For Quick Alerts
ALLOW NOTIFICATIONS  
For Daily Alerts

ಪದೇ ಪದೇ ಕಾಡುವ ಮೊಡವೆಗೆ, ಬೇವಿನ ಚಿಕಿತ್ಸೆ

By Hemanth
|

ಬೇಸಿಯಲ್ಲಿ ಸಾಮಾನ್ಯವಾಗಿ ಹೆಚ್ಚಿನವರನ್ನು ಕಾಡುವ ಮತ್ತು ಸೌಂದರ್ಯವನ್ನು ಹಾಳುಗೆಡವಿ ತನ್ನದೇ ಲೋಕವನ್ನು ರಚಿಸುವಂತಹ ಮೊಡವೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಧೂಳು, ಬಿಸಿಗಾಳಿ ಮತ್ತು ವಾತಾವರಣದಲ್ಲಿ ಕಾಣಿಸಿಕೊಳ್ಳುವ ಕಲ್ಮಶಗಳಿಂದಾಗಿ ಮುಖದ ಮೇಲೆ ಮೊಡವೆಗಳು ಮೂಡುವುದು. ಇದನ್ನು ನಿವಾರಿಸಲು ನೀವು ಹಲವಾರು ರೀತಿಯ ಕ್ರೀಮ್ ಗಳನ್ನು ಬಳಸಿರಬಹುದು ಮತ್ತು ಅದರಿಂದ ಯಾವುದೇ ಲಾಭ ನಿಮಗೆ ಆಗಿರಕ್ಕಿಲ್ಲ.

ಯಾಕೆಂದರೆ ಈ ಕ್ರೀಮ್ ಗಳಲ್ಲಿ ಇರುವ ರಾಸಾಯನಿಕಗಳು ಕೆಲವು ದಿನಗಳವರೆಗೆ ಮಾತ್ರ ಕೆಲಸ ಮಾಡುತ್ತದೆ. ಇದರಿಂದಾಗಿ ಮೊಡವೆಗಳು ಮತ್ತೆ ಮುಖದ ಮೇಲೆ ಮೂಡುವುದು. ಆದರೆ ಹಿಂದಿನ ಕಾಲದಿಂದಲೂ ಆಯುರ್ವೇದದಲ್ಲಿ ನಂಬಿಕೊಂಡು ಬಂದಿರುವಂತಹ ಬೇವಿನ ಎಲೆಯನ್ನು ಬಳಸಿಕೊಂಡು ಮೊಡವೆಗಳನ್ನು ನಿವಾರಿಸಬಹುದು. ಈ ಎಲೆಗಳು ಆರೋಗ್ಯಕ್ಕೂ ಒಳ್ಳೆಯದು ಮತ್ತು ಎಣ್ಣೆಯನ್ನು ಕೂಡ ಇದರಿಂದ ತಯಾರಿಸಲಾಗುತ್ತದೆ.

Ingredient That Banishes Pimples Forever

ಬೇವಿನ ಎಣ್ಣೆಯನ್ನು ನೀವು ಮನೆಯಲ್ಲಿಯೇ ತಯಾರಿಸಬಹುದು ಅಥವಾ ಅಂಗಡಿಗಳಿಂದಲೂ ಪಡೆಯಬಹುದು. ಬೇವಿನ ಎಣ್ಣೆಯ ವಾಸನೆ ಮತ್ತು ರುಚಿ ತುಂಬಾ ಕೆಟ್ಟದಾಗಿದ್ದರೂ ಇದು ಕೂದಲು ಹಾಗೂ ಚರ್ಮಕ್ಕೆ ತುಂಬಾ ಒಳ್ಳೆಯದು. ಬೇವಿನ ಎಲೆಯ ಪೇಸ್ಟ್ ತ್ವಚೆಗೆ ಉಪಯೋಗಕಾರಿ. ನಿಮ್ಮ ಮುಖದಲ್ಲಿ ಬೊಗ್ಗೆಗಳು ಎದ್ದು ಅದರಿಂದ ಕಲೆಗಳು ಬಿದ್ದಿದ್ದರೆ ಆಗ ಬೇವಿನ ಎಲೆಯ ದಪ್ಪಗಿನ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಬೇವಿನ ಪೇಸ್ಟ್ ಅನ್ನು ಬನ್ನಿ, ಈ ಶಕ್ತಿಶಾಲಿ ಮದ್ದು ಯಾವ ರೀತಿಯಿಂದ ಕೆಲಸ ಮಾಡಲಿದೆ ಎನ್ನುವುದನ್ನು ತಿಳಿದುಕೊಳ್ಳಿ. ನಿಮ್ಮ ಮೊಡವೆ ನಿವಾರಿಸಲು ಆರು ವಿಧಾನಗಳನ್ನ ಸೂಚಿಸಲಾಗಿದೆ.

ಬೇವಿನಎಣ್ಣೆ
ನಿಮಗೆ ಮುಖದ ಮೇಲಿನ ಮೊಡವೆಗಳನ್ನು ನಾಶ ಮಾಡಬೇಕೆಂಬ ಇಚ್ಛೆಯಿದ್ದರೆ ತಕ್ಷಣ ಒಂದು ಚಮಚ ಬೇವಿನ ಎಣ್ಣೆಯನ್ನು ಸ್ವಲ್ಪ ಬಿಸಿಮಾಡಿಕೊಳ್ಳಿ. ಬಿಸಿಯಿರುವಾಗಲೇ ಬೇವಿನ ಎಣ್ಣೆಯನ್ನು ಮೊಡವೆಗಳಿಗೆ ಹಚ್ಚಿ. ಒಂದು ವಾರದಲ್ಲಿ ಮುಖದ ಮೇಲಿನ ಮೊಡವೆಗಳು ಮಾಯ.

ಬೇವಿನೊಂದಿಗೆ ಅರಿಶಿನ

ಬೇವಿನೊಂದಿಗೆ ಅರಿಶಿನವನ್ನು ಹಾಕಿಕೊಂಡರೆ ಯಾವುದೇ ಚರ್ಮದ ಸಮಸ್ಯೆಯು ನಿವಾರಣೆಯಾಗುವುದು. ನಿಮಗೆ ಮೊಡವೆಗಳಿಂದ ತೊಂದರೆಯಾಗಿದ್ದರೆ ಈ ಮಿಶ್ರಣವನ್ನು ಮೊಡವೆಗಳಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಅರಶಿನದಲ್ಲಿರುವ ನಂಜುನಿರೋಧಕ ಗುಣಗಳು ಮೊಡವೆಗಳಿಂದ ಆದ ಸೋಂಕನ್ನು ಕೊಲ್ಲುವುದು ಮತ್ತು ಬೇವು ಈ ಪ್ರದೇಶವನ್ನು ಶಮನ ಮಾಡುವುದು.

ಬೇವಿನ ಪೇಸ್ಟ್
ನಿಮ್ಮ ತ್ವಚೆಯು ನೈಸರ್ಗಿಕವಾಗಿ ಸುಂದರ ಹಾಗೂ ಕಾಂತಿಯುವಾಗಿ ಕಾಣಬೇಕೆಂದರೆ ಬೇವಿನ ಪೇಸ್ಟ್ ನ್ನು ವಾರಕ್ಕೆ ಒಂದು ಸಲ ಹಚ್ಚಿಕೊಳ್ಳಿ. ಇದು ತುಂಬಾ ಕಹಿಯಾಗಿದ್ದರೂ ಮೊಡವೆಗಳ ಕಲೆಯನ್ನು ಸ್ವಚ್ಛಗೊಳಿಸಿ ಇತರ ಚರ್ಮ ಸಮಸ್ಯೆಗಳು ಬರದಂತೆ ತಡೆಯುವುದು.

ದಾಲ್ಚಿನಿ ಜತೆ ಬೇವು
ಒಂದು ಚಮಚ ದಾಲ್ಚಿನಿ ಹುಡಿ ಮತ್ತು ಒಂದು ಚಮಚ ಬೇವಿನ ಪೇಸ್ಟ್ ನ್ನು ಮಿಶ್ರಣ ಮಾಡಿಕೊಂಡು ಮೊಡವೆಯ ಅಲರ್ಜಿ ಉಂಟಾಗುವ ಜಾಗಕ್ಕೆ ಹಚ್ಚಿಕೊಳ್ಳಿ. ಇದು ಸೋಂಕು ನಿವಾರಣೆ ಮಾಡುವುದು. ದಾಲ್ಚಿನ್ನಿಯಲ್ಲಿನ ಖಾರದ ಗುಣಗಳು ಭವಿಷ್ಯದಲ್ಲಿ ಮೊಡವೆಗಳು ಬರದಂತೆ ತಡೆಯುವುದು.

ಬೇವಿನ ಜ್ಯೂಸ್
ದಿನದಲ್ಲಿ ಎರಡು ಸಲ ಬೇವಿನ ಜ್ಯೂಸ್ ನಿಂದ ಮುಖ ತೊಳೆಯಿರಿ. ಈ ಜ್ಯೂಸ್ ನಲ್ಲಿರುವ ಕೆಲವೊಂದು ಅಂಶಗಳು ನಿಮ್ಮ ತ್ವಚೆಯಲ್ಲಿರುವ ಮೊಡವೆಗಳನ್ನು ನಿವಾರಿಸಿ ಅದು ಬರದಂತೆ ತಡೆಯುವುದು. ಇದು ಕಂದುಕಲೆಗಳನ್ನು ನಿವಾರಿಸುವುದು. ಇದರಿಂದ ಇದನ್ನು ಬಳಸಿ.

ಬೇವಿನ ಹುಡಿ
ಬೇವಿನ ಹುಡಿಯನ್ನು ಹಾಲಿನೊಂದಿಗೆ ಬೆರೆಸಿ ಪೇಸ್ ಪ್ಯಾಕ್ ಮಾಡಿಕೊಳ್ಳಿ. ಋತುಚಕ್ರದ ವೇಳೆ ನಿಮಗೆ ಮೊಡವೆಗಳು ಕಾಣಿಸಿಕೊಳ್ಳುತ್ತಿದ್ದರೆ ಇದು ನಿಮಗೆ ಒಳ್ಳೆಯ ಉಪಾಯ.ನಿಮ್ಮ ಋತುಚಕ್ರಕ್ಕೆ ಎರಡು ಮೂರು ದಿನಗಳಿರುವಾಗ ಫೇಸ್ ಪ್ಯಾಕ್ ನ್ನು ಹಚ್ಚಿಕೊಳ್ಳಿ. ಈ ಫೇಸ್ ಪ್ಯಾಕ್ ಋತುಚಕ್ರದ ವೇಳೆ ಮೂಡುವ ಮೊಡವೆಗಳನ್ನು ನಿವಾರಿಸುವುದು.

ಬೇವಿನ ಸಾಬೂನು
ಫೇಸ್ ಪ್ಯಾಕ್ ಅಥವಾ ಬೇವಿನ ಪೇಸ್ಟ್ ಮಾಡಲು ನಿಮಗೆ ತುಂಬಾ ಉದಾಸೀನವಾಗುತ್ತಿದ್ದರೆ ಬೇವಿನ ಸಾಬೂನನ್ನು ಬಳಸಿಕೊಳ್ಳಿ. ಬೇವಿನ ಸಾಬೂನಿನಿಂದ ದಿನಕ್ಕೆ ಎರಡು ಸಲ ಮುಖ ತೊಳೆಯಿರಿ. ಇದರಿಂದ ಮೊಡವೆಗಳು ಮಾಯವಾಗಿ ನಿಮ್ಮ ತ್ವಚೆ ಕಾಂತಿಯುತವಾಗಿ ಕಾಣುವುದು.

English summary

Ingredient That Banishes Pimples Forever

Is your face covered with acne? Have you tried multiple ways to get rid of the ugly looking zits on your face? If you have and terribly failed, then you are going to fall head over heels with this powerful and very effective ingredient we would love for you to use.
Story first published: Monday, May 2, 2016, 20:31 [IST]
X
Desktop Bottom Promotion