For Quick Alerts
ALLOW NOTIFICATIONS  
For Daily Alerts

ಕಪ್ಪಗಿನ ಕುತ್ತಿಗೆಯ ಸಮಸ್ಯೆಗೆ ಇಲ್ಲಿದೆ ಪವರ್‌ಫುಲ್ ಮನೆಮದ್ದು

By Jaya subramanya
|

ಹಿಂದೆ, ವಿಶ್ವದಲ್ಲಿರುವ ಹೆಚ್ಚಿನ ನಾಗರೀಕತೆಗಳು ನೀಳವಾದ ಬಿಳುಪುಳ್ಳ ಕುತ್ತಿಗೆಯನ್ನು ಹೊಂದಿರುವ ಸ್ತ್ರೀಯರು ಸೌಂದರ್ಯದ ಪ್ರತೀಕವೆಂದು ಪರಿಗಣಿಸುತ್ತಿದ್ದರು. ತಾವು ಮದುವೆಯಾಗುವ ಹುಡುಗಿಯ ಕುತ್ತಿಗೆಯ ಅಂದವನ್ನು ನೋಡಿ ರಾಜರು ಅವರನ್ನು ವಿವಾಹವಾಗುತ್ತಿದ್ದರು ಎಂಬುದೂ ಪ್ರತೀತಿಯಲ್ಲಿದೆ.

ಇಂದು ಕಾಲ ಬದಲಾದಂತೆ ಸೌಂದರ್ಯದ ಅಂಶವೂ ಬದಲಾಗಿದ್ದರೂ ಕೆಲವೊಂದು ಹಾಗೆಯೇ ಉಳಿದಿದೆ. ಇಂದಿಗೂ ಹೆಚ್ಚಿನ ಜನರು ಅದರಲ್ಲೂ ಮಹಿಳೆಯರು, ಯಾವುದೇ ಕಲೆಗಳಿಲ್ಲದ ಹೊಳೆಯುವ ಬಿಳುಪಾದ ಕುತ್ತಿಗೆಯನ್ನು ಪಡೆಯುವ ಇರಾದೆಯನ್ನು ಹೊಂದಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಕುತ್ತಿಗೆಯ ಬಳಿ ಕಂಡುಬರುವ ಕಲೆ, ಆಕರ್ಷಣೀಯವಾಗಿಲ್ಲದೆ ಇರಬಹುದು, ಹೆಚ್ಚಾಗಿ ಈ ಭಾಗ ಕಾಣುವುದು ಕುತ್ತಿಗೆ ಕಂಡುಬರುವ ದಿರಿಸುಗಳನ್ನು ನೀವು ಧರಿಸಿದಾಗ. ಕಪ್ಪು ಬಣ್ಣಕ್ಕೆ ತಿರುಗಿದ ಕುತ್ತಿಗೆಯ ಸಮಸ್ಯೆಗೆ-ಲಿಂಬೆಯ ಚಿಕಿತ್ಸೆ!

ಸುಂದರವಾದ ನೆಕ್ಲೇಸ್ ಅನ್ನು ಕುತ್ತಿಗೆಗೆ ಧರಿಸುವಾಗ ಈ ಕಲೆಗಳು ನಿಮ್ಮಲ್ಲಿ ಕೀಳರಿಮೆಯನ್ನು ಉಂಟುಮಾಡಬಹುದು ಮತ್ತು ಕುತ್ತಿಗೆಯ ಕಲೆಗಳನ್ನು ಅಡಗಿಸುವ ಕಸರತ್ತನ್ನು ನೀವು ಮಾಡುತ್ತೀರಿ. ಹೀಗಾದಾಗ ಒಡವೆ ತನ್ನ ಬೆಲೆಯನ್ನೇ ಕಳೆದುಕೊಳ್ಳುತ್ತದೆ. ಕುತ್ತಿಗೆಯ ಕಪ್ಪಾಗುವಿಕೆ ಹಲವಾರು ಕಾರಣಗಳಿಂದ ಉಂಟಾಗಿರಬಹುದು. ವರ್ಣದ್ರವ್ಯ, ಹಾರ್ಮೋನು ಅನಿಯಂತ್ರತೆ, ಸನ್ ಟ್ಯಾನ್, ಕಳಪೆ ನೈರ್ಮಲ್ಯ, ಬಿರುಸುತನ, ಎನ್ಜಿಮಾ, ಅಲರ್ಜಿ ಇತ್ಯಾದಿಗಳು.

DIY Oats, Curd And Lime Pack To Treat Dark Neck

ವೃತ್ತಿಪರರು ಈ ಸಮಸ್ಯೆಯನ್ನು ಹೋಗಲಾಡಿಸಲು ಕ್ರೀಮ್, ಸೋಪು ಮತ್ತು ಮುಲಾಮುಗಳನ್ನು ನೀಡಿದರೂ ಇದು ನಿಮಗೆ ತೃಪ್ತಿಯನ್ನು ನೀಡುವ ಪರಿಹಾರವನ್ನು ಒದಗಿಸಲಾರದು. ನೀವು ನೈಸರ್ಗಿಕ ವಿಧಾನವನ್ನು ಅನುಸರಿಸಿ ಕುತ್ತಿಗೆಯ ಕಪ್ಪಾಗುವಿಕೆಗೆ ಪರಿಹಾರವನ್ನು ಕಾಣಬೇಕು. ಹಾಗಿದ್ದರೆ ಮೊಸರು, ಓಟ್ಸ್ ಮತ್ತು ಲಿಂಬೆಯ ಪ್ಯಾಕ್ ಅನ್ನು ಈ ಸಮಸ್ಯೆಯ ಪರಿಹಾರಕ್ಕಾಗಿ ಏಕೆ ನೀವು ಬಳಸಬಾರದು! ಇದೊಂದು ನೈಸರ್ಗಿಕ ವಿಧಾನವಾಗಿದ್ದು ಮನೆಯಲ್ಲೇ ನಿಮಗೆ ತಯಾರುಪಡಿಸಿಕೊಳ್ಳಬಹುದಾಗಿದೆ.

ಪ್ಯಾಕ್ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು

*2 ಚಮಚ ಓಟ್ಸ್

*2 ಚಮಚ ಮೊಸರು

*ಲಿಂಬೆಯ ಹನಿ

ಓಟ್ ಮೀಲ್ ನೈಸರ್ಗಿಕ ತ್ವಚೆಯ ಎಕ್ಸ್‎ಫೋಲಿಯೇಟಿಂಗ್ ಏಜೆಂಟ್ ಎಂದೆನಿಸಿದ್ದು, ಕುತ್ತಿಗೆಯ ಭಾಗದಲ್ಲಿರುವ ಮತ ಕೋಶಗಳನ್ನು ನಿವಾರಿಸುತ್ತದೆ ಮತ್ತು ಒಣ ಹಾಗೂ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಅಂತೆಯೇ ಓಟ್ಸ್ ತ್ವಚೆಯನ್ನು ಪುನರ್ಯೌವನಗೊಳಿಸುವ ಶಕ್ತಿಯನ್ನು ಓಟ್ಸ್‌ ಪಡೆದುಕೊಂಡಿದ್ದು ನಿಮ್ಮ ಕುತ್ತಿಗೆಯ ಭಾಗವನ್ನು ಆರೋಗ್ಯಯುತ ಮತ್ತು ಬೆಳ್ಳಗಾಗಿರಿಸುತ್ತದೆ.

ಮೊಸರನ್ನು ನಿತ್ಯವೂ ಬಳಸುವುದರಿಂದ ನೀವು ಮೃದುವಾದ ಹೈಡ್ರೇಟ್ ಆಗಿರುವ ತ್ವಚೆಯನ್ನು ಪಡೆದುಕೊಳ್ಳುತ್ತೀರಿ. ಇದು ನಿಮ್ಮ ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ. ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಮೊಸರು ಪಡೆದುಕೊಂಡಿದ್ದು ಸೋಂಕು ಉಂಟುಮಾಡುವ ಅಂಶಗಳನ್ನು ತಡೆಯುತ್ತದೆ ಸೋಂಕು ಕೂಡ ಕುತ್ತಿಗೆಯ ಕಪ್ಪಾಗುವಿಕೆಗೆ ಒಮ್ಮೊಮ್ಮೆ ಕಾರಣವಾಗುತ್ತದೆ. ಲಿಂಬೆಯು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಎಂದೆನಿಸಿದ್ದು ನಿಮ್ಮ ತ್ವಚೆಯನ್ನು ಬೆಳ್ಳಗಾಗಿಸುತ್ತದೆ ಮತ್ತು ಕುತ್ತಿಗೆಯ ಕಲೆಯನ್ನು ಮರೆಮಾಚುತ್ತದೆ. ಕೊಳೆಯನ್ನು ನಿವಾರಿಸುವ ಕ್ಲೆನ್ಸರ್ ಆಗಿ ಲಿಂಬೆ ಕಾರ್ಯನಿರ್ವಹಿಸಲಿದ್ದು, ಕಲ್ಮಶಗಳನ್ನು ಹೊರಹಾಕುತ್ತದೆ.

DIY Oats, Curd And Lime Pack To Treat Dark Neck

ಸಿದ್ಧತೆಯ ವಿಧಾನ

*ಮಿಕ್ಸಿಂಗ್ ಬೌಲ್‎ನಲ್ಲಿ ತಿಳಿಸಿರುವ ಪ್ರಮಾಣದಲ್ಲಿ ಸಾಮಾಗ್ರಿಗಳನ್ನು ತೆಗೆದುಕೊಳ್ಳಿ.

*ದಪ್ಪನೆಯ ಮಿಶ್ರಣವನ್ನು ತಯಾರು ಮಾಡಲು ಚೆನ್ನಾಗಿ ಕಲಸಿ.

*ನಿಮ್ಮ ಕುತ್ತಿಗೆಯ ಸುತ್ತಲಿನ ತ್ವಚೆಗೆ ಈ ಮಿಶ್ರಣವನ್ನು ಹಚ್ಚಿ.

*ಸ್ವಲ್ಪ ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಿ.

*ತದನಂತರ 20 ನಿಮಿಷಗಳು ಹಾಗೆಯೇ ಬಿಡಿ.

*ತಣ್ಣೀರಿನಿಂದ ಕುತ್ತಿಗೆಯನ್ನು ತೊಳೆದುಕೊಳ್ಳಿ.

English summary

DIY Oats, Curd And Lime Pack To Treat Dark Neck

Ages ago, many ancient civilizations around the world considered a long, fair neck of a woman to be one of the greatest signs of beauty! Even kings chose their brides based on how beautiful their necks looked. Today, times have changed and the concept of beauty is also different.
Story first published: Tuesday, May 10, 2016, 9:05 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more