Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ನರಕ ಚತುರ್ದಶಿಯಂದು ಮಾಡು ಬೇಸನ್ ಲಾಡು

ಬೇಕಾದ ಸಾಮಗ್ರಿಗಳು:
ಕಡಲೆ ಹಿಟ್ಟು (ಕಡಲೆ ಬೇಳೆ ಬೀಸಿಸಿ ಮಾಡಿದ್ದು) : ಒಂದು ಕಪ್
ಪುಡಿ ಮಾಡಿದ ಸಕ್ಕರೆ: ಮುಕ್ಕಾಲು ಕಪ್
ತುಪ್ಪ: ಅರ್ಧ ಕಪ್
ಏಲಕ್ಕಿ: ಒಂದೆರಡು
ಕೇಸರಿ : 8-10 ದಳ
ಗೋಡಂಬಿ, ಒಣ ದ್ರಾಕ್ಷಿ, ಬಾದಾಮಿ: ಒಂದು ಕಪ್
ಮಾಡುವ ವಿಧಾನ:
ದಪ್ಪ ತಳದ ಪಾತ್ರೆಯಲ್ಲಿ ಒಂದೆರಡು ಚಮಚ ತುಪ್ಪ ಹಾಕಿ ಒಣ ದ್ರಾಕ್ಷಿ, ಅರೆ ಬರೆ ಕುಟ್ಟಿದ ಗೋಡಂಬಿ, ಬಾದಾಮಿಯನ್ನು ಕರಿದು ಇಟ್ಟುಕೊಳ್ಳಬೇಕು. ಇದೇ ಬಾಣಲೆಗೆ ಒಂದೆರಡು ಚಮಚ ತುಪ್ಪ ಹಾಕಿ ಕಡಲೆ ಹಿಟ್ಟನ್ನು ಮಂದ ಉರಿಯಲ್ಲಿ ಹುರಿಯಬೇಕು. ಕಡಲೆ ಹಿಟ್ಟು ಸೀಯದ ಹಾಗೆ ಒಂದೇ ಸಮನೆ ಮಗುಚುವ ಕೈಯಿಂದ ಬಾಣಲೆಯಲ್ಲಿ ಕೈಯಾಡಿಸುತ್ತಿರಬೇಕು. ಹಿಟ್ಟು ತುಸು ಕಂದು ಬಣ್ಣಕ್ಕೆ, ಘಮ್ಮೆನ್ನುವ ಪರಿಮಳ ಬಂದಾಗ ಉಳಿದ ತುಪ್ಪವನ್ನು ಬೆರೆಸಿ ಒಲೆಯ ಮೇಲಿಂದ ಇಳಿಸಬೇಕು. ಏಲಕ್ಕಿ ಬೆರೆಸಿ ಪುಡಿ ಮಾಡಿದ ಸಕ್ಕರೆ, ಕೇಸರಿ ದಳ, ತುಪ್ಪದಲ್ಲಿ ಕರಿದ ಗೋಡಂಬಿ, ದ್ರಾಕ್ಷಿ, ಬಾದಾಮಿಯನ್ನು ಬೆರೆಸಿ ಮಿಶ್ರಣ ಮಾಡಬೇಕು. ಮಿಶ್ರಣ ಆರಿದ ನಂತರ ಉಂಡೆ ಕಟ್ಟಬೇಕು.
(ಗಮನಿಸಿ: ಕಡಲೆ ಹಿಟ್ಟನ್ನು ಜರಡಿ ಹಿಡಿದುಕೊಂಡರೆ ಗಂಟಾಗುವುದಿಲ್ಲ, ಹುರಿಯಲು ಸುಲಭ.)
ಎಲ್ಲ ದಟ್ಸ್ ಕನ್ನಡ ಓದುಗರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.



Click it and Unblock the Notifications
