For Quick Alerts
ALLOW NOTIFICATIONS  
For Daily Alerts

ಮುಖದ ಅಂದಕ್ಕೆ-ಕಿತ್ತಳೆ ಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್

By Deepak
|

ಬೆಳಗ್ಗೆ ಚೆನ್ನಾಗಿ ಮೇಕಪ್ ಮಾಡಿಕೊಂಡು ದಿನಾಪೂರ್ತಿ ಕೆಲಸ ಮಾಡುತ್ತಾ ಇರುವಾಗ ಸಂಜೆ ಅಪ್ಪಿ-ತಪ್ಪಿ ನಿಮ್ಮ ಮುಖವನ್ನು ನೀವು ನೋಡಿಕೊಂಡಾಗ ಆಗ ನಿಮಗೆ ಅಚ್ಚರಿಯಾಗಿರುವ ಸಂದರ್ಭಗಳು ನಿಮ್ಮ ಜೀವನದಲ್ಲಿ ಹಲವಾರು ಬಾರಿ ನಡೆದಿರಬೇಕಲ್ಲವೇ? ಬೆಳಗ್ಗೆ ಅಪ್ಸರೆಯಂತಹ ಮೈಕಾಂತಿಯನ್ನು, ಮುಖದ ಹೊಳಪನ್ನು ಹೊಂದಿದ್ದ ನೀವು ಸಂಜೆಯಾಗುತ್ತಿದ್ದಂತೆ, ಕೃಷ್ಣಪಕ್ಷದ ಚಂದ್ರನ ರೀತಿ ಮಂಕಾಗುತ್ತ ಸಾಗುತ್ತಿರುವುದು ನಿಜಕ್ಕು ನಿಮಗೆ ಕಳವಳವನ್ನುಂಟು ಮಾಡಿರುತ್ತದೆ.

ಇನ್ನು ಕಚೇರಿ ಮುಗಿಸಿ ಮನೆಗೆ ಸೇರುವಷ್ಟರಲ್ಲಿ ನಿಮ್ಮ ಮುಖದ ಸೌಂದರ್ಯವು ಅದೆಲ್ಲಿ ಹಾದಿಯಲ್ಲಿ ಕಣ್ಮರೆಯಾಗಿರುತ್ತದೆಯೋ, ಆ ಮಟ್ಟಿಗೆ ನಿಮ್ಮ ಮುಖಕ್ಕೆ ಮಂಕುತನವು ಆವರಿಸಿಕೊಂಡಿರುತ್ತದೆ. ಇದಕ್ಕೆಲ್ಲ ಕಾರಣ ಒತ್ತಡ, ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕೂರುವುದು, ಧೂಳು ಮತ್ತು ಪರಿಸರ ಮಾಲಿನ್ಯ, ತ್ವಚೆಗೆ ಕಾಳಜಿ ನೀಡಲು ಸಮಯಾಭಾವ, ದುರ್ಬಲ ಡಯಟ್, ಇತ್ಯಾದಿ.

DIY Natural Orange Peel Face Wash For Radiant Skin

ಸರಿ ಇದರಿಂದ ನಿವಾರಣೆಯನ್ನು ಪಡೆಯಬೇಕು ಎಂದುಕೊಂಡು ರಾಸಾಯನಿಕಯುಕ್ತ ಸೌಂದರ್ಯವರ್ಧಕಗಳನ್ನು ಬಳಸಿದರೆ, ಅದರಿಂದ ನಿಮ್ಮ ತ್ವಚೆಗೆ ಹಾನಿಯಾಗುವುದು ಖಂಡಿತ. ಇವು ನಿಮ್ಮ ತ್ವಚೆಯ ಪರಿಸ್ಥಿತಿಯನ್ನು ಮತ್ತಷ್ಟು ಹಾಳು ಮಾಡಿಬಿಡುತ್ತವೆ. ಒಂದು ವೇಳೆ ನಿಮಗೆ ಸ್ವಾಭಾವಿಕವಾಗಿ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದಿದ್ದಲ್ಲಿ, ಮೊದಲು ನಿಮ್ಮ ಮನೆಯ ಅಡುಗೆ ಮನೆಗೆ ಹೋಗಿ! ಹೌದು ನಿಮ್ಮ ಮನೆಯ ಅಡುಗೆ ಮನೆಯಲ್ಲಿ ಮತ್ತು ಕೈತೋಟದಲ್ಲಿ ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸುವ ಬಹುತೇಕ ಅಂಶಗಳು ದೊರೆಯುತ್ತವೆ. ಸರ್ವ ವಿಧದಲ್ಲೂ ಪ್ರಯೋಜನಕಾರಿಯಾಗಿರುವ ಕಿತ್ತಳೆ ಸಿಪ್ಪೆ

ಇವು ತ್ವಚೆಯ ಆರೋಗ್ಯವನ್ನು ಸಹ ಹೆಚ್ಚಿಸುತ್ತವೆ ಎಂಬುದು ವಿಶೇಷ. ತ್ವಚೆಯ ಆರೋಗ್ಯವನ್ನು ಹೆಚ್ಚಿಸುವ ಬಹುತೇಕ ಉತ್ಪನ್ನಗಳಲ್ಲಿ ಈ ಪದಾರ್ಥಗಳನ್ನು ಸೇರಿಸಿರಲಾಗುತ್ತದೆ. ಅವುಗಳನ್ನು ಬಳಸಿ ನಿಮಗೆ ಬೇಕಾದ ಸೌಂದರ್ಯ ಉತ್ಪನ್ನವನ್ನು ನೀವು ತಯಾರಿಸಿಕೊಳ್ಳಬಹುದು. ಬನ್ನಿ ಇಂದು ಬೋಲ್ಡ್‌ಸ್ಕೈ ನಿಮ್ಮ ಹೊಳೆಯುವ ತ್ವಚೆಗಾಗಿ ಕಿತ್ತಳೆ ಹಣ್ಣಿನ ಸಿಪ್ಪೆಯ ಫೇಸ್ ವಾಶ್ ಅನ್ನು ತಯಾರಿಸುವ ಬಗೆಯನ್ನು ತಿಳಿಸಿಕೊಡುತ್ತಿದೆ. ಮುಂದೆ ಓದಿ...

ಫೇಸ್ ವಾಶ್ ಅನ್ನು ತಯಾರಿಸಲು ಬೇಕಾದ ಪದಾರ್ಥಗಳು
*2 ಟೇಬಲ್ ಚಮಚಗಳಷ್ಟು ಲಿಕ್ವಿಡ್ ಕ್ಯಾಸ್ಟೈಲ್ ಸೋಪ್
*1 ಟೇಬಲ್ ಚಮಚ ಪುಡಿ ಮಾಡಿದ ಕಿತ್ತಳೆ ಹಣ್ಣಿನ ಸಿಪ್ಪೆ
*20 ಹನಿ ಕಿತ್ತಳೆ ಎಣ್ಣೆ (ಆರೆಂಜ್ ಎಸೆನ್ಶಿಯಲ್ ಆಯಿಲ್)

ಲಿಕ್ವಿಡ್ ಕ್ಯಾಸ್ಟೈಲ್ ಸೋಪ್ ಎಂಬುದು ಒಂದು ವಾಸನೆರಹಿತ ಸೋಪ್ ಆಗಿದ್ದು, ಯಾವುದೇ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಇದು ಮುಖದ ಮೇಲೆ ಸ್ವಾಭಾವಿಕ ಫೇಸ್‌ವಾಶ್ ಆಗಿ ವರ್ತಿಸುತ್ತದೆ. ಜೊತೆಗೆ ಇದು ಮುಖದ ಮೇಲೆ ನೊರೆಯನ್ನು ಉತ್ಪಾದಿಸಿ, ತ್ವಚೆಯನ್ನು ಶುದ್ಧಗೊಳಿಸುತ್ತದೆ ಮತ್ತು ತಾಜಾ ಆಗಿರುವಂತೆ ಮಾಡುತ್ತದೆ.

ಇದನ್ನು ಯಾವುದೇ ಔಷಧಿ ಅಂಗಡಿ/ ಸೂಪರ್ ಮಾರ್ಕೆಟ್‍ನಲ್ಲಿ ನೀವು ಕೊಂಡುಕೊಳ್ಳಬಹುದು. ಇಲ್ಲವೇ ಆನ್‌ಲೈನ್‌ನಲ್ಲಿ ಸಹ ಇದು ಲಭ್ಯವಿರುತ್ತದೆ! ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಇರುತ್ತವೆ. ಇವು ಜಿಡ್ಡಿನಂಶವನ್ನು, ಕೊಳೆ ಮತ್ತು ಸೂಕ್ಷ್ಮಾಣುಗಳನ್ನು ಸಹ ನಿವಾರಿಸುತ್ತವೆ. ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿರುವ ಆಮ್ಲೀಯ ಗುಣಗಳು ತ್ವಚೆಯ ಬಣ್ಣವನ್ನು ತಿಳಿಗೊಳಿಸುತ್ತವೆ ಮತ್ತು ಮೊಡವೆ ಹಾಗು ಕಲೆಗಳನ್ನು ನಿವಾರಿಸುತ್ತವೆ. ಇದರ ಜೊತೆಗೆ, ನಿಮ್ಮ ತ್ವಚೆಯನ್ನು ತನ್ನಲ್ಲಿರುವ ಪೋಷಕಾಂಶಗಳಿಂದಾಗಿ ಆರೋಗ್ಯಕರಗೊಳಿಸುತ್ತದೆ. ಆ ಮೂಲಕ ತ್ವಚೆಗೆ ಒಳಗಿನಿಂದಲೆ ಕಾಂತಿಯನ್ನು ನೀಡುತ್ತದೆ. ಕಿತ್ತಳೆ ಸಿಪ್ಪೆಯಿಂದ ಹೆಚ್ಚಿಸಿ ಮುಖದ ಬಿಳುಪು

ಸಿದ್ಧಗೊಳಿಸುವ ಬಗೆ
*ಮೇಲೆ ತಿಳಿಸಲಾಗಿರುವ ಪದಾರ್ಥಗಳನ್ನು, ಸೂಚಿಸಲಾಗಿರುವ ಪ್ರಮಾಣಕ್ಕೆ ಅನುಗುಣವಾಗಿ ತೆಗೆದುಕೊಂಡು ಒಂದು ಬಟ್ಟಲಿನಲ್ಲಿ ಬೆರೆಸಿಕೊಳ್ಳಿ.
ಅವುಗಳನ್ನೆಲ್ಲಾ ಒಂದು ಮಿಶ್ರಣವನ್ನಾಗಿ ಮಾಡಿಕೊಳ್ಳಿ.
*ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಲೇಪಿಸಿ, ಕೆಲವು ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ.
*ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ತ್ವಚೆಯನ್ನು ತೊಳೆಯಿರಿ.
*ಈ ಸ್ವಾಭಾವಿಕ ಫೇಸ್ ವಾಶ್ ಅನ್ನು ಪ್ರತಿನಿತ್ಯ ಬಳಸಲು ನೀವು ಒಂದು ಬಾಟಲಿಯಲ್ಲಿ ಸಂಗ್ರಹಿಸಿಡಬಹುದು.

English summary

DIY Natural Orange Peel Face Wash For Radiant Skin

If you have ever walked through an aisle after an aisle of cosmetic skin care products at the stores, wondering if they would really help your skin get better, then you are not alone. Most of us have been there. Come back home after a long day at work and have a look at yourself in the mirror, what do you see? Your complexion is getting duller by the day!
Story first published: Monday, May 9, 2016, 13:17 [IST]
X
Desktop Bottom Promotion