For Quick Alerts
ALLOW NOTIFICATIONS  
For Daily Alerts

ದೀಪಾವಳಿ ಹಬ್ಬಕ್ಕಾಗಿ ದಿಢೀರ್ ತಿನಿಸು-ಸಿಹಿ ಶಂಕರಪೋಳಿ

ಎಲ್ಲೆಂದರಲ್ಲಿ ಬಾಯಿಗೆ ಕೆಲಸ ನೀಡುವ ಮತ್ತು ತಿಂಡಿಪೋತರ ಹಸಿವನ್ನು ನೀಗುವ ಕುರುಕಲು ತಿಂಡಿಯೇ ಶಂಕರಪೋಳಿ. ಹಬ್ಬಹರಿದಿನಗಳಲ್ಲಿ ಡಬ್ಬದಲ್ಲಿ ಮಾಡಿಟ್ಟುಕೊಂಡರೆ ತಿಂಗಳಾನುಗಟ್ಟಲೆ ತಿನ್ನಬಹುದು.....

By Arshad
|

ವರ್ಷವಿಡೀ ಕಾಯುವ ದೀಪಾವಳಿ ಇನ್ನೇನು ಕೆಲವೇ ದಿನಗಳ ದೂರದಲ್ಲಿದೆ. ಈ ಸಮಯದಲ್ಲಿ ಮನೆಯವರೆಲ್ಲರೂ ಜೊತೆಗೂಡಿ ಕೊಂಚ ಸಮಯವನ್ನು ಸಂತೋಷವನ್ನು ಹಂಚಿಕೊಳ್ಳಲು, ಪಟಾಕಿ, ದೀಪ, ಸಿಹಿತಿಂಡಿಗಳ ಸಂಭ್ರಮವನ್ನು ಅನುಭವಿಸಲು ಸುಸಮಯವಾಗಿದೆ.

ಈ ದಿನಕ್ಕೆಂದೇ ಪ್ರತಿ ಮನೆಯಲ್ಲಿಯೂ ವಿವಿಧ ಸಿಹಿತಿಂಡಿಗಳು ತಯಾರಾಗುತ್ತವೆ. ಕಾಜು ಕಟ್ಲಿ, ಲಾಡು ಇಲ್ಲದ ದೀಪಾವಳಿಯನ್ನು ಊಹಿಸಲು ಸಾಧ್ಯವೇ? ಅದಿರಲಿ, ಸಿಹಿತಿಂಡಿಗಳ ಹೊರತಾದ ದೀಪಾವಳಿಯನ್ನು ಸಂಭ್ರಮಿಸಲು ಸಾಧ್ಯವೇ ಇಲ್ಲ. ಈ ಬಾರಿಯ ದೀಪಾವಳಿಯ ಸೊಗಸನ್ನು ಮನೆಯಲ್ಲಿಯೇ ಮಾಡಬಹುದಾದ ಸಿಹಿ ಶಂಕರಪೋಳಿಯ ಮೂಲಕ ಏಕೆ ಹೆಚ್ಚಿಸಿಕೊಳ್ಳಬಾರದು? ಬನ್ನಿ, ಈ ಸಕ್ಕರೆ ಪಾರೆಯನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ: ಖಾರ ಮತ್ತು ಸಿಹಿ ಶಂಕರಪೋಳಿ

*ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಅರ್ಧ ಗಂಟೆ
*ತಯಾರಿಕಾ ಸಮಯ: ಐವತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
1) ಗೋಧಿ ಹಿಟ್ಟು - ಎರಡು ಕಪ್ (ಮೈದಾ ಬೇಡ)
2) ತುಪ್ಪ - ಎರಡು ದೊಡ್ಡ ಚಮಚ
3) ನೀರು = ಅಗತ್ಯವೆನಿಸಿದಷ್ಟು
4) ಗೋಧಿ ರವೆ - ಕಾಲು ಕಪ್ (ಚಿರೋಟಿ ರವೆ ಆದರೆ ಇನ್ನೂ ಉತ್ತಮ)
5) ಹುರಿಯಲು ಎಣ್ಣೆ ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಸಿಹಿ ಸಮೋಸ ರೆಸಿಪಿ

ಸಕ್ಕರೆ ಪಾಕಕ್ಕೆ
1) ಪುಡಿ ಮಾಡಿದ ಸಕ್ಕರೆ- ಒಂದು ಕಪ್
2) ನೀರು - ಅರ್ಧ ಕಪ್
3) ಕೇಸರಿ ದಳಗಳು - ಕೆಲವಾರು (ಐಚ್ಚಿಕ)

ತಯಾರಿಸುವ ವಿಧಾನ:
1) ಒಂದು ಪಾತ್ರೆಯಲ್ಲಿ ಗೋಧಿಹಿಟ್ಟನ್ನು ಹಾಕಿ ಇದಕ್ಕೆ ತುಪ್ಪ, ಸಕ್ಕರೆ ಸೇರಿಸಿ ಮಿಶ್ರಣ ಮಾಡಿ.
2) ಇದಕ್ಕೆ ಕೊಂಚ ನೀರು ಸೇರಿಸಿ ಗಂಟುಗಳಿಲ್ಲದಂತೆ ನಾದಿ.
3) ಈ ಉಂಡೆಯನ್ನು ಎರಡು ಭಾಗಗಳಾಗಿಸಿ ಕೊಂಚ ಹೊತ್ತು ಹತ್ತಿಯ ಬಟ್ಟೆಯಲ್ಲಿ ಸುತ್ತಿಡಿ.
4) ಕೆಲವು ನಿಮಿಷಗಳ ಬಳಿಕ ಈ ಉಂಡೆಯನ್ನು ಹೊರತೆಗೆದು ದಪ್ಪನಾಗಿ ಲಟ್ಟಿಸಿ
5) ಈ ಚಪಾತಿಯನ್ನು ಅಡ್ಡಲಾಗಿ ಮತ್ತು ಅಡ್ಡಲಾಗಿ ಚಾಕುವಿನಿಂದ ಕತ್ತರಿಸಿ. ಈ ಆಕೃತಿ ವಜ್ರಾಕೃತಿಯಲ್ಲಿರಲಿ.
6) ಈಗ ಒಂದು ಬಾಣಲೆಯಲ್ಲಿ ಹುರಿಯುವ ಎಣ್ಣೆಯನ್ನು ಬಿಸಿಮಾಡಿ
7) ಹುರಿಯುವಷ್ಟು ಬಿಸಿಯಾದ ಬಳಿಕ ಈ ತುಂಡುಗಳನ್ನು ಎಣ್ಣೆಯಲ್ಲಿ ಬಿಟ್ಟು ಮಧ್ಯಮ ಉರಿಯಲ್ಲಿ ಕಂದುಬಣ್ಣ ಬರುವವರೆಗೆ ಹುರಿಯಿರಿ.
8) ಎಲ್ಲಾ ತುಂಡುಗಳನ್ನು ಏಕಕಾಲದಲ್ಲಿ ಹಾಕಬೇಡಿ. ಎರಡು ತುಂಡುಗಳ ನಡುವೆ ಹುರಿಯುವಾಗ ಕೊಂಚ ಅಂತರವಿರುವಷ್ಟು ಮಾತ್ರ ಬಳಸಿ
9) ಹುರಿದ ಬಳಿಕ ಈ ತುಂಡುಗಳನ್ನು ಎಣ್ಣೆಸೌಟು ಬಳಸಿ ಎಣ್ಣೆಹೀರುವ ಕಾಗದದ ಮೇಲೆ ಹರಡಿ. ಇದರ ಮೇಲೆ ಇನ್ನೊಂದು ಕಾಗದವನ್ನು ಹರಡಿ ಹೆಚ್ಚಿನ ಎಣ್ಣೆಯನ್ನು ಹೀರಿಕೊಳ್ಳುವಂತೆ ಮಾಡಿ. ಜಿಲೇಬಿ ರೆಸಿಪಿ: ದೀಪಾವಳಿ ರೆಸಿಪಿ

ಸಕ್ಕರೆ ಪಾಕ ತಯಾರಿಸಲು:
1) ಸಕ್ಕರೆ ಮತ್ತು ನೀರನ್ನು ಒಂದು ಪಾತ್ರೆಯಲ್ಲಿ ಸೇರಿಸಿ ಸಕ್ಕರೆ ಕರಗುವಂತೆ ಕಲಕಿ.
2) ಈ ಪಾತ್ರೆಯನ್ನು ಮಧ್ಯಮ ಉರಿಯಲ್ಲಿ ಕುದಿಸಿ.
3) ನೀರು ಆವಿಯಾಗಿ ಸಕ್ಕರೆನೀರು ಕೊಂಚ ಗಾಢವಾಗುವಷ್ಟು ಕುದಿಸಿ.
4) ಕೆಲವು ಎಸಳು ಕೇಸರಿಗಳನ್ನು ಹಾಕಿ ಇನ್ನೂ ಕೊಂಚ ಹೊತ್ತು ಕುದಿಸಿ.
5) ಕಡೆಯದಾಗಿ ಹರಡಿಟ್ಟಿದ್ದ ತುಂಡುಗಳ ಮೇಲೆ ಈ ಪಾಕವನ್ನು ಸುರಿದು ಒಣಗಲು ಬಿಡಿ. ಪ್ರತಿ ತುಂಡನ್ನೂ ಮಗುಚಿ ಈ ಬದಿಯಲ್ಲಿಯೂ ಸಕ್ಕರೆಯ ಪಾಕವನ್ನು ಸುರಿಯಿರಿ. ನರಕ ಚತುರ್ದಶಿಯಂದು ಮಾಡು ಬೇಸನ್ ಲಾಡು

ಎಚ್ಚರಿಕೆ
ಈ ಪಾಕವನ್ನು ಎಂದಿಗೂ ಬಿಸಿಯಾಗಿದ್ದ ತುಂಡುಗಳ ಮೇಲೆ ಹಾಕಬಾರದು, ಕೊಂಚ ತಣಿದ ಬಳಿಕವೇ ಹಾಕಬೇಕು. ಇಲ್ಲದಿದ್ದರೆ ಸಕ್ಕರೆ ಹರಳುಗಟ್ಟಿ ಸಿಹಿತಿಂಡಿಯ ಸೊಗಸೇ ಇಲ್ಲವಾಗುತ್ತದೆ.

English summary

Shankarpoli Sweet Recipe For Diwali

Diwali is fast approaching us and the preparation for it is almost beginning. Diwali is the occasion to get together with the family members, have a party, check on the amazing lights, crackers and obviously, gorge on sweets. You can't imagine Diwali without kaju katlis or ladoos, can you? Well, we're here to add a little sweet to your life, which is why we've shared this yummy sweet recipe of Shankarpoli...
X
Desktop Bottom Promotion