For Quick Alerts
ALLOW NOTIFICATIONS  
For Daily Alerts

ಒಳ ಉಡುಪುಗಳನ್ನು ಖರೀದಿಸುವಾಗ ಈ ವಿಷಯಗಳನ್ನು ನೆನಪಿಡಿ

|

ಆರಾಮದಾಯಕವಾದ ಒಳ ಉಡುಪುಗಳು ಅದರ ಮೇಲೆ ಧರಿಸಿರುವ ಬಟ್ಟೆಯಷ್ಟೇ ಮುಖ್ಯ, ಆದರೆ ಹೆಚ್ಚಿನ ಜನರು ಅದರ ಮಹತ್ವವನ್ನು ಅರ್ಥಮಾಡಿಕೊಂಡಿಲ್ಲ. ಇದರಿಂದಾಗಿ ಸೋಂಕುಗಳು, ದದ್ದುಗಳು, ತುರಿಕೆ ಮತ್ತು ಇತರ ಅನೇಕ ಸಮಸ್ಯೆಗಳೊಂದಿಗೆ ಹೋರಾಡುತ್ತಲೇ ಇರುತ್ತಾರೆ. ಒಳಉಡುಪುಗಳನ್ನು ನಿರಂತರವಾಗಿ ಧರಿಸಬೇಕಾದ ಕಾರಣ, ಅದರ ಗುಣಮಟ್ಟವನ್ನು ಗಮನಿಸುವುದು ಬಹಳ ಮುಖ್ಯ. ವಾರ್ಡ್‌ರೋಬ್‌ನಲ್ಲಿ ಎಷ್ಟೇ ಪ್ಯಾಂಟಿಗಳು ಮತ್ತು ಬ್ರಾಗಳಿದ್ದರೂ, ಅವುಗಳು ಉತ್ತಮ ಗುಣಮಟ್ಟ ಹಾಗೂ ಆರಾಮದಾಯಕವಾಗಿರುವುದು ಮುಖ್ಯ. ಹಾಗಾಗಿ ಅವುಗಳನ್ನು ಖರೀದಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳ ಬಗ್ಗೆ ಇಂದು ನಾವು ತಿಳಿಸಿಕೊಡಲಿದ್ದೇವೆ.

ಒಳ ಉಡುಪುಗಳನ್ನು ಖರೀದಿಸುವಾಗ ಗಮನಿಸಬೇಕಾದ ವಿಷಯಗಳನ್ನು ಈ ಕೆಳಗೆ ನೀಡಲಾಗಿದೆ:

ಬಟ್ಟೆ ಹೀಗಿರಲಿ:

ಬಟ್ಟೆ ಹೀಗಿರಲಿ:

ಒಳಉಡುಪುಗಳನ್ನು ಯಾವಾಗಲೂ ಹತ್ತಿ ಬಟ್ಟೆಯದ್ದನ್ನೇ ಆರಿಸಿ. ಇವುಗಳು ನಿಮಗೆ ಎಲ್ಲಾ ಕಾಲಕ್ಕೂ ಹೆಚ್ಚು ಆರಾಮದಾಯಕವಾಗಿರುತ್ತವೆ. ಜೊತೆಗೆ ಹೊಸೈರಿ ಫ್ಯಾಬ್ರಿಕ್, ರೇಯಾನ್, ಎಲಾಸ್ಟಿಕ್ ಮಿಕ್ಸ್ ಬ್ರಾಗಳು ಹಾಗೂ ಸ್ಟ್ರೆಚಬಲ್ ಪ್ಯಾಂಟಿಗಳು ತುಂಬಾ ಆರಾಮದಾಯಕ ಆಯ್ಕೆಗಳಾಗಿವೆ.

ಫಿಟ್ಟಿಂಗ್ ಗಮನಿಸಿ:

ಫಿಟ್ಟಿಂಗ್ ಗಮನಿಸಿ:

ಪ್ರತಿದಿನ ಧರಿಸಲು ಒಳ ಉಡುಪುಗಳನ್ನು ಆಯ್ಕೆಮಾಡುವಾಗ, ವಿಶೇಷವಾಗಿ ಫಿಟ್ಟಿಂಗ್ ಅನ್ನು ನೋಡಿಕೊಳ್ಳಿ. ತುಂಬಾ ಸಡಿಲವಾಗಿರುವ ಅಥವಾ ತುಂಬಾ ಬಿಗಿಯಾದ ಒಳ ಉಡುಪುಗಳು ದೇಹಕ್ಕೆ ಸರಿಯಾದ ಆಯ್ಕೆಯಲ್ಲ. ಸಡಿಲವಾದ ಒಳ ಉಡುಪುಗಳು ಅಹಿತಕರವಾಗಿರುತ್ತವೆ ಮತ್ತು ಬಿಗಿತವು ದೇಹಕ್ಕೆ ಸರಿಯಾದ ರಕ್ತ ಪರಿಚಲನೆಯನ್ನು ಅನುಮತಿಸುವುದಿಲ್ಲ. ಆದ್ದರಿಂದ ನಿಮ್ಮ ದೇಹಕ್ಕೆ ಹೊಂದಿಕೊಳ್ಳುವ ಒಳ ಉಡುಪು ಖರೀದಿಸಿ.

ಆನ್‌ಲೈನ್ ಶಾಪಿಂಗ್ ಬಗ್ಗೆ ಇರಲಿ ಎಚ್ಚರ:

ಆನ್‌ಲೈನ್ ಶಾಪಿಂಗ್ ಬಗ್ಗೆ ಇರಲಿ ಎಚ್ಚರ:

ನೀವು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ, ಬ್ರಾ ಸೈಜ್ ಚಾರ್ಟ್ ಅನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಸೈಜ್ ಚಾರ್ಟ್ ನ್ನು ಸರಿಯಾಗಿ ಗಮನಿಸಿ, ಶಾಪಿಂಗ್ ಮಾಡಿ. ಜೊತೆಗೆ ಹೆಚ್ಚಿನ ವೆಬ್‌ಸೈಟ್‌ಗಳು ಒಳ ಉಡುಪುಗಳನ್ನು ಹಿಂತಿರುಗಿಸುವ ನೀತಿಯನ್ನು ಹೊಂದಿಲ್ಲವಾದ್ದರಿಂದ ರಿಟರ್ನ್ ಪಾಲಿಸಿಯನ್ನು ಸಂಪೂರ್ಣವಾಗಿ ಓದಿ, ತದನಂತರ ಖರೀದಿಸಿ.

ಒಳ ಉಡುಪುಗಳು ಸರಳವಾಗಿರಲಿ:

ಒಳ ಉಡುಪುಗಳು ಸರಳವಾಗಿರಲಿ:

ಡಿಸೈನ್ ಮತ್ತು ಮುದ್ರಣದ ಆಧಾರದ ಮೇಲೆ ಎಂದಿಗೂ ಬ್ರಾ ಆಯ್ಕೆ ಮಾಡಬೇಡಿ. ಆರಾಮದಾಯಕವಾಗಬಹುದಾದ ಹಾಗೂ ಸಿಂಪಲ್ ಆದ ಬ್ರಾ ಆರಿಸಿ. ಇದು ನಿಮ್ಮ ಎಲ್ಲಾ ಬಟ್ಟೆಗಳೊಂದಿಗೆ ಹೊಂದಿಕೊಳ್ಳುವುದು. ಬಿಳಿ ಶರ್ಟ್ ಅಥವಾ ಟೀ ಶರ್ಟ್ ಜೊತೆಗೆ ಕೇವಲ ಪ್ಲೇಯಿನ್ ಅಥವಾ ಬಿಳಿ ಬ್ರಾ ಧರಿಸಿ. ನಿಮ್ಮ ಶರ್ಟ್ ಸ್ವಲ್ಪ ಪಾರದರ್ಶಕವಾಗಿದ್ದರೆ ತುಂಬಾ ವರ್ಣರಂಜಿತ ಮತ್ತು ಮುದ್ರಿತ ಬ್ರಾ ಚೆನ್ನಾಗಿ ಕಾಣುವುದಿಲ್ಲ.

ದುಬಾರಿಯಾದರೂ ಇವುಗಳೇ ಬೆಸ್ಟ್:

ದುಬಾರಿಯಾದರೂ ಇವುಗಳೇ ಬೆಸ್ಟ್:

ಆಂಟಿವೈರಲ್ ಮತ್ತು ಆಂಟಿಮೈಕ್ರೊಬಿಯಲ್ ಒಳ ಉಡುಪುಗಳು ಚರ್ಮವನ್ನು ಅಲರ್ಜಿಯಿಂದ ರಕ್ಷಿಸಲು ಕೆಲಸ ಮಾಡುತ್ತವೆ. ಆದ್ದರಿಂದ ಅವುಗಳನ್ನು ಕೇಳಿ ಪಡೆಯಿರಿ. ಸ್ವಲ್ಪ ದುಬಾರಿಯಾದರೂ, ನಿಮ್ಮನ್ನು ಅಲರ್ಜಿ ಹಾಗೂ ತುರಿಕೆಯಿಂದ ಸುರಕ್ಷಿತವಾಗಿಡುತ್ತವೆ.

Read more about: fashion ಫ್ಯಾಷನ್
English summary

Things to Keep in Mind Before Shopping for Undergarments in Kannada

Here we talking about things to keep in mind before shopping for undergarments in kannada, read on
Story first published: Wednesday, February 23, 2022, 13:37 [IST]
X
Desktop Bottom Promotion