫುಡ್ಸ್

ಪ್ಯಾಕ್ಡ್ ಸ್ನ್ಯಾಕ್ ಫುಡ್ಸ್

ಪ್ಯಾಕ್ಡ್ ಸ್ನ್ಯಾಕ್ ಫುಡ್ಸ್ ಉತ್ತಮವಾದ ಲಘು ಆಯ್ಕೆಗಳಲ್ಲ. ಇವು ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತವೆ ಮತ್ತು ಕೆಲವು ಪೋಷಕಾಂಶಗಳನ್ನು ಒದಗಿಸಲಾಗುತ್ತವೆ. ಇವುಗಳಲ್ಲಿ ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಲು ಸಾಕಷ್ಟು ವೇಗವಾಗಿ ಜೀರ್ಣಿಸುವ ಕಾರ್ಬ್ಗಳನ್ನು ಹೊಂದಿರುತ್ತವೆ. ಮಧುಮೇಹಿಗಳು ದೂರ ಇರಬೇಕಾದ ಆಹಾರಗಳಲ್ಲಿ ಇದೂ ಒಂದು.

ಹಣ್ಣಿನ ರಸ

ಹಣ್ಣಿನ ರಸ

ಹಣ್ಣಿನ ರಸದಲ್ಲಿ ಅಧಿಕ ಪ್ರಮಾಣದ ನೈಸರ್ಗಿಕ ಸಕ್ಕರೆ ಅಂಶಗಳಿರುತ್ತವೆ. ಇವುಗಳ ಸೇವನೆಯಿಂದ ಪರಿಣಾಮಕಾರಿಯಾದ ಸೋಡಾ ಪಾನೀಯಗಂತೆಯೇ ಇರುತ್ತದೆ. ಸಾಮಾನ್ಯ ಸೋಡಕ್ಕೆ ಹೋಲಿಸಿದರೆ ಇವು ಕಾರ್ಬ್ಗಳನ್ನು ಹೆಚ್ಚಿಸಿ, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವುದು.

English summary

Are You A Diabetic? Then Avoid These Foods Right Away!

Diabetes is a chronic disease that has reached great proportion among people, the world over. When diabetes is uncontrolled, it can have serious complications such as heart disease, kidney disease, blindness and other complications. What is more important is that, eating the wrong foods can raise your blood sugar and insulin levels and this also promotes inflammation that can raise the risk of this disease. In this article, we have listed some of the foods to avoid with diabetes. Read further to know which are the foods to avoid with diabetes.
X
Desktop Bottom Promotion