For Quick Alerts
ALLOW NOTIFICATIONS  
For Daily Alerts

ಹಿಮ್ಮಡಿಗಳ ಬಿರುಕಿನ ಸಮಸ್ಯೆಗೆ ಒಂದೇ ವಾರದಲ್ಲಿ ಪರಿಹಾರ!

By Manu
|

ನಿಮ್ಮ ನೆಚ್ಚಿನ ಪಾದರಕ್ಷೆಯನ್ನು ತೊಡಲು ಹಿಂದೇಟು ಹಾಕುತ್ತಿದ್ದೀರಾ? ಒಡೆದ ಹಿಮ್ಮಡಿಗಳೇ ಇದಕ್ಕೆ ಕಾರಣವೇ? ಇದು ಕಾಣಿಸಬಾರದೆಂದು ಎಷ್ಟು ಪ್ರಯತ್ನಪಟ್ಟರೂ ಯಾವುದೋ ಸಂದರ್ಭದಲ್ಲಿ ಕಾಣಿಸಿಕೊಂಡು ಮುಜುಗರ ಅನುಭವಿಸಿದ್ದೀರಾ? ಹಿಮ್ಮಡಿಗಳ ಬಿರುಕಿನ ಕಾರಣ ಎದುರಾಗುವ ನೋವಿನಿಂದ ಕೆಲವು ಪಾದರಕ್ಷೆಗಳನ್ನು ತೊಡಲೂ ಸಾಧ್ಯವಾಗುತ್ತಿಲ್ಲವೇ? ಬಿರುಕು ಮುಚ್ಚಿಕೊಳ್ಳಲು ಕಾಲುಚೀಲ ಧರಿಸುತ್ತಿದ್ದೀರಾ? ಈ ಬಿರುಕುಗಳನ್ನು ತುಂಬುವ ವಿಧಾನಗಳೆಲ್ಲವೂ ಕೈ ಕೊಟ್ಟಿವೆಯೇ? ಈ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಕೆಳಗೆ ವಿವರಿಸಿರುವ ಮನೆಮದ್ದು ನಿಮ್ಮ ತೊಂದರೆಯನ್ನು ನಿವಾರಿಸಲಿದೆ. ಬಿರುಕು ಬಿಟ್ಟ ಪಾದಗಳ ಆರೈಕೆಗಾಗಿ ಸರಳ ಮನೆಮದ್ದುಗಳು

ಹಿಮ್ಮಡಿಗಳಲ್ಲಿ ಬಿರುಕು ಏಕೆ ಬರುತ್ತದೆ ಎಂಬುದನ್ನು ಅರಿಯುವ ಮುನ್ನ ನಮ್ಮ ಪಾದಗಳ ಚರ್ಮದ ಬಗ್ಗೆ ಅರಿಯುವುದು ಉತ್ತಮ. ನಮ್ಮ ಪಾದಗಳು ಇಡಿಯ ಶರೀರದ ಭಾರವನ್ನು ಹೊರಬೇಕಾದುದರಿಂದ ಇಲ್ಲಿಯ ಚರ್ಮ ಅತ್ಯಂತ ದಪ್ಪನಾಗಿರುತ್ತದೆ. ಅದರಲ್ಲಿಯೂ ಅಂಚುಗಳಲ್ಲಿ ಹೆಚ್ಚು ದಪ್ಪನಾಗಿರುತ್ತದೆ. ಈ ದಪ್ಪನಾದ ಪಡೆ ಜೀವಕೋಶಗಳು ಸತ್ತರೂ ಸುಲಭವಾಗಿ ನಿವಾರಣೆಯಾಗದೇ ಅಂಟಿಕೊಂಡೇ ಇರುತ್ತವೆ. ಕ್ರಮೀಣ ಇವು ಒಣಗಿ ಸೆಳೆತ ಹೆಚ್ಚಾಗುವ ಕಾರಣ ಚಿಕ್ಕ ಬಿರುಕು ಉಂಟಾಗುತ್ತದೆ. ಒಣಗುವ ಪ್ರಮಾಣ ಹೆಚ್ಚಾದಂತೆ ಬಿರುಕು ಆಳವಾಗುತ್ತಾ ಹೋಗುತ್ತದೆ.

ಆದ್ದರಿಂದ ಈ ಭಾಗವನ್ನು ಆಗಾಗ ಉಜ್ಜಿಕೊಂಡು ಈ ಸತ್ತ ಜೀವಕೋಶಗಳನ್ನು ನಿವಾರಿಸುತ್ತಾ ಇರಬೇಕು. ಒಣಚರ್ಮ, ದೇಹದ ಭಾರವನ್ನು ಸಮರ್ಪಕವಾಗಿ ಹರಡದ ವಿನ್ಯಾಸದ ಪಾದರಕ್ಷೆಗಳು, ಶಿಲೀಂಧ್ರದ ಸೋಂಕು, ಸ್ಥೂಲಕಾಯ, ಸ್ವಚ್ಛತೆಯಲ್ಲಿ ಕೊರತೆ ಮೊದಲಾದ ಕಾರಣಗಳಿಂದ ಈ ಬಿರುಕುಗಳು ಇನ್ನಷ್ಟು ಆಳಕ್ಕೆ ಇಳಿದು ನಿಜವಾದ ಚರ್ಮವನ್ನು ಹರಿದು ರಕ್ತ ಬರಿಸಬಹುದು.

ಸಾಮಾನ್ಯವಾಗಿ ಬಿರುಕುಗಳು ಕಾಣಿಸಿಕೊಂಡ ಬಳಿಕವೂ ಇದರಲ್ಲಿ ತಕ್ಷಣಕ್ಕೆ ಯಾವುದೇ ನೋವು ಇರದ ಕಾರಣ ನಾವೆಲ್ಲರೂ ಇದನ್ನು ಅಲಕ್ಷಿಸಿಬಿಡುತ್ತೇವೆ. ಅಯ್ಯೋ ನಾಳೆ ಸ್ನಾನ ಮಾಡಿಕೊಂಡಾಗ ಉಜ್ಜಿಕೊಂಡರಾಯಿತು ಎಂಬ ಅಸಡ್ಡೆಯಿಂದಲೇ ಹೆಚ್ಚಿನವರಿಗೆ ಈ ತೊಂದರೆ ಉಲ್ಬಣಾವಸ್ಥೆಗೆ ಅಂದರೆ ಸೋರಿಯಾಸಿಸ್ (psoriasis) ಎಂಬ ಸ್ಥಿತಿಗೆ ತಲುಪಲೂ ಕಾರಣವಾಗಬಹುದು. ಆದ್ದರಿಂದ ಈ ಬಿರುಕುಗಳನ್ನು ಮುಚ್ಚುವತ್ತ ಎಷ್ಟು ಬೇಗನೇ ಮನಸ್ಸು ಮಾಡುತ್ತೀರೋ ಅಷ್ಟೂ ಉತ್ತಮ. ಬನ್ನಿ, ಈ ನಿಟ್ಟಿನಲ್ಲಿ ಅತ್ಯಂತ ಸಮರ್ಥವಾದ ಮನೆಮದ್ದು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ:

Powerful Homemade Remedy To Reduce Feet Cracks In A Week!

ಅಗತ್ಯವಿರುವ ಸಾಮಾಗ್ರಿಗಳು
*ಓಟ್ಸ್ ಅಥವಾ ಓಟ್ ಮೀಲ್ - ಎರಡು ದೊಡ್ಡ ಚಮಚ
*ಲಿಂಬೆ ರಸ - ಒಂದು ದೊಡ್ಡಚಮಚ
*ಉಪ್ಪು- ಎರಡು ಚಿಕ್ಕ ಚಮಚ
ಈ ಮೂರೂ ಪರಿಕರಗಳು ಸತ್ತ ಜೀವಕೋಶಗಳನ್ನು ಸಡಿಲಗೊಳಿಸಿ ನಿವಾರಿಸುವಲ್ಲಿ ಸಮರ್ಥವಾಗಿವೆ. ಲಿಂಬೆರಸ ಚರ್ಮದ ಜೀವಕೋಶಗಳನ್ನು ತೇವಗೊಳಿಸಿ ಪ್ರತಿ ಜೀವಕೋಶವನ್ನು ಬೇರೆಬೇರೆಯಾಗಿಸಲು ನೆರವಾಗುತ್ತದೆ ಹಾಗೂ ಬಿರುಕುಗಳಲ್ಲಿ ಆಶ್ರಯ ಪಡೆದಿದ್ದ ಕ್ರಿಮಿ, ಧೂಳು, ಕೀಟಾಣುಗಳನ್ನು ನಿವಾರಿಸಲು ನೆರವಾಗುತ್ತದೆ.

ಉಪ್ಪು ಮತ್ತು ಓಟ್ಸ್ ಸಡಿಲವಾದ ಈ ಜೀವಕೋಶಗಳನ್ನು ತಮ್ಮೊಂದಿಗೆ ಅಂಟಿಸಿಕೊಂಡು ಹೊರಹೋಗಲು ನೆರವಾಗುತ್ತವೆ. ಇದರಿಂದ ಬಿರುಕಿನ ಅಕ್ಕಪಕ್ಕದಲ್ಲಿದ್ದ ದಪ್ಪನೆಯ ಚರ್ಮದ ಭಾಗ ನಿಧಾನವಾಗಿ ನಿವಾರಣೆಯಾಗುತ್ತದೆ ಹಾಗೂ ಬಿರುಕಿನ ಆಳದಲ್ಲಿ ಹೊಸ ಚರ್ಮ ಬೆಳೆಯಲು ಸಾಧ್ಯವಾಗುತ್ತದೆ. ಕೆಲವೇ ದಿನಗಳಲ್ಲಿ ಈ ಬಿರುಕುಗಳು ಕಾಣದಂತೆ ಮಾಯವಾಗುತ್ತವೆ. ಕಾಡುವ ಸಮಸ್ಯೆ ಹಿಮ್ಮಡಿ ಒಡಕು-ಇಲ್ಲಿದೆ ಸಿಂಪಲ್ ಮದ್ದು

ತಯಾರಿಕಾ ವಿಧಾನ
*ಒಂದು ಚಿಕ್ಕ ಬೋಗುಣಿಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
*ಒಂದು ಅಗಲವಾದ ಬಕೆಟ್ ಅಥವಾ ಪಾತ್ರೆಯಲ್ಲಿ ಕೊಂಚವೇ ಬಿಸಿನೀರಿನಲ್ಲಿ ಕೊಂಚ ಉಪ್ಪು ಹಾಕಿ (ನಿಮ್ಮ ಪಾದಗಳು ಸಹಿಸುವಷ್ಟು) ಹಾಕಿ ಕೊಂಚ ಕಾಲ ಈ ನೀರಿನಲ್ಲಿ ಎರಡೂ ಪಾದಗಳನು ಮುಳುಗಿಸಿಡಿ.
*ಬಳಿಕ ಪಾದಗಳನ್ನು ನೀರಿನಿಂದ ಹೊರತೆಗೆದು ಟವೆಲ್ ನಿಂದ ಒರೆಸಿಕೊಳ್ಳಿ.
*ಕಾಲುಗಳ ಕೆಳಗೆ ದಿಂಬೊಂದನ್ನು ಇಟ್ಟು ಪಾದಗಳಿಗೆ ಈ ಲೇಪನವನ್ನು ದಪ್ಪನಾಗಿ ಹಚ್ಚಿ. ಬಿರುಕುಗಳಿರುವಲ್ಲಿ ಕೆಲ ನಿಮಿಷಗಳ ಕಾಲ ಮಸಾಜ್ ಮಾಡಿ.


*ಈ ಲೇಪನವನ್ನು ಸುಮಾರು ಹದಿನೈದು ನಿಮಿಷಗಳ ಕಾಲ ಹಾಗೇ ಬಿಡಿ.
*ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
*ನಂತರವೂ ಪಾದಗಳನ್ನು ಸುಮಾರು ಹತ್ತು ನಿಮಿಷಗಳ ಕಾಲ ಬಿಸಿನೀರಿನಲ್ಲಿ ಮುಳುಗಿಸಿಡಿ.
*ಬಳಿಕ ಸ್ಕ್ರಬರ್ ಉಪಯೋಗಿಸಿ ಅಂಚಿನ ಭಾಗಗಳನ್ನು ಕೆರೆದು ತೆಗೆಯಿಸಿ. ಸ್ಕ್ರಬರ್ ಇಲ್ಲದಿದ್ದರೆ ಒರಟಾದ ಕಲ್ಲಿಗೆ ಉಜ್ಜಿಕೊಳ್ಳಲೂ ಬಹುದು.
*ಒಂದು ವಾರದ ಕಾಲ ಸತತವಾಗಿ ಈ ವಿಧಾನ ಅನುಸರಿಸಿದರೆ ಬಿರುಕುಗಳು ಇಲ್ಲವಾಗುತ್ತವೆ.
English summary

Powerful Homemade Remedy To Reduce Feet Cracks In A Week!

ICracked heels can occur due to various reasons like dry skin, walking or running with the wrong kind of shoes, fungal infections, obesity, lack of hygiene, etc. Cracked heels, if left untreated for a long period of time, can lead to serious skin conditions like psoriasis, so they need to be taken care of ASAP! If you are looking for a natural remedy to heal cracked feet, then you can try this homemade oatmeal and lemon scrub.
X
Desktop Bottom Promotion