Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಸಿಹಿ ಸಮೋಸ ರೆಸಿಪಿ
ಪ್ರತಿ ವರ್ಷ ಆಗಸ್ಟ್ ತಿಂಗಳಿಂದ ಹಿಡಿದು, ನವೆಂಬರ್ ತಿಂಗಳವರೆಗೂ ಹಬ್ಬಗಳ ಸಂಭ್ರಮಕ್ಕೆ ಬರವಿಲ್ಲದ ತಿಂಗಳು ಅಂತಾನೆ ಹೇಳಬಹುದು, ಏಕೆಂದರೆ ಈ ಮಾಸದಲ್ಲಿ ಹಬ್ಬಗಳು, ಸಾಲು, ಸಾಲಾಗಿ ಒಂದರ ಹಿಂದೆ ಒಂದರಂತೆ ಧಾವಿಸುತ್ತಲೇ ಇರುತ್ತದೆ. ಇನ್ನೇನು ದೀಪಗಳ ಹಬ್ಬ ದೀಪಾವಳಿಗೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ಅಲ್ಲದೆ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವ ವರ್ಣರಂಜಿತ ಪಟಾಕಿಗಳ ಆರ್ಭಟ, ಬಗೆ ಬಗೆಯ ಸಿಹಿತಿಂಡಿ, ವಿಶೇಷ ಪೂಜೆ ಪುನಸ್ಕಾರಗಳ ದೀಪಾವಳಿಯನ್ನು ಸ್ವಾಗತಿಸಲು ಎಲ್ಲರೂ ತುದಿಗಾಲಲ್ಲಿ ಕಾಯುತ್ತಿದ್ದಾರೆ.
ಇನ್ನು ಹಬ್ಬದ ಸಂಭ್ರಮದಲ್ಲಿ ಮಗ್ನರಾದರೆ ಮಾತ್ರ ಸಾಕೇ ಮನೆಗೆ ಬಂದ ಅತಿಥಿಗಳ ಕಡೆಗೂ ವಿಶೇಷ ಗಮನವನ್ನು ನೀಡಬೇಕಾಗುತ್ತದೆ ಅಲ್ಲವೇ? ಅವರಿಗೆ ಇಷ್ಟವಾದ ಸಿಹಿಯನ್ನು ಮಾಡುವುದು, ಅವರ ಮುಖದಲ್ಲಿ ತೃಪ್ತಿಯ ನಗುವನ್ನು ಕಾಣುವುದು ಪ್ರತಿಯೊಬ್ಬ ಮನೆಯೊಡತಿಯ ಆಸೆಯಾಗಿರುತ್ತದೆ. ತಮ್ಮ ಮನೆಗೆ ಬಂದವರು ಹಬ್ಬದಡುಗೆಯನ್ನು ಉಂಡು ನಮ್ಮೊಂದಿಗೆ ಹರ್ಷದೊಂದಿಗೆ ಬೆರೆಯಬೇಕು ಎಂಬುದಾಗಿ ಅಂದುಕೊಂಡಿರುತ್ತಾರೆ. ದೀಪಾವಳಿಗೆ 7 ಬಗೆಯ ಸಿಹಿತಿಂಡಿಗಳ ರೆಸಿಪಿ
ಹಾಗಿದ್ದರೆ ಯಾವ ಖಾದ್ಯ ತಿಂಡಿಯನ್ನು ತಯಾರಿಸುವುದೆಂದು ಚಿಂತಿಸದಿರಿ. ನಿಮ್ಮ ಸ್ವಾದವನ್ನು ಪರಿಪೂರ್ಣಗೊಳಿಸುವುದರ ಜೊತೆಗೆ ಮನೆಗೆ ಬರುವ ಅತಿಥಿಗಳನ್ನು ಸಂತೃಪ್ತಿಪಡಿಸಲು ಮತ್ತು ಹಬ್ಬದ ವಾತಾವರಣವನ್ನು ಇನ್ನಷ್ಟು ಸಿಹಿಗೊಳಿಸಲು ಸಿಹಿ ಸಮೋಸ ರೆಸಿಪಿ ತಯಾರಿಕೆಯನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಇಲ್ಲಿರುವ ತಯಾರಿ ವಿಧಾನವನ್ನು ಒಮ್ಮೆ ಚೆನ್ನಾಗಿ ಮನನ ಮಾಡಿಕೊಳ್ಳಿ. ತದನಂತರ ಸಮೋಸವನ್ನು ತಯಾರಿಸಿ. ಖಂಡಿತ ಇದು ನಿಮ್ಮ ಹಬ್ಬದ ಕಳೆಯನ್ನು ದುಪ್ಪಟ್ಟುಗೊಳಿಸುತ್ತದೆ.
ತಯಾರಿಕಾ ಪ್ರಮಾಣ: ಐವರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
*ತಯಾರಿಕಾ ಸಮಯ: ಹತ್ತು ನಿಮಿಷಗಳು
ಅಗತ್ಯವಿರುವ ಸಾಮಾಗ್ರಿಗಳು:
*ಮೈದಾ ಹಿಟ್ಟು: ಅರ್ಧ ಕೇಜಿ
*ಬೆಣ್ಣೆ : ಮೂರು ದೊಡ್ಡಚಮಚ
*ತುಪ್ಪ: ಮುನ್ನೂರು ಗ್ರಾಂ
ಒಳಗಣ ಹೂರಣಕ್ಕಾಗಿ:
*ಬಿಳಿ ಎಳ್ಳು: 1/3 ಚಿಕ್ಕ ಚಮಚ (ಕರಿ ಎಳ್ಳನ್ನೂ ಬಳಸಬಹುದು)
*ಖೋವಾ : ಕಾಲು ಕೇಜಿ (ಮಾವಾ ಎಂದೂ ಕರೆಯುತ್ತಾರೆ)
*ಒಣದ್ರಾಕ್ಷಿ: ಅರ್ಧ ಕಪ್
*ಸಕ್ಕರೆ: ಅರ್ಧ ಕಪ್
*ಕಾಯಿ ತುರಿ: ಒಂದು ಕಪ್
*ಗಸಗಸೆ: ಎರಡು ದೊಡ್ಡ ಚಮಚ
*ವೆನಿಲ್ಲಾ ಸುಗಂಧ: ½ ಚಿಕ್ಕ ಚಮಚ
*ಉಪ್ಪು ರುಚಿಗನುಸಾರ
ತಯಾರಿಸುವ ವಿಧಾನ:
*ಮೈದಾ, ಅರ್ಧದಷ್ಟು ಬೆಣ್ಣೆ ಮತ್ತು ಕೊಂಚ ಉಗುರುಬೆಚ್ಚನೆಯ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಲಸಿ ಕೊಂಚ ಹೊತ್ತು ಹಾಗೇ ಬಿಡಿ. ನಾದಿರುವ ಹಿಟ್ಟು ಮೃದುವಾದ ಬಳಿಕ ಲಟ್ಟಿಸಿ ಅಗಲವಾದ ರೊಟ್ಟಿಗಳನ್ನು ತಯಾರಿಸಿ.
*ಚಾಕುವಿನಿಂದ ನಿಮಗಿಷ್ಟವಾದ ಗಾತ್ರದ ಮತ್ತು ಆಕೃತಿಯಲ್ಲಿ ಪಟ್ಟಿಗಳನ್ನು ತಯಾರಿಸಿಟ್ಟುಕೊಳ್ಳಿ.
*ಖೋವಾ, ಸಕ್ಕರೆ, ಎಳ್ಳು, ಕಾಯಿತುರಿ, ಗಸಗಸೆ ಮತ್ತು ವೆನಿಲ್ಲಾ ಸುಗಂಧಗಳನ್ನು ಚಿಕ್ಕ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಲಸಿ. ಕತ್ತರಿಸಿಟ್ಟಿರುವ ಪಟ್ಟಿಗಳನ್ನು ನಿಮಗಿಷ್ಟವಾದ ಆಕೃತಿಯಲ್ಲಿ ಮಡಚಿ ಪೊಟ್ಟಣದಂತೆ ಮಾಡಿಕೊಳ್ಳಿ (ಜನಪ್ರಿಯವಾದ ಆಕೃತಿ ಎಂದರೆ ತ್ರಿಕೋಣ).
*ಈ ಪೊಟ್ಟಣದಲ್ಲಿ ಹೂರಣವನ್ನು ತುಂಬಿಸಿ ತೆರೆದಿರುವ ಅಂಚುಗಳನ್ನು ಕೊಂಚ ನೀರು ಸವರಿ ಒತ್ತಿ ಮುಚ್ಚಿಬಿಡಿ. (ಎಲ್ಲೂ ತೆರೆದಿರದಂತೆ ನೋಡಿಕೊಳ್ಳಿ, ಕೊಂಚ ತೆರೆದಿದ್ದರೂ ಎಣ್ಣೆ ಒಳಹೋಗಿ ಸಮೋಸವನ್ನು ಕೆಡಿಸುತ್ತದೆ).
*ಹೊರಭಾಗಕ್ಕೆ ಉಳಿದ ಬೆಣ್ಣೆಯನ್ನು ಸವರಿ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕರಿಯಿರಿ. ನಡುನಡುವೆ ತಿರುವುತ್ತಾ ಕಂದು ಬಣ್ಣ ಬಂದ ಬಳಿಕ ಹೊರತೆಗೆದು ಟಿಶ್ಯೂ ಕಾಗದದ ಮೇಲೆ ಹರಡಿ. ತಣಿದ ಬಳಿಕ ತಿನ್ನಲು ನೀಡಿ. ತಕ್ಷಣ ತಿನ್ನಲು ಹೋಗಬೇಡಿ, ಏಕೆಂದರೆ ಹೊರಗಿನ ಕವಚ ತಣ್ಣಗಾಗಿದ್ದರೂ ಹೂರಣ ಬಹಳ ಬಿಸಿಯಾಗಿದ್ದು ನಾಲಿಗೆ, ಗಂಟಲು ಸುಡುವ ಅಪಾಯವಿರುತ್ತದೆ.



Click it and Unblock the Notifications