ಪ್ರಿಯತಮೆಗೆ ಅರ್ಪಿಸಬಹುದಾದ ರೋಮ್ಯಾಂಟಿಕ್ ಹಾಡುಗಳು

Posted By: hemanth
Subscribe to Boldsky

ರೋಮ್ಯಾಂಟಿಕ್ ಹಾಡುಗಳು ಯಾವುದೇ ಭಾಷೆಯಲ್ಲಿದ್ದರೂ ಅದು ಕೇಳಲು ಸುಮಧುರವಾಗಿರುವುದು, ಮಾತ್ರವಲ್ಲದೆ ಇದು ನೆನಪುಗಳು ಮರುಕಳಿಸುವಂತೆಯು ಮಾಡುವುದು. ರೋಮ್ಯಾಂಟಿಕ್ ಹಾಡಿನ ಪ್ರತಿಯೊಂದು ಶಬ್ಧವು ತುಂಬಾ ಅರ್ಥಗರ್ಭಿತವಾಗಿರುವುದು. ಆದರೆ ಇಂದಿನ ದಿನಗಳಲ್ಲಿ ಎಲ್ಲವೂ ವೇಗವಾಗಿ ಬದಲಾಗಿ ರೋಮ್ಯಾಂಟಿಕ್ ಹಾಡುಗಳ ಅಭಿರುಚಿಯು ಬದಲಾಗಿದೆ. ಹಿಂದಿನ ಹಾಡುಗಳನ್ನು ಕೇಳುವುದೆಂದರೆ ಏನೋ ಒಂದು ರೀತಿಯ ಖುಷಿ. ಇಂತಹ ಹಾಡುಗಳನ್ನು ಮತ್ತೆ ಮತ್ತೆ ಕೇಳಬೇಕೆಂದೆನಿಸುವುದು. ಈ ಲೇಖನದಲ್ಲಿ ಹತ್ತು ಹಾಡುಗಳನ್ನು ನಿಮ್ಮ ಪ್ರಿಯತಮೆಗೆ ಅರ್ಪಿಸಬಹುದು. ಇದರಿಂದ ಆಕೆಯ ಹೃದಯ ಗೆಲ್ಲಲು ನಿಮಗೆ ಸಾಧ್ಯವಾಗುವುದು.

Romantic Songs To Dedicate To Your Girlfriend

ಎಂಡ್ ಲೆಸ್ ಲವ್

ಈ ಹಾಡನ್ನು ಲಿಯೊನಲ್ ರಿಚಿ ಮತ್ತು ಡಯಾನಾ ರೋಸ್ ಹಾಡಿದ್ದಾರೆ. ಪ್ರೀತಿ ಆರಂಭವಾದ ಬಳಿಕ ಜೀವನ ಹೇಗಿರುವುದು ಮತ್ತು ಇದು ಅಂತ್ಯವಿಲ್ಲದ್ದು ಎಂದು ತಿಳಿದಾಗ ಹೇಗೆ ಭಾವನೆಯಾಗುವುದು ಎನ್ನುವುದರ ಸಂಗಮವೇ ಈ ಹಾಡು. ಜೋಡಿಯು ತಮ್ಮ ಪ್ರೀತಿಯನ್ನು ಪರಸ್ಪರ ಹಂಚಿಕೊಳ್ಳಲು ಬಯಸುವುದಾಗಿ ಈ ಹಾಡಿನಲ್ಲಿ ಭರವಸೆ ನೀಡಲಾಗುತ್ತದೆ.

ಹೌ ಡೀಪ್ ಇಸ್ ಯುವರ್ ಲವ್

ಈ ಹಾಡನ್ನು ಪಾಪ್ ಗುರು ಬೀ ಗೀಸ್ ಹಾಡಿರುವರು. ಇದು ತುಂಬಾ ಸಂತೋಷಕರ ಅಭಿವ್ಯಕ್ತಿ ಹೊಂದಿದೆ. ಇಲ್ಲಿ ಅವನು/ಅವಳು ತಾನು ತೋರಿಸುವ ಪ್ರೀತಿ ಎಷ್ಟು ಆಳದಲ್ಲಿದೆಯೆಂದು ತೋರಿಸಬೇಕೆಂದು ಕೇಳುತ್ತಾರೆ. ನಿಮ್ಮ ಹುಡುಗಿಯನ್ನು ಉತ್ತೇಜಿಸಲು ಇದು ತುಂಬಾ ಪರಿಪೂರ್ಣ ಹಾಡು.

ಐ ವಿಲ್ ಆಲ್ವೇಸ್ ಲವ್ ಯು

ಈ ಹಾಡನ್ನು ವಿಟ್ನಿ ಹೂಸ್ಟನ್ ಹಾಡಿರುವರು. ತಾನು ಯಾವತ್ತಿಗೂ ನಿಮ್ಮೊಂದಿಗೆ ಇರುವೆನು ಎಂದು ಹುಡುಗಿಗೆ ಹೇಳಲು ಬಯಸುವವರಿಗೆ ಇದು ಒಳ್ಳೆಯ ಹಾಡು. ಇದು ಅಂತ್ಯವಿಲ್ಲದ ಪ್ರೀತಿ, ಅವರು ಜತೆಯಾಗಿರದಿದ್ದರೂ ಪ್ರೀತಿ ಇರುವುದು. ಇದು ಸಂಗೀತ ಮತ್ತು ಸಾಹಿತ್ಯದ ಸರಿಯಾದ ಸಂಗಮವಾಗಿದೆ. ದೀರ್ಘ ಕಾಲದಿಂದ ನೀವು ಪ್ರೀತಿಸುತ್ತಾ ಇರುವಿರಾದರೆ ಇದು ಸರಿಯಾದ ಹಾಡು.

ಬ್ಲೀಡಿಂಗ್ ಲವ್

ಲಿಯೋನಾ ಲೂಯಿಸ್ ಈ ಹಾಡು ಹಾಡಿದ್ದಾರೆ. ತುಂಬಾ ಆಳವಾಗಿ ಪ್ರೀತಿಸುವವರಿಗೆ ಈ ಹಾಡು ಪರಿಪೂರ್ಣವಾಗಿದೆ. ಬಾಹ್ಯ ಪ್ರಪಂಚವನ್ನು ಮರೆತು ಈ ಹಾಡನ್ನು ಕೇಳುವವರಿಗೆ ಇದು ಸೂಕ್ತ. ಇವರು ಬೇರೆ ಯಾವುದರ ಬಗ್ಗೆಯೂ ಚಿಂತಿಸಲ್ಲ ಮತ್ತು ಪ್ರೀತಿಸುತ್ತಾ ಇರುವರು. ನಿಮ್ಮ ಹುಡುಗಿ ಕೂಡ ಇದೇ ಸ್ವಭಾವದವಳಾಗಿದ್ದರೆ ಈ ಹಾಡನ್ನು ಆಕೆಗೆ ಅರ್ಪಿಸಿ.

Romantic Songs To Dedicate To Your Girlfriend

ಬಿಕಾಸ್ ಯೂ ಲವ್ಡ್ ಮಿ

ಮೈ ಹಾರ್ಟ್ ವಿಲ್ ಗೋ ಆನ್ ಹೊರತುಪಡಿಸಿ ಸೆಲೀನ್ ಡಿಯಾನ್ ನ ಪ್ರಸಿದ್ಧ ಕೃತಿಗಳಲ್ಲಿ ಈ ಹಾಡು ಒಂದಾಗಿದೆ. ನೀವು ಪ್ರೀತಿಸುತ್ತಾ ಇದ್ದೀರಿ ಎಂದು ಭಾವಿಸುವಂತೆ ಮಾಡಲು ಈ ಹಾಡು ತುಂಬಾ ಪರಿಣಾಮಕಾರಿ. ಇದರ ಸಾಹಿತ್ಯವು ಸಂಗೀತದಂತೆ ಮಧುರವಾಗಿದೆ. ಈ ಹಾಡನ್ನು ಶ್ರೇಷ್ಠ ಹಾಡುಗಾರ್ತಿ ತನ್ನ ಅದ್ಭುತವಾಗಿರುವ ಸ್ವರ ನೀಡಿರುವರು.

ಇಯರ್ ವಿದ್ ಔಟ್ ಯು

ಈ ಹಾಡು ಮೂರು ವಿಧದಿಂದ ಪರಿಣಾಮಕಾರಿ. ನೀವು ದೀರ್ಘ ಕಾಲದ ಪ್ರೀತಿ ಹುಡುಕುತ್ತಾ ಇದ್ದರೆ ಈ ಹಾಡನ್ನು ಪ್ರಯತ್ನಿಸಿ. ಇದು ಸಾಹಿತ್ಯ ಮತ್ತು ಸ್ವರ ಅದ್ಭುತವಾಗಿದೆ. ನಿಮಗೆ ಸಂಗಾತಿಯ ನೆನಪು ಕಾಡುತ್ತಿದ್ದರೆ ಅಥವಾ ಆಕೆಯಿಂದ ದೂರವಿದ್ದರೆ ಈ ಹಾಡು ಅರ್ಪಿಸಿ.

ಮೈ ಲವ್

ವೆಸ್ಟ್ ಲೈಫ್ ಬ್ಯಾಂಡ್ ನ ತುಂಬಾ ಜನಪ್ರಿಯ ರೋಮ್ಯಾಂಟಿಕ್ ಹಾಡುಗಳಲ್ಲಿ ಇದು ಒಂದು. ಇದರಲ್ಲಿ ಗಿಟಾರ್ ನಿಮ್ಮನ್ನು ಸೆಳೆಯುವುದು. ಇದು ನನ್ನ ಫೇವರಿಟ್ ಹಾಡು ಮತ್ತು ಇದನ್ನು ನಾನು ಹುಡುಗಿಗೆ ಅರ್ಪಿಸಲು ಬಯಸುವಂತಹ ಹಾಡಾಗಿದೆ. ಈ ಹಾಡನ್ನು ಹುಡುಗಿಗೆ ಅರ್ಪಿಸಿದರೆ, ಅದರ ಸಾಹಿತ್ಯದ ಅನುಭವ ನಿಮಗೆ ಸಿಗುವುದು.

ಇನ್ ಕಂಪ್ಲೀಟ್

ನೀವಿಬ್ಬರು ಜಗಳವಾಡಿಕೊಂಡಿದ್ದರ ಮತ್ತು ಆಕೆಯ ಮನಸ್ಥಿತಿ ಸುಧಾರಿಸಲು ಬಯಸುವುದಾದರೆ ಬ್ಯಾಕ್ ಸ್ಟ್ರೀಟ್ ಬಾಯ್ಸ್ ನ ಇನ್ ಕಂಪ್ಲೀಟ್ ಹಾಡು ಸೂಕ್ತ. ಪ್ರೀತಿಯಿಲ್ಲದೆ ಇದ್ದರೆ ಎಲ್ಲವೂ ಏಕಾಂಗಿ ಎನ್ನುವಂತಹ ಅರ್ಥ ಬರುವ ಸಾಹಿತ್ಯವು ಇದರಲ್ಲಿದೆ. ಹುಡುಗಿಯೊಂದಿಗೆ ಜಗಳವಾಡಿದ ಬಳಿಕ ಈ ಹಾಡನ್ನು ಖಂಡಿತವಾಗಿಯೂ ಹುಡುಗಿಗೆ ಅರ್ಪಿಸಬೇಕು.

Romantic Songs To Dedicate To Your Girlfriend

ಮೈ ಗರ್ಲ್

ಈ ಹಾಡು ಟೆಂಪ್ಟೇಷನ್ ನವರದ್ದಾಗಿದೆ. ಈ ರೋಮ್ಯಾಂಟಿಕ್ ಹಾಡು ನಿಮ್ಮ ಹುಡುಗಿಯ ಯಾವುದೇ ರೀತಿಯ ಮನಸ್ಥಿತಿಗೆ ಹೊಂದಿಕೊಳ್ಳುವುದು. ಈ ಸಾಹಿತ್ಯದಲ್ಲಿ ತಿಂಗಳುಗಳು, ಹಕ್ಕಿಗಳು, ಮರಗಳನ್ನು ಹುಡುಗಿಗೆ ಹೋಲಿಸಲಾಗಿದೆ. ಈ ಹಾಡು ನಿಮಗೆ ತುಂಬಾ ಹೊಂದಿಕೊಳ್ಳುವುದಾದರೆ ಅದನ್ನು ಅರ್ಪಿಸಲು ಹಿಂದೆಮುಂದೆ ನೋಡಬೇಡಿ. ನಿಮ್ಮ ಹುಡುಗಿಗೆ ಅರ್ಪಿಸುವ ಈ ಹಾಡು ಆಕೆ ನಿಮ್ಮ ತೋಳುಗಳಲ್ಲಿ ಬಂಧಿಯಾಗುವಂತೆ ಮಾಡುವುದು.

ಕಾಂಟ್ ಹೆಲ್ಪ್ ಫಾಲಿಂಗ್ ಇನ್ ಲವ್

ಎಲ್ವಿಸ್ ಪ್ರಿಸ್ಲಿಯ ತುಂಬಾ ಜನಪ್ರಿಯ ಹಾಡಿನೊಂದಿಗೆ ನಿಮ್ಮ ಪ್ರೀತಿಯನ್ನು ಹುಡುಗಿಗೆ ಪ್ರಸ್ತಾಪಿಸಿ. ಈ ಹಾಡು ಎಲ್ಲಾ ರೋಮ್ಯಾಂಟಿಕ್ ಹಾಡಿನಲ್ಲಿ ಅಗ್ರ ಸ್ಥಾನ ಪಡೆಯಲಿದೆ. ತುಂಬಾ ಹಿತ ಸಾಹಿತ್ಯ ಮತ್ತು ಪುರುಷನ ಸ್ವರವು ನಿಮ್ಮ ಹುಡುಗಿಗೆ ಸಂಭ್ರಮ ನೀಡುವುದು. ಈ ಪಟ್ಟಿಗೆ ನಿಮ್ಮಲ್ಲಿರುವಂತಹ ಮತ್ತಷ್ಟು ಹಾಡುಗಳನ್ನು ಸೇರಿಸಬೇಕೆಂದಿದೆಯಾ? ನಾವು ಅದನ್ನು ಕೇಳಲು ಇಷ್ಟಪಡುತ್ತೇವೆ. ನಿಮಗೆ ಇದು ಇಷ್ಟವಾಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ.

English summary

Old Romantic Songs To Dedicate To Your Girlfriend

In a fast-moving world with the music taste of people changing every moment, finding a perfect song to dedicate to your girlfriend is difficult. It is easy if you want her to listen to the newest billboard top charts. But that won't make sense, as she might have heard of it. Here's listing 10 such old romantic songs that you could dedicate to your girlfriend to win her heart all over again, take a look.