For Quick Alerts
ALLOW NOTIFICATIONS  
For Daily Alerts

ವಡಾ ಅಲ್ಲ ಇದು ಕೇರಳದ ಅಡಾ!

|
Ada Recipe
ಹಬ್ಬ ಹರಿದಿನಗಳಲ್ಲಿ ಕೇರಳದಲ್ಲಿ ಅಡಾ ಅನ್ನುವ ತಿಂಡಿಯನ್ನು ತಯಾರಿಸಲಾಗುವುದು. ಇದನ್ನು ಹಲಸಿನ ಹಿಟ್ಟು ಮಾಡುವ ರೀತಿ ಬಾಳೆ ಎಲೆಯಿಂದ ಈ ಅಡಾವನ್ನು ತಯಾರಿಸಲಾಗುವುದು. ಅಡಾವನ್ನು ಬೆಳಗಿನ ತಿಂಡಿ ಅಥವಾ ಸಾಯಂಕಾಲದ ತಿಂಡಿಯಾಗಿ ಕೂಡ ತಯಾರಿಸಬಹುದಾಗಿದೆ. ಇದನ್ನು ಮಾಡಲು ಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು:

* ಕಪ್ ಅಕ್ಕಿ (ನೀರಿನಲ್ಲಿ ನೆನೆ ಹಾಕಬೇಕು)
* ನೀರು
* ರುಚಿಗೆ ತಕ್ಕ ಉಪ್ಪು
* ಸ್ವಲ್ಪ ಎಣ್ಣೆ
* ಏಲಕ್ಕಿ
* 1 ಕಪ್ ತೆಂಗಿನಕಾಯಿ ತುರಿ ಮತ್ತು ಅರ್ಧ ಕಪ್ ಸಕ್ಕರೆ

ಬಾಳೆಎಲೆ: ಬಾಳೆ ಎಲೆಯನ್ನು ಸ್ವಲ್ಪ ಬಿಸಿ ಮಾಡಿ ಅಂಗೈ ಅಗಲದಲ್ಲಿ ಕತ್ತರಿಸಿ.

ತಯಾರಿಸುವ ವಿಧಾನ:

1. ಅಕ್ಕಿಯನ್ನು ಸ್ವಲ್ಪ ನೀರು ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಿ ತುಂಬಾ ಗಟ್ಟಿಯಾಗಿ ಅರೆಯಬೇಕು.

2. ನಂತರ ಸ್ವಲ್ಪ ಅಗಲವಿರುವ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ 2 ಚಮಚ ಎಣ್ಣೆ ಹಾಕಿ ಅರೆದ ಹಿಟ್ಟನ್ನು ಹಾಕಿ ಸೌಟ್ ನಿಂದ ತಿರುಗಿಸುತ್ತಾ ಇರಬೇಕು. ಸ್ವಲ್ಪ ಏಲಕ್ಕಿಯನ್ನು ಹಾಕಬೇಕು. ನಂತರ ಪಾತ್ರೆಯನ್ನು ಉರಿಯಿಂದ ತೆಗೆಯಬೇಕು.

3. ಹಿಟ್ಟು ತಣ್ಣಗಾದ ಮೇಲೆ ಎಲೆ ಮೇಲೆ ಸ್ವಲ್ಪ ಎಣ್ಣೆ ಸವರಿ ಹಿಟ್ಟನ್ನು ಹಾಕಿ ತಟ್ಟಬೇಕು, ನಂತರ ಅದರ ಮೇಲೆ ಸ್ವಲ್ಪ ತೆಂಗಿನಕಾಯಿ ತುರಿ ಮತ್ತು ಸಕ್ಕರೆ ಹಾಕಿ ಎಲೆಯನ್ನು ಮಡಚಬೇಕು(ಒಂದು ಕಪ್ ಅಕ್ಕಿಯ ಹಿಟ್ಟಿನಿಂದ 10 ಅಡಾ ಮಾಡಬಹುದು).

4. ನಂತರ ಇಡ್ಲಿ ಪಾತ್ರೆಯಲ್ಲಿ ಇಡ್ಲಿ ಮಾಡುವಾಗ ಅರ್ಧ ನೀರು ಹಾಕಿ ಕುದಿಸುವಂತೆ ಕುದಿಸಿ, ನಂತರ ಇಡ್ಲಿಯ ಕೆಳಗಿನ ತಟ್ಟೆಯನ್ನು ಇಟ್ಟು ಅದರ ಮೇಲೆ ಎಲೆ ಅಡಾವನ್ನು ಇಟ್ಟು ಪಾತ್ರೆಯ ಬಾಯಿ ಮುಚ್ಚಿ, ಪಾತ್ರೆಯಿಂದ ಆವಿ ಬರುವವರೆಗೆ ಬೇಯಿಸಿದರೆ ಎಲೆ ಅಡಾ ರೆಡಿ. ನಂತರ ಎಲೆಯನ್ನು ಅಡಾದಿಂದ ತೆಗೆದು ಬಿಸಾಡಿ ಅಡಾವನ್ನು ತಿನ್ನಬಹುದು.

ಕೇರಳದ ಕೂಟು ಕರಿ ಮಾಡುವ ವಿಧಾನ ತಿಳುಯಲು ಮುಂದೆ ಓದಿ.

English summary

Ada Recipe | Onam Special Recipe | ಅಡಾ ರೆಸಿಪಿ | ಓಣಂ ಸ್ಪೆಷೆಲ್ ರೆಸಿಪಿ

Ada is very famous in Kerala. This ada commonly prepare in Onam and Vishu festival. This ada is very easy to prepare and tasty to have.
X
Desktop Bottom Promotion