For Quick Alerts
ALLOW NOTIFICATIONS  
For Daily Alerts

ಸಿಹಿ ಕುಂಬಳ ಕಾಯಿ ಪಾಯಸ

By Super
|

ಮಲೆನಾಡು, ಕರಾವಳಿಗಳಲ್ಲಿ ಸಾಂಪ್ರಾದಾಯಿಕವಾಗಿ ಪ್ರಚಲಿತದಲ್ಲಿರುವ ಸಿಹಿ ತಿನಿಸು. ಬೂದುಗುಂಬಳ ಕಾಯಿ ಬಳಸಿ ಪಾಯಸ ತಯಾರಿಸುವುದುಂಟು. ನಾವಿಲ್ಲಿ ಸಿಹಿಕುಂಬಳ ಕಾಯಿ ಬಳಸಿದ್ದೇವೆ. ಇದೇ ರೀತಿ ಹೀರೇಕಾಯಿ, ಕ್ಯಾರೆಟ್, ಮಾವಿನಹಣ್ಣು, ಹಲಸಿನಕಾಯಿಗಳನ್ನು ಬಳಸಿಯೂ ಪಾಯಸ ತಯಾರಿಸಬಹುದು. ಕುಂಬಳಕಾಯಿ ಸಕಲ ಪೋಷಕಾಂಶಗಳ ಆಗರ.

ಬೇಕಾಗುವ ಪದಾರ್ಥಗಳು
ಹಾಲು: 2 ಕಪ್ಪು
ಸಕ್ಕರೆ: ' ಕಪ್ಪು
ಸಿಹಿಕುಂಬಳ ಕಾಯಿ: ' ಕಪ್ಪು
ಏಲಕ್ಕಿ: 2
ಕೇಸರಿ: 2 ಚಿಟಿಕೆ
ಇಂಗಿಸಿದ ಹಾಲು: 2 ಟೀ ಚಮಚ
ತುಪ್ಪ: 2 ಟೀ ಚಮಚ
ಗೋಡಂಬಿ,ಒಣ ದ್ರಾಕ್ಷಿ: ಸ್ವಲ್ಪ

ಮಾಡುವ ವಿಧಾನ
ಬಟ್ಟಲಿನಲ್ಲಿ ಹಾಲು ಹಾಕಿ ಕುದಿಯಲು ಬಿಡಿ. 5 ನಿಮಿಷಗಳ ನಂತರ ಸಿಹಿಕುಂಬಳದ ತುರಿಯನ್ನು ಹಾಲಿಗೆ ಸೇರಿಸಿ ಬೇಯಲು ಬಿಡಿ. ಸಿಹಿಕುಂಬಳ ಬೇಗ ಬೇಯುತ್ತದೆ. ಹಾಲು, ಕುಂಬಳಕಾಯಿ ಬೆಂದ ನಂತರ ಸಕ್ಕರೆ ಮತ್ತ್ತು ಏಲಕ್ಕಿಯನ್ನು ಹಾಕಿ. ಸ್ವಲ್ಪ ಸಮಯದ ಬಳಿಕ ಕೇಸರಿ ಹಾಗೂ ಇಂಗಿದ ಹಾಲನ್ನು ಸೇರಿಸಿ.ಕೆಲ ನಿಮಿಷ ಕುದಿಸಿದ ನಂತರ ಒಲೆಯ ಉರಿಯನ್ನು ನಂದಿಸಿ, ಪಾತ್ರೆಯನ್ನು ಕೆಳಗಿಳಿಸಿ. ಈಗ ದ್ರಾಕ್ಷಿ, ಗೋಡಂಬಿಯನ್ನು ಸೇರಿಸಿ, ಬಿಸಿಯಾಗಿರುವಂತೆಯೇ ಬಡಿಸಿ.

(ದಟ್ಸ್ ಕನ್ನಡ ಪಾಕಶಾಲೆ)

X
Desktop Bottom Promotion