For Quick Alerts
ALLOW NOTIFICATIONS  
For Daily Alerts

ಓಣಂಗೆ ಅಡಾ ಪಾಯಸ ರೆಸಿಪಿ

|
Ada Payasa Recipe
ಓಣಂಗೆ ಹೆಸರು ಬೇಳೆ ಪಾಯಸ, ಶ್ಯಾವಿಗೆ ಪಾಯಸ, ಅಡಾ ಪಾಯಸ ಹೀಗೆ ನಾನಾ ಬಗೆಯ ಪಾಯಸವನ್ನು ತಯಾರಿಸಲಾಗುವುದು. ಅದರಲ್ಲೂ ಅಡಾ ಪಾಯಸ ಕೇರಳದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಇದನ್ನು ಕೇರಳದ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಮಾಡಲಾಗುವುದು. ಕೇರಳದ ಸ್ಪೆಷೆಲ್ ಅಡಾ ಪಾಯಸ ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ.

ಬೇಕಾಗುವ ಸಾಮಾಗ್ರಿಗಳು:
* 4 ಅಡಾ (ಅಡಾ ತಯಾರಿಸುವ ವಿಧಾನ)
* ಒಂದು ಕಪ್ ಬೆಲ್ಲ
* ಏಲಕ್ಕಿ 2-3
* ತೆಂಗಿನಕಾಯಿಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿದ್ದು ಅರ್ದ ಕಪ್
* ಸ್ವಲ್ಪ ಒಣದ್ರಾಕ್ಷಿ
* ಸ್ವಲ್ಪ ಗೋಡಂಬಿ
* ತೆಂಗಿನಕಾಯಿ ಹಾಲು 2 ಕಪ್

ತಯಾರಿಸುವ ವಿಧಾನ:

1. ಅಡಾವನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು. ನಂತರ ಬೆಲ್ಲದ ಪುಡಿ ಹಾಕಿ ಮಿಶ್ರ ಮಾಡಬೇಕು.

2. 2 ಕಪ್ ನೀರನ್ನು ಕುದಿಸಿ ಅದಕ್ಕೆ ತೆಂಗಿನ ಕಾಯಿ ಹಾಲನ್ನು ಹಾಕಿ ಮಿಶ್ರ ಮಾಡಿ ಚೆನ್ನಾಗಿ ಕುದಿಸಬೇಕು. ನಂತರ ಬೆಲ್ಲದ ಜೊತೆ ಮಿಶ್ರಣ ಮಾಡಿದ್ದ ಅಡಾ ತುಂಡುಗಳನ್ನು ಹಾಕಬೇಕು. ಏಲಕ್ಕಿಯನ್ನು ಕೂಡ ಹಾಕಿ. ನಂತರ ಮಿಶ್ರಣ ಸ್ವಲ್ಪ ಗಟ್ಟಿಯಾಗುವರೆಗೆ ಕುದಿಸಿ ನಂತರ ಉರಿಯಿಂದ ತೆಗೆದು ಇಡಬೇಕು.

3. ಈಗ ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ಅದರಲ್ಲಿ ತೆಂಗಿನ ಕಾಯಿ ತುಂಡುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಅದನ್ನು ಒಂದು ತಟ್ಟೆಯಲ್ಲಿ ಹಾಕಿ, ಅದೇ ಬಾಣಲೆಗೆ 1 ಚಮಚ ತುಪ್ಪ ಹಾಕಿ ಗೋಡಂಬಿ ದ್ರಾಕ್ಷಿಯನ್ನು ಹಾಕಿ ಗೋಡಂಬಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

4. ನಂತರ ಹುರಿದ ತೆಂಗಿಕಾಯಿ ತುಂಡುಗಳು ಮತ್ತು ಗೋಡಂಬಿ ದ್ರಾಕ್ಷಿಯನ್ನು ಪಾಯಸಕ್ಕೆ ಹಾಕಿ 2 ನಿಮಿಷ ಕುದಿಸಿದರೆ ಸವಿರುಚಿಯ ಅಡಾ ಪಾಯಸ ರೆಡಿ.

English summary

Ada Payasa Recipe | Onam Special Recipe | ಅಡಾ ಪಾಯಸ ರೆಸಿಪಿ | ಓಣಂ ಸ್ಪೆಷೆಲ್ ರೆಸಿಪಿ

In Karnataka how we prepare Holige Payasa like that in Kerala ada payasa will prepare.During Kerala festival preparing this payasa is very common. If you want to prepare here is ada payasa recipe.
X
Desktop Bottom Promotion